– ಶಶಿಧರ ಹೆಗಡೆ. ‘‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ…,’’ ಎಂಬ ಆಡುಭಾಷೆಯ ಮಾತೊಂದಿದೆ. ಯಾರದ್ದಾದರೂ ತಪ್ಪು ಎತ್ತಿ ತೋರಿಸಲು ಹೀಗೆ ಹೇಳುವುದುಂಟು. ಆದರೆ, ಇದರ ಅರ್ಥವನ್ನು ಸರಳವಾಗಿ ಹಾಗೂ ಸಕಾರಾತ್ಮಕ ದೃಷ್ಟಿಯಿಂದಲೇ ಗ್ರಹಿಸೋಣ. ಅಂದರೆ ಮನೆಯ ಹಿರಿಯರು ಸಂಸ್ಕಾರವಂತರಾದರೆ ಅದು ಇತರರಿಗೂ ಬಳುವಳಿಯಾಗಿ ಹೋಗುತ್ತದೆ. ಹಿರಿಯರು ತಪ್ಪು ಹೆಜ್ಜೆಯಿಟ್ಟರೆ ಕಿರಿಯರು ಅದನ್ನು ಬಹುಬೇಗ ಕಲಿತುಕೊಂಡು ಬಿಡುತ್ತಾರೆ. ಹಾಗಾಗಿ ಕುಟುಂಬದ ಎಲ್ಲ ಸದಸ್ಯರ ಮೇಲೆ ಪ್ರಭಾವ ಬೀರಿ ಅವರನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಛಾತಿ ಮನೆಯ ಯಜಮಾನ/ ಯಜಮಾನತಿಗೆ […]
Read More
– ಡಾ.ರೋಹಿಣಾಕ್ಷ ಶಿರ್ಲಾಲು. I am a thorough patriot.I shall relinquish all happiness and sacrifice my life for my country ಎಂದು ತನ್ನ ಬದುಕನ್ನು ರಾಷ್ಟ್ರ ಸಮರ್ಪಿಸಿದ ಧೀರ ದಾಮೋದರ್ ಹರಿ ಚಾಪೇಕರ್. ಒಂದೇ ತಾಯಿಯ ಮೂವರು ಮಕ್ಕಳು ಮಾತೃಭೂಮಿಯ ದಾಸ್ಯ ಮುಕ್ತಿಗಾಗಿ ನಡೆಸಿದ ಕ್ರಾಂತಿಯಜ್ಞಕ್ಕೆ ತಮ್ಮನ್ನು ತಾವೇ ಆಹುತಿ ನೀಡಿದ ಹುತಾತ್ಮರೆಂದರೆ ದಾಮೋದರ್ ಹರಿ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ ಚಾಪೇಕರ್. 1898-1899 ರ ಅವಧಿಯೊಳಗೆ ಮೂರು ಜನ […]
Read More
– ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಕಾರ್ಮಿಕರ ಪುನರ್ ವಲಸೆ ಅನಿವಾರ್ಯ – ಗ್ರಾಮೀಣ ಉದ್ಯೋಗದ ಘೋಷಣೆ ಬೇರೆ, ವಾಸ್ತವವೇ ಬೇರೆ! ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರು ತವರಿನತ್ತ ವಲಸೆ ಹೋಗಿದ್ದಾರೆ. ಇವರ ಮಹಾ ವಲಸೆಯಿಂದ ಕೈಗಾರಿಕೆ, ಉದ್ಯಮ, ಮೂಲಸೌಕರ್ಯ ಕಾಮಗಾರಿ ವಲಯಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಗ್ರಾಮೀಣ ಕರ್ನಾಟಕದಲ್ಲೂ ಸಾಮಾಜಿಕ ಏರುಪೇರು ಉಂಟಾಗಲಿದೆ. ಈ ಕುರಿತ ಸಮಗ್ರ ಅವಲೋಕನ. ನಗರಗಳಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಹಳ್ಳಿಗಳಲ್ಲಿ ಉಳಿದರೆ ಪ್ರೀತಿ-ವಿಶ್ವಾಸದಿಂದ ಮನಸ್ಸು ತುಂಬಬಹುದೇ ಹೊರತು ಹೊಟ್ಟೆ ತುಂಬುವುದಿಲ್ಲ ಸರ್. ಕಲಿತಿರುವ ಕೌಶಲಕ್ಕೆ […]
Read More
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಹಾದಿ ಹಿಡಿದು ಕಾಲ್ನಡಿಗೆಯಲ್ಲಿ ತಮ್ಮೂರಿಗೆ ವಾಪಸ್ ಹೊರಟಿದ್ದ ವಲಸೆ ಕಾರ್ಮಿಕರಲ್ಲಿ 16 ಮಂದಿ, ರೈಲಿಗೆ ಸಿಕ್ಕಿ ಸತ್ತು ಹೋಗಿದ್ದಾರೆ. ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡ ಕಾರ್ಮಿಕರು ಔರಂಗಾಬಾದ್ ಜಿಲ್ಲೆಯ ಜಲ್ನಾದಿಂದ ತಮ್ಮ ತವರು ರಾಜ್ಯ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದರು. ನಡೆದು ದಣಿದು ರೈಲು ಹಳಿಗೆ ತಲೆ ಆನಿಸಿ ಮಲಗಿದ್ದವರು ರೈಲು ಹರಿದು ಸತ್ತಿದ್ದಾರೆ. ವಿಪರ್ಯಾಸ ಎಂದರೆ, ಇವರು ರಸ್ತೆಯ ಮೂಲಕ ನಡೆದು ಹೋದರೆ ಪೊಲೀಸರು ತಡೆಯುತ್ತಾರೆಂಬ ಭಯದಿಂದ ರೈಲು ಹಳಿಯಲ್ಲಿ […]
Read More
16 ಕಾರ್ಮಿಕರ ಬದುಕು ರೈಲಿನಡಿ ಸಿಲುಕಿ ಅಪ್ಪಚ್ಚಿ – ಕಾಲ್ನಡಿಗೆಯಲ್ಲಿ ತವರಿಗೆ ಸಾಗುತ್ತಿದ್ದ ವಲಸಿಗರು ಔರಂಗಾಬಾದ್: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಹತಾಶರಾಗಿ ಹೇಗಾದರೂ ಮಾಡಿ ತವರು ಸೇರಿಕೊಳ್ಳುವ ಪ್ರಯತ್ನವಾಗಿ ಕಾಲ್ನಡಿಗೆಯಲ್ಲಿ ಹೊರಟಿದ್ದ 16 ವಲಸೆ ಕಾರ್ಮಿಕರ ಬದುಕು ದಾರುಣ ಅಂತ್ಯ ಕಂಡಿದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಲ್ನಾದಲ್ಲಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಮಧ್ಯಪ್ರದೇಶಕ್ಕೆ ಸಾಗುತ್ತಿದ್ದಾಗ ಗುರುವಾರ ರಾತ್ರಿ ಔರಂಗಾಬಾದ್‌ನ ಭುಸವಾಲ್‌ನ ಕಾರ್ಮಾಡ್ ಎಂಬಲ್ಲಿ ಸುಸ್ತಾಯಿತು ಎಂದು ರೈಲು ಹಳಿಗೆ ತಲೆಯಾನಿಸಿ ಮಲಗಿದ್ದರು. ಈ ವೇಳೆ ಬೆಳಗ್ಗೆ […]
Read More
– ಕೇಶವ್ ಪ್ರಸಾದ್ ಬಿ ಬೆಂಗಳೂರು ಕೊರೊನಾ ಸಂಕಟದ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆರವಿನ ಘೋಷಣೆಯ ಬೆನ್ನಲ್ಲೇ, ಕೇಂದ್ರ ಸರಕಾರದ ವಿಶೇಷ ಪ್ಯಾಕೇಜ್ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ. ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಕೇಂದ್ರ ಮೊದಲ ಹಂತದಲ್ಲಿ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಹೀಗಿದ್ದರೂ, ಪರಿಸ್ಥಿತಿ ಸುಧಾರಿಸಬೇಕಿದ್ದರೆ ಇನ್ನೂ ಒಟ್ಟಾರೆಯಾಗಿ 10-15 ಲಕ್ಷ ಕೋಟಿ ರೂ. ಬೇಕು ಎಂಬುದು ಪರಿಣಿತರ ಅಭಿಮತ. ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆ ಸೇರಿದಂತೆ […]
Read More
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಲ್‌ಜಿ ಪಾಲಿಮರ್ಸ್ ಫ್ಯಾಕ್ಟರಿಯಲ್ಲಿ ನಡೆದ ವಿಷಾನಿಲ ದುರಂತ, ಮಧ್ಯಪ್ರದೇಶದ ಭೋಪಾಲ್ ವಿಷಾನಿಲ ದುರಂತವನ್ನು ನೆನಪಿಸಿಕೊಂಡು ಇಡೀ ದೇಶವೇ ಬೆಚ್ಚುವಂತೆ ಮಾಡಿದೆ. ಈ ಫ್ಯಾಕ್ಟರಿ ಯಾರದು, ವಿಷಾನಿಲ ಯಾವುದು, ಅದರಿಂದಾಗುವ ಪರಿಣಾಮವೇನು? ಇಲ್ಲಿದೆ ವಿವರ. ಯಾವುದೀ ಫ್ಯಾಕ್ಟರಿ? ವಿಷಾನಿಲ ದುರಂತ ನಡೆದ ಎಲ್‌ಜಿ ಪಾಲಿಮರ್ಸ್ ಫ್ಯಾಕ್ಟರಿ ವಿಶಾಖಪಟ್ಟಣದಿಂದ 15 ಕಿಲೋಮೀಟರ್ ದೂರದ ಗೋಪಾಲಪಟ್ಟಣಂ ಪೇಟೆಯ ಆರ್ ವೆಂಕಟಾಪುರಂ ಗ್ರಾಮದಲ್ಲಿದೆ. ಈ ಫ್ಯಾಕ್ಟರಿಯನ್ನು ಸ್ಥಾಪಿಸಿದ್ದು 1961ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಎಂಬ ಹೆಸರಿನಿಂದ, ಪಾಲಿಸ್ಟಿರೀನ್ ರಾಸಾಯನಿಕ ಉತ್ಪಾದನೆಗಾಗಿ ಆರಂಭಿಸಲಾಯಿತು. […]
Read More
– ಭೋಪಾಲ್ ದುರಂತವನ್ನು ನೆನಪಿಸಿದ ವಿಷಾಖಪಟ್ಟಣಂನ ವಿಷಾನಿಲ ಸೋರಿಕೆಗೆ 11 ಬಲಿ – ನೋಡನೋಡುತ್ತಿದ್ದಂತೆಯೇ ಬಿದ್ದು ಒದ್ದಾಡಿದ ಜನ – ಪ್ರಾಣಿಗಳೂ ಸಾವು | ಸಾವಿರಾರು ಮಂದಿ ಅಸ್ವಸ್ಥ ವಿಶಾಖಪಟ್ಟಣಂ: ನಲವತ್ತಾರು ವರ್ಷಗಳ ಹಿಂದೆ ನಡೆದ ಭೋಪಾಲ್ ವಿಷಾನಿಲ ದುರಂತವನ್ನೇ ನೆನಪಿಸುವ ಅನಿಲ ಸೋರಿಕೆ ಘಟನೆ ಗುರುವಾರ ನಸುಕಿನ ಜಾವ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಂಭವಿಸಿದೆ. ಇಬ್ಬರು ಮಕ್ಕಳು, ಮಹಿಳೆ ಸೇರಿದಂತೆ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಅಸ್ವಸ್ಥರಾಗಿದ್ದಾರೆ. ಆರ್ ಆರ್ ವೆಂಕಟಾಪುರಂ ಗ್ರಾಮದ […]
Read More
ಇಂದು ನಾರದ ಜಯಂತಿ ವಿಶ್ವದ ಮೊದಲ ಪತ್ರಕರ್ತನೆಂದು ನಾರದ ಮುನಿಗಳನ್ನೇ ಹೆಸರಿಸಬೇಕಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾರ್ತೆ, ವಿಶ್ಲೇಷಣೆಯನ್ನು ಒಯ್ಯುತ್ತಿದ್ದ ಈ ನಾರದ ಮುನಿಗಳು ಪರಮ ಹರಿಭಕ್ತರು. ತಮ್ಮ ಈ ಕಾಯಕದಿಂದಲೇ ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಯ ಕಾರ್ಯವನ್ನು ಸಾಧಿಸುತ್ತಿದ್ದವರು. ಇಂದಿನ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಅವರೇ ಪ್ರೇರಣೆ. ವೈಶಾಖ ಪೂರ್ಣಿಮೆಯ ನಂತರ ಕೃಷ್ಣ ಪಕ್ಷ ಪಾಡ್ಯದಂದು ನಾರದ ಜಯಂತಿ ಬರುತ್ತದೆ. ಹೆಚ್ಚಿನ ಎಲ್ಲ ಪುರಾಣಗಳಲ್ಲೂ ನಾರದ ಉಲ್ಲೇಖವಿದೆ. ರಾಮಾಯಣ ಮಹಾಭಾರತ ಭಾಗವತಗಳಲ್ಲೂ […]
Read More
ಮಾರುಕಟ್ಟೆಗೆ ಬಂದಿದೆ ಆಗ್ರಾಪೇಠಾ, ಅದುವೇ ಕುಂಬಳಕಾಯಿ ಪೇಡಾ! – ವಿ-ಟೆಕ್ ಸಂಸ್ಥೆಯ ಶೋಧನೆ, ರೈತರ ಕೈ ಹಿಡಿದ ಕ್ರಿಯಾಶೀಲ ಕನಸುಗಾರ ಕುಂಟುವಳ್ಳಿ ವಿಶ್ವನಾಥ್ ತೀರ್ಥಹಳ್ಳಿ: ವಿ-ಟೆಕ್ ಮಲೆನಾಡಿನ ಪುಟ್ಟ ಹಳ್ಳಿ ಕುಂಟುವಳ್ಳಿಯಲ್ಲಿರುವ ರೈತಸ್ನೇಹಿ ಉದ್ಯಮ. 2 ದಶಕದ ಹಿಂದೆ ಅಡಕೆ ಸುಲಿಯುವ ಯಂತ್ರ ಆವಿಷ್ಕರಿಸಿ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದ ಸಂಸ್ಥೆ. ಅನೇಕ ಪ್ರಯೋಗಗಳ ಮೂಲಕ ರೈತಸ್ನೇಹಿಯಾಗಿ ಯಶಸ್ಸು ಪಡೆದಿರುವ ವಿ-ಟೆಕ್ ಇದೀಗ ಕುಂಬಳಕಾಯಿ ಬೆಳೆದ ರೈತರ ಕೈ ಹಿಡಿಯುವ ಪ್ರಯತ್ನ ಮಾಡಿದೆ. ಉಪಯುಕ್ತ ಕ್ರಿಯಾಶೀಲ ಕನಸುಗಳ […]
Read More