ರಾಮಮಂದಿರ ನಿರ್ಮಾಣಕ್ಕೆ ಸ್ವಾಗತದ ಧ್ವನಿ – ಸಾಂಸ್ಕೃತಿಕ ರಾಜಕಾರಣಕ್ಕೆ ಎಂಟ್ರಿ ಪಡೆಯಿತಾ ಕಾಂಗ್ರೆಸ್‌?

– ಶಶಿಧರ ಹೆಗಡೆ. ಸೋಮನಾಥ ಮಂದಿರದ ಜೀರ್ಣೋದ್ಧಾರದ ವೇಳೆ ಕಾಂಗ್ರೆಸ್‌ ಹೇಗೆ ನಡೆದುಕೊಂಡಿತು ಎನ್ನುವುದು ದೇಶದ ಚರಿತ್ರೆಯ ಪುಟಗಳಲ್ಲಿ ದಾಖಲಾಗಿ ಹೋಗಿದೆ. ಭಾರತದ ಸಾಂಸ್ಕೃತಿಕ ಪರಂಪರೆಯ ಅಭಿಮಾನದ ಪ್ರತೀಕವಾದ ಸೋಮನಾಥ ದೇಗುಲ ಪುನರುತ್ಥಾನಗೊಂಡು ಸುಮಾರು ಏಳು ದಶಕಗಳೇ ಉರುಳಿದೆ. ಇದೀಗ ಭಾರತೀಯರ ಸಂಸ್ಕೃತಿ, ತತ್ತ್ವಾದರ್ಶದ ಮೇಲ್ಮೆಯನ್ನು ಪ್ರತಿಬಿಂಬಿಸುವ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಗಿದೆ. ಜಗನ್ನಾಥನಾದ ರಾಮನ ಮಂದಿರದ ಭೂಮಿ ಪೂಜೆಯ ಶುಭಾವಸರದಲ್ಲಿ ಕಾಂಗ್ರೆಸ್‌ನ ಸ್ಪಂದನೆ ಮಾತ್ರ ಅನಿರೀಕ್ಷಿತ. ಯಾಕೆಂದರೆ ಮಂದಿರ ನಿರ್ಮಾಣವನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಪ್ರಾರಂಭದಿಂದಲೂ ರಾಮ […]

Read More

ಮಂದಿರವೆಂಬುದು ಸ್ಥಾವರವಲ್ಲ, ಮೌಲ್ಯಗಳ ಪ್ರತೀಕ

ಪ್ರತಿಪಕ್ಷದಲ್ಲೂ ಕೇಳಿಬಂತು ರಾಮನೇ ರಾಷ್ಟ್ರೀಯ ಏಕತೆಯ ಸಂಕೇತ ಎಂಬ ಒಕ್ಕೊರಲ ದನಿ – ಹರಿಪ್ರಕಾಶ್‌ ಕೋಣೆಮನೆ. ‘‘ಶ್ರೀ ರಾಮನ ಗುಣಸಂಪನ್ನತೆಯು ಇಡೀ ಭರತ ಖಂಡಕ್ಕೆ ಏಕತೆಯ ಸಂದೇಶವನ್ನು ಸಾರಿತ್ತು. ಭಾರತವಷ್ಟೇ ಏಕೆ, ಇಡೀ ವಿಶ್ವದ ನಾಗರಿಕತೆಯಲ್ಲಿ ರಾಮನ ಹೆಜ್ಜೆಗುರುತುಗಳನ್ನು ಅಳಿಸಲಾಗದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತ ಮರ್ಯಾದಾ ಪುರುಷೋತ್ತಮನೇ ಹೌದು…,’’ -ಕಾಂಗ್ರೆಸ್‌ನ ವರಿಷ್ಠ ಮುಖಂಡರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಮಭಜನೆ ಮಾಡುತ್ತಿರುವ ಪರಿ ಇದು. ನಿಸ್ಸಂದೇಹವಾಗಿ ಇದೊಂದು ಒಳ್ಳೆಯ ಬೆಳವಣಿಗೆ. ಅಜಮಾಸು ಮೂವತ್ತು ವರ್ಷಗಳ ನಂತರ ಕಾಂಗ್ರೆಸ್‌ನ […]

Read More

ಒಂದು ವರ್ಷ, ಎರಡು ಮಹಾ ನಿರ್ಧಾರ – 370ನೇ ವಿಧಿ ರದ್ದು ಮತ್ತು ಮಂದಿರ ಶಿಲಾನ್ಯಾಸ ಐತಿಹಾಸಿಕ

– ಮಹದೇವ ಪ್ರಕಾಶ್‌. ದಿಕ್ಕು ತಪ್ಪಿದ್ದ ಭಾರತದ ಅಖಂಡತೆಯಯನ್ನು ರಾಜಪಥದತ್ತ ಎಳೆದುತಂದ ಐತಿಹಾಸಿಕ ಸಂವತ್ಸರ. 2019ರ ಆಗಸ್ಟ್‌ 5ರಂದು ಸಂವಿಧಾನದ 370ನೇ ವಿಧಿ ರದ್ದು. 2020ರ ಆಗಸ್ಟ್‌ 5ರಂದು ಭಾರತದ ಬಹುಜನರ ಮಹಾ ನಿರೀಕ್ಷೆಯ ರಾಮಜನ್ಮಭೂಮಿ ಶಿಲಾನ್ಯಾಸ. ಒಮ್ಮೊಮ್ಮೆ ಐತಿಹಾಸಿಕ ತಪ್ಪುಗಳು ದಶಕಗಳು ಕಳೆದರೂ ಉಳಿದುಕೊಂಡಿರುತ್ತವೆ. ಇಂತಹ ಸ್ಥಗಿತ ವ್ಯವಸ್ಥೆಗೆ ಚಲನಶೀಲತೆ ನೀಡುವ ಯುಗಪ್ರವರ್ತಕ ನಾಯಕತ್ವದ ಉದಯ ಆಗುತ್ತದೆ. ಅಂತಹ ನಾಯಕತ್ವದಲ್ಲಿ ಅತಿದೊಡ್ಡ ಸಮಸ್ಯೆಗಳಾಗಿದ್ದ ಐತಿಹಾಸಿಕ ತಪ್ಪುಗಳನ್ನು ತಿದ್ದುವ ಕೆಲಸ ನಡೆದು ಹೋಗುತ್ತದೆ. ಬ್ರಿಟಿಷ್‌ ಚಕ್ರಾಧಿಪತ್ಯದಲ್ಲಿ ಐನೂರ […]

Read More

ಅಯೋಧ್ಯೆಯಲ್ಲಿ ಮಂದಿರವೇಕೆ ಬೇಕು?

ದೇವಸ್ಥಾನವೆಂದರೆ ಬರೀ ಪ್ರಾರ್ಥನೆಯ ಸ್ಥಳವಲ್ಲ, ಸಂಸ್ಕೃತಿಯ ಆಗರ – ಡಾ.ಆರತೀ ವಿ.ಬಿ. ‘‘ವರ್ಷಸಾಹಸ್ರಗಳ ಕನಸು ನನಸಾಗಿಹುದು/ಅಹಹ ರಾಮಾಲಯವು ಬೆಳಗುತಿಹುದು/ದೀರ್ಘನಿದ್ರೆಯು ಕಳೆದು ಕ್ಷಾತ್ರತೇಜವು ಬೆಳೆದು/ರಾಮರಾಜ್ಯವು ಭುವಿಗೆ ಮರಳುತಿಹುದು’’ ರಾಮಮಂದಿರ ಮರಳಿ ತಲೆಯೆತ್ತಿದೆ! ಭಾರತವನ್ನೂ ಭಾರತೀಯತೆಯನ್ನೂ ಎತ್ತಿ ಮೆರೆಸಿದೆ! ಅಸಂಖ್ಯರ ಪ್ರಾಮಾಣಿಕ ಯತ್ನಗಳಿಗೆ ಫಲವಿತ್ತಿದೆ! ಶತಮಾನಗಳ ಶತಸಂಖ್ಯೆಗಳ ಜನರ ಸಮ್ಮಾನಿಸಿದೆ! ದೇಶಧರ್ಮಗಳಿಗೆ ಕಳಂಕವೀಯಲೆಂದೇ ಸದಾ ದುರ್ವಾಸನೆ ಬೀರುವ ವಾಮಬಾಯಿಗಳನ್ನು ಮುಚ್ಚಿಸಿದೆ! ಮತಗಳಿಗಾಗಿ ದೇಶವನ್ನೂ ದೇಶೀಯತೆಯನ್ನೂ ಬಲಿಗೊಡುವ ದೇಶದ್ರೋಹಿ ಪಕ್ಷಗಳ ಬಾಲ ಮುದುರಿಸಿದೆ! ಐನೂರಕ್ಕೂ ಹೆಚ್ಚು ವರ್ಷ ನೂರಾರು ಪೀಳಿಗೆಗಳ ಭಾರತೀಯರ […]

Read More

ಸಂತರ ಮುಖದಲ್ಲಿ ದಿವ್ಯಾನುಭೂತಿ

– ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ. ಭವ್ಯ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದಾಗ ನನ್ನೊಳಗಿನ ತನ್ಮಯತೆಯ ಜತೆಗೇ ಸುತ್ತಲಿನವರನ್ನೂ ಗಮನಿಸುತ್ತಿದ್ದೆ. ಸಾಮಾನ್ಯ ಪೂಜೆಯ ಸಂದರ್ಭದಲ್ಲೇ ನಾವೆಲ್ಲ ಧ್ಯಾನಸ್ಥ ಸ್ಥಿತಿಗೆ ಹೋಗುತ್ತೇವೆ. ಅಲ್ಲಿದ್ದವರಲ್ಲಿ ಹೆಚ್ಚಿನವರು ತಮ್ಮ ಇಡೀ ಬದುಕನ್ನು ರಾಮನಿಗಾಗಿ ಮುಡಿಪಿಟ್ಟವರು. ಅವನ ಸ್ಮರಣೆಯ ಜತೆಗೆ ಹೋರಾಟದಲ್ಲಿ ಕಳೆದವರು. ಅವರ ಡಿಎನ್ಎಯಲ್ಲೇ ರಾಮ ಸೇರಿ ಹೋಗಿದ್ದ. ಶಿಲಾನ್ಯಾಸದ ಸಂದರ್ಭದಲ್ಲಿ ಅವರೆಲ್ಲ ದಿವ್ಯಾನುಭೂತಿಯನ್ನು ಅನುಭವಿಸುತ್ತಿರುವುದನ್ನು ಕಂಡೆ. ಇಡೀ ವಾತಾವರಣವೇ ಸಾರ್ಥಕ ಭಾವದಿಂದ ತುಂಬಿ ಹೋಗಿತ್ತು. ಶಿಲಾನ್ಯಾಸ […]

Read More

ಶ್ರೀರಾಮನ ಆದರ್ಶಗಳ ತಾಣ – ಆಧ್ಯಾತ್ಮಿಕ ಜಾಗೃತಿಯ ಕೇಂದ್ರಕ್ಕೆ ಅಡಿಗಲ್ಲು

ಕೋಟ್ಯಂತರ ಭಾರತೀಯರ ಶ್ರದ್ಧೆ- ನಂಬಿಕೆಗಳ ನೆಲೆಯಾಗಿ, ಆಸ್ತಿಕತೆಯ ಅಸ್ತಿಭಾರವಾಗಿ ರೂಪುಗೊಳ್ಳಲಿರುವ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಕಾರ್ಯಕ್ರಮ ಇಂದು ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೂ ಈ ಜಾಗ ದಾಖಲೆಗಳಲ್ಲಿ ವಿವಾದಿತವಾಗಿಯೇ ಉಳಿದಿತ್ತು; ಆದರೆ ಭಾರತೀಯರ ಭಾವಕೋಶದಲ್ಲಿ ಅದು ಯಾವತ್ತಿಗೂ ಶ್ರೀ ರಾಮಚಂದ್ರನಿಗೆ ಸೇರಿದ್ದಾಗಿತ್ತು. ಪುರಾತತ್ವ ಇಲಾಖೆಯ ಉತ್ಖನನ ಸಾಕ್ಷ್ಯಗಳು, ಸುಪ್ರೀಂ ಕೋರ್ಟ್‌ನ ತೀರ್ಪು ನಿಸ್ಸಂಶಯವಾಗಿ ಅದನ್ನು ದೃಢಪಡಿಸಿದವು. ಈಗ ಭವ್ಯ […]

Read More

ಹಿಂದೂಗಳ ಅಸ್ಮಿತೆ ಬಡಿದೆಬ್ಬಿಸಿದ ಚಳವಳಿ

– ಲಾಲ್‌ಕೃಷ್ಣ ಆಡ್ವಾಣಿ. ದೇಶಾದ್ಯಂತ ರಥಯಾತ್ರೆ ಮಾಡಿ ರಾಮ ಜನ್ಮಭೂಮಿ ಆಂದೋಲನ ಬಿರುಗಾಳಿಯಂತೆ ವ್ಯಾಪಿಸುವಂತೆ ಮಾಡಿದವರು ಬಿಜೆಪಿಯ ಹಿರಿಯ ಮುಖಂಡ ಲಾಲ್‌ಕೃಷ್ಣ ಆಡ್ವಾಣಿ. ಜನ್ಮಭೂಮಿ ಸಂಘರ್ಷದ ವೃತ್ತಾಂತ, ರಥಯಾತ್ರೆಯ ಆ ದಿನಗಳು- ಎಲ್ಲದರ ಕುರಿತು ಆಡ್ವಾಣಿಯವರು ತಮ್ಮ ಆತ್ಮಕತೆ ‘ಮೈ ಕಂಟ್ರಿ, ಮೈ ಲೈಫ್‌’ನಲ್ಲಿ ಬರೆದುದರ ಆಯ್ದ ಭಾಗ ಇಲ್ಲಿದೆ. ದೇಶಾದ್ಯಂತ ಸುಂಟರಗಾಳಿ ಎಬ್ಬಿಸಿದ ಅಯೋಧ್ಯೆ ಮಹಾ ಆಂದೋಲನವು ನನ್ನ ರಾಜಕೀಯ ಜೀವನದ ಅತ್ಯಂತ ಕ್ಲಿಷ್ಟಕರ ಮತ್ತು ಸ್ಥಿತ್ಯಂತರದ ವಿದ್ಯಮಾನ. ನಮ್ಮ ಸಮಾಜ ಮತ್ತು ರಾಜಕೀಯ ಸ್ಥಿತಿಗತಿಯ […]

Read More

ರಾಮಮಂದಿರ ಅಭಿಯಾನದಿಂದ ಭಾರತೀಯರು ಪಡೆದಿದ್ದೇನು?

– ಗೋಪಾಲ ನಾಗರಕಟ್ಟೆ. ಶ್ರೀರಾಮನ ನಿರ್ಯಾಣದ ನಂತರ ಆತನ ಸುಪುತ್ರ ಕುಶನು ತನ್ನ ಪಿತನ ಜನ್ಮಸ್ಥಾನದಲ್ಲಿ ಭವ್ಯವಾದ ಮಂದಿರ ನಿರ್ಮಿಸಿದ. ಸಹಸ್ರಾರು ವರ್ಷಗಳ ನಂತರ ರಾಜಾ ವಿಕ್ರಮಾದಿತ್ಯನಿಂದ ಆ ಭವ್ಯ ಮಂದಿರ ಜೀರ್ಣೋದ್ಧಾರದ ಪವಿತ್ರ ಕಾರ್ಯ ನೆರವೇರಿತು. ಅಯೋಧ್ಯಾ ಶ್ರೀರಾಮ ಜನ್ಮಸ್ಥಾನದ ದರ್ಶನವು ಮೋಕ್ಷ ಪ್ರಾಪ್ತಿಯ ಮಾರ್ಗವೆಂಬ ಶ್ರದ್ಧೆಯಿಂದ ಜೀವನದಲ್ಲೊಮ್ಮೆಯಾದರೂ ಅಯೋಧ್ಯಾ ದರ್ಶನ ಮಾಡಲೇಬೇಕೆಂದು ಹಂಬಲಿಸಿ ತೀರ್ಥಯಾತ್ರೆ ಮಾಡುತ್ತಾರೆ. 1528ರಲ್ಲಿ ಮತಾಂಧ ಆಕ್ರಮಣಕಾರಿ ಬಾಬರನ ಆದೇಶದಂತೆ ಆತನ ಸೇನಾಧಿಪತಿ ಮೀರ್‌ ಬಾಕಿ ಮಂದಿರವನ್ನು ಧ್ವಂಸಗೊಳಿಸಿ ಆ ಸ್ಥಾನದಲ್ಲಿ […]

Read More

ನಮ್ಮೊಳಗೇ ಸದಾ ನಡೆಯುತ್ತಿವೆ ಹತ್ತು ಹಲವು ರಾಮಾಯಣಗಳು

– ಹರೀಶ್‌ ಕೇರ. ರಾವಣನಿಂದ ಅಪಹೃತಗೊಂಡ ಸೀತೆಯ ಶೋಧಕ್ಕಾಗಿ ಹನುಮಂತ ಸಮುದ್ರವನ್ನೇ ಹಾರುತ್ತಾನೆ. ಅಲ್ಲಿ ಸೀತೆಯನ್ನು ಕಂಡು, ಆಕೆಯಿಂದ ಚೂಡಾಮಣಿಯನ್ನು ಪಡೆದು, ಮರಳಿ ಸಮುದ್ರದ ಮೇಲೆ ಹಾರಿ ಬರುತ್ತಿರುವಾಗ ಚೂಡಾಮಣಿ ಕೈಜಾರಿ ಸಮುದ್ರದೊಳಗೆ ಬಿತ್ತು. ಕೂಡಲೇ ಆಂಜನೇಯ ಸಮುದ್ರಕ್ಕೆ ಧುಮುಕಿ, ಉಂಗುರವನ್ನು ಹುಡುಕುತ್ತ ನೇರವಾಗಿ ಪಾತಾಳಕ್ಕೆ ಹೋದ. ಅಲ್ಲಿ ಬಲಿ ಚಕ್ರವರ್ತಿಯಿದ್ದ. ಅವನ ಬಳಿ ಹೋಗಿ ಮಾರುತಿ, ಚೂಡಾಮಣಿಯ ಬಗ್ಗೆ ಕೇಳಿದ. ಬಲಿಯೇಂದ್ರ ನೂರಾರು ಚೂಡಾಮಣಿಗಳಿದ್ದ ತಟ್ಟೆಯೊಂದನ್ನು ಹನುಮನ ಮುಂದಿರಿಸಿ, ‘‘ಇದರಲ್ಲಿ ನಿನ್ನ ಚೂಡಾಮಣಿ ಯಾವುದು ತೆಗೆದುಕೋ,’’ […]

Read More

ರಾಮ ಮಂದಿರ ನಿರ್ಮಾಣ ಎಂದರೆ ರಾಷ್ಟ್ರೀಯ ಹೆಮ್ಮೆ ಮರು ಪ್ರತಿಷ್ಠಾಪನೆ

– ಪ್ರಫುಲ್ಲ ಕೇತ್ಕರ್. ಭಾರತದ ಇತಿಹಾಸದಲ್ಲಿ 2020ರ ಆಗಸ್ಟ್ 5ರಂದು ಹೊಸ ಅಧ್ಯಾಯ ಆರಂಭವಾಗಲಿದೆ. ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮ ಮಂದಿರ ಮರು ನಿರ್ಮಾಣದ ಕಾರ್ಯ ಆರಂಭವಾಗಲಿದ್ದು, ಭಿನ್ನ ರೀತಿಯಲ್ಲಿ ಈ ಯುಗದ ಪ್ರಮುಖ ಘಟನೆಯಾಗಿ ದಾಖಲಾಗಲಿದೆ. ಈ ಕೊರೊನಾ ಸಾಂಕ್ರಾಮಿಕದಿಂದಾಗಿ ಭೌತಿಕವಾಗಿ ಬಹಳಷ್ಟು ಜನರಿಗೆ ಈ ಘಟನೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಅನೇಕ ವೇದಿಕೆಗಳ ಮೂಲಕ ಇಡೀ ಜಗತ್ತು ಈ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮಜನ್ಮಭೂಮಿ ಹೋರಾಟಕ್ಕೆ ಮಾರ್ಗದರ್ಶನ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top