ಅವರಿಗೆ ಪಂಡಿತ್​ಜಿ, ಇವರಿಗೇಕೆ ಭೀಮರಾವ್ ಎಂದಷ್ಟೇ ಕರೆದರು?

ಈ ಲೇಖನದ ತಲೆಬರಹ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಭಾಷಣದಿಂದ ಆಯ್ದುಕೊಂಡದ್ದು. ಈ ಪ್ರಶ್ನೆ ಮತ್ತು ಅದರೊಳಗಿನ ಅರ್ಥದ ಹಿನ್ನೆಲೆಯಲ್ಲಿ ಆಲೋಚನೆ ಮಾಡಿದರೆ ಈಗ ನಮಗೆ ಕಾಡುವ ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತದೆ.  ಭಾರತದ ಸಂವಿಧಾನಕ್ಕೆ ನೂರಾರು ಬಾರಿ ತಿದ್ದುಪಡಿ ಮಾಡಿದ ನಂತರ ಇದೀಗ ಅದೇ ವಿಚಾರ ಏಕಾಏಕಿ ಚರ್ಚೆಯ ಮುನ್ನೆಲೆಗೆ ಬಂದು ನಿಂತುಕೊಂಡಿದೆ. ಸಂವಿಧಾನದ ಆಶಯಗಳನ್ನು ಕಾಲಕಾಲಕ್ಕೆ ವ್ಯಾಖ್ಯಾನಿಸಿ ಅದರ ಮೂಲ ಆಶಯ ಸಂರಕ್ಷಿಸಬೇಕಾದ ಸುಪ್ರೀಂಕೋರ್ಟ್ ತೀರ್ಪು ಕೂಡ ದೇಶದಲ್ಲಿ ಹಿಂಸೆಯ ಜ್ವಾಲೆ ಉರಿಯಲು […]

Read More

ಅಂದು ವೀರೇಂದ್ರ ಪಾಟೀಲ್, ಇಂದು ಬಿಎಸ್​ವೈ, ಮುಂದ?

ಈಗಿನ ಸನ್ನಿವೇಶವನ್ನು ಅವಲೋಕಿಸಿದರೆ, ವೀರಶೈವ-ಲಿಂಗಾಯತಕ್ಕೆ ಸೂತ್ರಸಂಬಂಧ ಇಲ್ಲದವರು ಧರ್ಮ ಸ್ಥಾಪನೆಗೆ ಮುಂದಾಗಿರುವುದು ಕಾಣುತ್ತದೆ. ಈ ವಿಷಯವನ್ನು ಧರ್ಮ, ಸಂಸ್ಕೃತಿ, ಇತಿಹಾಸ, ಪುರಾಣಗಳ ತಳಹದಿಗಿಂತ ಹೆಚ್ಚಾಗಿ ರಾಜಕೀಯದ ಹಿನ್ನೆಲೆಯಿಂದ ನೋಡುವುದೇ ಉಚಿತ ಎನಿಸುತ್ತದೆ. ಸಿಎಂ ಸಿದ್ದರಾಮಯ್ಯನವರ ಆಸಕ್ತಿಯಂತೆ ಲಿಂಗಾಯತ ಧರ್ಮದ ಸ್ಥಾಪನೆಗೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿಕೊಂಡ ಮೇಲೆ ಹತ್ತು ಹಲವು ಟೀಕೆಗಳು ಕೇಳಿಬರುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಪೈಕಿ ಗಮನ ಸೆಳೆದ ಒಂದು ಹೇಳಿಕೆ- ಅಂದು ಎಲ್ಲ ಜಾತಿಗಳನ್ನೂ ಒಂದುಮಾಡಲು ಪ್ರಯತ್ನಪಟ್ಟರು […]

Read More

ರಾಜಕೀಯ ಅಸ್ಪೃಶ್ಯತೆ ತೊಳೆದುಕೊಂಡ ಈಶಾನ್ಯ!

ದೇಶದ ಮತದಾರ ರಾಜಕೀಯ ಪ್ರಬುದ್ಧತೆ ಮೆರೆಯುತ್ತಿದ್ದಾನೆ. ಜಾತಿ, ಮತ, ಪಂಥ, ಪ್ರದೇಶ ಮೀರಿದ ಪ್ರಜ್ಞಾವಂತಿಕೆ ತೋರುತ್ತಿದ್ದಾನೆ. ಹೀಗಾಗಿ ಕೋಮುವಾದಕ್ಕೆ ವಿರೋಧ, ಸೆಕ್ಯುಲರ್ ಸಿದ್ಧಾಂತದ ಪರ ಇತ್ಯಾದಿಗಳ ಹೆಸರಲ್ಲಿ ನಡೆಯುತ್ತಿದ್ದ ರಾಜಕೀಯ ಅಸ್ಪೃಶ್ಯತೆಯನ್ನು ತಿರಸ್ಕರಿಸುತ್ತಿದ್ದಾನೆ. ಇದಕ್ಕೆ ಉತ್ತಮ ಉದಾಹರಣೆ ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ. ಭಾರತದಲ್ಲಿ ಹಿಂದೆ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದವು ಎಂಬುದನ್ನು ನಾವು ಕೇಳಿದ್ದೇವೆ ಮತ್ತು ಓದಿದ್ದೇವೆ. ಕಾಲಾನಂತರದಲ್ಲಿ ಅಂಥ ಪದ್ಧತಿಗಳಿಗೆ ನಮ್ಮವರು ತಿಲಾಂಜಲಿ ಇಡುತ್ತ ಬಂದರು. ಅಂಥ ಅನಿಷ್ಟಗಳಲ್ಲಿ ಅಸ್ಪೃಶ್ಯತೆ ಆಚರಣೆ ಕೂಡ ಒಂದು. […]

Read More

ಗುಜರಾತ್ ಮಾದರಿ, ರಾಜ್ಯ ರಾಜಕೀಯ ಗರಿಗರಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ. ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ. ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ. ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು […]

Read More

ರಾಜಕಾರಣದಲ್ಲೂ ಟ್ರೆಂಡ್ ಸೆಟಿಂಗ್ ಸಾಧ್ಯವೇ, ಅದ್ಹೇಗೆ?

ಗುಜರಾತ್ ಇರಲಿ, ಹಿಮಾಚಲವಿರಲಿ ಅಥವಾ ಕರ್ನಾಟಕವೇ ಇರಲಿ, ರಾಷ್ಟ್ರ ರಾಜಕಾರಣದ ಟ್ರೆಂಡ್ ಬಿಟ್ಟು ಫಲಿತಾಂಶ ಬೇರೆ ಆಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಸಮರ್ಥ ಪರ್ಯಾಯವನ್ನು ಬಿಂಬಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅದು ಮುಂದುವರಿಯುತ್ತಲೇ ಇರುತ್ತದೆ.  ಕಳೆದೊಂದು ವರ್ಷದಿಂದ ಕಾಡುತ್ತಿದ್ದ ಗುಜರಾತ್ ಚುನಾವಣೆ ಎಂಬ ಗುಮ್ಮ ಕರಗಿ ಮೂವತ್ತಾರು ಗಂಟೆ ಕಳೆದಿದೆ. ಚುನಾವಣಾಪೂರ್ವ ಸಮೀಕ್ಷೆ, ಮತಗಟ್ಟೆ ಸಮೀಕ್ಷೆಗಳೆಂಬ ಅಬ್ಬರಗಳೂ ತಣ್ಣಗಾಗಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗುವ ಖಚಿತ ಟ್ರೆಂಡ್​ನ ಧ್ಯಾನದಲ್ಲಿ ಎಲ್ಲರೂ ಮುಳುಗಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಮನದಲ್ಲಿ ಮೂಡಬಹುದಾದ ಆಲೋಚನೆಗಳೇನು […]

Read More

ಭಾರತದ ರಾಜಕಾರಣದ ದೆಸೆಯೇ ಹಾಗೆ!

ರಾಹುಲ್ ಗಾಂಧಿ ಬ್ರಾಹ್ಮಣರೋ, ಹಿಂದುವೋ, ಅಹಿಂದುವೋ, ರೋಮನ್ ಕ್ಯಾಥೋಲಿಕ್ ಕ್ರೖೆಸ್ತರೋ ಎಂಬ ಚರ್ಚೆ ಗೊತ್ತು. ಆದರೆ ಎಡಪಂಥೀಯ ವಿಚಾರಧಾರೆಯ ಜಾತ್ಯತೀತ ನಿಲುವಿನ ನೆಹರು ಇಂದಿರಾ ಪತಿ ಫಿರೋಜ್​ರಿಗೆ ಬ್ರಾಹ್ಮಣ್ಯದ ದೀಕ್ಷೆ ಕೊಟ್ಟಿದ್ದು ಗೊತ್ತೇ? ಇಲ್ಲಿ ಕೆಲವೊಮ್ಮೆ ವಿಷಯವೇ ಅಲ್ಲದ ವಿಷಯಗಳು ಮುಖ್ಯಭೂಮಿಕೆಗೆ ಬಂದು ಒಂದು ಸಾರ್ವತ್ರಿಕ ಚುನಾವಣೆಯ ದಿಕ್ಕು ಮತ್ತು ಭವಿಷ್ಯವನ್ನೇ ಬದಲಿಸಿಬಿಡುತ್ತವೆ. ಇದು ಇಂದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಿ. ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಅದೇ […]

Read More

ಅಮ್ಮನಿಂದ ಮಗನಿಗೆ ಹಸ್ತಾಂತರ, ನಂತರ…?

ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ದಿನಗಳು ಸಮೀಪಿಸುತ್ತಿವೆ. ಅವರ ಉತ್ತರಾಧಿಕಾರಿಯಾಗಿ ರಾಹುಲ್ ಗಾಂಧಿ ನೇಮಕ ಆಗುವುದೂ ನಿಚ್ಚಳವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇವೆರಡೂ ಘಟನೆಗಳು ಜರುಗಲು ಹೆಚ್ಚು ಕಾಲ ಹಿಡಿಯುವುದಿಲ್ಲ. ಸೋನಿಯಾ ನಿರ್ಗಮನ ಮತ್ತು ರಾಹುಲ್ ಆಗಮನ ಕ್ಷಣಗಳಿಗೆ ಬೆಂಗಳೂರಲ್ಲಿ ನಡೆಯುವ ಎಐಸಿಸಿ ಅಧಿವೇಶನವೇ ವೇದಿಕೆಯಾಗಲಿದೆ ಎಂಬುದು ಮತ್ತೊಂದು ವಿಶೇಷ. ಇದು ಕಾಕತಾಳೀಯವೋ ಏನೋ ಗೊತ್ತಿಲ್ಲ, ಸೋನಿಯಾ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೂ ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿತ್ತು. ಈಗ ಅವರು ನಿರ್ಗಮಿಸುವ […]

Read More

ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ದಾರಿ ಯಾವುದಯ್ಯ?

ಬಂಗಾಳದಲ್ಲಿ ನೂರಾರು ಕಾಂಗ್ರೆಸ್ಸಿಗರನ್ನು ಕೊಲೆ ಮಾಡಿದ ಕಮ್ಯುನಿಸ್ಟರು, ಮೇವು ಹಗರಣದ ಲಾಲೂ, 2-ಜಿ ಹಗರಣದ ಅಪಖ್ಯಾತಿಯ ಎ.ರಾಜಾ, ರಾಜೀವ್ ಹತ್ಯೆಯ ಕಳಂಕದ ಡಿಎಂಕೆ ಇಂಥವರ ಸಹವಾಸ, ಸ್ನೇಹಕ್ಕೆ ಕೈಚಾಚುವ ಕಾಂಗ್ರೆಸ್ಸನ್ನು ಆ ಭಗವಂತನೂ ಕಾಪಾಡಲಾರನೇನೋ! ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಬಹಳ ಅರ್ಥಪೂರ್ಣ ಅನಿಸಿತು. ಮೊದಲನೆಯದು ‘ಈ ಫಲಿತಾಂಶ ನಿರೀಕ್ಷಿತ’. ಎರಡನೆಯದು ‘ಇದರಿಂದ ಕರ್ನಾಟಕದ ಸರ್ಕಾರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗುವುದಿಲ್ಲ’. ಅವರು ಯೋಚನೆ ಮಾಡಿ ಮಾತನಾಡಿದರೋ ಅಥವಾ ತಕ್ಷಣಕ್ಕೆ ತೋಚಿದ್ದನ್ನು […]

Read More

ಅನುಕಂಪಕ್ಕಾಗಿ ಇಂಥ ಕಂಪನ ಸರಿಯೇ?

  ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತು ಅದೇ ವೇಳೆ ತನ್ನ ಪರ ಅನುಕಂಪ ಗಿಟ್ಟಿಸಿಕೊಳ್ಳುವ ಧಾವಂತದ ನಡುವೆ ಅಲ್ಪಸ್ವಲ್ಪ ನಂಬಿಕೆ ಉಳಿಸಿಕೊಂಡಿರಬಹುದಾದ ನ್ಯಾಯಾಂಗ ವ್ಯವಸ್ಥೆಗೇ ಕಳಂಕ ತರುತ್ತಿದ್ದೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತೆ ತೋರುತ್ತಿದೆ. ಕಾಂಗ್ರೆಸ್ ಯಾಕೆ ಇಂಥ ಪ್ರಮಾದವನ್ನು ಮತ್ತೆ ಮತ್ತೆ ಮಾಡುತ್ತಿದೆ? ಹತಾಶೆಯೇ, ಅಸಹಿಷ್ಣುತೆಯೇ, ಅಪ್ರಬುದ್ಧತೆಯೇ, ಅನುಕಂಪ ಗಿಟ್ಟಿಸಿಕೊಳ್ಳುವ ಅಗ್ಗದ ಆಲೋಚನೆಯೇ… ಯಾವುದು? ಈ ಎಲ್ಲವೂ ಮೇಳೈಸಿರುವಂತೆ ತೋರುತ್ತಿದೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹೈಕಮಾಂಡನ್ನು ಪ್ರಶ್ನೆ […]

Read More

ಅನುಕೂಲಸಿಂಧು ಮೈತ್ರಿಯಿಂದ ಲಾಭವಿದೆಯೇ?

ಮೈತ್ರಿ ಆಡಳಿತದ ಅಪಾಯ ಕಾಂಗ್ರೆಸ್​ಗೆ ಮಾತ್ರ ಎನ್ನುವ ಹಾಗಿಲ್ಲ. ಮೈತ್ರಿ ರಾಜಕೀಯದ ಫಲವಾಗಿ ವಾಜಪೇಯಿ ಪ್ರಧಾನಿಯಾದರು ನಿಜ. ಉತ್ತಮ ಆಡಳಿತವನ್ನೂ ನೀಡಿದರು. ಆದರೆ ಹೊಂದಾಣಿಕೆ ರಾಜಕಾರಣಕ್ಕಾಗಿ ಮೂಲ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದ ಬಿಜೆಪಿ ಭಾರಿ ಬೆಲೆ ತೆರಬೇಕಾಯಿತು. ಕಾಂಗ್ರೆಸ್ ನಾಯಕರು ಪದೇಪದೆ ಯಾಕಿಂಥ ತಪ್ಪು ಮಾಡುತ್ತಿದ್ದಾರೆ ಅನ್ನುವುದೇ ಬಿಡಿಸಲಾಗದ ಒಗಟು. ಈ ಪರಿ ಸ್ವಂತಿಕೆ ಬಿಟ್ಟು ಮೈತ್ರಿ ಮಾಡಿಕೊಂಡು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದು ತೀರಲೇಬೇಕೆಂಬ ದರ್ದಾದರೂ ಏನಿತ್ತು? ಎಲ್ಲೋ ಒಂದುಕಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top