ಆರ್ಥಿಕತೆ ಚೇತರಿಕೆಗೆ ಸಾಕ್ಷಿ – ಗೂಗಲ್‌ನಿಂದ 75 ಸಾವಿರ ಕೋಟಿ ರೂ. ಹೂಡಿಕೆ

ಗಡಿಯಲ್ಲಿ ಚೀನಾ ಬೆದರಿಕೆ, ಗಡಿಯೊಳಕ್ಕೆ ಕೊರೊನಾ ವೈರಸ್ ಹಾವಳಿ ಉಂಟು ಮಾಡಿರುವ ನಕಾರಾತ್ಮಕ ಪರಿಣಾಮಗಳ ನಡುವೆಯೇ ಭಾರತದ ಆರ್ಥಿಕತೆಗೆ ಹೊಸ ಹುಮ್ಮಸ್ಸು ತರುವ ಬೆಳವಣಿಗೆ ಕಂಡು ಬಂದಿದೆ. ಜಗತ್ತಿನ ಅತಿದೊಡ್ಡ ಟೆಕ್ ಕಂಪನಿ ಗೂಗಲ್ ಮುಂಬರುವ 5ರಿಂದ 7 ವರ್ಷಗಳಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಘೋಷಣೆ ಮಾಡಿದೆ. ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದವರೇ ಆದ ಗೂಗಲ್ ಸಿಇಒ ಸುಂದರ್ ಪಿಚೈ ಜೊತೆ ನಡೆಸಿದ ಮಾತುಕತೆಯ ಬೆನ್ನೆಲ್ಲೇ ಆ […]

Read More

ಚೀನಾ ಎದುರಿಸಲು ಬೇಕು ದೇಶಿ ಮೊಬೈಲ್‌ ಆ್ಯಪ್‌

ಸ್ಥಳೀಯ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷ ಣ ಸಂಸ್ಥೆಗಳ ಪಾತ್ರವೇನು? – ಪ್ರೊ. ನಾಗೇಶ್ವರ ರಾವ್‌. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷ ನ್‌ 69ಎ ಅಡಿಯಲ್ಲಿರುವ ತನ್ನ ಅಧಿಕಾರವನ್ನು ಬಳಸಿ 59 ಚೀನೀ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಅವುಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿರುವ ಮಾಹಿತಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ನಿಷೇಧಿತ 59 ಆ್ಯಪ್‌ಗಳ […]

Read More

ಜಾರ್ಜ್ ಪ್ರತಿಪಾದಿಸಿದ್ದ ಆತ್ಮನಿರ್ಭರ ಮಂತ್ರ

ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ (ಜೂನ್ 25) 45 ವರ್ಷ. ಎಮರ್ಜೆನ್ಸಿ ಹೀರೊ, ಜನನಾಯಕ ಜಾರ್ಜ್ ಫರ್ನಾಂಡಿಸ್ ಅವರು ಪ್ರತಿಪಾದಿಸುತ್ತಿದ್ದ ಸ್ವದೇಶಿ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಆತ್ಮನಿರ್ಭರ ವಿಚಾರಗಳು ಈಗ ಹೆಚ್ಚು ಪ್ರಸ್ತುತವಾಗಿವೆ. – ಅನಿಲ್ ಹೆಗ್ಡೆ. 1974ರ ಐತಿಹಾಸಿಕ ರೈಲು ಮುಷ್ಕರದ ನೇತೃತ್ವ ವಹಿಸಿದ್ದ ಕರ್ನಾಟಕದ ಹೆಮ್ಮೆಯ ಪುತ್ರ ಜಾರ್ಜ್ ಫರ್ನಾಂಡಿಸ್ ತುರ್ತುಪರಿಸ್ಥಿತಿಯಲ್ಲಿ ಭೂಮಿಗತ ಕ್ರಾಂತಿಕಾರಿ ಆಂದೋಲನ ನಡೆಸಿ ನಂತರ ಬರೋಡಾ ಡೈನಮೈಟ್ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾಗಿ ಜೈಲಿನಿಂದಲೇ ಬಿಹಾರಿನ ಮುಜಫರ್‌ ಪುರದಿಂದ 3.34 […]

Read More

ಎಚ್‌-1ಬಿ ವೀಸಾ – ಮೀಸೆ ತಿರುವಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌-1ಬಿ, ಎಲ್‌-1 ಮತ್ತಿತರ ಎಲ್ಲ ವಿದೇಶಿ ವರ್ಕ್‌ ವೀಸಾಗಳನ್ನು ಜೂನ್‌ 24ರಿಂದ ಡಿಸೆಂಬರ್‌ 31ರ ತನಕ ಅಮಾನತಿನಲ್ಲಿಟ್ಟಿದ್ದಾರೆ. ಇದರ ಉದ್ದೇಶವೇನು? ಇದರಿಂದ ಯಾರಿಗೆ ಲಾಭ? ಭಾರತೀಯರಿಗೆ ಏನು ನಷ್ಟ? ಎಷ್ಟು ಎಚ್‌-1ಬಿ ವೀಸಾಗಳಿವೆ? ಅಮೆರಿಕ ಸಂಸ್ಥಾನ ಪ್ರತಿವರ್ಷ 65,000 ಎಚ್‌-1ಬಿ ವೀಸಾಗಳನ್ನು (ಅಲ್ಲದೆ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ 20,000 ವೀಸಾಗಳನ್ನು) ವಿತರಿಸುತ್ತದೆ. 2016ರವರೆಗೂ ಶೇ.70ರಷ್ಟು ಎಚ್‌-1ಬಿ ವೀಸಾಗಳನ್ನು ಭಾರತೀಯರೇ ಪಡೆದಿದ್ದಾರೆ ಎನ್ನುತ್ತದೆ ಅಮೆರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ. ಔದ್ಯಮಿಕ ಅಂಕಿಅಂಶಗಳ […]

Read More

ಕೊರೊನೋತ್ತರ ಸುರಕ್ಷಿತ ಬದುಕಿಗೆ 16 ಸೂತ್ರಗಳು

– ಭವಿಷ್ಯದ ದಿನಗಳಲ್ಲಿ ನಮ್ಮ ಜೀವನ, ಚಿಂತನೆಗಳಲ್ಲೇ ಬಹುದೊಡ್ಡ ಬದಲಾವಣೆ ಆಗಬೇಕಿದೆ – ಹರಿಪ್ರಕಾಶ್ ಕೋಣೆಮನೆ. ಮಹಾಯುದ್ಧ ನಡೆದರೆ ಇಲ್ಲವೇ ಪ್ರಕೃತಿ ವಿಕೋಪದಿಂದ ರಾಷ್ಟ್ರದ ಭೌತಿಕ ಬದುಕು ಧ್ವಂಸವಾದರೆ ಮತ್ತೆ ಅಂಥ ರಾಷ್ಟ್ರಗಳು ಮರುನಿರ್ಮಾಣವಾಗಿರುವ ಕಥೆಗಳು ಇತಿಹಾಸದಲ್ಲಿ ಸಿಗುತ್ತವೆ. ಹಿರೋಷಿಮಾ, ನಾಗಸಾಕಿ ದುರಂತದಿಂದ ನಾಶವಾದ ಜಪಾನ್‌ನಿಂದ ಹಿಡಿದು, ತೀರಾ ಇತ್ತೀಚಿಗೆ ಭೂಕಂಪದಿಂದ ಸಂಪೂರ್ಣ ನೆಲಕಚ್ಚಿ ಹೋಗಿದ್ದ ನೇಪಾಳದಂಥ ರಾಷ್ಟ್ರಗಳು ಮತ್ತೆ ಎಲೆ ಎತ್ತಿ ನಿಂತಿರುವ ಬಗೆಯನ್ನು ಓದಿದ್ದೀರಿ, ಕಂಡಿದ್ದೀರಿ. ಆದರೆ, ಕೊರೊನಾ ಎಂಬ ಅಣುಗಾತ್ರದ ಅಗೋಚರ ಶತ್ರುವೊಬ್ಬ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top