ವಯೋವೃದ್ಧ ನಾಯಕ ನೇಪಥ್ಯಕ್ಕೆ ಸರಿದರೆ ತಪ್ಪೇನು?

ಬ್ರಿಟನ್ನಿನಲ್ಲಿ 56 ವಯಸ್ಸಿನ ಗಡಿ ದಾಟಿದ ನಂತರ ಪ್ರಧಾನಿ ಆದವರ ಉದಾಹರಣೆ ಸಿಗುವುದಿಲ್ಲ. ಅಮೆರಿಕದ ಈವರೆಗಿನ ಅಧ್ಯಕ್ಷರ ಸರಾಸರಿ ವಯೋಮಿತಿ 54 ವರ್ಷ. ಅದೇ ಭಾರತದಲ್ಲಿ ರಾಜಕೀಯ ನಾಯಕರ ಅಧಿಕಾರ ಮತ್ತು ನಿವೃತ್ತಿ ವಿಷಯದಲ್ಲಿ ಜನರ ಹಾಗೂ ಜನನಾಯಕರ ಮಾನಸಿಕತೆ ಹೇಗಿದೆ ನೋಡಿ. ಯಾರು ಏನು ಬೇಕಾದರೂ ಹೇಳಲಿ, ಭಾರತದ ಈಗಿನ ರಾಜಕೀಯ ವ್ಯವಸ್ಥೆ ಬ್ರಿಟನ್ ದೇಶದ ಬಳುವಳಿಯೆ. ಅದರಲ್ಲಿ ಬೇರೆ ಮಾತೇ ಇಲ್ಲ. ಆದರೆ ಅದೇ ವ್ಯವಸ್ಥೆ ನಮ್ಮ ಸಮಾಜದ ಮೇಲೆ ಉಂಟುಮಾಡುವ ಪರಿಣಾಮದಲ್ಲಿ ಲವಲೇಶವೂ […]

Read More

ಏನೂ ಮಾಡದೆ ರಾಹುಲ್ ದಣಿದದ್ದು ಹೇಗೆ?

ರಾಹುಲ್ ಎಲ್ಲಿಗೆ ಹೋಗಿದ್ದಾರೆ, ಯಾವಾಗ ಹಿಂದಿರುಗುತ್ತಾರೆಂಬ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ. ರಾಹುಲ್ ಒಂದು ವಾರ ವಿಶ್ರಾಂತಿ ತೆಗೆದುಕೊಂಡು ವಾಪಸು ಬರುತ್ತಾರೆಂದು ಕೆಲವರು ಹೇಳಿದರೆ, ಹದಿನೈದು ದಿನ ಅಂದರು ಇನ್ನು ಕೆಲವರು. ಈಗ ಒಂದು ತಿಂಗಳೂ ಕಳೆದಿದೆ. ರಾಹುಲ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬ ಮಾಹಿತಿ ಯಾರಿಗೂ ಗೊತ್ತಿಲ್ಲ.      ಯಾಕೋ ಈ ಸಲ ರಜಾ ಮಜಾದ ಕಡೆಯೇ ಮನಸ್ಸು ಸೆಳೆಯುತ್ತಿದೆ. ಅದಕ್ಕೆ ಕಾರಣ ನಾನಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ! ಪ್ರತಿಯೊಂದು ವ್ಯವಸ್ಥೆ ರೂಪಿಸುವುದರ ಹಿಂದೆ ಎಷ್ಟೊಂದು […]

Read More

ಮಾನ್ಯ ಮುಖ್ಯಮಂತ್ರಿಗಳೇ ಈ ಮಾತನ್ನೊಮ್ಮೆ ಕೇಳಿಸಿಕೊಳ್ಳುವಿರಾ?

ರಾಜಕಾರಣಿಗಳ ಬಗ್ಗೆ ಜನರಲ್ಲಿ ಯಾಕಿಷ್ಟು ಆಕ್ರೋಶ? ಮರಳುಗಾಡಿನಲ್ಲಿ ಓಯಸಿಸ್‍ನಂತೆ ರವಿಯಂತಹ ಒಬ್ಬ ದಕ್ಷ, ಜನಾನುರಾಗಿ ಅಧಿಕಾರಿ ಸಿಕ್ಕರೆ ಜನರು ಯಾಕಿಷ್ಟು ಆರಾಧಿಸುತ್ತಾರೆ ಮತ್ತು ಮನೆಮಗನಂತೆ ಪ್ರೀತಿಸುತ್ತಾರೆಂಬುದನ್ನು ಒಂದು ಕ್ಷಣವಾದರೂ ಆಲೋಚನೆ ಮಾಡುತ್ತೀರಾ ಮುಖ್ಯಮಂತ್ರಿಗಳೇ?  ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ… ಈ ಸಂದರ್ಭದಲ್ಲಿ ಬೇರಿನ್ನೇನನ್ನೂ ಬರೆಯುವ ಮನಸ್ಥಿತಿಯಲ್ಲಿ ನಾವಿಲ್ಲ್ಲ. ಇಲ್ಲಿ ನಾವು ಅಂದರೆ ಪತ್ರಕರ್ತ ಸಮುದಾಯದವರು. ದಕ್ಷ ಐಎಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ಡಿ.ಕೆ ರವಿ ಅವರ ಅಕಾಲಿಕ ಸಾವು ಉಂಟುಮಾಡಿರುವ ನೋವಿನ ಪರಿಣಾಮವದು. ಬಹುಶಃ ಬೇರೆ ಪತ್ರಕರ್ತರ ಮನಸ್ಥಿತಿಯೂ […]

Read More

ಪರಿವರ್ತನೆಯೆಂದರೆ ಕ್ರೇಜ್ ಹುಟ್ಟಿಸಿದಷ್ಟು ಸುಲಭವೇ?

ಜನರು ಸದಾ ಪರಿವರ್ತನೆ, ಸುಧಾರಣೆಯ ಬೆನ್ನುಹತ್ತಿ ಹುಡುಕುತ್ತಿರುತ್ತಾರೆ. ಅದರ ಲಾಭ ಯಾರೋ ಕೆಲವರಿಗೆ ಆಗುತ್ತದೆ. ಈ ಹುಡುಕಾಟ, ಆಯ್ಕೆ ಬದಲಾವಣೆಯ ಜಂಜಾಟದಲ್ಲಿ ಒಂದು ತಲೆಮಾರೇ ಕಳೆದುಹೋಗುವುದೂ ಇದೆ. ಇದು ಬಹಳ ದುಬಾರಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ವಿಕ್ರಮ ಸಾಧಿಸಿ ಹತ್ತಿರ ಹತ್ತಿರ ತಿಂಗಳಾಗುತ್ತ ಬಂತು. ಎಷ್ಟು ವಿಚಿತ್ರ ನೋಡಿ, ಈ ಒಂದೇ ತಿಂಗಳೊಳಗೆ ನಾವು ಎರಡು ಪರಸ್ಪರ ವಿರುದ್ಧದ ಮತ್ತು ವಿರೋಧಾಭಾಸದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದೇವೆ!  ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ನಿಚ್ಚಳ ಬಹುಮತ ಪಡೆಯುತ್ತದೆ […]

Read More

ಹೊಗಳಿಕೆ-ತೆಗಳಿಕೆಗಿಂತ ಆಚರಣೆಯ ಬದ್ಧತೆ ಮುಖ್ಯ

ಘೋಷಣೆ ಮುಖ್ಯವೋ, ಆಚರಣೆ ಮುಖ್ಯವೋ ಎಂಬುದರ ಚಿಂತನ-ಮಂಥನ ನಡೆಸುವುದಾದರೆ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಮತ್ತು ಸುರೇಶ್ ಪ್ರಭು ಮಂಡಿಸಿರುವ ರೈಲ್ವೆ ಮುಂಗಡಪತ್ರ ಇವೆರಡೂ ಉತ್ತಮ ಸರಕಾಗುವುದರಲ್ಲಿ ಯಾವ ಅನುಮಾನವೂ ಇಲ್ಲ, ಅಲ್ಲವೇ? ರೈಲ್ವೆ ಮುಂಗಡಪತ್ರವೆಂಬ ನಿರೀಕ್ಷೆಗಳ ಗಂಟು ಈಗಷ್ಟೇ ಬಿಚ್ಚಿಕೊಂಡಿದೆ. ಇಂದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಮೋದಿ ಸರ್ಕಾರದ ಪೂರ್ಣಪ್ರಮಾಣದ ಮೊದಲ ಸಾಮಾನ್ಯ ಬಜೆಟ್ ಕೂಡ ನಮ್ಮೆದುರು ಅನಾವರಣಗೊಳ್ಳುತ್ತದೆ. ಈ ಎರಡು ಬಜೆಟ್‍ಗಳೆಂಬ ವಾರ್ಷಿಕ ವಿಧಿವಿಧಾನಗಳ ಸಂದರ್ಭವನ್ನು ಬಳಸಿಕೊಂಡು `ರಾಜಕೀಯ ಪಕ್ಷಗಳ ಘೋಷಣೆಗಳು ಮತ್ತು ಆಚರಣೆಗಳ’ […]

Read More

ದೆಹಲಿ ಜನರು ಭಾಗ್ಯವಂತರೇ ಸರಿ, ಆದರೆ…

ಎರಡು ವರ್ಷಗಳ ಅಲ್ಪಾವಧಿಯಲ್ಲಿ ಕೇಜ್ರಿವಾಲ್ ಮಾಡಿದ ಕ್ರಾಂತಿಗೆ ಶಬ್ಬಾಸ್ ಅನ್ನಲೇಬೇಕು. ಜನರ ಪ್ರೀತಿ ಗಳಿಸಲು ಅವರು ಪಟ್ಟ ಪರಿಶ್ರಮ, ತೋರಿದ ತಂತ್ರಗಾರಿಕೆ ಮತ್ತು ಜಾಣ್ಮೆಗೆ ಎಲ್ಲರೂ ತಲೆದೂಗಲೇಬೇಕು. ಆದರೆ ಒಂದು ಸರ್ಕಾರವಾಗಿ ಯಶಸ್ಸು ಗಳಿಸಲು ಅವಷ್ಟೇ ಇದ್ದರೆ ಸಾಕೇ? ದೆಹಲಿಯ ಜನರು ನಿಜಕ್ಕೂ ಪುಣ್ಯವಂತರು ಅಂತ ಹೇಳೋಣವೇ? ತಲೆಯ ಮೇಲೊಂದು ಸೂರು, ನಲ್ಲಿಯಲ್ಲಿ ನೀರು, ಮನೆತುಂಬ ಇರುವ ಬಲ್ಬುಗಳಲ್ಲಿ ಬೆಳಕು, ಓದುವ ಮಕ್ಕಳಿಗೆ ಸ್ಕೂಲು, ಕಾಲೇಜುಗಳಲ್ಲಿ ಉಚಿತ ಶಿಕ್ಷಣ… ಹಲವು ಸವಲತ್ತುಗಳು ಉಚಿತ. ಇನ್ನು ಕೆಲವು ಸೇವೆಗಳಿಗೆ […]

Read More

ಭಾರತದಲ್ಲಿ ಭಾಷೆಗಳ ಅವಸಾನ ನಿಧಾನ, ಏಕೆಂದರೆ…

ಒಂದುವೇಳೆ ಪೂಜೆ ಮತ್ತು ಪ್ರಾರ್ಥನೆಯನ್ನೂ ಇಂಗ್ಲಿಷ್‍ನಲ್ಲಿ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋದರೆ ಆಫ್ರಿಕಾ ಖಂಡದ ದೇಶಗಳಲ್ಲಾದಂತೆ ಭಾರತದಲ್ಲೂ ಸ್ಥಳೀಯ ಭಾಷೆಗಳು ನಾಶಹೊಂದುವುದರಲ್ಲಿ ಅನುಮಾನ ಬೇಡ! ಕನ್ನಡ ಭಾಷೆ ಈಗ ಎದುರಿಸುತ್ತಿರುವ ಸಂಕಷ್ಟ, ಸವಾಲುಗಳಿಗೆ ಸಂಬಂಧಿಸಿ ನಾವು ಕೇವಲ ಕರ್ನಾಟಕವನ್ನಷ್ಟೇ ದೃಷ್ಟಿಯಲ್ಲಿರಿಸಿಕೊಂಡು ಆಲೋಚನೆ ಮಾಡಿದರೆ ಸಾಕೇ? ಸ್ಥಳೀಯ ಭಾಷೆಗಳ ಅವಸಾನ ಎಂಬುದು ಈಗ ಜಾಗತಿಕ ಸಮಸ್ಯೆ. ಈ ಮಾತು ಸರಿಯಾಗಿ ಅರ್ಥವಾಗಬೇಕಾದರೆ ನಾವು ಯೂರೋಪ್, ಆಫ್ರಿಕಾ ಖಂಡದ ದೇಶಗಳ ಜೊತೆಗೆ ಏಷ್ಯಾದ ಕೆಲ ದೇಶಗಳ ಸ್ಥಳೀಯ ಭಾಷೆಗಳ ಅವಸಾನದ […]

Read More

ಇಂಗ್ಲಿಷ್ ಸುಂಟರಗಾಳಿಯಿಂದ ಬಚಾವಾಗುವುದು ಹೇಗೆ?

ಕಳೆದ ಐವತ್ತು ವರ್ಷಗಳ ಈಚೆಗೆ ಪ್ರಪಂಚದಲ್ಲಿ ಸುಮಾರು ಏಳು ಸಾವಿರ ಭಾಷೆಗಳು ಅವುಗಳ ಬಳಕೆ ಕಡಿಮೆಯಾಗಿ ಅವಸಾನಗೊಂಡಿವೆ ಇನ್ನು ಅಷ್ಟೇ ಪ್ರಮಾಣದಲ್ಲಿ ಸ್ಥಳಿಯ ಭಾಷೆಗಳು ಆಗಲೋಈಗಲೋ ಅದೇ ಸ್ಥಿತಿಯನ್ನು ತಲುಪುವುದರಲ್ಲಿವೆ. ಖುಷಿಯ ಬೆನ್ನಲ್ಲೇ ಕಳವಳವೂ ಆವರಿಸಿಕೊಳ್ಳುವಂಥ ವಿಷಯ ಇದು. ನಮ್ಮಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುವ ಕೈಗಳಿಗೆ ಮತ್ತು ಮನಸ್ಸುಗಳಿಗೇನೂ ಕಡಿಮೆಯಿಲ್ಲ. ಸಾಲುಸಾಲು ಕನ್ನಡ ಸಂಘಗಳು, ಸಂಘಟನೆಗಳ ಹೆಸರಿನ ಮೆರವಣಿಗೆ ಕಣ್ಣಮುಂದೆ ಹೊಂಟಾಗ ಎಷ್ಟೊಂದು ಸಂತಸ, ಸಮಾಧಾನವಾಗುತ್ತದೆ ನೋಡಿ. ಕನ್ನಡ ಸಾರಸ್ವತ ಲೋಕದ ಆಶಯಗಳ ಸಾಕ್ಷಿಪ್ರಜ್ಞೆಯಂತಿರುವ ಕನ್ನಡ ಸಾಹಿತ್ಯ […]

Read More

ಅಮೆರಿಕದ ಮನಗೆದ್ದ ಮೋದಿ ಚೀನಾದಲ್ಲೂ ಮೋಡಿ ಮಾಡುತ್ತಾರಾ?

ಜಪಾನ್, ಜರ್ಮನಿ ಮತ್ತು ಅಮೆರಿಕದ ಸ್ನೇಹ-ವಿಶ್ವಾಸ ಗಳಿಸುವ ಮೂಲಕ, ಸದಾ ಕಿರುಕುಳ ನೀಡುತ್ತ ಬಂದಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ತಕ್ಕ ಸಂದೇಶ ರವಾನಿಸಿದ್ದಾರೆ. ಹಾಗಂತ ಚೀನಾದೊಂದಿಗೂ ಹಗೆತನ ಸಾಧಿಸುವ ಉಮೇದಿನಲ್ಲಿ ಅವರು ಇದ್ದಂತೆ ತೋರುತ್ತಿಲ್ಲ. ಭಯೋತ್ಪಾದಕರ ವಿಷಯದಲ್ಲಿ ಅಮೆರಿಕದವರು ಹೊಂದಿರುವ ಪುಕ್ಕಲುತನವನ್ನು ಯಾರೂ ಒಪ್ಪಲಾಗದು. ಜಗತ್ತಿನ ಸೂಪರ್ ಪವರ್ ಅಂತ ಕರೆಸಿಕೊಂಡಿರುವ ಆ ದೇಶ ಗಡಗಡ ನಡುಗುವ ರೀತಿಯನ್ನು ಕಂಡರೆ ಅಯ್ಯೋ ಪಾಪ ಅನ್ನಿಸುವುದು ಸಹಜ. ಉಗ್ರಗಾಮಿಗಳಲ್ಲೂ ಒಳ್ಳೆಯವರು-ಕೆಟ್ಟವರು ಎಂದು ವಿಭಾಗಿಸಿ ನೋಡುವ ಅಮೆರಿಕದ […]

Read More

ಅಮೆರಿಕನ್ನರಿಗಿಂತ ಇಲ್ಲಿನವರ ರಕ್ತದ ಬೆಲೆ ಕಮ್ಮಿಯೇನು?

  ಭಯೋತ್ಪಾದಕರ ಮೂಲ ಉದ್ದೇಶ ರಕ್ತ ಹರಿಸಿ, ಭಯ ಹುಟ್ಟಿಸಿ ಇಡೀ ಜಗತ್ತು ತಮ್ಮ ಹಾದಿಗೆ ಬರುವಂತೆ ಮಾಡುವುದು ಎಂಬುದು ಎಲ್ಲ ದೇಶಗಳಿಗೂ ಅರ್ಥವಾಗಿರುವ ಸತ್ಯ. ಹಾಗಿದ್ದರೂ, ಅಮೆರಿಕ ಅಧ್ಯಕ್ಷರ ಆದಿಯಾಗಿ ಎಲ್ಲರೂ ಉಗ್ರರ ಕಾರ್ಯಸಾಧನೆಗೆ ಸಹಕರಿಸುತ್ತಿದ್ದಾರೆಯೇ?   War On Terror ಎಂದು ಘರ್ಜಿಸಿದ ಅಮೆರಿಕದ ಅಧ್ಯಕ್ಷರು ಯಾಕಿಷ್ಟು ಭಯಭೀತರಾಗಿದ್ದಾರೆ? ಇತ್ತೀಚಿನ ದಿನಗಳಲ್ಲಿ ಈ ಪ್ರಶ್ನೆಯನ್ನು ಬಹಿರಂಗವಾಗಿ ಅಲ್ಲದಿದ್ದರೂ ಆಂತರಂಗಿಕವಾಗಿಯಾದರೂ ಎಲ್ಲರೂ ಕೇಳಿಕೊಳ್ಳದೇ ಇರಲು ಸಾಧ್ಯವೇ ಇಲ್ಲ! ಹಾಗಾದರೆ ಅಧ್ಯಕ್ಷ ಬರಾಕ್ ಒಬಾಮ ಅವರ ಜೀವ ಮಾತ್ರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top