
ಕೊರೊನಾ ಹಿನ್ನೆಲೆಯಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ವ್ಯವಸ್ಥೆಗಳಲ್ಲಿ ಶಿಕ್ಷಣವೂ ಪ್ರಮುಖವಾಗಿದೆ. ಮಕ್ಕಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ ಸ್ವತಃ ಸರಕಾರವೂ ಶಿಕ್ಷಣದ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಲು ಹೆಣಗಾಡುತ್ತಿದೆ. ಏರುತ್ತಿರುವ ಸೋಂಕಿನಿಂದಾಗಿ ಶಾಲೆಗಳನ್ನು ಸದ್ಯೋಭವಿಷ್ಯದಲ್ಲಿ ತೆರೆಯುವ ಸ್ಥಿತಿ ಇಲ್ಲ. ಸರಕಾರವೇ ಶಾಲೆ ತೆರೆಯಲು ಮುಂದಾದರೂ ಪೋಷಕರು ಕಳುಹಿಸಿಕೊಡುವ ಮನೋಸ್ಥಿತಿಯಲ್ಲಿಲ್ಲ. ಈ ನಡುವೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಪಾಠದ ಮೂಲಕ ತಮ್ಮ ವ್ಯವಸ್ಥೆಯನ್ನು ಮುಂದುವರಿಸಲು ಪ್ರಯತ್ನಿಸಿದವು. ಆದರೆ, ಸರಕಾರ ಅದಕ್ಕೂ ಕಡಿವಾಣ ಹಾಕಿದೆ. ಎಲ್‌ಕೆಜಿಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್ […]