ಈಗಿನ ಸನ್ನಿವೇಶವನ್ನು ಅವಲೋಕಿಸಿದರೆ, ವೀರಶೈವ-ಲಿಂಗಾಯತಕ್ಕೆ ಸೂತ್ರಸಂಬಂಧ ಇಲ್ಲದವರು ಧರ್ಮ ಸ್ಥಾಪನೆಗೆ ಮುಂದಾಗಿರುವುದು ಕಾಣುತ್ತದೆ. ಈ ವಿಷಯವನ್ನು ಧರ್ಮ, ಸಂಸ್ಕೃತಿ, ಇತಿಹಾಸ, ಪುರಾಣಗಳ ತಳಹದಿಗಿಂತ ಹೆಚ್ಚಾಗಿ ರಾಜಕೀಯದ ಹಿನ್ನೆಲೆಯಿಂದ ನೋಡುವುದೇ ಉಚಿತ ಎನಿಸುತ್ತದೆ. ಸಿಎಂ ಸಿದ್ದರಾಮಯ್ಯನವರ ಆಸಕ್ತಿಯಂತೆ ಲಿಂಗಾಯತ ಧರ್ಮದ ಸ್ಥಾಪನೆಗೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿಕೊಂಡ ಮೇಲೆ ಹತ್ತು ಹಲವು ಟೀಕೆಗಳು ಕೇಳಿಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಪೈಕಿ ಗಮನ ಸೆಳೆದ ಒಂದು ಹೇಳಿಕೆ- ಅಂದು ಎಲ್ಲ ಜಾತಿಗಳನ್ನೂ ಒಂದುಮಾಡಲು ಪ್ರಯತ್ನಪಟ್ಟರು […]
Read More
ದೇಶದ ಮತದಾರ ರಾಜಕೀಯ ಪ್ರಬುದ್ಧತೆ ಮೆರೆಯುತ್ತಿದ್ದಾನೆ. ಜಾತಿ, ಮತ, ಪಂಥ, ಪ್ರದೇಶ ಮೀರಿದ ಪ್ರಜ್ಞಾವಂತಿಕೆ ತೋರುತ್ತಿದ್ದಾನೆ. ಹೀಗಾಗಿ ಕೋಮುವಾದಕ್ಕೆ ವಿರೋಧ, ಸೆಕ್ಯುಲರ್ ಸಿದ್ಧಾಂತದ ಪರ ಇತ್ಯಾದಿಗಳ ಹೆಸರಲ್ಲಿ ನಡೆಯುತ್ತಿದ್ದ ರಾಜಕೀಯ ಅಸ್ಪೃಶ್ಯತೆಯನ್ನು ತಿರಸ್ಕರಿಸುತ್ತಿದ್ದಾನೆ. ಇದಕ್ಕೆ ಉತ್ತಮ ಉದಾಹರಣೆ ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ. ಭಾರತದಲ್ಲಿ ಹಿಂದೆ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದವು ಎಂಬುದನ್ನು ನಾವು ಕೇಳಿದ್ದೇವೆ ಮತ್ತು ಓದಿದ್ದೇವೆ. ಕಾಲಾನಂತರದಲ್ಲಿ ಅಂಥ ಪದ್ಧತಿಗಳಿಗೆ ನಮ್ಮವರು ತಿಲಾಂಜಲಿ ಇಡುತ್ತ ಬಂದರು. ಅಂಥ ಅನಿಷ್ಟಗಳಲ್ಲಿ ಅಸ್ಪೃಶ್ಯತೆ ಆಚರಣೆ ಕೂಡ ಒಂದು. […]
Read More
ವಿಜಯ್ ಮಲ್ಯ, ನೀರವ್ ಮೋದಿ ಪ್ರಕರಣಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿರುವುದು ನಿಜ. ಭಾರತದ ಬ್ಯಾಂಕುಗಳು ಸುಸ್ತಿದಾರರ ಸಮಸ್ಯೆಯಿಂದ ನರಳುವುದು ಇದೇ ಮೊದಲೇನಲ್ಲ. ಬ್ಯಾಂಕಿಂಗ್ ಸುಧಾರಣೆಯ ನರಸಿಂಹನ್ ಕಮಿಟಿ ಶಿಫಾರಸನ್ನು ಅನುಷ್ಠಾನಕ್ಕೆ ತಂದಿದ್ದು ಎರಡು ಬಿಜೆಪಿ ಸರ್ಕಾರಗಳೇ ಎಂಬುದು ಗಮನಾರ್ಹ. ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಹತ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾದ ಸುದ್ದಿ ನಿಧಾನಕ್ಕೆ ತಣ್ಣಗಾಗುತ್ತಿದೆ. ಈ ಪ್ರಕರಣ ವಿಜಯ್ ಮಲ್ಯ ಪ್ರಕರಣದಷ್ಟು ತೀವ್ರಸ್ವರೂಪ […]
Read More
Prime Minister Narendra Modi addressed the Indian community at Muscat on Sunday February 11 2018 He focused on the ‘new India’ that is being built, elaborating on its finer points http://www.republicworld.com/s/22977/watch-pm-modi-elaborates-on-new-india-while-addressing-indian-diaspora-at-muscat
Read More
ಬದುಕು ಬದಲಾಗುವುದಿಲ್ಲ ಎಂಬ ಕೊರಗಿನ ನಡುವೆಯೇ ನಮ್ಮ ಮೆಟ್ರೋದಂತಹ ಹೆಮ್ಮೆ, ಸ್ವಚ್ಛ ಭಾರತ ಅಭಿಯಾನಕ್ಕೆ ಸ್ಪಂದಿಸುವ ಸಾಮಾನ್ಯ ಮಹಿಳೆಯರು ಮತ್ತು ಮಕ್ಕಳು, ಸ್ವಾತಂತ್ರ್ಯ ತಂದುಕೊಟ್ಟ ಕ್ರಾಂತಿಕಾರಿಗಳ ಆದರ್ಶ ಪಸರಿಸುವ ಧ್ಯೇಯವಾದಿಗಳು, ಸಮಾಜಕ್ಕಾಗಿ ಜೀವ ಮುಡಿಪಿಡುವ ಕಾರ್ಯಕರ್ತರು ಭರವಸೆಯ ಸೆಲೆಯಾಗುತ್ತಾರೆ. ಕೆಲವೊಮ್ಮೆ ನಾವಂದುಕೊಳ್ಳುತ್ತೇವೆ, ಬದಲಾವಣೆ ಸಾಧ್ಯವೇ ಇಲ್ಲ ಅಂತ. ಆದರೆ ಜಗತ್ತು ಬದಲಾಗುತ್ತಲೇ ಇರುತ್ತದೆ. ಆಗಿರುವ ಬದಲಾವಣೆ ಕೆಲವು ಸಲ ನಮಗೆ ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಇನ್ನು ಕೆಲ ಬಾರಿ, ಬದಲಾವಣೆ ಕಾಣುವ ಹಾಗಿದ್ದರೂ ಅದನ್ನು ನೋಡಲು ಬುಧ್ಯಾಪೂರ್ವಕವಾಗಿ ನಾವು […]
Read More
ನಟ ಪ್ರಕಾಶ್ ರೈ ಮುಂದಿಡುತ್ತಿರುವ ವಾದಗಳ ಕುರಿತು ತದನಂತರದಲ್ಲಿ ಚರ್ಚೆ ಮಾಡೋಣ. ಅದಕ್ಕೂ ಮೊದಲು ಗಮನಿಸಲೇಬೇಕಾದ ಕೆಲ ಸಂಗತಿಗಳಿವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಗ್ರಪ್ರಾಶಸ್ತ್ಯ ಇರುವುದು ನಿಜ. ಆದರೆ ಅದರ ಅರ್ಥ ಯಾರು ಬೇಕಾದರೂ, ಯಾರ ವಿರುದ್ಧ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು ಅಂತಲ್ಲ. ಬಾಯಿಗೆ ಬಂದಂತೆ ಮಾತನಾಡಿದರೆ ಟಿವಿ ಚಾನೆಲ್ಗಳಿಗೆ ಆಹಾರ ಆಗಬಹುದೇ ಹೊರತು ಆಡಿದವನ ವ್ಯಕ್ತಿತ್ವವೇನೂ ಅರೆಕ್ಷಣದಲ್ಲಿ ಹಿಮಾಲಯದ ಎತ್ತರಕ್ಕೆ ಏರುವುದಿಲ್ಲ. ಇತಿಹಾಸ, ಪರಂಪರೆ ಬದಲಾಗಿಹೋಗುವುದಿಲ್ಲ. ಜನರು ನಂಬಿ ಅನುಸರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು […]
Read More
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ. ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ. ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ. ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು […]
Read More
ಮಳೆ, ನದಿ, ತೊರೆಗಳನ್ನೇ ಕಾಣದ ಜಗತ್ತಿನ ನೂರಾರು ದೇಶಗಳು ನೀರಿನ ಸಮೃದ್ಧಿಯನ್ನು ಕಂಡುಕೊಂಡಿರುವ ಸಂಗತಿ ಗೊತ್ತಲ್ಲವೇ? ಆದರೆ ಆ ಎಲ್ಲವೂ ಇರುವ ನಾವುಗಳು ಮಾತ್ರ ನದಿ ನೀರಿನ ವ್ಯಾಜ್ಯದಲ್ಲೇ ಮುಳುಗಿಬಿಟ್ಟಿದ್ದೇವೆ. ಅದೇನು ವಿಚಿತ್ರ ಅಂತೀರಿ? ಮಹದಾಯಿ ನದಿ ನೀರಿನ ಪಾಲಿಗಾಗಿ ಉತ್ತರ ಕರ್ನಾಟಕದ ರೈತರು ಹೋರಾಟ ನಡೆಸುತ್ತಿರುವುದು ಇಂದು ನಿನ್ನೆಯಿಂದಲ್ಲ. ಮಹದಾಯಿ ಹೋರಾಟಕ್ಕೆ ಒಂದು ಸುದೀರ್ಘ ಇತಿಹಾಸವೇ ಇದೆ. ಒಂದೊಂದು ಸಲವೂ ಒಂದೊಂದು ತಿರುವು; ಆರೋಪ ಪ್ರತ್ಯಾರೋಪಗಳಿಗೆ ಮಾತ್ರ ಕೊನೆಯಿಲ್ಲ. ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳೂ […]
Read More
ಬಹುನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಿಮಾಚಲದಲ್ಲಿ ಗರಿಷ್ಠ ಸ್ಥಾನ ಗಳಿಸಿ, ಗುಜರಾತಿನಲ್ಲಿ ಪ್ರಯಾಸ ಪಟ್ಟು ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಇಲ್ಲಿ ಆರಂಭವಾಗುವ ಮೊದಲ ಲೆಕ್ಕಾಚಾರ ಈ ಜಿದ್ದಾಜಿದ್ದಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದು. ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಗೆದ್ದು ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ನಿಜ. ಆದರೂ ಶತಾಯಗತಾಯ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ತರಹೇವಾರಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸೆಣೆಸಿದರೂ ಅಧಿಕಾರದ ಕನಸು ಕೈಗೂಡಲಿಲ್ಲ ಎಂಬುದೂ […]
Read More
ಗುಜರಾತ್ ಇರಲಿ, ಹಿಮಾಚಲವಿರಲಿ ಅಥವಾ ಕರ್ನಾಟಕವೇ ಇರಲಿ, ರಾಷ್ಟ್ರ ರಾಜಕಾರಣದ ಟ್ರೆಂಡ್ ಬಿಟ್ಟು ಫಲಿತಾಂಶ ಬೇರೆ ಆಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಸಮರ್ಥ ಪರ್ಯಾಯವನ್ನು ಬಿಂಬಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅದು ಮುಂದುವರಿಯುತ್ತಲೇ ಇರುತ್ತದೆ. ಕಳೆದೊಂದು ವರ್ಷದಿಂದ ಕಾಡುತ್ತಿದ್ದ ಗುಜರಾತ್ ಚುನಾವಣೆ ಎಂಬ ಗುಮ್ಮ ಕರಗಿ ಮೂವತ್ತಾರು ಗಂಟೆ ಕಳೆದಿದೆ. ಚುನಾವಣಾಪೂರ್ವ ಸಮೀಕ್ಷೆ, ಮತಗಟ್ಟೆ ಸಮೀಕ್ಷೆಗಳೆಂಬ ಅಬ್ಬರಗಳೂ ತಣ್ಣಗಾಗಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗುವ ಖಚಿತ ಟ್ರೆಂಡ್ನ ಧ್ಯಾನದಲ್ಲಿ ಎಲ್ಲರೂ ಮುಳುಗಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಮನದಲ್ಲಿ ಮೂಡಬಹುದಾದ ಆಲೋಚನೆಗಳೇನು […]
Read More