ಕೇರಳದ ಈ ಮಾದರಿ ಕರ್ನಾಟಕಕ್ಕೆ ಖಂಡಿತ ಬೇಡ… ( 15 .07 .2017 )

ಕರ್ನಾಟಕ ಮತ್ತೊಂದು ಕೇರಳ ಆಗುತ್ತಿದೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಚಾಲ್ತಿಗೆ ಬಂದಿದೆ, ಚರ್ಚೆಗೆ ತಿರುಗಿದೆ. ಕೇರಳ ಅಂದರೆ ಮೊದಲು ನೆನಪಾಗುತ್ತಿದ್ದುದು ಧಾರ್ವಿುಕತೆ, ಅಧ್ಯಾತ್ಮ, ಕಲೆ, ಸಂಗೀತ, ನೃತ್ಯ, ಕಲಾತ್ಮಕ ದೇವಾಲಯಗಳ ವೈಭವದ ಪರಂಪರೆ ಇತ್ಯಾದಿ. ಆ ದೃಷ್ಟಿಯಲ್ಲಿ ನೋಡಿದರೆ ಕೇರಳ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ, ಅದರಾಚೆಗಿನ ಪ್ರಪಂಚಕ್ಕೆಲ್ಲ ಮಾದರಿಯೆಂದರೂ ಅತಿಶಯೋಕ್ತಿಯಲ್ಲ. ಅಂತಹ ಕೇರಳದ ಮಾದರಿ ದೂರದ ಇಸ್ರೇಲ್​ವರೆಗೂ ಹಬ್ಬಿರುವುದನ್ನು ನಾವು ಕೇಳಿದ್ದೇವೆ, ಪ್ರತ್ಯಕ್ಷ ನೋಡಿದ್ದೇವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ […]

Read More

ನೋಟು ರದ್ದಾದಾಗ ಚಡಪಡಿಕೆ, ಈಗಲೂ… ( 01 .07 .2017 )

ವ್ಯವಸ್ಥೆ ಹಾಳಾಗಿದೆ, ಭ್ರಷ್ಟಾಚಾರ ಮಿತಿಮೀರಿದೆ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ಕಿವಿತಮಟೆ ಹರಿದುಹೋಗುವಷ್ಟು ಮಾತುಗಳನ್ನು ಕೇಳಿದ್ದೇವೆ. ಆದರೆ ಎಲ್ಲೋ ಒಂದು ಕಡೆ ಶುದ್ಧೀಕರಣ ಪ್ರಕ್ರಿಯೆ ಆರಂಭವಾಗಲೇಬೇಕಲ್ಲವೆ? ಈಚಿನ ಕೆಲ ನಿದರ್ಶನಗಳನ್ನು ನೋಡಿದರೆ ಆ ಕೆಲಸಕ್ಕೆ ಚಾಲನೆ ದೊರಕಿದಂತಿದೆ. ಆದರೆ ಇದಕ್ಕೂ ಅಪಸ್ವರವೆತ್ತುವವರ ಅಸಲಿಯತ್ತಾದರೂ ಏನು?  ಸುಖೀ ಜೀವನದ ಸೂತ್ರ ತಿಳಿದ ಮಹಾನುಭಾವರ ಹಿತವಚನ ಏನೆಂಬುದನ್ನು ನಾವು ಒಮ್ಮೆ ಮೆಲುಕು ಹಾಕುವುದು ಉಚಿತ. ಭಗವದ್ಗೀತೆಯನ್ನು ಉಪದೇಶಿಸಿದ ಶ್ರೀ ಕೃಷ್ಣ ಪರಮಾತ್ಮನಿಂದ ಹಿಡಿದು ಅಸಂಖ್ಯಾತ ಸಾಧು-ಸಂತರು, ದಾಸರು, ಶರಣರವರೆಗೆ, […]

Read More

ಐಎಎಸ್ ಆದವರು, ಮುಂದೆ ಆಗುವವರು ತಿಳಿಯಬೇಕಾದ ವಿಷ್ಯ (17 .06 .2017)

ಬದಲಾದ ಕಾಲಘಟ್ಟದಲ್ಲಿ ಜನರ ನಿರೀಕ್ಷೆಗಳು, ಆದ್ಯತೆಗಳು ಬದಲಾಗಿವೆ. ಸರ್ಕಾರದ ಉನ್ನತ ಅಧಿಕಾರಸ್ಥಾನಗಳು ಪ್ರತಿಷ್ಠೆ, ದೌಲತ್ತಿನ ಪ್ರದರ್ಶನದ ಸಾಧನಗಳು ಎಂಬ ಭಾವನೆಗೆ ಈಗ ಮನ್ನಣೆಯಿಲ್ಲ. ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಜನರ ಮನಸ್ಸಿನಲ್ಲಿ ನೆಲೆಯಾಗಬಹುದು. ಕರ್ನಾಟಕದ ಅಧಿಕಾರಿಗಳು ಈ ದಾರಿಯಲ್ಲಿ ಸಾಗಲಿ. ಅಚ್ಚ ಕನ್ನಡತಿ ಕೋಲಾರದ ನಂದಿನಿ ಯುಪಿಎಸ್ಸಿ ಟಾಪರ್ ಆಗಿ ಹೊರ ಹೊಮ್ಮಿದ್ದು ಆಕೆಯ ತಂದೆ-ತಾಯಿಗೆ, ಕುಟುಂಬದವರಿಗೆ ಮಾತ್ರವಲ್ಲ ಇಡೀ ಕನ್ನಡ ಕುಲಕೋಟಿ ಹಿರಿಹಿರಿ ಹಿಗ್ಗುವ ವಿಚಾರ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ ಹೇಗಿತ್ತೆಂದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆ […]

Read More

ಸೋಷಿಯಲ್ ಇಂಜಿನಿಯರಿಂಗ್ ಎಂಬ ರಾಜಕೀಯ ಲೆಕ್ಕಾಚಾರ (3. 06. 2017)

ಸಿದ್ಧಾಂತಗಳನ್ನು ತೇಲಿಬಿಡುವುದು ಸುಲಭ. ಆದರೆ ಅದರ ಉದ್ದೇಶ, ಆಶಯವನ್ನು ಕಾರ್ಯರೂಪಕ್ಕೆ ತರುವಾಗಲೇ ಅಸಲಿಯತ್ತು ಬಹಿರಂಗವಾಗುವುದು. ಆಡಳಿತದ ಸ್ಥಾನಗಳನ್ನು ನಿರ್ಧರಿಸುವಾಗ ಈವರೆಗೆ ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಮೀರಿ ಹೊಸ ಹೆಜ್ಜೆಯಿಡುವ ಧೈರ್ಯ ಮಾಡಿದರೆ ಬದಲಾವಣೆಯನ್ನು ನಿರೀಕ್ಷಿಸಬಹುದು. ಸೋಷಿಯಲ್ ಇಂಜಿನಿಯರಿಂಗ್ ಎನ್ನುವ ಪದ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿರುವುದನ್ನು ಎಲ್ಲರೂ ಗಮನಿಸಿಯೇ ಇರುತ್ತೀರಿ. ಅದರ ಅರ್ಥ ಬಹಳ ವಿಶಾಲ. ವ್ಯಾಪ್ತಿಯ ಹರವು ಬಹಳ ದೊಡ್ಡದು. ಆದರೆ ಅದರ ಬಳಕೆ ಮಾತ್ರ ರಾಜಕೀಯ ವಲಯದಲ್ಲಿ ಮತ್ತು ಅದಕ್ಕೆ ಪೂರಕವಾದ ಸಾಮಾಜಿಕ ವಲಯದಲ್ಲಿ […]

Read More

ಸತತ ತಪ್ಪಿನಿಂದಲೂ ಕಲಿಯದಿದ್ದರೆ ಹೇಗೆ? (20.05.2017)

ವಿರೋಧ ಪಕ್ಷ ಎಂದರೆ ಆಡಳಿತ ಪಕ್ಷದ ಎಲ್ಲ ಹೆಜ್ಜೆಯನ್ನೂ ಬರೀ ಟೀಕಿಸುವುದಲ್ಲ. ಒಳ್ಳೆಯ ನಿರ್ಧಾರ ಕೈಗೊಂಡಾಗ ನಾಲ್ಕು ಶ್ಲಾಘನೆಯ ಮಾತಾಡಿದರೆ ಕಳೆದುಕೊಳ್ಳುವುದೇನೂ ಇಲ್ಲ. ಯಾವುದೇ ವಿಷಯವನ್ನು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಕೋನದಿಂದ ನೋಡುವ ಸಂಪ್ರದಾಯ ನಮ್ಮಲ್ಲಿ ಬೆಳೆಯುವುದೆಂದು… ಚಿಕ್ಕವನಿದ್ದಾಗ ಕೇಳಿದ ಕಥೆ ಅದೇಕೋ ಈಗ ನೆನಪಾಗಿ ಕಾಡತೊಡಗಿತು. ಬಹುಶಃ ಆ ಕಥೆಯನ್ನು ನೀವೂ ಕೇಳಿರುತ್ತೀರ ಅಥವಾ ಓದಿರುತ್ತೀರ. ಆದರೂ ಮತ್ತೊಮ್ಮೆ ಮೆಲುಕು ಹಾಕುವ. ಏನಪ್ಪ ಆ ಕಥೆ ಅಂತ ಅಂದರೆ, ಒಂದೂರಲ್ಲಿ ಒಬ್ಬ ಗುಂಡ ಅಂತ ಇದ್ದ. ಹೆಸರಿಗೆ […]

Read More

ಬವಣೆಯ ಬೆಂಕಿಯಲ್ಲಿ ಬೆಂದು ಬದಲಾವಣೆ ತಂದಾಕೆ (May 6, 2017)

ರಾಷ್ಟ್ರ ರಾಜಧಾನಿಯಲ್ಲಿ ಆ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಮಾರಣಾಂತಿಕ ಹಲ್ಲೆ ದೇಶದ ಅಂತಸ್ಸಾಕ್ಷಿಯನ್ನೇ ಕಲಕಿತು. ಆಕೆಯ ನೋವು ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು. ಈ ಪರಿಣಾಮ ಶಾಶ್ವತವಾಗಿರಲಿ, ಮಹಿಳೆಯನ್ನು ದೇವತೆಯಂತೆ ಕಾಣುವ ಈ ದೇಶದ ಪರಂಪರೆ ಮಾಯವಾಗದಿರಲಿ ಎಂಬುದು ಈ ಹೊತ್ತಿನ ಆಶಯ. ಪ್ರತಿ ವರ್ಷ ಮೇ 5ನ್ನು ಮಹಿಳಾ ಸುರಕ್ಷಾ ದಿನ ಎಂದು ಆಚರಿಸಿದರೆ ಹೇಗೆ? ಸರ್ಕಾರಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಬಹುದು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರೆ, ಕೆಟ್ಟ ದೃಷ್ಟಿಯಿಂದ […]

Read More

ಗಾಂಧಿ ಹತ್ಯೆ ಹಿಂದಿನ ರಹಸ್ಯವೇನು? (April 15, 2017)

ಗಾಂಧಿ ಹತ್ಯೆ ಪ್ರಕರಣದ ಕುರಿತು ಹಲವು ಅನುಮಾನಗಳು ಈಗಲೂ ಬಗೆಹರಿಯದೆ ಉಳಿದಿವೆ. ರಾಷ್ಟ್ರದ ಪ್ರಮುಖ ಘಟನೆಗಳು ಹಾಗೂ ತಿರುವುಗಳ ಕುರಿತಾದ ಸತ್ಯವನ್ನು ತಿಳಿಯುವ ಹಕ್ಕು ಸಾಮಾನ್ಯ ಜನರಿಗೆ ಇದೆ. ಈ ನಿಟ್ಟಿನಲ್ಲಿ ಡಾ.ಕೆ.ಎಸ್. ನಾರಾಯಣಾಚಾರ್ಯರು ರಚಿಸಿರುವ ಕೃತಿ ಮಹತ್ವದ ಮಾಹಿತಿಗಳನ್ನು, ಹೊಸ ಹೊಳಹುಗಳನ್ನು ಒದಗಿಸುತ್ತದೆ. ಗಾಂಧೀಜಿ ಹತ್ಯೆ ಮಾಡಿದವರು ಯಾರು ಎಂಬ ಪ್ರಶ್ನೆ 1948ರಿಂದ ಚರ್ಚೆಯಾಗುತ್ತಲೇ ಇದೆ. ಹತ್ಯೆ ಮಾಡಿದಾತ ನಾಥೂರಾಮ್ ಗೋಡ್ಸೆ ಎಂದು ದಾಖಲೆಗಳು ಹೇಳಿದ್ದರೂ ಅದನ್ನು ಸಂಪೂರ್ಣ ನಂಬುವುದು ಈ ದೇಶದ ಜನಕ್ಕೆ ಸಾಧ್ಯವಾಗುತ್ತಿಲ್ಲ. […]

Read More

ಹೃದಯದಲ್ಲಿರಿಸಿಕೊಂಡ ಫೋಟೋ ಮುಂದೆ ಸೆಲ್ಪಿ ಯಾವ ಲೆಕ್ಕ? (April 8, 2017)

ನಾವು ಹೆಚ್ಚೆಚ್ಚು ಆಧುನಿಕರಾದಂತೆ, ಮುಂದುವರಿದಂತೆ ಭಾವನಾಲೋಕದಲ್ಲಿ ಹಿಂದುಳಿಯುತ್ತೇವೆ ಅನಿಸುತ್ತದೆ. ‘ನಾನು’ ಎಂಬ ಸ್ವಾರ್ಥವೇ ಮೇಲುಗೈ ಪಡೆದಾಗ ಎದುರಿನ ವಾಸ್ತವ ಗೋಚರಿಸುವುದೇ ಇಲ್ಲ. ಆತ್ಮರತಿಯ ಪರದೆ ತೆಗೆಯದಿದ್ದರೆ ಎಲ್ಲವೂ ಮಸುಕೇ. ಎರಡು ವಾರಗಳ ಹಿಂದೆ ನನಗೊಂದು ಅಚ್ಚರಿ ಕಾದಿತ್ತು. ಮಾರ್ಚ್ 26, ಭಾನುವಾರದ ವಿಜಯವಾಣಿ ಸಂಚಿಕೆಯ ‘ಒಳನೋಟ’ ಅಂಕಣದಲ್ಲಿ ಎನ್.ರವಿಶಂಕರ್ ಹಾಗೂ ‘ಜಲದ ಕಣ್ಣು’ ಅಂಕಣದಲ್ಲಿ ಪ್ರೊ.ಕೃಷ್ಣೇಗೌಡ ಈ ಇಬ್ಬರ ಬರಹಗಳ ವಿಷಯ ವಸ್ತುವಿನಲ್ಲಿಯೂ ಸಾಕಷ್ಟು ಸಾಮ್ಯತೆ ಇತ್ತು. ಬರೆದ ರೀತಿ, ವಿಷಯವಸ್ತುವನ್ನು ವಿವರಿಸಿದ ಬಗೆ ಬೇರೆ ಬೇರೆ […]

Read More

ಮೋದಿ-ಷಾ ಎಂಬ ಮೋಡಿಗಾರರ ಗುಟ್ಟೇನೆಂದರೆ… (Mar 25 2017)

ಇದುವರೆಗೆ ಸಾಮಾಜಿಕ ಸಾಮರಸ್ಯದ ಮಾತುಗಳು ಕೇಳಿಬರುತ್ತಿದ್ದವು. ಆರ್ಥಿಕ ಸಬಲೀಕರಣದ ಭಾಷಣಗಳು ಕೇಳಿಸುತ್ತಿದ್ದವು. ಈಗ ಅವೆರಡೂ ಒಟ್ಟೊಟ್ಟಿಗೇ ಅದೂ ಮೌನವಾಗಿ ಸಾಕಾರದತ್ತ ಸಾಗುತ್ತಿವೆ ಎಂಬುದು ಯಾರಿಗೆ ತಾನೆ ಖುಷಿ ಮತ್ತು ಸಮಾಧಾನ ತರುವುದಿಲ್ಲ ಹೇಳಿ? ಯಾರು ಒಪ್ಪುತ್ತಾರೋ ಬಿಡುತ್ತಾರೋ ಎನ್ನುವುದು ಬೇರೆ ವಿಚಾರ. ಏಕೆಂದರೆ ಯಾರು ಒಪ್ಪಿದರೂ, ಒಪ್ಪದಿದ್ದರೂ ವಾಸ್ತವವೇನೂ ಬದಲಾಗದು. ಯಾಕೆ ಈ ಪೀಠಿಕೆ ಅನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಹೇಳ್ತೀನಿ. ಪ್ರಧಾನಿ ನರೇಂದ್ರ ಮೋದಿ ಈಗ ಬಿಜೆಪಿ, ಸಂಘ ಪರಿವಾರ, ಮಂದಿರ, ಜಾತಿಮತ, ಪಂಥಗಳನ್ನೆಲ್ಲ […]

Read More

ಪಕ್ಷಗಳನ್ನು ಕಾಡುವ ಕಾಯಿಲೆಗೆ ಪರಿಹಾರ ಏನು ಎಂದರೆ…

ಈಗ ಬೇಕಿರುವುದು ಜಾತಿ, ಮತ, ಪಂಥವನ್ನು ಮೀರಿದ ಸ್ಮಾರ್ಟ್ ನಾಯಕತ್ವ ಮತ್ತು ‘ರೋಟಿ, ಕಪಡಾ ಔರ್ ಮಕಾನ್’ ಘೊಷಣೆಯನ್ನು ಯಥಾರ್ಥದಲ್ಲಿ ಜಾರಿಗೊಳಿಸುವ ಸಮಗ್ರ ವಿಕಾಸದ ರಾಜಕೀಯ ಸಿದ್ಧಾಂತ. ಸೆಕ್ಯುಲರ್ ಅಥವಾ ಕಮ್ಯೂನಲ್ವಾದದ ಚರ್ಚೆಗೆ ಈಗ ಎಲ್ಲಿಯ ಜಾಗ…  ಕೆಲವೊಮ್ಮೆ ನಿರೀಕ್ಷೆಗಳೆಲ್ಲ ತಲೆಕೆಳಗಾಗಿಬಿಡುತ್ತವೆ! ಈಗ ಸುಮಾರು ಹತ್ತು ಹನ್ನೆರಡು ದಿನಗಳ ಹಿಂದಿನ ಮಾತು. ಮಹಾರಾಷ್ಟ್ರದ ಹತ್ತು ಪಾಲಿಕೆಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬರಲು ಕ್ಷಣಗಣನೆ ಶುರುವಾಗಿತ್ತು. ಆ ವೇಳೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಮಾಧ್ಯಮದವರೊಂದಿಗೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top