ಆಕ್ರಮಣಕಾರಿ ಚೀನಾದ ರಹಸ್ಯ ಭೇದಿಸುತ್ತಾ…

– ನಾವು ಕಮ್ಯುನಿಸ್ಟ್ ಆಡಳಿತದ ವಿರುದ್ಧ ನಿಲುವು ತೆಗೆದುಕೊಳ್ಳಬೇಕೆ ಹೊರತು ಚೀನಿಯರ ವಿರುದ್ಧವಲ್ಲ.

– ಪ್ರಫುಲ್ಲ ಕೇತ್ಕರ್. 

‘‘ಪ್ರತಿಯೊಬ್ಬ ಕಮ್ಯುನಿಸ್ಟ್ ಅರಿತುಕೊಳ್ಳಲೇಬೇಕಾದ ಸತ್ಯ ಏನೆಂದರೆ ರಾಜಕೀಯ ಶಕ್ತಿಯು ಬಂದೂಕಿನ ನಳಿಕೆಯಿಂದಲೇ ಬರುತ್ತದೆ. ನಮ್ಮ ತತ್ವ ಏನೆಂದರೆ; ಪಕ್ಷವು ಬಂದೂಕನ್ನು ನಿಯಂತ್ರಿಸುತ್ತದೆ ಮತ್ತು ಪಕ್ಷ ವನ್ನು ಬಂದೂಕು ನಿಯಂತ್ರಿಸಲು ಎಂದೂ ಬಿಡಬಾರದು…’’
-ಲಕ್ಷಾಂತರ ಹತ್ಯೆಗಳಿಗೆ ಜವಾಬ್ದಾರರಾದ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮೊದಲ ಸರ್ವಾಧಿಕಾರಿ ಕಮ್ಯುನಿಸ್ಟ್ ನಾಯಕ ಮಾವೋ ಝೆಡಾಂಗ್ ಅವರ ಮಾತುಗಳಿವು. ಇವು ಕೇವಲ ಪದಗಳಲ್ಲ, ಆದರೆ ಜಗತ್ತಿನಾದ್ಯಂತ ಇರುವ ಕಮ್ಯುನಿಸ್ಟ್ರಿಗೆ ವೇದವಾಕ್ಯಗಳು. ಸ್ಟಾಲಿನ್‌ರ ಯುಎಸ್ಎಸ್ಆರ್ ಪತನಗೊಂಡ ಬಳಿಕ ಅದೇ ರೀತಿಯ ಅಮಲೇರಿಸುವ ಸೈದ್ಧಾಂತಿಕ ಅಮಾನವೀಯ ಮಾವೋ ಆವೃತ್ತಿಯೇ ಜಗತ್ತಿನಾದ್ಯಂತ ಕಮ್ಯುನಿಸ್ಟರಿಗೆ ಏಕೈಕ ಪ್ರೇರಣಾದಾಯಕವಾಗಿದೆ. ಕ್ರಾಂತಿ ಮತ್ತು ನ್ಯಾಯದ ಹೆಸರಲ್ಲಿನಲ್ಲಿ ಭಾರತದಲ್ಲೂ ಹಿಂಸೆಯನ್ನು ಸಮರ್ಥಿಸಿಕೊಳ್ಳುವ ಜನರಿದ್ದಾರೆ ಮತ್ತು ಇನ್ನೂ ಹೆಚ್ಚಿನವರು ಬುದ್ಧಿಜೀವಿಗಳಂತೆ ಪೋಜು ಕೊಟ್ಟು ಮಾವೋವಾದವನ್ನು ಉಸಿರಾಡುತ್ತಿದ್ದಾರೆ.
ಜಾಗತಿಕವಾಗಿ ಚೀನಾ ವಿರೋಧಿ ಅಲೆ ಶುರುವಾಗಿದೆ. ಹೀಗಿದ್ದಾಗ್ಯೂ, ಚೀನಾ ನಾಚಿಕೆ ಇಲ್ಲದೆಯೇ ಮತ್ತೊಬ್ಬರ ಮೇಲೆ ದೋಷಾರೋಪಣೆ ಮಾಡುತ್ತಾ ಈಗಲೂ ಕೋವಿಡ್ 19 ವೈರಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬಚ್ಚಿಡುವ ಅಥವಾ ವೈರಸ್ ಹರಡಿಸುವ ಬೇಜವಾಬ್ದಾರಿ ನಡವಳಿಕೆಯನ್ನು ಪ್ರದರ್ಶಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಈಡೇರಿದ ಆಕಾಂಕ್ಷೆಗಳನ್ನು ಪೂರ್ತಿಗೊಳಿಸಲು ಈಗಲೂ ಬಲಪ್ರಯೋಗ ಮಾಡುತ್ತಿದೆ. ಹಾಂಕಾಂಗ್‌ನ ಸ್ವಾತಂತ್ರ್ಯ ಮತ್ತು ಅದರ ಅಂತಃಸ್ಸನ್ನು ಕಾನೂನುಬಾಹಿರವಾಗಿ ಅದುಮಿಡುತ್ತಿದೆ. ರಾಷ್ಟ್ರೀಯ ಭದ್ರತಾ ಕಾನೂನು ನೆಪ ಮುಂದು ಮಾಡಿ ಅಸೆಂಬ್ಲಿಯಲ್ಲಿ ಮುಕ್ತ ವಾಕ್ ಸ್ವಾತಂತ್ರ್ಯವನ್ನು ನಿಷೇಧಿಸಲಾಗಿದೆ. ಪ್ರಜಾತಂತ್ರದ ದನಿಗಳನ್ನು ಹತ್ತಿಕ್ಕಲಾಗುತ್ತಿದೆ. ಟಿಬೆಟ್ ವಿರುದ್ಧ ಚೀನಾ ನಡೆಸಿದ ಅಮಾನವೀಯತೆ ಕತೆ ಮರೆಯಾಗುತ್ತಿದೆ. ಎಂದೋ ಆಗಬೇಕಿದ್ದ ಗಡಿಗಳನ್ನು ಭದ್ರಪಡಿಸುವ ಕೆಲಸವನ್ನು ಭಾರತ ಮಾಡುತ್ತಿದ್ದರೆ, ನಮ್ಮ ವಿರುದ್ಧವೇ ಚೀನಾ ಕತ್ತಿ ಮಸೆಯುತ್ತಿದೆ. ಅಂತಾರಾಷ್ಟ್ರೀಯವಾಗಿ ಏಕಾಂಗಿಯಾಗುತ್ತಿರುವುದು, ಕೋವಿಡ್ 19 ವೈರಸ್ ಅನ್ನು ಜಾಗತಿಕವಾಗಿ ಹರಡಲು ಕಾರಣವಾಗಿರುವುದನ್ನು ಅಂತಾರಾಷ್ಟ್ರೀಯವಾಗಿ ಪ್ರಶ್ನಿಸುವ ದನಿಗಳು ಹೆಚ್ಚುತ್ತಿರುವುದು ಗೊತ್ತಿದ್ದೂ ಜಿನ್ಪಿಂಗ್ ಮತ್ತು ಚೀನಾ ಕಮ್ಯುನಿಸ್ಟ್ ಪಾರ್ಟಿ(ಸಿಸಿಪಿ) ಆಕ್ರಮಣಕಾರಿ ನೀತಿಯನ್ನು ಚೀನಾ ಪ್ರದರ್ಶಿಸುತ್ತಿದೆ.
ಅಧಿಕಾರಕ್ಕಾಗಿ ಬಂದೂಕು ಬಳಸುವುದೇ ಹೆಚ್ಚು ಮಹತ್ವದ್ದು ಎಂಬ ನೀತಿ ಮಾವೋವಾದಿಗಳ ಪಕ್ಷದ ಇತಿಹಾಸದಲ್ಲಿಯೇ ಇದೆ. ಅಧಿಕಾರಕ್ಕಾಗಿ ಅದು ತನ್ನ ಪ್ರಜೆಗಳನ್ನು ಬಲಿ ನೀಡಲು ಹಿಂದೆ ಮುಂದೆ ಯೋಚಿಸುವುದಿಲ್ಲ. ವುಹಾನ್(ವೈರಸ್ ಪತ್ತೆಯಾದ ನಗರ) ತಪ್ಪು ನಿರ್ವಹಣೆ ಬಳಿಕ ಮತ್ತು ಸಾವಿರಾರು ಮುಗ್ಧರು ಪ್ರಾಣ ಕಳೆದುಕೊಂಡ ಬಳಿಕ ಅನೇಕ ಬಿಸಿನೆಸ್‌ಮೆನ್‌ಗಳು, ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಯಲ್ಲಿನ ಅನೇಕ ಅಧಿಕಾರಿಗಳು, ಸಿಸಿಪಿ ಕೆಡರ್‌ಗಳು ಮತ್ತು ಸಾಮಾನ್ಯ ನಾಗರಿಕರೂ ಪಕ್ಷದ ಸ್ವಯಂ ಅಭಿಷಿಕ್ತ ಚೇರ್ಮನ್ ಮತ್ತು ಅವರ ಸಹೋದ್ಯೋಗಿಗಳ ಉದ್ದೇಶವನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಸಿಸಿಪಿಯ ಪಾಲಿಟ್‌ಬ್ಯುರೋ ನಿರ್ದೇಶನದಂತೆ ಕಾರ್ಯ-ನಿರ್ವಹಿಸುವ ಪ್ರಮುಖ ಆಡಳಿತಾಂಗ 13ನೇ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನಲ್ಲಿ ಇದೇ ಮೊದಲ ಬಾರಿಗೆ ವಾಸ್ತವದ ಹಕ್ಕುಗಳು, ಒಪ್ಪಂದಗಳು, ವೈಯಕ್ತಿಕ ಹಕ್ಕುಗಳು, ವಿವಾಹ ಮತ್ತು ಕುಟುಂಬ, ವಾರಸುದಾರಿಕೆ ಮತ್ತು ಪರಿಹಾರ ಸೇರಿದಂತೆ ಆರು ಭಾಗಗಳನ್ನು ಒಳಗೊಂಡಿರುವ ನಾಗರಿಕ ಸಂಹಿತೆಯನ್ನು ಪರಿಚಯಿಸಲಾಗಿದೆ. ಆದರೆ, ಇದೆಲ್ಲವೂ ಆಳವಾದ ಗಾಯಗಳನ್ನು ಮರೆಮಾಚಲು ಮಾಡಲಾಗಿರುವ ಡ್ರೆಸಿಂಗ್ ರೀತಿಯಲ್ಲಿ ಗೋಚರಿಸುತ್ತಿದೆ. ದೇಶದ ರಾಜಕೀಯ ಭದ್ರತೆಗೆ ಅಪಾಯ ಉಂಟು ಮಾಡುವ ಚಟುವಟಿಕೆಗಳ ಮೇಲೆ ಪ್ರಹಾರ ಮಾಡಲು ಜಿನ್‌ ಪಿಂಗ್‌ ಅವರ ನಿಕಟವರ್ತಿಗಳ ಸಣ್ಣ ಗುಂಪೊಂದು ರಚನೆಯಾಗಿದೆ. ಚೀನಾದಲ್ಲಿ ಪಕ್ಷ ದ ವಿರುದ್ಧ ವಿರೋಧ ವ್ಯಕ್ತವಾದಾಗಲೆಲ್ಲಚೀನಿಯರು ಮತ್ತು ಅದರ ಸುತ್ತಲಿನ ಪ್ರದೇಶಗಳು ಬಳಲಿರುವುದನ್ನು ಈಗಾಗಲೇ ನೋಡಿದ್ದೇವೆ. ಸಾಂಸ್ಕೃತಿಕ ಕ್ರಾಂತಿ ಅಥವಾ ಪುನರ್ರಚನೆ ಅಥವಾ ರಾಜಕೀಯ ಸ್ಥಿರತೆ ಹೆಸರಿನಲ್ಲಿ ಟಿಯಾನ್ಮೆನ್ ಸ್ಕ್ವೇರ್ ಹತ್ಯಾಕಾಂಡದಂಥ ಘಟನೆಗಳು ಇತಿಹಾಸದಲ್ಲಿವೆ. ಕಮ್ಯುನಿಸ್ಟ್ ಚೀನಾವು ‘ಅಸಹಜ ಸಾವಿನ’ ನಿಖರವಾದ ಅಂಕಿ ಅಂಶವನ್ನು ಮರೆಮಾಡಲು ‘ಸರಕಾರಿ ರಹಸ್ಯ’ಗಳನ್ನು ಮುಚ್ಚಿ ಹಾಕುವ ಸಂಪ್ರದಾಯವನ್ನು ಹೊಂದಿದೆ. ಜನರ ಪ್ರಜಾಪ್ರಭುತ್ವ ಎಂದು ಹೇಳುವ ಚೀನಾ ಆಡಳಿತ ಎಂದೂ ಜನ ಕೇಂದ್ರೀತವಾಗಿರಲೇ ಇಲ್ಲ. ಆದರೆ, ಅದು ಯಾವಾಗಲೂ ಪಕ್ಷ ಮತ್ತು ಅಧಿಕಾರದ ಸುತ್ತವೇ ಇದೆ. ಎಲ್ಲ ಮಾದರಿಯ ಕಮ್ಯುನಿಸಮ್ ಕ್ರೂರ ಹಾಗೂ ಹಿಂಸಾತ್ಮಕವಾಗಿದೆ ಮತ್ತು ವಿದ್ಯಾರ್ಥಿಗಳು, ಕಾರ್ಮಿಕರು, ಬಡವ ಮತ್ತಿತರರನ್ನು ಕೆಲವೇ ಕೆಲವು ಜನರ ರಾಜಕೀಯ ಅಧಿಕಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇದೀಗ ಚೀನಾ ಮತ್ತೆ ಅಂಥದ್ದೇ ತನ್ನ ಗುಣವನ್ನು ಪ್ರದರ್ಶಿಸಲಾರಂಭಿಸಿದೆ.
1962ರಲ್ಲಿ ಭಾರತದ ಮೇಲೆ ಚೀನಾ ದಾಳಿ ಮಾಡಿದಾಗಲೂ ಅದರ ಆಂತರಿಕ ಆಡಳಿತ ಅನಿಶ್ಚಿತತೆಯಲ್ಲಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂದಿನ ಸರಸಂಘಚಾಲಕರು ಹೇಳುವಂತೆ, ‘‘ಚೀನಾ ಯಾವಾಗಲೂ ವಿಸ್ತರಣಾವಾದಿಯಾಗಿದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಹಲವು ಆಯಕಟ್ಟಿನ ಜಾಗಗಳಲ್ಲಿ ಆಕ್ರಮಣ ಮಾಡಿಕೊಳ್ಳುತ್ತಿದೆ ಎಂದು ನಾವು ಕಳೆದ ಎಂಟು ವರ್ಷಗಳಿಂದ ಎಚ್ಚರಿಸುತ್ತಲೇ ಇದ್ದೇವೆ. ಆದರೆ, ಆಗ ಯಾರೂ ನಮ್ಮನ್ನು ನಂಬಲು ತಯಾರಿರಲಿಲ್ಲ. ನಮ್ಮ ಎಣಿಕೆ ನಿಜವಾಗಿದೆ. ಚೀನಾದ ವಿಸ್ತರಣಾವಾದದ ರಕ್ತವೇ ಕಮ್ಯುನಿಸಮ್‌ನ ಅಮಲಿನಿಂದ ಕೂಡಿದೆ. ಅದು ತೀವ್ರವಾದ ಆಕ್ರಮಣಕಾರಿ, ವಿಸ್ತರಣಾವಾದಿ ಮತ್ತು ಸಾಮ್ರಾಜ್ಯಷಾಹಿ ಸಿದ್ಧಾಂತವಾಗಿದೆ. ಹೀಗಾಗಿ ಕಮ್ಯುನಿಸ್ಟ್ ಚೀನಾದಲ್ಲಿ ನಾವು ಆಕ್ರಮಣಕಾರಿ, ಪ್ರಚೋದನಾತ್ಮಕ ಎರಡು ಸಂಯೋಜನೆಗಳನ್ನು ಹೊಂದಿದ್ದನ್ನು ಕಾಣಬಹುದು.’’ ಗುರೂಜಿ ಗೋಲ್ವಾಳ್ಕರ್ ಮಾತ್ರವಲ್ಲದೇ ವೀರ ಸಾವರ್ಕರ್, ವಲ್ಲಭಭಾಯಿ ಪಟೇಲ್ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಮತ್ತಿತರರು ರೆಡ್ ಡ್ರ್ಯಾಗನ್ ನಮಗೆ ಅಪಾಯಕಾರಿಯಾಗುತ್ತಿರುವುದನ್ನು ಎಚ್ಚರಿಸಿದ್ದಾರೆ. ಜಗತ್ತು ಇದೀಗ ಅದರ ಕೆಟ್ಟ ಪ್ರತಿಪಾದನೆಯನ್ನು ಕಾಣುತ್ತಿದೆ. ಪುಟಿದೆದ್ದಿರುವ ಭಾರತವು 1962ರ ಮನಸ್ಥಿತಿಯಲ್ಲಿಲ್ಲ ಮತ್ತು ನ್ಯಾಯಯುತವಾದದ್ದನ್ನು ಪುನರುಚ್ಚರಿಸುವಷ್ಟು ಸಮರ್ಥವಾಗಿದೆ. ನಮ್ಮ ಕಡೆಯಿಂದ ನೋಡುವುದಾದರೆ, ಸೇನಾ ಸಿದ್ಧತೆ ಮತ್ತು ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಮುಂದುವರಿಯುವುದರ ಜೊತೆಗೆ, ಹಾಂಕಾಂಗ್ ಮತ್ತು ಥೈವಾನ್‌ನಂಥ ಸೂಕ್ಷ್ಮ ವಲಯಗಳಲ್ಲಿ ಚೀನಾವನ್ನು ಮೂಲೆಗುಂಪು ಮಾಡುವುದು ಕೂಡ ನಿರ್ಣಾಯಕವಾಗಲಿದೆ. ನಮ್ಮ ತಾಂತ್ರಿಕ ಬೆಳವಣಿಗೆ ಮತ್ತು ಚೀನಾದಿಂದ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮುಂದಿನ ದಿನಗಳಲ್ಲಿ ಮಹತ್ವದ್ದಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ)ಯ ಅಧ್ಯಕ್ಷ ಸ್ಥಾನವನ್ನು ಭಾರತ ಹೊಂದಿರುವುದು ಮತ್ತು ಕೋವಿಡ್ 19ಗೆ ಸಂಬಂಧಿಸಿದಂತೆ ಚೀನಾದ ವಿರುದ್ಧ ತನಿಖೆಯ ಸಾಧ್ಯತೆಗಳು ಸಿಸಿಪಿ ಆತಂಕಕ್ಕೆ ಕಾರಣವಾಗಿದೆ. ನಾವು ಕಮ್ಯುನಿಸ್ಟ್ ಆಡಳಿತದ ವಿರುದ್ಧ ನಿಲುವು ತೆಗೆದುಕೊಳ್ಳಬೇಕೆ ಹೊರತು ಕಮ್ಯುನಿಸ್ಟ್ ಆಡಳಿತದ ಸಂತ್ರಸ್ತರಾಗುತ್ತಿರುವ ಚೀನಿಯರ ವಿರುದ್ಧವಲ್ಲ. ಪ್ರಜಾತಾಂತ್ರಿಕ ಸ್ವಾತಂತ್ರ್ಯವನ್ನು ಬಯಸುವ ಅನೇಕ ಚೀನಿಯರು ಚೀನಾದ ಒಳಗು ಮತ್ತು ಹೊರಗೂ ಇದ್ದಾರೆ. ಆಧ್ಯಾತ್ಮಿಕ ಬೇರುಗಳೊಂದಿಗೆ ಮರುಸಂಪರ್ಕಿಸಲು ಚೀನಾ ನಾಗರಿಕತೆ ಪುನರುಜ್ಜೀವನಗೊಳಿಸುವ ಶಕ್ತಿಯನ್ನು ಪಡೆಯಲು ಕಾಯುತ್ತಿದೆ. ಸಮಸ್ಯೆಗಳು ಮಾತ್ರ ಪಕ್ಷ ಮತ್ತು ಅದರ ಸಿದ್ಧಾಂತದಲ್ಲಿದೆ. ದೀರ್ಘಾವಧಿಯಲ್ಲಿ ಚೀನಾದೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ನಾವು ಕೇವಲ ಸೇನೆಯನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೇ ರಾಜತಾಂತ್ರಿಕವಾಗಿಯೂ ಅದರ ಕೊಲೆಪಾತಕ ಸಿದ್ಧಾಂತದ ಮೂಲಭೂತ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
(ಲೇಖಕರು ಹಿರಿಯ ಪತ್ರಕರ್ತರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top