ಲಾಕ್‌ಡೌನ್ ಬಹುತೇಕ ತೆರವಾಗಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳಲು ಕಾತರಿಸುತ್ತಿದೆ. ಸಹಜ ಸ್ಥಿತಿಗೆ ಬರಬೇಕೆಂದರೆ ಬದುಕಲು ಅಗತ್ಯವಾದ ದಿನಸಿ ವಸ್ತುಗಳ ಬೆಲೆ ಸಹಜ ಸ್ವರೂಪಕ್ಕೆ ಬರಬೇಕು. ಹಾಗೆಯೇ ರೈತರ ಉತ್ಪನ್ನಗಳು ಲಾಭಕರ ಬೆಲೆಗೆ ಮಾರಾಟವಾಗಬೇಕು, ಅವರೂ ಕೂಡ ಅಗತ್ಯ ವಸ್ತುಗಳಿಗೆ ವೆಚ್ಚ ಮಾಡಲು ಸಾಧ್ಯವಾಗಬೇಕು. ಆದರೆ ಲಾಕ್‌ಡೌನ್ ತೆರವಾಗುತ್ತಿರುವಂತೆ ಮಾರುಕಟ್ಟೆಯಲ್ಲಿ ಕಾಣಿಸುತ್ತಿರುವ ಸ್ಥಿತಿ ಭಿನ್ನವಾಗಿದೆ. ಸಿಮೆಂಟ್, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳು, ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬೆಲೆಗಳು ಹೆಚ್ಚಿವೆ. ಕಟ್ಟಡ ಸಾಮಗ್ರಿಗಳ ಬೆಲೆ ಬಹುತೇಕ ದುಪ್ಪಟ್ಟು […]
Read More
ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ರಾಜ್ಯ ಸರಕಾರ ಉಳಿದೆಡೆ ಲಾಕ್‌ಡೌನ್ ಅನ್ನು ಬಹುತೇಕ ಸಡಿಲಿಸಿದೆ. ಸೋಂಕು ಹರಡುವಿಕೆಯ ಸರಪಣಿ ಮುರಿಯಲು ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದು, ಮಾಲ್, ಸಿನಿಮಾ, ಹೋಟೆಲ್‌ಗಳ ತೆರೆಯುವಿಕೆಗೆ ನಿರ್ಬಂಧವಿದೆ. ರಾಜ್ಯದೊಳಗಿನ ರೈಲು ಸಂಚಾರವಿದ್ದರೂ ಮೆಟ್ರೋ ಓಡಾಡುವುದಿಲ್ಲ. ಅಂತಾರಾಜ್ಯ ಪ್ರಯಾಣ ಮುಕ್ತವಲ್ಲ. ಅಂತರ್‌ಜಿಲ್ಲಾ ಪ್ರಯಾಣ ಮಾಡಬಹುದು. ಹವಾನಿಯಂತ್ರಿತ ಬಸ್‌ಗಳ ಹೊರತಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ಎಲ್ಲ ಬಸ್ ಸಂಚಾರ ಶುರುವಾಗಲಿದೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ ಓಡಾಡಲಿವೆ. ಸೆಲೂನ್ ಸಹಿತ ಎಲ್ಲಾ […]
Read More
ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಂಪ್ರದಾಯಿಕ ತರಗತಿಗಳು ಬಂದ್ ಆಗಿದ್ದು ಆನ್‌ಲೈನ್ ಪಾಠ ಪ್ರವಚನಗಳತ್ತ ಶಿಕ್ಷಕರು-ವಿದ್ಯಾರ್ಥಿಗಳು ತಿರುಗಬೇಕಾಗಿ ಬಂದಿದೆ. ಕ್ಲಾಸ್‌ಗಳು ಆರಂಭವಾಗುವ ಲಕ್ಷಣ ಸದ್ಯಕ್ಕಿಲ್ಲ. ಆರಂಭವಾದರೂ, ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಹೆಚ್ಚಿನ ಮಕ್ಕಳನ್ನು ಒಂದೆಡೆ ಕೂಡಿಹಾಕುವಂತಿಲ್ಲ. ಆದರೆ ಮಕ್ಕಳ ಶಿಕ್ಷಣವನ್ನಂತೂ ಕೈಬಿಡುವಂತಿಲ್ಲವಲ್ಲ. ಹೀಗಾಗಿ ಆನ್‌ಲೈನ್ ತರಗತಿ, ಉಪನ್ಯಾಸ, ಸಂವಾದ, ಸೆಮಿನಾರ್‌ಗಳು ಭವಿಷ್ಯದಲ್ಲಿ ಅನಿವಾರ್ಯವಾಗಲಿವೆ. ನಾವು ಸಾಂಪ್ರದಾಯಿಕ ಗುರುಪರಂಪರೆಯ ಎಷ್ಟೇ ಅಭಿಮಾನಿಗಳಾಗಿದ್ದರೂ, ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಇಂದು ವರ್ಚುವಲ್ ತರಗತಿಗಳತ್ತ ಹೊರಳಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ಹಲವು ಪೂರಕ […]
Read More
ಒಂದು ಕಾಲದಲ್ಲಿ ‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದು ಖ್ಯಾತನಾಗಿದ್ದ ‘ಮದ್ಯದ ದೊರೆ’ ವಿಜಯ ಮಲ್ಯ ಭಾರತೀಯ ಬ್ಯಾಂಕುಗಳಿಗೆ ಮೋಸ ಮಾಡಿ 2016ರಲ್ಲಿ ಬ್ರಿಟನ್‌ಗೆ ಪಲಾಯನ ಮಾಡಿದ್ದರು. ಅಂದಿನಿಂದಲೂ ಮಲ್ಯ ಅವರನ್ನು ವಾಪಸ್ ಭಾರತಕ್ಕೆ ಕರೆ ತರುವ ಪ್ರಯತ್ನವನ್ನು ಭಾರತ ಸರಕಾರ ಮಾಡುತ್ತಲೇ ಇದೆ. ಹಂತ ಹಂತವಾಗಿ ಕಾನೂನು ಹಾಗೂ ರಾಜತಾಂತ್ರಿಕ ಉಪಾಯಗಳ ಮೂಲಕ ಇದೀಗ ಮುಂದಿನ 28 ದಿನಗಳಲ್ಲಿ ಭಾರತೀಯ ಕೋರ್ಟು ಕಟಕಟೆಯಲ್ಲಿ ಮಲ್ಯ ನಿಲ್ಲಲಿದ್ದಾರೆ. ವಿಜಯ ಮಲ್ಯ ರೀತಿಯಲ್ಲೇ ಸುಸ್ತಿದಾರರಾಗಿ ದೇಶ ತೊರೆದಿರುವ ಲಲಿತ್ […]
Read More
ಇಡೀ ಜಗತ್ತನ್ನೇ ಕಂಗೆಡಿಸಿರುವ ಕೊರೊನಾ ವೈರಸ್(ಕೋವಿಡ್-19) ಕೂಡಲೇ ನಿರ್ನಾಮ ಆಗಲಿದೆಯೇ, ದೀರ್ಘಕಾಲದವರೆಗೆ ಇರಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ), ‘‘ಕೋವಿಡ್-19 ಕೂಡ ಎಚ್ಐವಿ ರೀತಿಯಲ್ಲಿ ದೀರ್ಘಕಾಲಿನ ಸೋಂಕು ರೋಗವಾಗಿ ಉಳಿಯುವ ಸಾಧ್ಯತೆ ಇದ್ದು, ಇದರ ಜತೆಗೇ ಜೀವನ ನಡೆಸುವ ವಿಧಾನಗಳನ್ನು ಕಂಡುಕೊಳ್ಳಬೇಕಿದೆ,’’ ಎಂದು ಹೇಳಿದೆ. ಇದೇ ರೀತಿಯ ಅಭಿಪ್ರಾಯವನ್ನು ಕೆಲವು ದಿನಗಳ ಹಿಂದೆ ಭಾರತ ಸರಕಾರದ ಆರೋಗ್ಯ ಇಲಾಖೆ ಕೂಡ ವ್ಯಕ್ತಪಡಿಸಿ, ‘‘ನಾವು ಕೊರೊನಾ ವೈರಾಣುವಿನೊಂದಿಗೆ ಬದುಕುವುದನ್ನು ಕಲಿಯಬೇಕಿದೆ,’’ ಎಂದು ಹೇಳಿತ್ತು. ಕೊರೊನಾ ವೈರಸ್ […]
Read More
ಶ್ರೀಮಂತ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ರೈತರನ್ನು ಸುಲಿಗೆ ಮಾಡುವುದನ್ನು ತಡೆಯಲೆಂದು ಎಪಿಎಂಸಿ ಕಾಯಿದೆ ರೂಪಿಸಿ ಜಾರಿಗೆ ತರಲಾಗಿತ್ತು. ಈಗ ಆ ಎಪಿಎಂಸಿ ಕಾಯಿದೆಯಲ್ಲಿ ದಿಢೀರ್ ತಿದ್ದುಪಡಿ ಮಾಡಲು ಸರಕಾರ ಮುಂದಾಗಿದೆ. ತಿದ್ದುಪಡಿ ಕಾಯಿದೆ ಸಂಬಂಧ ಸುಗ್ರೀವಾಜ್ಞೆ ಪ್ರಸ್ತಾಪವನ್ನು ಕೇಂದ್ರ ಸರಕಾರದ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಇದಕ್ಕೆ ಮುನ್ನ ತಿದ್ದುಪಡಿ ಸಂಬಂಧಿಸಿ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕಿತ್ತು; ಸಂಪುಟ ಸಭೆಯಲ್ಲಿ ಅನುಮೋದನೆ ಆಗಬೇಕಿತ್ತು. ಎರಡೂ ಆಗಿಲ್ಲ. ಇಷ್ಟೊಂದು ತರಾತುರಿಯಲ್ಲಿ ಲಾಕ್‌ಡೌನ್ ನಡುವೆಯೇ, ಎಪಿಎಂಸಿ ಕಾಯಿದೆ ಬದಲಾಯಿಸುವ ತರಾತುರಿ ಏನಿದೆ? ಇದು […]
Read More
ಸೋಮವಾರ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಬೇಗುದಿಯನ್ನು ತಕ್ಕಮಟ್ಟಿಗೆ ತಣಿಸಲು ಈ ಪ್ಯಾಕೇಜ್ ನೆರವಾಗಬಹುದು ಎಂದು ಆಶಿಸಬಹುದು. ಇದು ಜಿಡಿಪಿಯ ಶೇ.10ರಷ್ಟಿದ್ದು, ಗಣನೀಯ ಪ್ರಮಾಣದ ನೆರವೇ ಆಗಿದೆ. ರೈತರು, ಸಣ್ಣ ಹಾಗೂ ಕಿರು ಉದ್ಯಮಗಳು, ಕೈಗಾರಿಕೆ, ಮಧ್ಯಮ ವರ್ಗದವರಿಗೆ ಈ ಪ್ಯಾಕೇಜ್ ಸಲ್ಲಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಕೊರೊನಾ ಸಮರವನ್ನು […]
Read More
ಹಂತಹಂತವಾಗಿ ಲಾಕ್‌ಡೌನ್ ಸಡಿಲಿಸುತ್ತಿರುವ ಸರಕಾರ, ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ನಿಗದಿತ ಸಿಬ್ಬಂದಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದೆ. ಆದರೆ ಕೈಗಾರಿಕೆಗಳು ಈ ಎರಡು ತಿಂಗಳ ಲಾಕ್‌ಡೌನ್ ಸೃಷ್ಟಿಸಿದ ಬಹಳ ಆಳವಾದ ಸಮಸ್ಯೆಗಳಿಂದ ನರಳುತ್ತಿವೆ. ಈ ಅವಧಿಯಲ್ಲಿ ಕೆಲಸ ನಿರ್ವಹಿಸದ ಕಾರಣದಿಂದ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿದೆ. ತಮ್ಮ ಉತ್ಪನ್ನಗಳಿಗೆ ಹೊರಗೆ ಬೇಡಿಕೆ ಯಾವ ಪ್ರಮಾಣದಲ್ಲಿದೆ ಎಂಬುದು ಗೊತ್ತಿಲ್ಲದ ಸನ್ನಿವೇಶದಲ್ಲಿ ಕೈಗಾರಿಕೆಗಳು ಕೆಲಸ ಆರಂಭಿಸಬೇಕಿದೆ. ಕಾರ್ಮಿಕರ ಕೊರತೆ ತೀವ್ರವಾಗಿದೆ. ಸಾರಿಗೆ ಸಂಪರ್ಕದ ನಿರ್ಬಂಧದಿಂದ ಕಚ್ಚಾವಸ್ತುಗಳ ಕೊರತೆ ಕಾಡುತ್ತಿದೆ. ಕಳೆದೆರಡು ತಿಂಗಳಿನಿಂದ […]
Read More
ಕೊರೊನಾ ಲಾಕ್‌ಡೌನ್ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗ ಮತ್ತು ವೃತ್ತಿಪರರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, 1610 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಸರಕಾರದ ಈ ಕ್ರಮ ಇತರ ರಾಜ್ಯಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಮಾದರಿ. ಅಗಸರು, ಕ್ಷೌರಿಕರು, ಆಟೋ- ಟ್ಯಾಕ್ಸಿ ಚಾಲಕರು, ಹೂವು ಬೆಳೆಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಈ ನೆರವು ಘೋಷಿಸಲಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ನೇರವಾಗಿ ಜಮೆಯಾಗಲಿದೆ. ಅದರಂತೆ ಹೂ ಬೆಳೆಗಾರರು ಹೆಕ್ಟೇರ್‌ಗೆ 25 […]
Read More
ಸಾಮಾಜಿಕ ಜಾಲತಾಣ ಇನ್ಸ್‌ಟಾಗ್ರಾಂನಲ್ಲಿ ರಹಸ್ಯ ಗ್ರೂಪ್ ರಚಿಸಿಕೊಂಡು ಸಹಪಾಠಿ ವಿದ್ಯಾರ್ಥಿನಿಯರನ್ನು ಗ್ಯಾಂಗ್ ರೇಪ್ ಮಾಡುವ ಬಗ್ಗೆ ಹೊಂಚು ಹಾಕುತ್ತಿದ್ದ ದಿಲ್ಲಿಯ ಪ್ರತಿಷ್ಠಿತ ವರ್ಗದ ವಿದ್ಯಾರ್ಥಿಗಳ ಬಳಗವೊಂದನ್ನು ದಿಲ್ಲಿ ಪೊಲೀಸರು ಭೇದಿಸಿದ್ದಾರೆ. ಇದರ ಅಡ್ಮಿನ್‌ನನ್ನು ಬಂಧಿಸಿದ್ದು, ಆತ ಸೇರಿದಂತೆ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 18ರ ಹರೆಯದ ಈ ಅಡ್ಮಿನ್‌ನ್ನ ಗ್ರೂಪ್‌ನಲ್ಲಿ ಹಲವು ಅಪ್ರಾಪ್ತ ವಯಸ್ಕರೂ ಇದ್ದಾರೆ. ಈ ಪ್ರಕರಣವನ್ನು ಒಬ್ಬಾಕೆ ವಿದ್ಯಾರ್ಥಿನಿ ಬಯಲಿಗೆಳೆದಿದ್ದಳು. ಈ ವಿದ್ಯಾರ್ಥಿನಿಯ ಫೋಟೋವನ್ನೂ ತಿದ್ದಿ ನಗ್ನಚಿತ್ರಕ್ಕೆ ಜೋಡಿಸಿ ಈ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಈ […]
Read More