ಸಂಸ್ಕೃತಿಯ ಬೇರುಗಳಿಂದ ದೂರವಾದ ಕಾಂಗ್ರೆಸ್; ವೈಚಾರಿಕ ಹಿನ್ನೆಲೆಯ ಗೈರುಹಾಜರಿಯ ಬಿಜೆಪಿ ಇತ್ತೀಚಿನ ವರ್ಷದಲ್ಲಿ ಆಗಿರುವ ರಾಜಕೀಯ ಪಲ್ಲಟಗಳ ಅವಲೋಕನ ಆಸಕ್ತಿಕರವಾಗಿದೆ. ಹಾಗೆ ನೋಡಿದರೆ ಭಾರತದ ಮಟ್ಟಿಗಂತೂ ಚುನಾವಣಾ ರಾಜಕಾರಣ ಎನ್ನುವುದು ಕಳೆದ 75 ವರ್ಷದಿಂದಲೂ ತುಸು ರೋಚಕ ಹಾಗೂ ಅಧ್ಯಯನ ಯೋಗ್ಯ,ಪ್ರತಿ ಬಾರಿ ಚುನಾವಣೆಗಳು ಎದುರಾದಾಗಲೂ ಹೊಸ ಭರವಸೆಗಳು ಎದ್ದು ನಿಲ್ಲುತ್ತವೆ. ಅಲ್ಲಿಯವರೆಗೆ, ದೇಶದ ಭವಿಷ್ಯ ಎಂದುಕೊಂಡಿದ್ದವರು, ಫಲಿತಾಂಶ ಹೊರಬಂದ ಮರುದಿನದಿಂದ ಯಾರಿಗೂ ಬೇಡದವರಾಗುತ್ತಾರೆ. ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸದೇ, ಮತ್ತೆ ಅದೇ ಭರವಸೆಯನ್ನು ಹೊಸ […]
Read More
ಭಾಷೆಯ ಜೊತೆಗೆ ಉದ್ಯೋಗದ ಪ್ರಶ್ನೆ, ರಾಜಕೀಯ ಸೇರಿಕೊಂಡು ಸನ್ನಿವೇಶವನ್ನು ಜಟಿಲಗೊಳಿಸಿದೆ. ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ. ಅದು ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಜಾಯಮಾನ- ಎಲ್ಲವೂ ಹೌದು. ಹಾಗಾಗಿಯೇ, ಭಾಷೆಗೆ ಎಲ್ಲೋ ಏನೋ ಧಕ್ಕೆಯಾಗುತ್ತಿದೆ, ಅಪಾಯ ಕಾದಿದೆ ಎಂಬ ಆತಂಕ ಎದುರಾದಾಗಲೆಲ್ಲಾ, ಭಾವೋದ್ವೇಗ ಕೆರಳಿ ಒಮ್ಮೊಮ್ಮೆ ಅನಾಹುತಗಳು ಸಂಭವಿಸಿವೆ. ಅಂತೆಯೇ ಹಿಂದಿ ದಿವಸ್ ಆಚರಣೆ ಹಿನ್ನೆಲೆಯಲ್ಲಿ ಹಿಂದಿ ಹಾಗೂ ಹಿಂದಿಯೇತರ ಭಾಷೆಯ ಕುರಿತ ಚರ್ಚೆ, ವಾದ-ವಿವಾದ-ವಾಗ್ವಾದ ಮತ್ತೆ ಮುನ್ನೆಲೆಗೆ ಬಂದಿರುವ ಹೊತ್ತಲ್ಲಿ, ಇದರ ಇತಿಹಾಸ, ವರ್ತಮಾನ, […]
Read More
ಮೂರ್ನಾಲ್ಕು ದಶಕಗಳ ನಂತರ ಸಿಕ್ಕ ಅವಕಾಶವನ್ನು ಆತುರಕ್ಕೆ ಬಿದ್ದು ಕೈಚೆಲ್ಲುವುದು ಸರಿಯಲ್ಲ ಪ್ರತಿ ಮನುಷ್ಯನಲ್ಲಿರುವ ಚೈತನ್ಯವನ್ನು ಅಭಿವ್ಯಕ್ತಗೊಳಿಸುವುದೇ ಶಿಕ್ಷಣದ ಗುರಿ ಎಂದವರು ಸ್ವಾಮಿ ವಿವೇಕಾನಂದ. ಸಮಾಜದಲ್ಲಿ ಸಮಾನತೆ ಮೂಡಬೇಕೆಂದರೆ ಎಲ್ಲರೂ ಶಿಕ್ಷಿತರಾಗುವುದು ಅತ್ಯವಶ್ಯಕ ಎಂದು ಹೇಳಿದವರು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್. ಶಿಕ್ಷಣ ಎಂದರೆ ಅಕಾಡೆಮಿಕ್ ಹಾಗೂ ವೃತ್ತಿಪರ ಅವಶ್ಯಕತೆಗಳನ್ನೂ ಮೀರಿ ಜ್ಞಾನ ಸಂಪಾದಿಸುವುದಾಗಿದ್ದು, ಪುಸ್ತಕಕ್ಕೆ ಸೀಮಿತವಾಗಿ ಕಂಠಪಾಠ ಮಾಡಿಸುವುದರಿಂದ ಜೀವನಕ್ಕೆ ಯಾವುದೇ ಸಹಕಾರಿಯಾಗುವುದಿಲ್ಲ ಎಂಬುದು ದೇಶದ ಎರಡನೇ ರಾಷ್ಟ್ರಪತಿ, ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದ ಮಾತು! […]
Read More
ಪಾಕಿಸ್ತಾನದ ದುಷ್ಟರಿಗೆ ಶಿಕ್ಷೆ, ಅಫಘಾನಿಸ್ತಾನದ ಶಿಷ್ಟರಿಗೆ ರಕ್ಷೆ ನಮ್ಮಿಂದ ಆಗಬೇಕು ಅಫ್ಘಾನಿಸ್ತಾನ ನೆಲದಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಾರಂಭಿಸಿದ ಬೆನ್ನಲ್ಲಿಯೇ, ತಾಲಿಬಾನಿಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಅವರ ಭಯೋತ್ಪಾದನೆ, ಜನ ಹಿಂಸೆ ಶುರುವಾಗಿದೆ. ವಿಭಜನೆಗೆ ಮುನ್ನ ತನ್ನ ನೆರೆಯ ರಾಷ್ಟ್ರವೇ ಆಗಿದ್ದ ಅಫ್ಘಾನಿಸ್ತಾನದ ನೆಲದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೂ ದಾಳಿ ನಡೆದಿದೆ. ಆಫ್ಘನ್ ಭದ್ರತಾ ಪಡೆ ಹಾಗೂ ತಾಲಿಬಾನಿಗಳ ನಡುವಿನ ಹಿಂಸಾಚಾರ ಕಂಡು ಆತಂಕಗೊಂಡಿರುವ ನಮ್ಮ ಕೇಂದ್ರ ಸರಕಾರ, ಅಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. […]
Read More
ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಂತೆ ಎಲ್ಲರನ್ನೂ ಒಳಗೊಳ್ಳುವ ಆಡಳಿತ ನಡೆಸಬೇಕಾಗಿದೆ. ಕರ್ನಾಟಕದಲ್ಲಿ ಆಗಿಹೋಗಿರುವ ಮುಖ್ಯಮಂತ್ರಿಗಳ ಪಟ್ಟಿಯನ್ನು ಒಮ್ಮೆ ಗಮನಿಸಿ ನೋಡಿ. ಅವರು ಆಯ್ಕೆಯಾದ ಬಗೆ, ಸ್ವಭಾವ, ಸಾಮಾಜಿಕ ಹಿನ್ನೆಲೆ, ಜನಪ್ರಿಯತೆ, ಜನಪರತೆ, ಪ್ರತಿನಿಧಿಸಿದ ಪಕ್ಷ , ಕೌಟುಂಬಿಕ ಹಿನ್ನೆಲೆ, ಅವರಿಗೆ ಒಲಿದ ಅದೃಷ್ಟ, ಮಾಡಿ ಹೋಗಿರುವ ಕೆಲಸಗಳು- ಎಲ್ಲವನ್ನೂ ನೋಡಿದಾಗ ಮುಖ್ಯಮಂತ್ರಿಗಳ ಇತಿಹಾಸವೇ ಒಂದು ರೀತಿಯಲ್ಲಿ ರಣರೋಚಕ ಎನಿಸಿಬಿಡುತ್ತದೆ. ಬಹುಸಂಖ್ಯಾತ ಸಮುದಾಯದವರು ಮಾತ್ರವಲ್ಲ, ಯಾರೂ ಊಹಿಸಲು ಸಾಧ್ಯವೇ ಆಗದಂಥ ಅಲ್ಪಸಂಖ್ಯಾತ ಸಮುದಾಯದವರು ಇಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಹೈಕಮಾಂಡ್ […]
Read More
ಪ್ರಜಾಸತ್ತಾತ್ಮಕವಾಗಿ ರೂಪಿಸಿಕೊಂಡ ಸಂಸದೀಯ ಆಡಳಿತ ವ್ಯವಸ್ಥೆಯೇ ಭಾರತದ ಬಲ-ಬ್ಯೂಟಿ ಶಾಸನ ರೂಪಿಸುವ ಅಧಿಕಾರವನ್ನು ಶಾಸಕಾಂಗಕ್ಕೂ, ಈ ಶಾಸನ-ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಕಾರ್ಯಾಂಗಕ್ಕೂ, ಈ ಕಾನೂನುಗಳನ್ನು ಉಲ್ಲಂಘಿಸಿದರೆ ಶಿಕ್ಷೆ ನೀಡುವ ಅಧಿಕಾರವನ್ನು ನ್ಯಾಯಾಂಗಕ್ಕೂ ನೀಡಿರುವ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಎಲ್ಲವೂ ಸರಿಯಾಗಿದ್ದರೆ ನೋಡಲು, ಕೇಳಲು, ಅನುಭವಿಸಲು ಬಲು ಸೊಗಸು. ರಾಜಾಡಳಿತವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಾಗ, ಅದಕ್ಕೆ ಸಂವಿಧಾನವೇ ಪರಮೋಚ್ಛ ಎಂದು ಡಾ.ಬಿ.ಆರ್. ಅಂಬೇಡ್ಕರ್ ಸಾರಿದರು. ಇಂಥ ಸಂವಿಧಾನ ಎನ್ನುವುದು ಅಂಬೇಡ್ಕರ್ ಅವರೇ ಹೇಳಿದಂತೆ ಅಕ್ಷ ರ ಹಾಗೂ ಉದ್ದಿಶ್ಯ(ಲೆಟರ್ […]
Read More
-ದೇಶಿ ವಿಮಾನ ತಂತ್ರಜ್ಞಾನ ವಿನ್ಯಾಸದ ರೂವಾರಿ ನಿನ್ನೆ ನಮ್ಮೊಂದಿಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಇಂದು ನಮ್ಮೊಂದಿಗಿಲ್ಲ.ಇದೇ ಬದುಕಿನ ವಿಸ್ಮಯ.ವಿಜಯ ಕರ್ನಾಟಕದ ಸಂಪಾದಕನಾಗುವವರೆಗೆ ನನಗೂ ಅವರಿಗೂ ಅಂತಹ ಒಡನಾಟ,ಸಂಪರ್ಕವೇನಿರಲಿಲ್ಲ.ಆದರೆ ಅವರ ಸಹೃದಯತೆ ಪರಿಚಯ ಅದಕ್ಕೂ ಮೊದಲೇನನಗಾಗಿತ್ತು.ನಂತರ ಅದು ಗಾಢವಾಯಿತು.ನಾನು ವಿಜಯವಾಣಿ,ದಿಗ್ವಿಜಯ ಚಾನೆಲ್ ನಿಂದ ಹೊರಬಂದ ದಿನ ಸಾಯಂಕಾಲ ಆರು ಗಂಟೆ ಸುಮಾರಿಗೆ ನನಗೊಂದು ಫೋನ್ ಕರೆ ಬಂತು.ರಿಸೀವ್ ಮಾಡಿದಾಗ ನಾನು ಸುಧೀಂದ್ರ ಹಾಲ್ದೊಡ್ಡೇರಿ ಎಂದು ಪರಿಚಯಿಸಿಕೊಂಡರು.ನೇರವಾಗಿ ಮಾತಾಡ್ತೇನೆ ಆಗಬಹುದಾ ಎಂದರು.ಮಾತಾಡಿ ಎಂದೆ.ನೀವು ನಿಮ್ಮ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಅಂತ […]
Read More
-ಆಲೋಚನೆ ಮಾಡಿದರೆ ಆಡಳಿತ ಸುಧಾರಣೆಯ ಓನಾಮ ಇಲ್ಲಿಂದಲೇ ಆಗುತ್ತದೆ “ನಾನು ಒಂದು ದಿನ ಐಎಎಸ್ ಆಗಬೇಕು”. ಇದು ಲಕ್ಷಾಂತರ ಪ್ರತಿಭಾನ್ವಿತ ಯುವ ಭಾರತೀಯರ ಕನಸು. ಶಾಲೆಯಲ್ಲಿದ್ದಾಗ ಶಿಕ್ಷಕರು ನಮ್ಮನ್ನು ಎದ್ದು ನಿಲ್ಲಿಸಿ ಮುಂದೆ ಏನಾಗಬೇಕು ಎಂದುಕೊಂಡಿದ್ದೀಯ ಎಂದು ಕೇಳಿದರೆ “”ಡಿಸಿ ಆಗಬೇಕು” ಎಂದು ಹೇಳಿದವರೆಷ್ಟೋ. ಲಕ್ಷಾಂತರ ಜನರಂತೆಯೇ ನನಗೂ ಕಾಲೇಜು ದಿನಗಳಲ್ಲಿ ಐಎಎಸ್ ಬಗ್ಗೆ ಸೆಳೆತ ಇದ್ದದ್ದು ನಿಜ. ಐಎಎಸ್ ಹುದ್ದೆ ಕುರಿತು ಯಾಕಿಷ್ಟು ಆಕರ್ಷಣೆ ಎಂಬುದರ ಕುರಿತು ಅನೇಕ ಬಾರಿ ಪ್ರಶ್ನೆಗಳೆದ್ದಿವೆ. ಇದಕ್ಕೆ ಅನೇಕ ಕಾರಣಗಳಿರಬಹುದು. […]
Read More
ಅತ್ಯಂತ ಸನ್ನಡತೆಯ,ಸೌಮ್ಯ ಸ್ವಭಾವದ,ಶುದ್ಧರಾದ ಪ್ರಧಾನಿ ಎಂದೇ ಕರೆಯಲಾಗುತ್ತಿದ್ದ ಡಾ. ಮನಮೋಹನ್ ಸಿಂಗರ ಕಾಲದ ಘಟನೆ ಇದು. ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರದ ಅವಧಿಯಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ ವಿಚಾರ ವಿವಾದಕ್ಕೆ ಈಡಾಯಿತು. ಆ ವೇಳೆ ಕಲ್ಲಿದ್ದಲು ಖಾತೆಯನ್ನು ಸ್ವತಃ ಪ್ರಧಾನಿ ಅವರೇ ಹೊಂದಿದ್ದರು. ಗಣಿ ಹಂಚಿಕೆಯ ವಿವಿಧ ಹಂತಗಳಲ್ಲಿ ಪ್ರಧಾನಿ ಅಥವಾ ಪ್ರಧಾನಿ ಕಚೇರಿಯೂ ಭಾಗಿಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಯಾವಾಗ ಸಿಬಿಐ ಕೈಗೆತ್ತಿಕೊಂಡಿತೊ, ಆಗ ಸಿಬಿಐ ಎದುರು ವಿಚಾರಣೆಗೆ ಖುದ್ದು ಪ್ರಧಾನಿಯೇ ಹಾಜರಾದರು. ಒಡಿಶಾದ ಕಲ್ಲಿದ್ದಲು […]
Read More
ಮಾಹಿತಿ ತಂತ್ರಜ್ಞಾನದ ಬಹುದೊಡ್ಡ ಕೊಡುಗೆಯೇ ಆದ ಸಾಮಾಜಿಕ ಜಾಲತಾಣ ಸೃಷ್ಟಿಯಾಗುವವರೆಗೂ ಅನಿಸಿದ್ದನ್ನು ಹೇಳಲು, ದಾಖಲಿಸಲು, ಅಭಿವ್ಯಕ್ತಿಸಲು ಎಲ್ಲರಿಗೂ ಅವಕಾಶವೇ ಇರಲಿಲ್ಲ. ಅಭಿಪ್ರಾಯ ರೂಪಿಸುವವರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಪತ್ರಕರ್ತರು. ಸಾಹಿತಿಗಳು, ವಿಚಾರವಾದಿಗಳು, ವಕೀಲರು,ರಾಜಕಾರಣಿಗಳು- ಹೀಗೆ ಸಮಾಜದ ಒಂದಿಷ್ಟು ಮಂದಿ ಮಾತ್ರಯೇ ಆಗಿದ್ದರು. ಅವರು ಹೇಳಿದ ಅಭಿಪ್ರಾಯ-ಅನಿಸಿಕೆಗಳಿಗೆ ಮಾತ್ರ ಸಮೂಹ ಮಾಧ್ಯಮಗಳಲ್ಲಿ ಅವಕಾಶವಿತ್ತು. ಉಳಿದ ಶ್ರೀಸಾಮಾನ್ಯರು ತಮಗನಿಸಿದ್ದನ್ನು ತಮ್ಮದೇ ಆದ ಸೀಮಿತ ಖಾಸಗಿ ವಲಯದಲ್ಲಿ ಅಂದುಕೊಂಡು ಸುಮ್ಮನಿರಬೇಕಿತ್ತು. ಸಾರ್ವಜನಿಕ ವೇದಿಕೆ ಸಿಗುತ್ತಿರಲಿಲ್ಲ. ಆದರೆ, ಎಲ್ಲರೂ ತಮಗನಿಸಿದ್ದನ್ನು ಅಭಿವ್ಯಕ್ತಿ ಪಡಿಸಬಹುದು ಎಂಬುದನ್ನು […]
Read More