ಗುಜರಾತ್ ಮಾದರಿ, ರಾಜ್ಯ ರಾಜಕೀಯ ಗರಿಗರಿ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಫಲಿತಾಂಶ ಪಡೆದಿರುವುದು ಗೊತ್ತೇ ಇದೆ. ಅನಿರೀಕ್ಷಿತ ಫಲಿತಾಂಶ ಎಂದು ಉದ್ಗರಿಸಿದ ತಕ್ಷಣ ಪ್ರಮುಖವಾಗಿ ಎರಡು ಪ್ರಶ್ನೆಗಳು ಏಳುವುದು ಸಹಜ. ಗುಜರಾತಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಸಂಭವ ಇರಲಿಲ್ಲವೇ ಎಂಬ ಒಂದು ಅರ್ಥವನ್ನು ಈ ಪ್ರಶ್ನೆ ಧ್ವನಿಸಿದರೆ, ಬಿಜೆಪಿ ಇದಕ್ಕೂ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಿತ್ತೇ ಎಂಬ ಅರ್ಥವನ್ನೂ ಹೊರಹೊಮ್ಮಿಸುತ್ತದೆ. ವಾಸ್ತವದಲ್ಲಿ ಇವೆರಡೂ ಸಂಗತಿಗಳು ಸಹ ನಿಜವೆ. ಈಗ ಮೊದಲನೆಯ ಅಂಶವನ್ನು ಅವಲೋಕಿಸೋಣ. ಬಿಜೆಪಿ ಗುಜರಾತಲ್ಲಿ ಸರಳ ಬಹುಮತವನ್ನು ಗಳಿಸಲು […]

Read More

ಆಲೋಚನೆ, ಆಚರಣೆಯಲ್ಲಿ ಭ್ರಷ್ಟತೆಯೇ ತುಂಬಿರುವಾಗ…

ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ. ಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ […]

Read More

ಮುಜುಗರಕ್ಕೆ ಮತ್ತೊಂದು ಸೇರ್ಪಡೆ?

ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರಕ್ಕೆ ಮೀನಮೇಷ ನಡೆದಿದೆ. ಉಪಚುನಾವಣಾ ಕದನಕಣಕ್ಕೆ ಹೆದರಿ ಸರ್ಕಾರ ಇಂಥ ನಿಲುವಿಗೆ ಬಂದಿದೆ ಎಂಬ ಚರ್ಚೆಯೂ ಶುರುವಾಗಿದೆ. ಹಾಗಾದರೆ ಇದು ಸಿದ್ದು ಸರ್ಕಾರದ ಯಡವಟ್ಟುಗಳ ಸಾಲಿಗೆ ಹೊಸ ಸೇರ್ಪಡೆ ಆಗುವುದೇ? ಹಿಂದೆಯೂ ಸರ್ಕಾರ ಅನೇಕ ಪ್ರಕರಣಗಳಲ್ಲಿ ಎಡವಟ್ಟು ಮಾಡಿಕೊಂಡಿದ್ದಿದೆ. ಸರಿಯಾಗಿ ಹತ್ತು ವರ್ಷದ ನಂತರ ಮತ್ತೊಂದು ಅಂಥದ್ದೇ ಸನ್ನಿವೇಶ ನಿರ್ವಣವಾಗಿದೆ! ಪಾತ್ರಧಾರಿಗಳು ಅದಲುಬದಲು ಅಷ್ಟೇ. ಅಂದು ಸಿದ್ದರಾಮಯ್ಯ. ಇಂದು ಶ್ರೀನಿವಾಸ ಪ್ರಸಾದ್. ದೇವೇಗೌಡರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿದರು ಎಂಬ ಕಾರಣಕ್ಕೆ ಬಂಡಾಯ ಸಾರಿ […]

Read More

ಸಿದ್ದರಾಮಯ್ಯ ದರಬಾರಿನಲ್ಲಿ ಕಾಡಿದ ಪಟೇಲರ ನೆನಪು

ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಮಾನವೀಯತೆಯ ದೃಷ್ಟಿಕೋನವಲ್ಲದೆ ಅದಕ್ಕೊಂದು ಆಡಳಿತಾತ್ಮಕ ಮುಖವೂ ಇದೆ. ಘಟನೆ ನಡೆದುಹೋದ ಬಳಿಕವೂ ಎಚ್ಚೆತ್ತುಕೊಳ್ಳದೆ, ವಿವೇಚನೆಯಿಂದ ಪ್ರಕರಣ ನಿಭಾಯಿಸದೇ ಇರುವುದು ಸರ್ಕಾರ ಗಾಢಾಂಧಕಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿ ಎನ್ನಬಹುದು. ಸರ್ಕಾರಗಳ ಸ್ಥಿರತೆ-ಅಸ್ಥಿರತೆ ಕುರಿತು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಹೇಳಿದ ಉಪಮೆಯೊಂದು ಬಹಳ ಮಜವಾಗಿದೆ. ಆ ಸಂದರ್ಭವನ್ನು ನೆನೆಸಿಕೊಂಡರೆ ಈಗಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಆಗ ರಾಷ್ಟ್ರ ರಾಜಕಾರಣದಲ್ಲಾದ ಹಠಾತ್ ಬೆಳವಣಿಗೆಯ ಕಾರಣ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ದೇವೇಗೌಡರು ದೇಶದ ಪ್ರಧಾನಿ ಆಗಿ ಪ್ರಮೋಷನ್ […]

Read More

ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ದಾರಿ ಯಾವುದಯ್ಯ?

ಬಂಗಾಳದಲ್ಲಿ ನೂರಾರು ಕಾಂಗ್ರೆಸ್ಸಿಗರನ್ನು ಕೊಲೆ ಮಾಡಿದ ಕಮ್ಯುನಿಸ್ಟರು, ಮೇವು ಹಗರಣದ ಲಾಲೂ, 2-ಜಿ ಹಗರಣದ ಅಪಖ್ಯಾತಿಯ ಎ.ರಾಜಾ, ರಾಜೀವ್ ಹತ್ಯೆಯ ಕಳಂಕದ ಡಿಎಂಕೆ ಇಂಥವರ ಸಹವಾಸ, ಸ್ನೇಹಕ್ಕೆ ಕೈಚಾಚುವ ಕಾಂಗ್ರೆಸ್ಸನ್ನು ಆ ಭಗವಂತನೂ ಕಾಪಾಡಲಾರನೇನೋ! ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಬಹಳ ಅರ್ಥಪೂರ್ಣ ಅನಿಸಿತು. ಮೊದಲನೆಯದು ‘ಈ ಫಲಿತಾಂಶ ನಿರೀಕ್ಷಿತ’. ಎರಡನೆಯದು ‘ಇದರಿಂದ ಕರ್ನಾಟಕದ ಸರ್ಕಾರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗುವುದಿಲ್ಲ’. ಅವರು ಯೋಚನೆ ಮಾಡಿ ಮಾತನಾಡಿದರೋ ಅಥವಾ ತಕ್ಷಣಕ್ಕೆ ತೋಚಿದ್ದನ್ನು […]

Read More

ರಾಜಕಾರಣದಲ್ಲಿ ಜಾತಿ ಸಮೀಕರಣವೇ ಎಲ್ಲ

ಸಿದ್ದರಾಮಯ್ಯ ಕುರ್ಚಿ ಭದ್ರ ಮಾಡಿಕೊಳ್ಳಲು ಇತ್ತೀಚಿನ ಪರಿಷತ್ ಚುನಾವಣೆಯೂ ಅನುಕೂಲಕ್ಕೆ ಬಂತು. ಅದರ ಜೊತೆಗೆ ಮುನಿಯಪ್ಪ, ಮೊಯ್ಲಿ, ಪರಮೇಶ್ವರ್, ಖರ್ಗೆ ತವರಲ್ಲಿ ಕಾಂಗ್ರೆಸ್​ಗೆ ಆದ ಹಿನ್ನಡೆ ದಲಿತ ಸಿಎಂ ಗದ್ದಲವನ್ನು ಬದಿಗೆ ಸರಿಸಿತು.ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ ಹೀಗೂ ಉಂಟೇ ಅಂತ! ರಾಜಕೀಯದಲ್ಲಾದರೆ ಜಾತಿಗೀತಿ ಲಾಬಿ ಎಲ್ಲ ಮಾಮೂಲು. ಬರಬರುತ್ತ ಅದು ಹೆಚ್ಚಾಗುತ್ತ ಹೋಗುತ್ತದೆಯೇ ಹೊರತೂ ಕಡಿಮೆ ಆಗುವ ಲಕ್ಷಣಗಳು ಯಾವ ರೀತಿಯಿಂದ ನೋಡಿದರೂ ಕಾಣಿಸುತ್ತಿಲ್ಲ. ಆದರೆ ನಮಗೆ ಅಚ್ಚರಿ ಆಗುವುದು ಪ್ರತಿಷ್ಠಿತ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಸಂದರ್ಭದಲ್ಲೂ […]

Read More

ಸಿದ್ದರಾಮಯ್ಯ ಅದೃಷ್ಟರೇಖೆಯೂ ಬೆಂಗಳೂರಿನ ಅಗ್ನಿಪರೀಕ್ಷೆಯೂ…

ಬಿಬಿಎಂಪಿ ಚುನಾವಣೆ ಒಂಥರಾ ಸಾರ್ವತ್ರಿಕ ಚುನಾವಣೆ ಇದ್ದಂತೆ. ಇದು ರಾಜ್ಯರಾಜಕಾರಣದ ದಿಕ್ಸೂಚಿಯೂ ಹೌದು. ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುವ ಸಾಧ್ಯತೆಯೂ ಹೆಚ್ಚು. ಈ ಎಲ್ಲ ಕಾರಣಗಳಿಗಾಗಿ ಈ ಚುನಾವಣೆ ಸಿಎಂ ಸಿದ್ದರಾಮಯ್ಯ ಪಾಲಿಗೆ ನಿಜವಾದ ಸವಾಲು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೃಷ್ಟದ ಕೈಚಳಕವನ್ನು ನಂಬುತ್ತಾರೋ ಇಲ್ಲವೋ? ಅದು ಬೇರೆ ವಿಚಾರ. ಆದರೆ ಅವರು ಈ ರಾಜ್ಯ ಕಂಡ ಮಹಾ ಅದೃಷ್ಟವಂತ ಮುಖ್ಯಮಂತ್ರಿ ಎಂಬುದರಲ್ಲಿ ಅನುಮಾನವಿಲ್ಲ. ರಾಜಕೀಯ ಏರಿಳಿತದ ಹಾದಿಯಲ್ಲಿ ಅನಿರೀಕ್ಷಿತ ತಿರುವಿನಲ್ಲಿ ಸಾಗಿ ಕಾಂಗ್ರೆಸ್ ಪಕ್ಷದ ಕದ ತಟ್ಟಿದ […]

Read More

ಎರಡು ವರ್ಷದ ಹೊತ್ತಿನಲ್ಲಿ ಎರಡು ಮಾತು

ಅರಸು ಚಿಂತನೆಯ ನೆರಳಲ್ಲಿ ಮತ್ತು ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ರಾಜಕೀಯದಲ್ಲಿ ಹಂತಹಂತವಾಗಿ ಮೇಲೇರಿ ಸಿಎಂ ಪಟ್ಟದವರೆಗೆ ತಲುಪಿದ ಸಿದ್ದರಾಮಯ್ಯ, ಅಧಿಕಾರದ ಉತ್ತರಾರ್ಧದಲ್ಲಾದರೂ ತಮ್ಮ ಮೂಲತನವನ್ನು ನೆನಪಿಸಿಕೊಂಡು ಆಡಳಿತದಲ್ಲಿ ಸ್ವಂತಿಕೆಯ ಛಾಪೊತ್ತುವರೇ? ಅಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ನಡೆಸಿದ ಪಾದಯಾತ್ರೆಯ ನೆನಪು ಈಗಲೂ ಹಚ್ಚಹಸಿರು. ರಾಜ್ಯ ರಾಜಕೀಯದ ಪಾಲಿಗೆ ಅದೇ ಪರಿವರ್ತನೆಯ ರಣಕಹಳೆ ಆದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿಡಿದಿದ್ದ ಗ್ರಹಣ ಬದಿಗೆ ಸರಿಯಲೂ ಅದೇ […]

Read More

ಮಾನ್ಯ ಮುಖ್ಯಮಂತ್ರಿಗಳೇ ಈ ಮಾತನ್ನೊಮ್ಮೆ ಕೇಳಿಸಿಕೊಳ್ಳುವಿರಾ?

ರಾಜಕಾರಣಿಗಳ ಬಗ್ಗೆ ಜನರಲ್ಲಿ ಯಾಕಿಷ್ಟು ಆಕ್ರೋಶ? ಮರಳುಗಾಡಿನಲ್ಲಿ ಓಯಸಿಸ್‍ನಂತೆ ರವಿಯಂತಹ ಒಬ್ಬ ದಕ್ಷ, ಜನಾನುರಾಗಿ ಅಧಿಕಾರಿ ಸಿಕ್ಕರೆ ಜನರು ಯಾಕಿಷ್ಟು ಆರಾಧಿಸುತ್ತಾರೆ ಮತ್ತು ಮನೆಮಗನಂತೆ ಪ್ರೀತಿಸುತ್ತಾರೆಂಬುದನ್ನು ಒಂದು ಕ್ಷಣವಾದರೂ ಆಲೋಚನೆ ಮಾಡುತ್ತೀರಾ ಮುಖ್ಯಮಂತ್ರಿಗಳೇ?  ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ… ಈ ಸಂದರ್ಭದಲ್ಲಿ ಬೇರಿನ್ನೇನನ್ನೂ ಬರೆಯುವ ಮನಸ್ಥಿತಿಯಲ್ಲಿ ನಾವಿಲ್ಲ್ಲ. ಇಲ್ಲಿ ನಾವು ಅಂದರೆ ಪತ್ರಕರ್ತ ಸಮುದಾಯದವರು. ದಕ್ಷ ಐಎಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ಡಿ.ಕೆ ರವಿ ಅವರ ಅಕಾಲಿಕ ಸಾವು ಉಂಟುಮಾಡಿರುವ ನೋವಿನ ಪರಿಣಾಮವದು. ಬಹುಶಃ ಬೇರೆ ಪತ್ರಕರ್ತರ ಮನಸ್ಥಿತಿಯೂ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top