ರೈತಹೋರಾಟಕ್ಕೆ ಸುಪ್ರೀ ಬಲ,ಹಾಗದರೆ‌ ಇಂದು ತೀರ್ಪೇನಾಗತ್ತೆ?

ಸಿಎಂ ಬಿಎಸ್ ವೈ ಸಂಪುಟ ಸಸ್ಪೆನ್ಸ್ ಬಹಿರಂಗಕ್ಕೆ ಕ್ಷಣಗಣನೆ ಜ.15ರಿಂದ ಪದವಿ ತರಗತಿಗಳಿಗೂ ಮುಹೂರ್ತ ಸಾರ್ವತ್ರಿಕ ಲಸಿಕೆಗೆ ಇನ್ನು ಮೂರೇ ದಿನ ಬಾಕಿ ಅಶಿಸ್ತಿನ ಕಾಂಗ್ರೆಸ್ ನಾಯಕರಿಗೆ ರವಾನಿಸಿರುವ‌ ಖಡಕ್‌ ಸಂದೇಶ ಏನು? ಗೃಹಿಣಿ ಮನೆಯಲ್ಲಿ ಮಾಡುವ ಕೆಲಸ ಕಚೇರಿ ಕೆಲಸಕ್ಕಿಂತ ಕಡಿಮೇನಾ? ಸ್ವಾಮಿ ವಿವೇಕಾನಂದ ಜಯಂತಿ ವಿಶೇಷ  

Read More

ಶರಾವತಿಗೆ ಮತ್ತೆ ಕಂಟಕ

– ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ | ಕಣಿವೆಯ ಒಡಲು ಕೊರೆದು ಸಮೀಕ್ಷೆ. ವಿವೇಕ ಮಹಾಲೆ, ಶಿವಮೊಗ್ಗ. ಹಲವಾರು ಯೋಜನೆಗಳ ಭಾರ ಹೇರಿಕೊಂಡು ನಲುಗುತ್ತಿರುವ ಶರಾವತಿ ಕಣಿವೆಗೆ ಮತ್ತೊಂದು ಕಂಟಕ ಎದುರಾಗಿದೆ. ಕಳೆದ ವರ್ಷವಷ್ಟೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ ವಿರುದ್ಧ ಧ್ವನಿ ಎತ್ತಿದ್ದ ಇಲ್ಲಿನ ಜನ ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಬೆಂಗಳೂರಿಗೆ ನೀರು ಹರಿಸುವ ಯೋಜನೆ ಕೈಬಿಟ್ಟಿದ್ದ ರಾಜ್ಯ ಸರಕಾರ ಈಗ ಮತ್ತೊಂದು ಯೋಜನೆ ಮೂಲಕ ಆತಂಕ ಮೂಡಿಸಿದೆ. ಪಶ್ಚಿಮಘಟ್ಟದ ಹೃದಯ ಭಾಗವಾಗಿರುವ ಶರಾವತಿ ಕಣಿವೆಯಲ್ಲಿ […]

Read More

ರಾಜಕೀಯ ಚಟುವಟಿಕೆಗೆ ವೈರಸ್ ಕಾಟ – ದಾಳ ಉರುಳಿಸುವ ಆಟ ಇಲ್ಲ, ಕಾಲೆಳೆಯುವ ಕಬಡ್ಡಿಯೂ ಇಲ್ಲ, ಏನಿದ್ದರೂ ಟೆಸ್ಟ್ ಮ್ಯಾಚ್ ಪರ್ವ

– ಶಶಿಧರ ಹೆಗಡೆ. ರಾಜಕೀಯ ಯಾವತ್ತೂ ನಿಂತ ನೀರಲ್ಲ. ಜಡ್ಡು ಗಟ್ಟಿದ ವ್ಯವಸ್ಥೆಯಲ್ಲೂ ಇದೊಂದು ವಲಯ ಗತಿಶೀಲವಾಗಿರುತ್ತದೆ. ರಾಜಕಾರಣದೊಂದಿಗೆ ಮಹತ್ವಾಕಾಂಕ್ಷೆಯೂ ತಳುಕು ಹಾಕಿಕೊಂಡಿರುತ್ತದೆ. ಅದು ರಾಜಕಾರಣದಲ್ಲಿ ತೊಡಗಿಸಿಕೊಂಡವರನ್ನು ಚಟುವಟಿಕೆಯಿಂದ ಇಡುತ್ತದೆ. ಇದರ ನಡುವೆ ರಾಜಕಾರಣದಲ್ಲಿ ಧಡಕಿಯಾಗುವುದೂ ಸರ್ವೇಸಾಮಾನ್ಯ. ಪರಸ್ಪರ ಟೀಕೆ, ಟಿಪ್ಪಣಿಯಿಲ್ಲದಿದ್ದರೆ ರಾಜಕಾರಣಿಗಳಿಗೂ ತಿಂದದ್ದು ಪಚನವಾಗುವುದಿಲ್ಲ. ‘ಕುಶಾಲಿ’ಗಾದರೂ ಎದುರಾಳಿಯ ವಿರುದ್ಧ ದೋಷಾರೋಪ ಹೊರಿಸಿ ತಮ್ಮವರ ವಲಯದಲ್ಲಿ ಕುಶಾಲುತೋಪು ಹಾರಿಸದಿದ್ದರೆ ರಾಜಕಾರಣಿಗಳಿಗೆ ನಿದ್ದೆಯೂ ಬಾರದು. ರಾಜಕಾರಣ ಎನ್ನುವುದೇ ಒಂದು ಬಗೆಯ ಮಾಯೆ. ಈ ಮಾಯಾಲೋಕದಲ್ಲಿ ಇರುವವರು ಅಗೋಚರ ಶಕ್ತಿಯನ್ನು […]

Read More

ಇದು, ಎಪಿಎಂಸಿ ಮುಚ್ಚುವ ಹುನ್ನಾರ – ಸಿದ್ದರಾಮಯ್ಯ

– ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ‘ಮನೆ ಮಾಡೇ ಗರತಿ ಎಂದರೆ ಮೆಲ್ಲಗೆ ಮನೆಯೊಳಗೆ ಬಂದು ಮನೆನೇ ಮಾರಿದ್ಲಂತೆ…’ ಎಂಬ ಗಾದೆ ಮಾತನ್ನು ನಮ್ಮೂರ ಕಡೆ ಜನ ಹೇಳ್ತಿರ್ತಾರೆ. ಹಾಗಾಗಿದೆ ದೇಶದ ಸ್ಥಿತಿ. ಕೊರೊನಾ ವೈರಸ್‌ ದಾಳಿಯಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿ ನರಳುತ್ತಿರುವ ನಮ್ಮ ರೈತ ಬಂಧುಗಳು ‘ನಮ್ಮನ್ನು ರಕ್ಷಿಸಿ, ಉಳಿಸಿ’ ಎಂದು ಗೋಗರೆಯುತ್ತಿರುವಾಗ, ಕೇಂದ್ರ ಸರಕಾರ ಅವರ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳನ್ನು ನಾಶ ಮಾಡಲು […]

Read More

ಎಪಿಎಂಸಿಗಾಗಿ ಹೋರಾಟ – ಸುಗ್ರೀವಾಜ್ಞೆ ಜಾರಿಗೆ ತಂದರೆ 18ರಿಂದ ಬಂದ್‌ ಎಚ್ಚರಿಕೆ

– ಸುಗ್ರೀವಾಜ್ಞೆ ಜಾರಿಗೆ ತಂದರೆ 18ರಿಂದ ಬಂದ್‌ ಎಚ್ಚರಿಕೆ – ಸರಕಾರದ ಮೇಲೆ ಒತ್ತಡ, ಇಂದು ಸಂಪುಟದಲ್ಲಿ ಚರ್ಚೆ ವಿಕ ಸುದ್ದಿಲೋಕ ಬೆಂಗಳೂರು ಎಪಿಎಂಸಿ ಕಾಯಿದೆ ತಿದ್ದುಪಡಿ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಕಾಣಿಸಿಕೊಂಡಿದೆ. ಈ ನಡುವೆ, ರಾಜ್ಯ ಸರಕಾರವು ಕೇಂದ್ರದ ಒತ್ತಡಕ್ಕೆ ಮಣಿದು ಅವಸರದಿಂದ ಕಳುಹಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಬುಧವಾರ ವಾಪಸ್‌ ಕಳಿಸಿದ್ದಾರೆ. ಗುರುವಾರ ಸಂಪುಟದಲ್ಲಿ ಚರ್ಚೆ ನಡೆಸಿಯೇ ಸುಗ್ರೀವಾಜ್ಞೆಯನ್ನು ಅಂತಿಮಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಸರಕಾರದ ನಡೆ ಕುತೂಹಲ ಮೂಡಿಸಿದೆ. ಬುಧವಾರ ಎಪಿಎಂಸಿ ವರ್ತಕರು ರಾಜ್ಯದ ಬಹುತೇಕ […]

Read More

ಎಪಿಎಂಸಿ ದುರ್ಬಲವಾದರೆ ರೈತರಿಗೆ ಸಂಕಷ್ಟ

ಕೃಷಿ ಮಾರುಕಟ್ಟೆಯನ್ನು ಬಲಪಡಿಸಲು ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿರುವ ಸಲಹೆ ಈಗ ವಿವಾದ ಸೃಷ್ಟಿಸಿದೆ. ಇದರ ಸಾಧ್ಯತೆ- ಅಪಾಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು 2017ರ ‘ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯಿದೆ’ಯನ್ನು (ಎಪಿಎಂಎಲ್ ಕಾಯಿದೆ) ಜಾರಿಗೊಳಿಸಲು ಕೇಂದ್ರ ಸರಕಾರ ನೀಡಿರುವ ಸಲಹೆಯನ್ನು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗುಜರಾತ್ ಅನುಸರಿಸಿವೆ. ಉತ್ತರ ಪ್ರದೇಶ ಪ್ರಯತ್ನಿಸುತ್ತಿದೆ. ಇದರಿಂದ ಖಾಸಗಿ ವಲಯದ ಕಂಪನಿಗಳೂ ಎಪಿಎಂಸಿ […]

Read More

ಎಪಿಎಂಸಿ ಉಳಿಸಿ

– ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಸುಗ್ರೀವಾಜ್ಞೆ ರಾಜ್ಯಪಾಲರ ಅಂಗಳಕ್ಕೆ – ಮಧ್ಯವರ್ತಿಗಳು-ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ, ರೈತರಿಗೆ ನಷ್ಟದ ಆತಂಕ – ರೈತ ನಾಯಕ ಯಡಿಯೂರಪ್ಪ ಸರಕಾರ ಕೇಂದ್ರದ ಒತ್ತಡಕ್ಕೆ ಮಣಿಯದಿರಲಿ ಎಂಬ ಆಗ್ರಹ – ಶಶಿಧರ ಹೆಗಡೆ, ಬೆಂಗಳೂರು ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರಕಾರವು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿದ್ದು, ಇದು ಈಗಾಗಲೇ ರಾಜ್ಯಪಾಲರ ಅಂಗಳ ತಲುಪಿದೆ. ಇದು ಜಾರಿಗೆ ಬಂದರೆ ರೈತರು ಬೆಳೆದ ಬೆಳೆಗೆ ಆಧಾರಸ್ತಂಭವಾಗಿರುವ ಎಪಿಎಂಸಿ ವ್ಯವಸ್ಥೆಯೇ ಕುಸಿದು ಬೀಳಲಿದೆ. ಭವಿಷ್ಯದಲ್ಲಿ ರೈತರಿಗೆ […]

Read More

ಪ್ರತಿಪಕ್ಷಗಳ ಸಂಘಟಿತ ಕೊರೊನಾ ಹೋರಾಟ

ಹೋರಾಟ ಕೊರೊನಾ ವಿರುದ್ಧವೋ, ರಾಜ್ಯ ಸರಕಾರಕ್ಕೆ ಚುರುಕು ಮುಟ್ಟಿಸಲೋ? – ಶಶಿಧರ ಹೆಗಡೆ ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಇದು ಸೃಷ್ಟಿ ಸಹಜವಾದ ಕರಾರುವಾಕ್‌ ಕ್ರಿಯೆ. ರಾಜಕಾರಣ ಹಾಗಲ್ಲ. ರಾಜಕಾರಣದ ದಿಕ್ಕು ಯಾವಾಗ ಬೇಕಾದರೂ ಬದಲಾಗಬಹುದು. ಯಾವ ತಿರುವನ್ನಾದರೂ ಪಡೆಯಬಹುದು. ಅದರಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆ ಹಾಗೂ ಲೋಕಕಲ್ಯಾಣವೂ ಮಿಳಿತವಾಗಿರುತ್ತದೆ. ಹಾವು, ಮುಂಗುಸಿಯಂತೆ ದ್ವೇಷ ಸಾಧಿಸಿದವರು ರಾತ್ರಿ ಬೆಳಗಾಗುವುದರ ಒಳಗೆ ಮಗ್ಗಲು ಬದಲಿಸಿ ಪರಸ್ಪರರ ಹೆಗಲ ಮೇಲೆ ಕೈಹಾಕಿಕೊಳ್ಳಬಹುದು. ಇಂತಹ ಮಜಕೂರಿಗಳು ರಾಜಕಾರಣದಲ್ಲಿ ಮಾತ್ರ […]

Read More

ಬಿಎಸ್‌ವೈ ಎದುರು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಸವಾಲು

ರಾಜ್ಯಕಾರಣ : ಬಿಎಸ್‌ವೈ ಎದುರು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಸವಾಲು – ಶಶಿಧರ ಹೆಗಡೆ. ರಾಮರಾಜ್ಯ ನಿರ್ಮಾಣವೆನ್ನುವುದು ಸುಂದರ ಕನಸು. ವಾಸ್ತವದಲ್ಲಿ ರಾಮರಾಜ್ಯ ಕಟ್ಟಿ ನಿಲ್ಲಿಸುವುದು ಸುಲಭ ಸಾಧ್ಯವಲ್ಲ. ಆದರೆ, ಅಧಿಕಾರದ ಗದ್ದುಗೆಯೇರಿದವರಿಗೆ ದೂರ­ದರ್ಶಿತ್ವ ಅವಶ್ಯಕ. ರಾಮನಂತೆ ರಾಜ್ಯವಾಳಲು ಆಗದಿದ್ದರೂ ತುಘಲಕ್‌ ದರ್ಬಾರು ಸಲ್ಲ ಎಂಬ ವಿವೇಕ ಜಾಗೃತವಾಗಿರಬೇಕು. ಯಾಕೆಂದರೆ ಶ್ರೀರಾಮ ಯಾವತ್ತಿಗೂ ರಾಜಾರಾಮ ಎನಿಸಿ­ಕೊಂಡಿದ್ದ. ಪ್ರಜಾರಂಜಕನೂ ಆಗಿದ್ದ ರಾಮ ಭಾರತೀಯ ಪರಂಪರೆಯಲ್ಲಿ ಆದರ್ಶಪ್ರಾಯ ವ್ಯಕ್ತಿ. ನಮ್ಮ ಮುಂದಿರುವ ಉತ್ಕೃಷ್ಟ ಪ್ರತಿಮೆ ರಾಮನಾದರೆ ಲಂಗುಲಗಾಮಿಲ್ಲದ ನಿರ್ಧಾರ ಕೈಗೊಂಡು ಪ್ರಜಾಪೀಡಕನೆನಿಸಿದ್ದವನು […]

Read More

ಹೊಸ ಸರ್ಕಾರ ಮತ್ತು ಆ ಹದಿನೈದು ಪ್ರಶ್ನೆಗಳು

ಹೌದು… ರಾಜಕೀಯವೇ ಹೊಲಸು ಅನ್ನುತ್ತಾರೆ, ಅದು ಈಗ ಮತ್ತಷ್ಟು ಕದಡಿದಂತೆ ಭಾಸವಾಗುತ್ತಿದೆ. ಅದಕ್ಕೆ ಕಾರಣಗಳು ಹಲವು! ಆದರೆ ಇಲ್ಲೊಂದು ಪ್ರಶ್ನೆಯನ್ನು ನಾವು ಸಹಜವಾಗಿ ಕೇಳಿಕೊಳ್ಳಲೇಬೇಕಿದೆ. ಅದೇನೆಂದರೆ ನಾವೆಷ್ಟೇ ಬೈದರೂ, ಬೇಡವೆಂದರೂ ರಾಜಕೀಯವನ್ನು ಬಿಟ್ಟು ನಾವು ಬದುಕಬಹುದೇ? ಖಂಡಿತವಾಗಿ ಹೌದು ಎಂಬ ಉತ್ತರವನ್ನು ಕೊಡಲು ಸಾಧ್ಯವೇ ಇಲ್ಲ. ಕಾರಣ ಇಷ್ಟೆ, ರಾಜಕೀಯ ನಮ್ಮ ದೇಶದ ವ್ಯವಸ್ಥೆಯ ಅವಿಭಾಜ್ಯ ಅಂಗ. ನಾವೂ ಕೂಡ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಆ ವ್ಯವಸ್ಥೆಯ ಭಾಗವೇ ಆಗಿದ್ದೇವೆ. ಆದ್ದರಿಂದ ಈಗಲೂ ನಾವು ಧನಾತ್ಮಕವಾಗಿ ಆಲೋಚನೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top