ಕ್ವಾರಂಟೈನ್ ಮೇಲೆ ನಿಂತಿದೆ ನಾಡಿನ ಆರೋಗ್ಯ ಭವಿಷ್ಯ

ಪರೀಕ್ಷೆಯೇ ಸವಾಲು | ಆಸ್ಪತ್ರೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸುವ ತುರ್ತು | ಕೆಲವೆಡೆ ಲಾಕ್‌ಡೌನ್‌ ಅನಿವಾರ್ಯ. ವಿಕ ಬ್ಯೂರೊ, ಬೆಂಗಳೂರು. ವಲಸೆ ಕಾರ್ಮಿಕರ ಆಗಮನದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಬಂದವರೆಲ್ಲ ಕ್ವಾರಂಟೈನ್‌ನಲ್ಲಿದ್ದಾರೆ ನಿಜ. ಆದರೆ ಈ ವ್ಯವಸ್ಥೆ ಅಷ್ಟೇನು ಪ್ರಬಲವಾಗಿಲ್ಲ. ಇದನ್ನು ಸಬಲಗೊಳಿಸದೆ ಇದ್ದರೆ ಇಡೀ ರಾಜ್ಯ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಸೋಂಕು ಸಮುದಾಯದ ಹಂತಕ್ಕೆ ಹಬ್ಬಿಕೊಳ್ಳುತ್ತದೆ. ಇಲ್ಲಿರುವ ವಿವರಗಳು ರಾಜ್ಯ ಇನ್ನಷ್ಟು ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವ ತುರ್ತನ್ನು ಹೇಳುತ್ತಿವೆ. ಪರೀಕ್ಷಾ ಪ್ರಕ್ರಿಯೆ ಮತ್ತು ವರದಿ […]

Read More

ಚೀನಾ ಸೊಕ್ಕಿಗೆ ಭಾರತ ಸಡ್ಡು

– ಭಾರತ- ಆಸ್ಪ್ರೇಲಿಯಾ ವರ್ಚುವಲ್ ಶೃಂಗ.  – ವ್ಯೂಹಾತ್ಮಕ ಒಪ್ಪಂದಕ್ಕೆ ಉಭಯ ದೇಶಗಳ ಸಹಿ.  – ಪರಸ್ಪರ ಸೇನಾ ನೆಲೆ ಬಳಸಿಕೊಳ್ಳಲು ಸಮ್ಮತಿ | ಡ್ರ್ಯಾಗನ್‌ಗೆ ಅಂಕುಶ.  ಹೊಸದಿಲ್ಲಿ: ಚೀನಾ ಗಡಿಯಲ್ಲಿ ಕದನ ಕಾರ್ಮೋಡಗಳು ಎದ್ದಿರುವಾಗಲೇ ಭಾರತವು ಸೇನಾ ನೆಲೆಗಳನ್ನು ಬಳಸಿಕೊಳ್ಳುವ ಕುರಿತು ಆಸ್ಪ್ರೇಲಿಯಾ ಜತೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ವಿಶ್ವದ ಗಮನ ಸೆಳೆದಿದೆ. ಗಡಿ ಸಾರ್ವಭೌಮತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಖಚಿತಪಡಿಸುತ್ತ ಬಂದಿರುವ ಭಾರತ, ಲಡಾಖ್ ವಲಯದ […]

Read More

ಬುದ್ಧಿಗೇಡಿ ಜನರನ್ನು ಯಾವ ದೇವರು ರಕ್ಷಿಸಲು ಸಾಧ್ಯ?

ಬುದ್ಧಿಗೇಡಿ ಜನರನ್ನು ಯಾವ ದೇವರು ರಕ್ಷಿಸಲು ಸಾಧ್ಯ? – ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ. ಎಲ್ಲಧರ್ಮಗಳಲ್ಲಿಯೂ ದೇವರು ಕರುಣಾಮಯಿ, ದಯಾಮಯಿ, ಅನಾಥರಕ್ಷಕ, ದೀನಬಂಧು ಎಂದೆಲ್ಲಾ ಬಣ್ಣಿಸಲಾಗಿದೆ. ಸದ್ಯದ ಕೊರೊನಾ ಸಂಕಟದ ಸಮಯದಲ್ಲಿ ಜಗತ್ತಿನಾದ್ಯಂತ ಅದೆಷ್ಟು ಜನರು, ‘‘ದೇವರೇ ಕೊರೊನಾ ಮಹಾಮಾರಿಯನ್ನು ತೊಲಗಿಸು, ನಮ್ಮನ್ನು ಕಾಪಾಡು,’’ ಎಂದು ದೈನ್ಯದಿಂದ ಬೇಡುತ್ತಿದ್ದಾರೆ. ವಿವಿಧ ಧರ್ಮದವರು ತಂತಮ್ಮ ಧರ್ಮಗಳ ರೀತಿಯಲ್ಲಿ ಪ್ರಾರ್ಥನೆ, ಪೂಜೆ, ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಮಠ-ಮಂದಿರಗಳು, ಚರ್ಚು, ಮಸೀದಿ, ಗುರುದ್ವಾರಗಳು ಮುಚ್ಚಿದ್ದರೂ ಆಸ್ತಿಕರು ತಂತಮ್ಮ ಮನೆಗಳಲ್ಲಿರುವ ಪೂಜಾಗೃಹಗಳಲ್ಲಿ ದೇವರ […]

Read More

ಪೈನಾಪಲ್‌ನೊಳಗೆ ಸ್ಫೋಟಕ, ಬಲಿಯಾದ ಆನೆ

– ನೋವು, ಹಸಿವಿನಿಂದ ಪ್ರಾಣಬಿಟ್ಟ ಗರ್ಭಿಣಿ ಆನೆ – ಕೇರಳದಲ್ಲಿ ಹೃದಯ ವಿದ್ರಾವಕ ಘಟನೆ . ಏಜೆನ್ಸೀಸ್, ತಿರುವನಂತಪುರ: ಆಹಾರ ಅರಸಿ ಬಂದ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ ಅನಾನಸ್ ಹಣ್ಣನ್ನು ತಿಂದು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ವರದಿಯಾಗಿದೆ. ಸ್ಫೋಟಕವು ಬಾಯಲ್ಲಿ ಸ್ಫೋಟಿಸಿದ ಪರಿಣಾಮ ನೋವಿನಿಂದ ಆಹಾರ ಸೇವಿಸಲಾರದೆ 2-3 ದಿನ ನರಳಾಡಿದ ಆನೆ, ಕೊನೆಗೆ ನೋವು ಶಮನಕ್ಕಾಗಿ ನದಿಗೆ ಇಳಿದು ನೀರಿನಲ್ಲೇ ಪ್ರಾಣ ಬಿಟ್ಟಿದೆ. ಮೇ 27ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿರುವ ಈ ಹೃದಯ ವಿದ್ರಾವಕ ಘಟನೆ […]

Read More

ಕರುನಾಡ ಕಟ್ಟುವ ಕಾಯಕಕ್ಕೆ ವಿಕ ನಾಯಕ- ಕೊರೊನೋತ್ತರ ಕರ್ನಾಟಕದ ಪುನಶ್ಚೇತನ ಅಭಿಯಾನಕ್ಕೆ ಪ್ರವಾಸೋದ್ಯಮದ ಮುನ್ನುಡಿ

ವಿಕ ಸುದ್ದಿಲೋಕ ಬೆಂಗಳೂರು.  ಕೊರೊನಾ ಒಡ್ಡಿದ ಸವಾಲನ್ನು ಕರ್ನಾಟಕ ದಿಟ್ಟವಾಗಿ ಎದುರಿಸುತ್ತಿದೆ. ಆದರೆ, ಈ ಸಂಘರ್ಷ ದೀರ್ಘಕಾಲೀನವಾಗಿರುವುದರಿಂದ ಜನಜೀವನವನ್ನು ಮರಳಿ ಹಳಿಗೆ ತಂದು ಮುನ್ನಡೆಸಬೇಕಾದ ತುರ್ತು ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಕನ್ನಡದ ಅತಿ ಹೆಚ್ಚು ಓದುಗರನ್ನು ಹೊಂದಿರುವ ‘ವಿಜಯ ಕರ್ನಾಟಕ’ ಪತ್ರಿಕೆಯು ‘ಕರುನಾಡ ಕಟ್ಟೋಣ ಬನ್ನಿ’ (Re-Building Karnataka) ಎಂಬ ಘೋಷವಾಕ್ಯದಡಿಯಲ್ಲಿ ಜನರಿಂದ ಜನರಿಗಾಗಿ ಕರ್ನಾಟಕದ ಪುನರುತ್ಥಾನದ ಅಭಿಯಾನವನ್ನು ಆರಂಭಿಸಿದೆ. ಈ ಸುದೀರ್ಘ ಸರಣಿಯ ಮೊದಲ ಚರಣವಾಗಿ 35 ಲಕ್ಷ ಮಂದಿಯ ಬದುಕಿಗೆ ಆಧಾರವಾದ ‘ಪ್ರವಾಸೋದ್ಯಮ’ […]

Read More

ಟೂರಿಸಂಗೆ ಮರುಜೀವ

– ರಾಜ್ಯದ 35 ಲಕ್ಷ ಜನರ ಉದ್ಯೋಗ ಮರುಸ್ಥಾಪನೆಗೆ ಯತ್ನ – ವಿಕ ಸಾರಥ್ಯದ ಕರುನಾಡ ಕಟ್ಟೋಣ ಅಭಿಯಾನಕ್ಕೆ ಸಚಿವ ಸಿ.ಟಿ. ರವಿ ಚಾಲನೆ.  ವಿಕ ಸುದ್ದಿಲೋಕ ಬೆಂಗಳೂರು:  ಕೊರೊನಾ ಕಾರಣದಿಂದಾಗಿ ಎರಡೂವರೆ ತಿಂಗಳಿನಿಂದ ಸ್ತಬ್ಧವಾಗಿರುವ ಪ್ರವಾಸೋದ್ಯಮ ಮತ್ತು ಹೋಟೆಲ್ ಕ್ಷೇತ್ರದ ಪುನಶ್ಚೇತನದ ಮಾಸ್ಟರ್ ಪ್ಲ್ಯಾನ್ ಅನ್ನು ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ. ರವಿ ತೆರೆದಿಟ್ಟಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ ಪುನರುತ್ಥಾನಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಮಾಲೋಚನೆ ಮೂಲಕ ರೂಪಿಸುವ ‘ವಿಜಯ […]

Read More

ಆಕ್ರಮಣಕಾರಿ ಚೀನಾದ ರಹಸ್ಯ ಭೇದಿಸುತ್ತಾ…

– ನಾವು ಕಮ್ಯುನಿಸ್ಟ್ ಆಡಳಿತದ ವಿರುದ್ಧ ನಿಲುವು ತೆಗೆದುಕೊಳ್ಳಬೇಕೆ ಹೊರತು ಚೀನಿಯರ ವಿರುದ್ಧವಲ್ಲ. – ಪ್ರಫುಲ್ಲ ಕೇತ್ಕರ್.  ‘‘ಪ್ರತಿಯೊಬ್ಬ ಕಮ್ಯುನಿಸ್ಟ್ ಅರಿತುಕೊಳ್ಳಲೇಬೇಕಾದ ಸತ್ಯ ಏನೆಂದರೆ ರಾಜಕೀಯ ಶಕ್ತಿಯು ಬಂದೂಕಿನ ನಳಿಕೆಯಿಂದಲೇ ಬರುತ್ತದೆ. ನಮ್ಮ ತತ್ವ ಏನೆಂದರೆ; ಪಕ್ಷವು ಬಂದೂಕನ್ನು ನಿಯಂತ್ರಿಸುತ್ತದೆ ಮತ್ತು ಪಕ್ಷ ವನ್ನು ಬಂದೂಕು ನಿಯಂತ್ರಿಸಲು ಎಂದೂ ಬಿಡಬಾರದು…’’ -ಲಕ್ಷಾಂತರ ಹತ್ಯೆಗಳಿಗೆ ಜವಾಬ್ದಾರರಾದ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮೊದಲ ಸರ್ವಾಧಿಕಾರಿ ಕಮ್ಯುನಿಸ್ಟ್ ನಾಯಕ ಮಾವೋ ಝೆಡಾಂಗ್ ಅವರ ಮಾತುಗಳಿವು. ಇವು ಕೇವಲ ಪದಗಳಲ್ಲ, ಆದರೆ ಜಗತ್ತಿನಾದ್ಯಂತ […]

Read More

ಮುಂಬೈಗೆ ಶತಮಾನದ ಚಂಡಮಾರುತ – ಕೊರೊನಾ ಮಧ್ಯೆಯೇ ನಿಸರ್ಗದ ಮತ್ತೊಂದು ಹೊಡೆತ

ಒಂದು ವೇಳೆ ಮುಂಬಯಿಗೆ ‘ನಿಸರ್ಗ’ ಚಂಡಮಾರುತವೇನಾದರೂ ಅಪ್ಪಳಿಸಿದರೆ ಇತಿಹಾಸ ಸೃಷ್ಟಿಯಾಗಲಿದೆ. ಯಾಕೆಂದರೆ, 138 ವರ್ಷದ ಬಳಿಕ ಮುಂಬಯಿ ಮಹಾನಗರ ಚಂಡಮಾರುತವನ್ನು ಎದುರಿಸಲಿದೆ! ಕೊರೊನಾ ಸಂಕಟ ಅನುಭವಿಸುತ್ತಿರುವ ಮುಂಬಯಿಗೆ ‘ನಿಸರ್ಗ’ ಮತ್ತೊಂದು ಹೊಡೆತ ನೀಡುವಂತಿದೆ. ಈಗಾಗಲೇ ಮುಂಬಯಿ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಚಂಡಮಾರುತವು ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿದ್ದು, ಅಂಫಾನ್ ಬಳಿಕ ದೇಶ ಎದುರಿಸುತ್ತಿರುವ ಎರಡನೇ ಚಂಡಮಾರುತವಾಗಿದೆ. ಆದರೆ, ಅದರಷ್ಟು ಪ್ರಭಾವಶಾಲಿಯಾಗಿಲ್ಲ. ಈ ಚಂಡಮಾರುತವು ಜೂನ್ 3ರಂದು ಉತ್ತರ ಮುಂಬಯಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರ ಕರಾವಳಿಯಲ್ಲಿ […]

Read More

ತುರ್ತು ಚಿಕಿತ್ಸೆ ಸಿಗದೆ ಪ್ರಾಣ ಸಂಕಟ

– ಕೊರೊನೇತರ ರೋಗಿಗಳಿಗೆ ಸಿಗದ ಸ್ಪಂದನೆ – ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳಿಗೆ ಸೋಂಕಿನ ಆತಂಕ ವಿಕ ಬ್ಯೂರೊ ಬೆಂಗಳೂರು. ರಾಜ್ಯದಲ್ಲಿ ಹಿಂದೆಲ್ಲ ಸುಲಭವಾಗಿ ದೊರೆಯುತ್ತಿದ್ದ ತುರ್ತು ಆರೋಗ್ಯ ಸೇವೆ ಈಗ ಮರೀಚಿಕೆಯಾಗಿದೆ. ಕೋವಿಡ್-19 ಹೊರತುಪಡಿಸಿ ಇತರ ರೋಗಗಳಿಗೆ ತುತ್ತಾದವರಿಗೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುವವರು ಚಿಕಿತ್ಸೆ ಇಲ್ಲದೆ ಕಂಗಾಲಾಗಿದ್ದಾರೆ. ಇಡೀ ಆರೋಗ್ಯ ಕ್ಷೇತ್ರ ಕೊರೊನಾ ನಿಯಂತ್ರಣದತ್ತ ಕೇಂದ್ರೀಕೃತವಾಗಿರುವುದು, ಹೆಚ್ಚಿನ ಜಿಲ್ಲಾಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಿರುವುದರಿಂದ ಇತರ ರೋಗಿಗಳಿಗೆ ತುರ್ತು, ಸಕಾಲದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ. ಅದರಲ್ಲೂ ಉಸಿರಾಟದ […]

Read More

ಸವಾಲುಗಳೇ ಅವಕಾಶಗಳಾಗಲಿ – ಕೊರೊನಾ ಪರಿಸ್ಥಿತಿ ಎದುರಿಸಿ ಗೆಲ್ಲೋಣ

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅನೇಕ ಸವಾಲುಗಳನ್ನು ಸೃಷ್ಟಿಸಿದೆ. ಅದೇ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕಿದೆ. ಕೊರೊನಾ ಸೈಡ್ ಎಫೆಕ್ಟ್‌ಗಳು ಹಲವು. ಆ ಪೈಕಿ ಕೆಲವು ನಕಾರಾತ್ಮಕವಾಗಿದ್ದರೆ, ಮತ್ತೆ ಕೆಲವು ಸಕಾರಾತ್ಮಕವಾಗಿವೆ. ಸೋಂಕಿನ ಪರಿಣಾಮ ಅನಾರೋಗ್ಯ, ಸಾವು ನಕಾರಾತ್ಮಕ ಎನಿಸಿಕೊಂಡರೆ, ಜನರಲ್ಲಿ ವೈಯಕ್ತಿಕ ಆರೋಗ್ಯ, ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಜ್ಞೆ ಮೂಡುತ್ತಿದೆ. ಇದು ಸಕಾರಾತ್ಮಕ ಬದಲಾವಣೆಗೆ ಸಾಕ್ಷಿ. ಇದರ ಜೊತೆಗೆ ಕೊರೊನಾ ಭೀತಿಯಿಂದಾಗಿ ಹಲವು ಪರಿಣಾಮಗಳ ವೈಯಕ್ತಿಕ ಮತ್ತು ಸಾಮಾಜಿಕ, ಆರ್ಥಿಕವಾಗಿಯೂ ಸವಾಲುಗಳನ್ನು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top