ಕೊರೊನಾ ವೈರಸ್(ಕೋವಿಡ್ 19) ಹರಡುವುದನ್ನು ತಡೆಯಲು ಹೇರಲಾಗಿದ್ದ ಲಾಕ್‌ಡೌನ್ ಭಾಗಶಃ ತರೆವಿನೊಂದಿಗೆ ದೇಶ ಸಹಜ ಸ್ಥಿತಿಯತ್ತ ಮರಳುವ ಯತ್ನದಲ್ಲಿದೆ. ಇಷ್ಟೆಲ್ಲ ಬಿಗಿ ಕ್ರಮಗಳ ನಂತರವೂ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿಯನ್ನು ತಲುಪುತ್ತಿದೆ. ಕೊರೊನಾದಿಂದ 1500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸೋಂಕಿತರ ಪ್ರಮಾಣ ಏರುಗತಿಯಲ್ಲಿರುವಾಗಲೇ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಪ್ರಯತ್ನಕ್ಕೆ ಸರಕಾರ ಮುಂದಾಗಿರುವುದು ಎಲ್ಲೆಡೆ ಮತ್ತೊಂದು ಸುತ್ತಿನ ಆತಂಕ ಸೃಷ್ಟಿಸಿದೆ. ಸರಕಾರ ನೀಡಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ 14,800 ಜನರನ್ನು […]
Read More
ಲಾಕ್‌ಡೌನ್‌ನಿಂದ ಕೃಷಿಕರಿಗೆ ಸಂಕಷ್ಟವಾದ ಸಂದರ್ಭದಲ್ಲಿ, ಕೃಷಿಕರಿಗೆ ಕೃಷಿ ಚಟುವಟಿಕೆಗಳಿಗೆ ಹಾಗೂ ತಾವು ಬೆಳೆದ ಬೆಳೆಗಳ ಮಾರಾಟಕ್ಕೆ ಮುಕ್ತ ವಾತಾವರಣ ಕಲ್ಪಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಈ ಭರವಸೆ ಸಕಾಲದಲ್ಲಿ ಈಡೇರದೆ ಇರುವುದರಿಂದ ರೈತರು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಮಾರಾಟ ವ್ಯವಸ್ಥೆ ಸಿಗದೆ ಕೃಷಿಕರ ಸಂಕಟ ಮುಂದುವರಿದಿದೆ. ಸಾವಿರಾರು ರೈತರು ಸರಿಯಾದ ಬೆಲೆ ಇಲ್ಲ ಎಂಬ ಕಾರಣದಿಂದ ನಿಂಬೆ ಹಣ್ಣು, ಕಲ್ಲಂಗಡಿ ಸೇರಿದಂತೆ ಹಲವು ಬೆಳೆಗಳನ್ನು ಗದ್ದೆಯಲ್ಲೇ ಬಿಟ್ಟಿದ್ದಾರೆ. ಈರುಳ್ಳಿ […]
Read More
ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಭಾನುವಾರ ಒಂದೇ ದಿನ ಸುಮಾರು 12 ಸಾವಿರ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದು, ಮುಂದಿನ ಕೆಲ ದಿನಗಳಲ್ಲಿ ಒಂದು ಲಕ್ಷದಷ್ಟು ಮಂದಿ ಊರು ಬಿಡಬಹುದು ಎಂಬ ಅಂದಾಜಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಕಾರ್ಮಿಕರು ತಮ್ಮ ಹೆಂಡತಿ, ಮಕ್ಕಳೊಂದಿಗೆ ಬಂದು ಕೂತಿದ್ದಾರೆ. ಇವರನ್ನು ಯಾವುದೇ ಗೊಂದಲ, ಗದ್ದಲಗಳಿಲ್ಲದೆ ಊರಿಗೆ ಕಳುಹಿಸಲು ಸರಕಾರ ಹರಸಾಹಸ ಪಡುತ್ತಿದೆ. ಹಲವು ಸಂಸ್ಥೆಗಳು ಇವರಿಗೆ ಉಚಿತ […]
Read More
ಪೊಲೀಸರ ವಿಶ್ವಾಸಾರ್ಹತೆಗೆ ಧಕ್ಕೆ ತರುವಂಥ ಘಟನೆ ಕಲಬುರಗಿಯಲ್ಲಿ ನಡೆದಿದೆ. ಪ್ರತಿಷ್ಠಿತರು ಜೂಜಾಡಿ ಸಿಕ್ಕಿಬಿದ್ದರೂ ಅವರ ವಿರುದ್ಧ ಕೇಸು ದಾಖಲಿಸದೆ ಹಣವನ್ನು ಮಾತ್ರ ವಶಪಡಿಸಿಕೊಂಡು ಹೋಗಿರುವುದು, ಡಿವಿಆರ್ ಸಾಕ್ಷಿ ನಾಶ ಮಾಡಿರುವುದು, ಇಬ್ಬರು ಸಿಪಿಐಗಳು ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡಿರುವುದು ಗೊತ್ತಾಗಿದೆ. ಲಾಕ್‌ಡೌನ್ ಉಲ್ಲಂಘನೆ, ಜೂಜಾಟಗಳು ಅಪರಾಧಗಳಾದರೆ, ಪ್ರತಿಷ್ಠಿತರು ಎಂಬ ಹೆಸರಿನಲ್ಲಿ ಅದನ್ನು ಮುಚ್ಚಿಹಾಕಿರುವುದು ಮತ್ತಷ್ಟು ದೊಡ್ಡ ಅಪರಾಧ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಡ ಬಂದಿದೆ. ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ […]
Read More
ಲಾಕ್‌ಡೌನ್ ಸುದೀರ್ಘ ಕಾಲಕ್ಕೆ ಮುಂದುವರಿದರೆ, ಕೊರೊನಾ ಸೊಂಕಿನಿಂದ ಸಾಯುವವರಿಗಿಂತಲೂ ಹಸಿವಿನಿಂದ ಸಾಯುವವರ ಸಂಖ್ಯೆಯೇ ಅಧಿಕವಾಗಲಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋಟ್ಯಂತರ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಲಾಕ್‌ಡೌನ್‌ನಿಂದಾಗಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಕೂತಿದ್ದಾರೆ ಎಂದಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸುವ ಸಾವಿನ ದರ 0.25-0.5 ಶೇ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಕಡಿಮೆ. ಆದರೆ ಭಾರತದಂತಹ ದುಡಿಯುವ ಜನ ಇರುವ […]
Read More
ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅಲ್ಪ ಸಂಖ್ಯಾತ, ಖಾಸಗಿ ಶಾಲೆಗಳಿಗೆ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಂತಿಮ ಶರಾ ಬರೆದಿದೆ. ಇದರೊಂದಿಗೆ ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ನಡೆದುಕೊಂಡು ಬಂದಿದ್ದ ತಾರತಮ್ಯಕ್ಕೆ ಮಂಗಳ ಹಾಡಿದಂತಾಗಿದೆ. ಇನ್ನು ಮುಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿವಿಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಪದವಿ ಮತ್ತು ಸ್ನಾತಕೋತ್ತರ […]
Read More
ಕೊರೊನಾ ಸೋಂಕಿನ ಕಾರಣವಾಗಿ ಚೀನಾದಿಂದ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಸ್ಥಳಾಂತರವಾಗುವ ನಿರೀಕ್ಷೆ ಇದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತೆ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ರಾಜ್ಯಗಳಿಗೆ ಇವುಗಳ ಹೂಡಿಕೆಯನ್ನು ಆಕರ್ಷಿಸಲು ಸಮಗ್ರ ಯೋಜನೆಯನ್ನು ರೂಪಿಸಬೇಕು ಎಂದು ಮೋದಿಯವರು ತಿಳಿಸಿದ್ದಾರೆ. ಇದು ಒಂದು ಪೂರ್ವ ಸೂಚನೆ ಅಷ್ಟೇ. ಹೀಗಾಗುವ ಸಾಧ್ಯತೆ ನಿಚ್ಚಳವಾಗಿ ಕಾಣಿಸುತ್ತಿದೆ. ಯಾಕೆಂದರೆ ಇತ್ತೀಚೆಗೆ ಅಮೆರಿಕ, ಜಪಾನ್ ಮತ್ತಿತರ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ನಿರ್ಧರಿಸಿವೆ. ಜಪಾನ್ ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಯೋಜನೆಯನ್ನು […]
Read More
ಲಾಕ್‌ಡೌನ್ ಸಂದರ್ಭದಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಖಾಸಗಿ ಸಂಸ್ಥೆಗಳಿಗೆ ಸೂಚಿಸಿದ್ದ ಸರಕಾರ, ತನ್ನದೇ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ 416 ಜನರಿಗೆ ಸೇವೆಯಿಂದ ಮುಕ್ತಿ ನೀಡಿದೆ. ಮಧ್ಯಾಹ್ನ ಉಪಾಹಾರ ಯೋಜನೆಯಡಿ ರಾಜ್ಯದ ಎಲ್ಲ ಶೈಕ್ಷ ಣಿಕ ಜಿಲ್ಲೆ ಮತ್ತು ತಾಲೂಕು ಮಟ್ಟದ ಕಚೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೌಕರರನ್ನು ಮಾರ್ಚ್ 31ರ ನಂತರ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಇವರೆಲ್ಲರೂ ಸುಮಾರು 12 ವರ್ಷಗಳಿಂದ ಇಲ್ಲಿ ಕೆಲಸ […]
Read More
ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ಸರಕಾರಿ ಇಲಾಖೆಗಳ ಕೆಳ ಹಂತದ ಸಿಬ್ಬಂದಿಗೆ ರಾಜ್ಯ ಸರಕಾರ ಸೂಚಿಸಿದೆ. ಲಾಕ್‌ಡೌನ್ ಸಡಿಲಿಕೆಯಿಂದಾಗಿ ಒಂದೊಂದೇ ವಲಯಗಳು ಕಾರ್ಯಾರಂಭ ಮಾಡುವುದು ಅಗತ್ಯವಾಗಿದೆ. ಅದರಲ್ಲೂ ಅಗತ್ಯ ಸೇವೆಗೆ ಸಂಬಂಧಿಸಿದ 18 ಇಲಾಖೆಗಳ ಎಲ್ಲ ವೃಂದದ ನೌಕರರು ಕೆಲಸ ಆರಂಭಿಸುವುದು, ಮುಂದಿನ ದಿನಗಳ ಜನಜೀವನ ಸುಗಮವಾಗಿರಲು ಅನಿವಾರ‍್ಯವಾಗಿದೆ. ಯಾರ್ಯಾರು ಬಂದು ಕೆಲಸ ನಿರ್ವಹಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಈಗಾಗಲೇ ಆದೇಶ ನೀಡಿದ್ದಾರೆ. ಆದರೆ ಇದಕ್ಕೆ ಪೂರಕವಾದ ವ್ಯವಸ್ಥೆ ಮಾಡುವುದನ್ನು ಸರಕಾರ ಮರೆತಿದೆ. ಉದಾಹರಣೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ […]
Read More
ರಾಜ್ಯದ ಮಂಗಳೂರಿನಲ್ಲಿ, ಮುಂಬಯಿ- ಚೆನ್ನೈ ಮುಂತಾದ ಹಲವು ಕಡೆ ಕೋವಿಡ್ ಕಾಯಿಲೆಗೆ ಬಲಿಯಾದವರ ಮೃತದೇಹಗಳ ಅಂತಿಮ ಸಂಸ್ಕಾರಕ್ಕೆ ಕೆಲವರು ಸ್ಥಳೀಯ ನಿವಾಸಿಗಳು ಅಡ್ಡಿಪಡಿಸಿರುವುದು ವರದಿಯಾಗಿದೆ. ಮಂಗಳೂರಿನ ಹಲವು ಕಡೆ ಗ್ರಾಮಸ್ಥರು ಪ್ರತಿರೋಧ ಮಾಡಿದ್ದು, ಕಡೆಗೂ ಒಂದು ಕಡೆ ಹೇಗೋ ಅಂತ್ಯಕ್ರಿಯೆ ನಡೆದಿದೆ. ಮುಂದೆ ನಿಂತು ಸಂಸ್ಕಾರ ನಡೆಸಬೇಕಿದ್ದ ಶಾಸಕರೊಬ್ಬರು ಸಕಾರಣವಿಲ್ಲದೆ ಅಡ್ಡಿಪಡಿಸಿದ್ದಾರೆ. ಚೆನ್ನೈಯಲ್ಲಿ ಒಂದು ಕಡೆ ಕೋವಿಡ್‌ಗೆ ಬಲಿಯಾದ ನರರೋಗ ವೈದ್ಯರೊಬ್ಬರ ಶವವನ್ನು ಸುಡುವುದಕ್ಕೆ ಬಿಡದೆ, ಆಂಬುಲೆನ್ಸ್‌ನಲ್ಲಿದ್ದ ವೈದ್ಯರು ಸೇರಿದಂತೆ ಎಲ್ಲರ ಮೇಲೂ ದಾರುಣವಾಗಿ ಹಲ್ಲೆ ನಡೆಸಿದ […]
Read More