ಚೀನಾ ಆ್ಯಪ್‌ ಬ್ಯಾನ್‌

– ಟಿಕ್‌-ಟಾಕ್‌, ಶೇರ್‌ಇಟ್‌, ಹೆಲೋ ಸಹಿತ 59 ಅಪ್ಲಿಕೇಷನ್‌ ಸ್ಟಾಪ್‌ – ಡ್ರ್ಯಾಗನ್‌ ದರ್ಪಕ್ಕೆ ಭಾರತದ ಪೆಟ್ಟು | ಬಾಯ್ಕಾಟ್‌ ಚೀನಾ ಆಂದೋಲನಕ್ಕೆ ಬಲ ಹೊಸದಿಲ್ಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಚೀನಿ ಸೇನೆಗೆ ದಿಟ್ಟ ಉತ್ತರ ಕೊಟ್ಟಿದ್ದ ಭಾರತ, ಈಗ ಡ್ರ್ಯಾಗನ್‌ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ. ಅತ್ಯಂತ ಜನಪ್ರಿಯ ‘ಟಿಕ್‌-ಟಾಕ್‌’, ‘ಶೇರ್‌ಇಟ್‌’ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಕೇಂದ್ರ ಸರಕಾರ ಸೋಮವಾರ ನಿಷೇಧಿಸಿದೆ. ಚೀನಾದ ಸರಕು-ಸೇವೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ‘ಬಾಯ್ಕಾಟ್‌ ಚೀನಾ’ […]

Read More

ಖಾಸಗಿ ದರ ನಿಗದಿಯಾಗಲಿ – ಕೋವಿಡ್ ಚಿಕಿತ್ಸೆಯನ್ನು ವಿಸ್ತರಿಸುವುದು ಅಗತ್ಯ

ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸರಕಾರ ಮುಂದಾಗಿದೆ. ಆದರೆ ಈ ಬಗ್ಗೆ ಒಂದು ಒಮ್ಮತ ಹಾಗೂ ದರ ನಿಗದಿ ಮಾಡುವುದು ಇನ್ನೂ ಸರಕಾರಕ್ಕೆ ಸಾಧ್ಯವಾಗಿಲ್ಲ. ದರ ನಿಗದಿಯ ಬಗ್ಗೆ ಖಾಸಗಿ ಆಸ್ಪತ್ರೆಗಳು ಹಗ್ಗ ಜಗ್ಗಾಟ ನಡೆಸುವುದು ಖಂಡಿತ. ಯಾಕೆಂದರೆ ಕೋವಿಡ್ ಚಿಕಿತ್ಸೆ ಸುಲಭದ್ದಲ್ಲ. ಇದು ಇನ್ನೊಬ್ಬರಿಗೆ ಸುಲಭವಾಗಿ ಹರಡಬಹುದಾದ್ದರಿಂದ, ಅದನ್ನು ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದ್ದರಿಂದ, ಚಿಕಿತ್ಸೆ ವೆಚ್ಚವೂ ಹೆಚ್ಚಾಗುವುದು ಖಚಿತ. ಈ ವಿಚಾರದಲ್ಲಿ ಒಂದು ಮಾರ್ದದರ್ಶಿ ಸೂತ್ರವನ್ನು ಸರಳವಾಗಿ ರೂಪಿಸುವುದು ಹಾಗೂ […]

Read More

ಬಿಜೆಪಿ ಅಭ್ಯರ್ಥಿ ಆಯ್ಕೆ ಮತ್ತು ಹಂಸಕ್ಷೀರ ನ್ಯಾಯ!

– ಶಶಿಧರ ಹೆಗಡೆ. ನ್ಯಾಯ ನಿರ್ಣಯದ ವಿಚಾರ ಬಂದಾಗ ಸರ್ವಶ್ರೇಷ್ಠ ಹೋಲಿಕೆಗಾಗಿ ‘ಹಂಸಕ್ಷೀರ ನ್ಯಾಯ’ವೆಂದು ಹೇಳುವುದುಂಟು. ಹಂಸವೆಂದರೆ ಪಕ್ಷಿ. ಕ್ಷೀರವೆಂದರೆ ಹಾಲು. ಹಾಗಾಗಿ ಈ ಹೋಲಿಕೆಯೇ ವಿಚಿತ್ರವೆನಿಸಬಹುದು. ಹಂಸ ಪಕ್ಷಿ, ಕ್ಷೀರ ಮತ್ತು ನ್ಯಾಯಕ್ಕೆ ಎಲ್ಲಿಂದೆಲ್ಲಿಯ ಸಂಬಂಧವೆಂದು ಕೇಳಬಹುದು. ಪ್ರಾಯಶಃ ಇದೇ ಕಾರಣದಿಂದ ಈ ನುಡಿಕಟ್ಟು ಒಗಟಾಗಿಯೇ ಉಳಿದುಬಿಟ್ಟಿರಬಹುದು. ಹಂಸಪಕ್ಷಿಯ ಎದುರು ಕ್ಷೀರ ತುಂಬಿದ ಪಾತ್ರೆಯನ್ನು ಇಟ್ಟರೆ ಅದು ಕ್ಷೀರಪಾನವೊಂದನ್ನೇ ಮಾಡುತ್ತದೆ! ಅಂದರೆ ಹಾಲಿಗೆ ನೀರು ಬೆರೆಸಿ ಕೊಟ್ಟಿದ್ದಾರೆ ಎಂದುಕೊಳ್ಳಿ. ಹಂಸಪಕ್ಷಿಯು ಹಾಲನ್ನಷ್ಟೇ ಹೀರಿಕೊಳ್ಳುತ್ತದೆ. ಅರ್ಥಾತ್‌ ಹಾಲಿನೊಂದಿಗೆ […]

Read More

ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ – ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ

– ಕೋರೆ-ಕತ್ತಿ ಫೈಟ್‌ ನಡುವೆ ಕಡಾಡಿ, ಗಸ್ತಿ ಎಂಟ್ರಿ. – ಘಟಾನುಘಟಿಗಳನ್ನು ಬದಿಗೊತ್ತಿ ಪಕ್ಷ ನಿಷ್ಠರಿಗೆ ಗಿಫ್ಟ್‌. ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯಸಭೆ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸುತ್ತಿದ್ದ ಮತ್ತು ಭಿನ್ನಮತದ ಮೂಲಕ ಒತ್ತಡ ಹಾಕುತ್ತಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್‌ ಭರ್ಜರಿ ಶಾಕ್‌ ಕೊಟ್ಟಿದೆ. ಚರ್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ, ಪಕ್ಷ ನಿಷ್ಠರಾದ ಸಾಮಾನ್ಯ […]

Read More

ಗುಜರಾತ್ ಮಾದರಿ, ರಾಜ್ಯ ರಾಜಕೀಯ ಗರಿಗರಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ. ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ. ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ. ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು […]

Read More

ಕಾಂಗ್ರೆಸ್ ಗೆ ಹೊಡೆತ ನೀಡಿದ ಮೋದಿ ಸರ್ಕಾರದ ಕಠಿಣ ನಿರ್ಧಾರಗಳು

ಬಹುನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಿಮಾಚಲದಲ್ಲಿ ಗರಿಷ್ಠ ಸ್ಥಾನ ಗಳಿಸಿ, ಗುಜರಾತಿನಲ್ಲಿ ಪ್ರಯಾಸ ಪಟ್ಟು ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಇಲ್ಲಿ ಆರಂಭವಾಗುವ ಮೊದಲ ಲೆಕ್ಕಾಚಾರ ಈ ಜಿದ್ದಾಜಿದ್ದಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದು.   ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಗೆದ್ದು ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ನಿಜ. ಆದರೂ ಶತಾಯಗತಾಯ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ತರಹೇವಾರಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸೆಣೆಸಿದರೂ ಅಧಿಕಾರದ ಕನಸು ಕೈಗೂಡಲಿಲ್ಲ ಎಂಬುದೂ […]

Read More

ಅಹಮದ್ ಪಟೇಲರ ಎದೆಬಡಿತ ಹೆಚ್ಚಿಸಿದ್ದು ತಪ್ಪಾ ಒಪ್ಪಾ? (12 .08.2017)

ಸರಿ-ತಪ್ಪುಗಳು ಕಾಲ ಬದಲಾದಂತೆ ಬದಲಾಗುವುದಿಲ್ಲ. ನ್ಯಾಯ-ಅನ್ಯಾಯಗಳು ಕೂಡ ಅದೇ ರೀತಿ. ಜೀವನದ ಮೌಲ್ಯಗಳೂ ಅಷ್ಟೇ. ಹಾಗೇನೆ ತಾನು ಏಟು ತಿಂದಾಗ ನೋವಾಯಿತು ಎಂದು ಅಳುವವರು ತಾವು ಬೇರೆಯವರಿಗೆ ಏಟು ಕೊಟ್ಟಾಗಲೂ ಅದೇ ರೀತಿ ನೋವಾಗುತ್ತದೆ ಎಂದು ತಿಳಿದುಕೊಳ್ಳಬೇಕಲ್ಲವೇ? ಅಹಮದ್ ಪಟೇಲ್ ವಿಚಾರಕ್ಕೆ ಆಮೇಲೆ ಬರೋಣ. ಅದಕ್ಕಿಂತ ಮೊದಲು ಇಬ್ಬರು ವ್ಯಕ್ತಿಗಳ ಜಾತಕವನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಒಬ್ಬಾಕೆ ಇಷ್ರತ್ ಜಹಾನ್. ಮತ್ತೊಬ್ಬಾತ ಸೊಹ್ರಾಬುದ್ದೀನ್ ಶೇಖ್. ಈ ಇಬ್ಬರೂ ಗುಜರಾತ್ ಮತ್ತು ರಾಜಸ್ಥಾನ ಪೊಲೀಸರ ಗುಂಡಿಗೆ ಸಾವನ್ನಪ್ಪಿದವರು. ಇವರ […]

Read More

ಸೋಷಿಯಲ್ ಇಂಜಿನಿಯರಿಂಗ್ ಎಂಬ ರಾಜಕೀಯ ಲೆಕ್ಕಾಚಾರ (3. 06. 2017)

ಸಿದ್ಧಾಂತಗಳನ್ನು ತೇಲಿಬಿಡುವುದು ಸುಲಭ. ಆದರೆ ಅದರ ಉದ್ದೇಶ, ಆಶಯವನ್ನು ಕಾರ್ಯರೂಪಕ್ಕೆ ತರುವಾಗಲೇ ಅಸಲಿಯತ್ತು ಬಹಿರಂಗವಾಗುವುದು. ಆಡಳಿತದ ಸ್ಥಾನಗಳನ್ನು ನಿರ್ಧರಿಸುವಾಗ ಈವರೆಗೆ ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಮೀರಿ ಹೊಸ ಹೆಜ್ಜೆಯಿಡುವ ಧೈರ್ಯ ಮಾಡಿದರೆ ಬದಲಾವಣೆಯನ್ನು ನಿರೀಕ್ಷಿಸಬಹುದು. ಸೋಷಿಯಲ್ ಇಂಜಿನಿಯರಿಂಗ್ ಎನ್ನುವ ಪದ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿರುವುದನ್ನು ಎಲ್ಲರೂ ಗಮನಿಸಿಯೇ ಇರುತ್ತೀರಿ. ಅದರ ಅರ್ಥ ಬಹಳ ವಿಶಾಲ. ವ್ಯಾಪ್ತಿಯ ಹರವು ಬಹಳ ದೊಡ್ಡದು. ಆದರೆ ಅದರ ಬಳಕೆ ಮಾತ್ರ ರಾಜಕೀಯ ವಲಯದಲ್ಲಿ ಮತ್ತು ಅದಕ್ಕೆ ಪೂರಕವಾದ ಸಾಮಾಜಿಕ ವಲಯದಲ್ಲಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top