ಹೊಸ ಸರ್ಕಾರ ಮತ್ತು ಆ ಹದಿನೈದು ಪ್ರಶ್ನೆಗಳು

ಹೌದು… ರಾಜಕೀಯವೇ ಹೊಲಸು ಅನ್ನುತ್ತಾರೆ, ಅದು ಈಗ ಮತ್ತಷ್ಟು ಕದಡಿದಂತೆ ಭಾಸವಾಗುತ್ತಿದೆ. ಅದಕ್ಕೆ ಕಾರಣಗಳು ಹಲವು! ಆದರೆ ಇಲ್ಲೊಂದು ಪ್ರಶ್ನೆಯನ್ನು ನಾವು ಸಹಜವಾಗಿ ಕೇಳಿಕೊಳ್ಳಲೇಬೇಕಿದೆ. ಅದೇನೆಂದರೆ ನಾವೆಷ್ಟೇ ಬೈದರೂ, ಬೇಡವೆಂದರೂ ರಾಜಕೀಯವನ್ನು ಬಿಟ್ಟು ನಾವು ಬದುಕಬಹುದೇ? ಖಂಡಿತವಾಗಿ ಹೌದು ಎಂಬ ಉತ್ತರವನ್ನು ಕೊಡಲು ಸಾಧ್ಯವೇ ಇಲ್ಲ. ಕಾರಣ ಇಷ್ಟೆ, ರಾಜಕೀಯ ನಮ್ಮ ದೇಶದ ವ್ಯವಸ್ಥೆಯ ಅವಿಭಾಜ್ಯ ಅಂಗ. ನಾವೂ ಕೂಡ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಆ ವ್ಯವಸ್ಥೆಯ ಭಾಗವೇ ಆಗಿದ್ದೇವೆ. ಆದ್ದರಿಂದ ಈಗಲೂ ನಾವು ಧನಾತ್ಮಕವಾಗಿ ಆಲೋಚನೆ […]

Read More

ಚುನಾವಣಾ ಆಯೋಗಕ್ಕೆ ಖದರು ತಂದ ಖಡಕ್ ಶೇಷನ್

ಓರ್ವ ಟಿ.ಎನ್. ಶೇಷನ್ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಇಷ್ಟು ಅಗಾಧ ಬದಲಾವಣೆ ಮಾಡಬಲ್ಲರಾದರೆ ನಾವು ಕರ್ನಾಟಕದ ಆರು ಕೋಟಿ ಜನರು/ದೇಶದ ನೂರಿಪ್ಪತ್ತೈದು ಕೋಟಿ ಜನರು ಇನ್ನೇನೆಲ್ಲ ಮಾಡಬಹುದು! ಆಲೋಚಿಸುವುದು ಬೇಡವೇ? ಕರ್ನಾಟಕ ವಿಧಾನಸಭಾ ಚುನಾವಣೆ ಇದಕ್ಕೆ ವೇದಿಕೆಯಾಗಲಿ. ಚುನಾವಣಾ ಆಯೋಗಕ್ಕೆ ಎಂಥ ತಾಕತ್ತಿದೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಮಾಜಿ ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ತಮ್ಮ ಕೊನೇ ದಿನಗಳನ್ನು ಎಲ್ಲಿ ಮತ್ತು ಹೇಗೆ ಕಳೆಯುತ್ತಿದ್ದಾರೆ ಎಂಬುದರ ಕುರಿತು ದಿನಂಪ್ರತಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಶೇಷನ್ ಮಾತ್ರವಲ್ಲ, ಒಂದುಕಾಲಕ್ಕೆ […]

Read More

ಅವರಿಗೆ ಪಂಡಿತ್​ಜಿ, ಇವರಿಗೇಕೆ ಭೀಮರಾವ್ ಎಂದಷ್ಟೇ ಕರೆದರು?

ಈ ಲೇಖನದ ತಲೆಬರಹ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಭಾಷಣದಿಂದ ಆಯ್ದುಕೊಂಡದ್ದು. ಈ ಪ್ರಶ್ನೆ ಮತ್ತು ಅದರೊಳಗಿನ ಅರ್ಥದ ಹಿನ್ನೆಲೆಯಲ್ಲಿ ಆಲೋಚನೆ ಮಾಡಿದರೆ ಈಗ ನಮಗೆ ಕಾಡುವ ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತದೆ.  ಭಾರತದ ಸಂವಿಧಾನಕ್ಕೆ ನೂರಾರು ಬಾರಿ ತಿದ್ದುಪಡಿ ಮಾಡಿದ ನಂತರ ಇದೀಗ ಅದೇ ವಿಚಾರ ಏಕಾಏಕಿ ಚರ್ಚೆಯ ಮುನ್ನೆಲೆಗೆ ಬಂದು ನಿಂತುಕೊಂಡಿದೆ. ಸಂವಿಧಾನದ ಆಶಯಗಳನ್ನು ಕಾಲಕಾಲಕ್ಕೆ ವ್ಯಾಖ್ಯಾನಿಸಿ ಅದರ ಮೂಲ ಆಶಯ ಸಂರಕ್ಷಿಸಬೇಕಾದ ಸುಪ್ರೀಂಕೋರ್ಟ್ ತೀರ್ಪು ಕೂಡ ದೇಶದಲ್ಲಿ ಹಿಂಸೆಯ ಜ್ವಾಲೆ ಉರಿಯಲು […]

Read More

ಅಂದು ವೀರೇಂದ್ರ ಪಾಟೀಲ್, ಇಂದು ಬಿಎಸ್​ವೈ, ಮುಂದ?

ಈಗಿನ ಸನ್ನಿವೇಶವನ್ನು ಅವಲೋಕಿಸಿದರೆ, ವೀರಶೈವ-ಲಿಂಗಾಯತಕ್ಕೆ ಸೂತ್ರಸಂಬಂಧ ಇಲ್ಲದವರು ಧರ್ಮ ಸ್ಥಾಪನೆಗೆ ಮುಂದಾಗಿರುವುದು ಕಾಣುತ್ತದೆ. ಈ ವಿಷಯವನ್ನು ಧರ್ಮ, ಸಂಸ್ಕೃತಿ, ಇತಿಹಾಸ, ಪುರಾಣಗಳ ತಳಹದಿಗಿಂತ ಹೆಚ್ಚಾಗಿ ರಾಜಕೀಯದ ಹಿನ್ನೆಲೆಯಿಂದ ನೋಡುವುದೇ ಉಚಿತ ಎನಿಸುತ್ತದೆ. ಸಿಎಂ ಸಿದ್ದರಾಮಯ್ಯನವರ ಆಸಕ್ತಿಯಂತೆ ಲಿಂಗಾಯತ ಧರ್ಮದ ಸ್ಥಾಪನೆಗೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿಕೊಂಡ ಮೇಲೆ ಹತ್ತು ಹಲವು ಟೀಕೆಗಳು ಕೇಳಿಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಪೈಕಿ ಗಮನ ಸೆಳೆದ ಒಂದು ಹೇಳಿಕೆ- ಅಂದು ಎಲ್ಲ ಜಾತಿಗಳನ್ನೂ ಒಂದುಮಾಡಲು ಪ್ರಯತ್ನಪಟ್ಟರು […]

Read More

ರಾಜಕೀಯ ಅಸ್ಪೃಶ್ಯತೆ ತೊಳೆದುಕೊಂಡ ಈಶಾನ್ಯ!

ದೇಶದ ಮತದಾರ ರಾಜಕೀಯ ಪ್ರಬುದ್ಧತೆ ಮೆರೆಯುತ್ತಿದ್ದಾನೆ. ಜಾತಿ, ಮತ, ಪಂಥ, ಪ್ರದೇಶ ಮೀರಿದ ಪ್ರಜ್ಞಾವಂತಿಕೆ ತೋರುತ್ತಿದ್ದಾನೆ. ಹೀಗಾಗಿ ಕೋಮುವಾದಕ್ಕೆ ವಿರೋಧ, ಸೆಕ್ಯುಲರ್ ಸಿದ್ಧಾಂತದ ಪರ ಇತ್ಯಾದಿಗಳ ಹೆಸರಲ್ಲಿ ನಡೆಯುತ್ತಿದ್ದ ರಾಜಕೀಯ ಅಸ್ಪೃಶ್ಯತೆಯನ್ನು ತಿರಸ್ಕರಿಸುತ್ತಿದ್ದಾನೆ. ಇದಕ್ಕೆ ಉತ್ತಮ ಉದಾಹರಣೆ ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ. ಭಾರತದಲ್ಲಿ ಹಿಂದೆ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದವು ಎಂಬುದನ್ನು ನಾವು ಕೇಳಿದ್ದೇವೆ ಮತ್ತು ಓದಿದ್ದೇವೆ. ಕಾಲಾನಂತರದಲ್ಲಿ ಅಂಥ ಪದ್ಧತಿಗಳಿಗೆ ನಮ್ಮವರು ತಿಲಾಂಜಲಿ ಇಡುತ್ತ ಬಂದರು. ಅಂಥ ಅನಿಷ್ಟಗಳಲ್ಲಿ ಅಸ್ಪೃಶ್ಯತೆ ಆಚರಣೆ ಕೂಡ ಒಂದು. […]

Read More

ನೀರವ್ ಮೋದಿ ಪ್ರಕರಣ ಮತ್ತು ಬ್ಯಾಂಕಿಂಗ್ ವಾಸ್ತವ

ವಿಜಯ್ ಮಲ್ಯ, ನೀರವ್ ಮೋದಿ ಪ್ರಕರಣಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿರುವುದು ನಿಜ. ಭಾರತದ ಬ್ಯಾಂಕುಗಳು ಸುಸ್ತಿದಾರರ ಸಮಸ್ಯೆಯಿಂದ ನರಳುವುದು ಇದೇ ಮೊದಲೇನಲ್ಲ. ಬ್ಯಾಂಕಿಂಗ್ ಸುಧಾರಣೆಯ ನರಸಿಂಹನ್ ಕಮಿಟಿ ಶಿಫಾರಸನ್ನು ಅನುಷ್ಠಾನಕ್ಕೆ ತಂದಿದ್ದು ಎರಡು ಬಿಜೆಪಿ ಸರ್ಕಾರಗಳೇ ಎಂಬುದು ಗಮನಾರ್ಹ. ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಹತ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾದ ಸುದ್ದಿ ನಿಧಾನಕ್ಕೆ ತಣ್ಣಗಾಗುತ್ತಿದೆ. ಈ ಪ್ರಕರಣ ವಿಜಯ್ ಮಲ್ಯ ಪ್ರಕರಣದಷ್ಟು ತೀವ್ರಸ್ವರೂಪ […]

Read More

ಬದಲಾವಣೆ ನನ್ನಿಂದಲೇ ಅಂದರೆ ಚೆನ್ನ…

ಬದುಕು ಬದಲಾಗುವುದಿಲ್ಲ ಎಂಬ ಕೊರಗಿನ ನಡುವೆಯೇ ನಮ್ಮ ಮೆಟ್ರೋದಂತಹ ಹೆಮ್ಮೆ, ಸ್ವಚ್ಛ ಭಾರತ ಅಭಿಯಾನಕ್ಕೆ ಸ್ಪಂದಿಸುವ ಸಾಮಾನ್ಯ ಮಹಿಳೆಯರು ಮತ್ತು ಮಕ್ಕಳು, ಸ್ವಾತಂತ್ರ್ಯ ತಂದುಕೊಟ್ಟ ಕ್ರಾಂತಿಕಾರಿಗಳ ಆದರ್ಶ ಪಸರಿಸುವ ಧ್ಯೇಯವಾದಿಗಳು, ಸಮಾಜಕ್ಕಾಗಿ ಜೀವ ಮುಡಿಪಿಡುವ ಕಾರ್ಯಕರ್ತರು ಭರವಸೆಯ ಸೆಲೆಯಾಗುತ್ತಾರೆ.  ಕೆಲವೊಮ್ಮೆ ನಾವಂದುಕೊಳ್ಳುತ್ತೇವೆ, ಬದಲಾವಣೆ ಸಾಧ್ಯವೇ ಇಲ್ಲ ಅಂತ. ಆದರೆ ಜಗತ್ತು ಬದಲಾಗುತ್ತಲೇ ಇರುತ್ತದೆ. ಆಗಿರುವ ಬದಲಾವಣೆ ಕೆಲವು ಸಲ ನಮಗೆ ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಇನ್ನು ಕೆಲ ಬಾರಿ, ಬದಲಾವಣೆ ಕಾಣುವ ಹಾಗಿದ್ದರೂ ಅದನ್ನು ನೋಡಲು ಬುಧ್ಯಾಪೂರ್ವಕವಾಗಿ ನಾವು […]

Read More

ಹಿಂದುತ್ವವಲ್ಲ ದ್ವಂದ್ವತ್ವದತ್ತ ಕಾಂಗ್ರೆಸ್ ರಾಗಾ!

ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್​ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು […]

Read More

ಗುಜರಾತ್ ಮಾದರಿ, ರಾಜ್ಯ ರಾಜಕೀಯ ಗರಿಗರಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ. ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ. ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ. ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು […]

Read More

ನೀರಿನ ವ್ಯಾಜ್ಯಗಳಿಗೆ ಅದರಾಚೆಗಿನ ಪರಿಹಾರವೂ ಉಂಟು

ಮಳೆ, ನದಿ, ತೊರೆಗಳನ್ನೇ ಕಾಣದ ಜಗತ್ತಿನ ನೂರಾರು ದೇಶಗಳು ನೀರಿನ ಸಮೃದ್ಧಿಯನ್ನು ಕಂಡುಕೊಂಡಿರುವ ಸಂಗತಿ ಗೊತ್ತಲ್ಲವೇ? ಆದರೆ ಆ ಎಲ್ಲವೂ ಇರುವ ನಾವುಗಳು ಮಾತ್ರ ನದಿ ನೀರಿನ ವ್ಯಾಜ್ಯದಲ್ಲೇ ಮುಳುಗಿಬಿಟ್ಟಿದ್ದೇವೆ. ಅದೇನು ವಿಚಿತ್ರ ಅಂತೀರಿ? ಮಹದಾಯಿ ನದಿ ನೀರಿನ ಪಾಲಿಗಾಗಿ ಉತ್ತರ ಕರ್ನಾಟಕದ ರೈತರು ಹೋರಾಟ ನಡೆಸುತ್ತಿರುವುದು ಇಂದು ನಿನ್ನೆಯಿಂದಲ್ಲ. ಮಹದಾಯಿ ಹೋರಾಟಕ್ಕೆ ಒಂದು ಸುದೀರ್ಘ ಇತಿಹಾಸವೇ ಇದೆ. ಒಂದೊಂದು ಸಲವೂ ಒಂದೊಂದು ತಿರುವು; ಆರೋಪ ಪ್ರತ್ಯಾರೋಪಗಳಿಗೆ ಮಾತ್ರ ಕೊನೆಯಿಲ್ಲ. ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳೂ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top