ಕೊರೊನಾ ಶಂಕಿತರಿಗೆ ತಂತ್ರಜ್ಞಾನ ಕಡಿವಾಣ

ಭಾರತವೂ ಸೇರಿದಂತೆ ಹೆಚ್ಚಿನ ಎಲ್ಲ ದೇಶಗಳು ತಮ್ಮ ಪ್ರಜೆಗಳಲ್ಲಿ ಕೋವಿಡ್‌ ಸೋಂಕಿತರ ಮೇಲೆ ನಿಗಾ ಇಡಲು ಹಾಗೂ ಸೋಂಕು ಶಂಕಿತರನ್ನು ಪತ್ತೆ ಹಚ್ಚಲು ನಾನಾ ನಿಗಾ ವ್ಯವಸ್ಥೆಗಳನ್ನು ರೂಪಿಸಿಕೊಂಡಿವೆ. ಅಂಥ ನಿಗಾ ವ್ಯವಸ್ಥೆಗಳ ಮೇಲೊಂದು ನೋಟ ಇಲ್ಲಿದೆ. ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಮೊನ್ನೆ ಒಂದು ಡ್ಯಾಶ್‌ಬೋರ್ಡ್‌ ಬಿಡುಗಡೆ ಮಾಡಿದರು. ಇದರ ಕೆಲಸ, ರಾಜ್ಯದಾದ್ಯಂತ ಇರುವ ಕೋವಿಡ್‌ ಸೊಂಕಿತರು, ಶಂಕಿತರು ಹಾಗೂ ಚಿಕಿತ್ಸೆ ಕುರಿತ ಪೂರ್ಣ ವಿವರ ನೀಡುವುದು. ಇದರ ಜೊತೆಗೆ, ಕೊರೊನಾ […]

Read More

ಕೊರೊನಾಕ್ಕಿಂತ ಕೊರೊನಾ ಸೃಷ್ಟಿಸಿದ ಭಯ, ಸಂಕಷ್ಟದಿಂದ ಸಾಯೋರು ಹೆಚ್ಚಾಗ್ತಿದ್ದಾರಾ? ಸರ್ಕಾರ ಇತ್ತ ಒಮ್ಮೆ ನೋಡಬೇಕು!

ಕೊರೊನಾ ನೆಪದಲ್ಲಿ ಅನ್ಯ ರೋಗಿಗಳೂ ಬಲಿ – ಕೋವಿಡ್‌-19 ವರದಿಗೆ ಕಾದು ಜಾಂಡೀಸ್‌ಗೆ ಚಿಕಿತ್ಸೆ ಕೊಡಲಿಲ್ಲ, ಯುವ ಎಂಜಿನಿಯರ್‌ ಸಾವು ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗಿ ದೇಶಾದ್ಯಂತ ದೊಡ್ಡ ಪ್ರಮಾಣದ ಅವಾಂತರ ಸೃಷ್ಟಿಸುತ್ತಿದ್ದರೆ, ಇನ್ನೊಂದೆಡೆ ಇದೇ ಕೊರೊನಾ ನೆಪದಲ್ಲಿ ಚಿಕಿತ್ಸೆ ಸಿಗದೇ ಬೇರೆ ರೋಗಿಗಳೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ​ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಏ. 3ರಂದು ಮೃತಪಟ್ಟ ಧಾರವಾಡದ 31 ವರ್ಷದ ಎಂಜಿನಿಯರ್‌ ರಾಜು ನಾಯ್ಕ್‌ ಸಾವು ಇದಕ್ಕೆ ಜ್ವಲಂತ ಸಾಕ್ಷಿ. ನ್ಯುಮೋನಿಯಾ, ಜಾಂಡೀಸ್‌ನಿಂದ ಬಳಲುತ್ತಿದ್ದ ರಾಜುಗೆ […]

Read More

ವೈದ್ಯರು ವಿವೇಚನೆ ಬಳಸಲಿ: ರೋಗಿಗಳ ಹಿತಚಿಂತನೆಯ ಆದ್ಯತೆ

ಕೊರೊನಾ ವೈರಸ್‌ ವಿರುದ್ಧದ ಯುದ್ಧದಲ್ಲಿ ವೈದ್ಯರೇ ಸೇನಾನಿಗಳು ಎಂಬುದು ರುಜುವಾತಾಗಿ ಹೋಗಿದೆ. ಕೋವಿಡ್‌ ಕಾಯಿಲೆಯ ಲಕ್ಷಣಗಳನ್ನು ಸಮರ್ಪಕವಾಗಿ ಗುರುತಿಸುವುದು, ಅಗತ್ಯ ಪ್ರತ್ಯೇಕ ನಿಗಾ ವ್ಯವಸ್ಥೆ ಮಾಡುವುದು, ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವುದು, ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನೆರವಾಗುವುದು- ಇವೆಲ್ಲವನ್ನೂ ವೈದ್ಯಕೀಯ ಸೇವೆಯಲ್ಲಿರುವವರು ಮಾಡಬೇಕಿದೆ. ಕೋವಿಡ್‌ ಚಿಕಿತ್ಸೆಗಾಗಿ ಸರಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದರೂ ಇಂಥ ತುರ್ತು ಸಂದರ್ಭಗಳಲ್ಲಿ ಖಾಸಗಿ ವೈದ್ಯಕೀಯ ಸೇವೆಯ ಮೇಲೆ […]

Read More

ಕೊರೊನಾ ಕಾಲದಲ್ಲಿ ಮಂತ್ರಿಗಳ ದಿನಚರಿ…

ಇಡೀ ವಿಶ್ವವನ್ನೇ ನಡುಗಿಸಿರುವ ಕೊರೊನಾ ರಾಜ್ಯಕ್ಕೂ ಸಂಕಷ್ಟ ತಂದಿದೆ. ಇದನ್ನೇ ಒಂದಂಶದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿರುವ ಸರಕಾರ ಮಾರಕ ವೈರಾಣು ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ. ಇಂಥ ವಿಷಮ ಸನ್ನಿವೇಶದಲ್ಲಿ ಯೋಧರಂತೆ ಕ್ರಿಯಾಶೀಲರಾಗಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ, ಜನತೆಗೆ ಯಾವ ರೀತಿ ಒತ್ತಾಸೆ ನೀಡಿದ್ದಾರೆ, ‘ಉಸ್ತುವಾರಿ’ ಎಂಬುದರ ಅರ್ಥವನ್ನು ಹೇಗೆ ವಿಸ್ತರಿಸಿದ್ದಾರೆ ಎಂಬುದರ ಕುರಿತು ವಿಕ ರಿಯಾಲಿಟಿ ಚೆಕ್. ಸಚಿವರ ಕ್ರಿಯಾಶೀಲತೆ ಬಡಿದೆಬ್ಬಿಸಿದ ಕೊರೊನಾ ಬೀದರ್‌ನಲ್ಲಿ ಪ್ರಭು ಕಾರುಣ್ಯ ಬೀದರ್: ಕೊರೊನಾ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು […]

Read More

ವೆಚ್ಚ ಕಡಿತ ಇಲ್ಲಿಂದಲೇ ಆರಂಭವಾಗಲಿ ಸಿಎಂ ಸಾಹೇಬರೆ…

ವೆಚ್ಚ ಕಡಿತದ ಪ್ರಸ್ತಾವನೆ ಓಕೆ, ನಿಗಮ, ಮಂಡಳಿ ನೇಮಕ ಬೇಕೆ? ಕೊರೊನಾ ಮಹಾಮಾರಿ ದೇಶದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮ ನಿರೀಕ್ಷೆಗೂ ಮೀರಿದ್ದು. ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವ ಕ್ರಮವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಸಚಿವರು ಹಾಗೂ ಸಂಸದರ ವೇತನವನ್ನು ಶೇ.30ರಷ್ಟು ವೇತನವನ್ನು ಒಂದು ವರ್ಷದ ಅವಧಿಗೆ ಕಡಿತ ಮಾಡುವ ತೀರ್ಮಾನವನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಇದೇ ಮಾದರಿಯಲ್ಲಿರಾಜ್ಯ ಸರಕಾರವೂ ಕ್ರಮಕ್ಕೆ ಮುಂದಾಗಿದೆ. ”ಸಚಿವರು, ಶಾಸಕರ ವೇತನವನ್ನು 2 ವರ್ಷದ ಅವಧಿಗೆ ಶೇ.30ರಷ್ಟು ಕಡಿತಗೊಳಿಸುವ ತೀರ್ಮಾನವನ್ನು ಸಂಪುಟ […]

Read More

ಉದ್ಯೋಗ ನಷ್ಟ ಬದುಕು ಕಷ್ಟ

ಕೊರೊನಾ ವೈರಸ್‌ನಿಂದ ಹೆಚ್ಚಿನ ಎಲ್ಲ ದೇಶಗಳು ಲಾಕ್‌ಡೌನ್, ಭಾಗಶಃ ಲಾಕ್‌ಡೌನ್ ಘೋಷಿಸಿವೆ. ಇದರಿಂದಾಗಿ ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಎಲ್ಲ ಉದ್ಯಮಗಳು ಮುಚ್ಚಿದ್ದು, ಇದರಿಂದ ಕೋಟ್ಯಂತರ ಮಂದಿ ಭವಿಷ್ಯದ ಕಡೆಗೆ ಶೂನ್ಯ ದೃಷ್ಟಿ ಬೀರುವಂತಾಗಿದೆ. ಯಾವ ದೇಶದಲ್ಲಿ ಏನು ಪರಿಣಾಮವಾಗಿದೆ? ಇಲ್ಲೊಂದು ನೋಟವಿದೆ. ಭಾರತದ ಸ್ಥಿತಿಗತಿ ಗಂಭೀರ ಭಾರತದಲ್ಲಿ ಸಂಸತ್ ಸದಸ್ಯರ ವಾರ್ಷಿಕ ವೇತನ, ಭತ್ಯೆ ಹಾಗೂ ಪಿಂಚಣಿಯಲ್ಲಿ ಶೇ.30ರಷ್ಟು ಕಡಿತ ಮಾಡುವ ನಿರ್ದೇಶನವನ್ನು ಸಚಿವ ಪ್ರಕಾಶ್ ಜಾವಡೇಕರ್ ನೀಡಿದ್ದಾರೆ. 2010-21 ಹಾಗೂ 2021-22ರಲ್ಲಿ ಎಂಪಿಗಳು ಬಳಸಿಕೊಳ್ಳಬೇಕಿದ್ದ […]

Read More

ಕೌಟುಂಬಿಕ ಬಜೆಟ್‌ಗೆ ಬೇಕು ಸಂಕಷ್ಟ ಸೂತ್ರ

– ಮುಂದುವರಿದ ಕೊರೊನಾ ಸೋಂಕು, ಸಾವಿನ ಸರಣಿ  ಅರ್ಥ ವ್ಯವಸ್ಥೆಗೇ ಆಪತ್ತು – ಉದ್ಯೋಗ ನಷ್ಟ ಇಲ್ಲವೇ ಸಂಬಳ ಕಡಿತ ಸಾಧ್ಯತೆ – ಬಡ ಮತ್ತು ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆಗೆ ಎದುರಾಗಲಿದೆ ಸವಾಲು – ಕಠಿಣ ಬಜೆಟ್ ಸೂತ್ರವೇ ಸದ್ಯಕ್ಕಿರುವ ದಾರಿ – ಎ ಕೃಷ್ಣ ಭಟ್, ಬೆಂಗಳೂರು ಮಹಾಮಾರಿ ಕೊರೊನಾದ ಹೊಡೆತಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಕೊರೊನಾ ಕೇವಲ ಆರೋಗ್ಯ ಸಮಸ್ಯೆಯಲ್ಲ. ಅರ್ಥ ವ್ಯವಸ್ಥೆಯನ್ನು ಬುಡಮೇಲುಗೊಳಿಸಿರುವ ಈ ರೋಗ ಸಾಮಾಜಿಕವಾಗಿಯೂ ಹಲವು ಸವಾಲುಗಳನ್ನು […]

Read More

ಸರಳ ಜೀವನ ಕಲಿಯೋಣ – ಸುರಂಗದ ಕೊನೆಯಲ್ಲಿ ಬೆಳಕಿದೆ

ಕೊರೊನಾ ವೈರಸ್ ಹಬ್ಬದಿರಲಿ ಎಂಬ ಮುಂದಾಲೋಚನೆಯಿಂದ ಭಾರತವೂ ಸೇರಿದಂತೆ ಹಲವು ದೇಶಗಳು ಲಾಕ್‌ಡೌನ್ ಮಾಡಿವೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಆರಂಭವಾಗಿದ್ದ ಹೊತ್ತಿನಲ್ಲೇ ಕೋವಿಡ್ ಸೋಂಕು ಕಾಣಿಸಿಕೊಂಡು, ಜಗತ್ತಿನಾದ್ಯಂತ ವ್ಯಾಪಿಸಲು ಆರಂಭವಾಗಿತ್ತು. ಇದನ್ನು ತಡೆಗಟ್ಟುವುದು, ಅದಕ್ಕಾಗಿ ಲಾಕ್‌ಡೌನ್‌ಗಳು ಅನಿವಾರ್ಯವಾಗಿದ್ದವು. ಲಾಕ್‌ಡೌನ್‌ಗಳ ಪರೋಕ್ಷ ಪರಿಣಾಮ ಆರ್ಥಿಕತೆಯ ಮೇಲೆ ಆಗಿದ್ದು ಅಂತಾರಾಷ್ಟ್ರೀಯ ವ್ಯಾಪಾರ- ವಹಿವಾಟುಗಳು ಕುಸಿದಿವೆ. ಹಲವು ವಲಯಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಕಂಪನಿಗಳು ಮುಚ್ಚಿವೆ. ಇದು ಇನ್ನಷ್ಟು ಕಾಲ ಮುಂದುವರಿಯಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. […]

Read More

ಚೀನಾದ ಕೊರೊನಾ ಹೀರೊ

​​ಚೀನಾದ ಕೊರೊನಾ ಹೀರೊ ​- ಕೇಶವ ಪ್ರಸಾದ್‌ ಬಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕಳೆದ ಫೆಬ್ರವರಿಯಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಟದಲ್ಲಿ ತಮ್ಮನ್ನು ತಾವೇ ‘‘ಸುಪ್ರೀಂ ಕಮಾಂಡರ್‌’’ ಎಂದು ಬೆನ್ನು ತಟ್ಟಿಕೊಂಡಿದ್ದರು. ಆದರೆ ನಿಜಕ್ಕೂ ಅಲ್ಲಿನ ಜನರ ಮನಗೆದ್ದ ಸಮರ ಸೇನಾನಿ ಅವರಲ್ಲ, ಬದಲಿಗೆ 83 ವರ್ಷದ ವೈದ್ಯ ಜಾಂಗ್‌ ನಾನ್‌ಶಾನ್‌! ​​ಇದಕ್ಕೆ ಕಾರಣಗಳೂ ಹಲವು. ಅವರು ಕೇವಲ ಹಿರಿಯ ವೈದ್ಯರಲ್ಲ, ಜ್ಞಾನ ವೃದ್ಧ, ಸತ್ಯನಿಷ್ಠ ಎಂಬ ಮಾತಿದೆ. ಜತೆಗೆ ಚೀನಾದ ನ್ಯಾಶನಲ್‌ ಪೀಪಲ್ಸ್‌ ಕಾಂಗ್ರೆಸ್‌ನ […]

Read More

ಇದೊಂದು ಇರ್ಲಿಲ್ಲಾ ಅಂದ್ರೆ ಭಾರತ ಸೇಫಾಗಿತ್ತು..

ತಬ್ಲಿಘಿ ನಂಜೇ ಸಾವಿರ! – 17 ರಾಜ್ಯಗಳಲ್ಲಿನ 1023 ಕೇಸಿಗೆ ನಿಜಾಮುದ್ದೀನ್‌ ನಂಟು – 22 ಸಾವಿರ ಜನರು ಕ್ವಾರಂಟೈನ್‌ – ಶತಕದ ಬಾಗಿಲಿಗೆ ಬಂದ ಸಾವಿನ ಸಂಖ್ಯೆ – ರಾಜ್ಯದಲ್ಲೂ16 ಹೊಸ ಕೇಸ್‌ ಪತ್ತೆ ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮೂರು ಸಾವಿರದ ಗಡಿ ದಾಟಿದೆ. ಆದರೆ, ಸೋಂಕಿನ ಪ್ರಮಾಣದಲ್ಲಿ ಸಿಂಹಪಾಲು ಪ್ರಕರಣಗಳು ನೇರವಾಗಿ ದಿಲ್ಲಿಯಲ್ಲಿ ನಡೆದ ತಬ್ಲಿಘಿ ಸಮಾವೇಶದೊಂದಿಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ, ತಮಿಳುನಾಡು, […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top