– ರಾಘವೇಂದ್ರ ಭಟ್, ಬೆಂಗಳೂರು: ದೇಶದಲ್ಲೇ ಮೊದಲ ಕೊರೊನಾ ಸಾವು ಸಂಭವಿಸಿದ್ದು ಕಲಬುರಗಿಯಲ್ಲಿ. ಮಾರ್ಚ್ 9ರಂದು ಮೊದಲ ಪ್ರಕರಣ ದಾಖಲಾಗಿ ಹಲವು ವಾರಗಳ ಕಾಲ ರಾಜ್ಯ ಸೋಂಕಿನ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಮುಂದಿನ ದಿನಗಳಲ್ಲಿ ಭಾರಿ ಅಪಾಯ ಕಾದಿದೆ ಎನ್ನುವ ಸಂಕೇತವೊಂದು ಆಗ ದೊರಕಿತ್ತು. ಆದರೆ, ರಾಜ್ಯದ ಸರಕಾರ, ಅಧಿಕಾರಿಗಳು ಮತ್ತು ಜನರ ಸಂಘಟಿತ ಪ್ರಯತ್ನದ ಫಲವಾಗಿ ದೇಶದಲ್ಲೇ ಕೊರೊನಾ ಅತ್ಯಂತ ನಿಯಂತ್ರಣದಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ಗುಜರಾತ್, ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ […]
Read More
ತಪ್ಪು ಯೋಧನದ್ದೋ ಪೊಲೀಸರದೋ? ತನಿಖೆಗೆ ಆದೇಶ – ಮಾಸ್ಕ್ ಧರಿಸದ ಕಮಾಂಡೊನ ಬಂಧನದ ವಿವಾದ ಸ್ಫೋಟ – ಬಂಧನ ಖಂಡಿಸಿ ಸಿಆರ್‌ಪಿಎಫ್‌ನಿಂದ ರಾಜ್ಯ ಡಿಜಿಪಿಗೆ ಪತ್ರ – ಯೋಧನ ಸೆರೆಗೆ ಕಾರಣ ಅನುಚಿತ ವರ್ತನೆ: ಪೊಲೀಸರ ಸಮರ್ಥನೆ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ಏ.23ರಂದು ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ಘಟಕದ ಯೋಧ ಮತ್ತು ಪೊಲೀಸ್ ಸಿಬ್ಬಂದಿ ನಡುವಿನ ಜಟಾಪಟಿ – ಯೋಧನ ಬಂಧನ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಆರ್‌ಪಿಎಫ್ […]
Read More
ಇಂದು ಶ್ರೀ ರಾಮಾನುಜಾಚಾರ್ಯ ಜಯಂತಿ – ವಿಜಯ್ ಹೆಮ್ಮಿಗೆ 11ನೇ ಶತಮಾನ ಕಂಡ ಅಪರೂಪದ ಸಂತ ಶ್ರೀ ರಾಮಾನುಜರು. ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದೆಂಬುದನ್ನು ಸಾರಿದವರು. ಕರ್ನಾಟಕಕ್ಕೂ ಆಗಮಿಸಿ ಸುಮಾರು 32 ವರ್ಷ ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯನ್ನು ಎಲ್ಲ ವರ್ಗದವರಿಗೂ ಪರಿಚಯಿಸಿದ ಸಂತರು. ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಸಮಾಜದಿಂದ ತೊಡೆದು ಹಾಕಿದ ಪ್ರಥಮ ಆಚಾರ್ಯರು ಇವರು. ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ […]
Read More
ಇಂದು ಶ್ರೀ ಶಂಕರಾಚಾರ್ಯ ಜಯಂತಿ. – ಸ್ವಾಮಿ ವೀರೇಶಾನಂದ ಸರಸ್ವತೀ, ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು. ಭಗವಾನ್ ಶ್ರೀ ರಾಮಕೃಷ್ಣರು ಹೇಳುತ್ತಾರೆ: ”ಲೋಕ ಶಿಕ್ಷಣ ಕಾರ್ಯವು ಯಾರೆಂದರೆ ಅವರಿಂದ ಸಾಧ್ಯವಿಲ್ಲ. ಅದಕ್ಕೆ ಜಗನ್ಮಾತೆಯ ಲೈಸೆನ್ಸ್ ಬೇಕು. ಅವಳು ಹಿಂದೆ ಶುಕದೇವನಿಗೆ, ನಾರದರಿಗೆ, ಶ್ರೀ ಶಂಕರಾಚಾರ್ಯರಿಗೆ ಲೋಕಶಿಕ್ಷಣಕ್ಕೆ ಲೈಸೆನ್ಸ್ ನೀಡಿದ್ದಳು. ಈಗ ನರೇಂದ್ರ(ಮುಂದೆ ಸ್ವಾಮಿ ವಿವೇಕಾನಂದರು)ನಿಗೆ ನೀಡಿದ್ದಾಳೆ…” ಭಾರತೀಯ ದಾರ್ಶನಿಕರಲ್ಲಿ ಮುಕುಟಪ್ರಾಯರು, ವಿಶ್ವದ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬರೆನಿಸಿದ ಶಂಕರರು ಅನುಭಾವಿ ಸಂತ, ತತ್ತ್ವಜ್ಞಾನಿ, ಭಕ್ತ, ಸಮಾಜ ಸುಧಾರಕ, ಅದ್ಭುತ ಬರಹಗಾರ, […]
Read More
ರಾಜ್ಯದಲ್ಲಿ ಮೂರೇ ಹೊಸ ಪ್ರಕರಣ ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮೂವರು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 503ಕ್ಕೇರಿದೆ. ಬೆಂಗಳೂರು ನಗರದಲ್ಲಿ ಸೋಂಕಿತ ಮಹಿಳೆ ಭಾನುವಾರ ಕೊನೆಯುಸಿರೆಳೆದ್ದಾರೆ. ಕೆಲ ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಭಾನುವಾರ ಮಾತ್ರ ಅತಿ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ಕಂಡು ಬಂದಿರುವುದು ಕರ್ನಾಟಕದಲ್ಲಿ ನಿರಾಳ ಭಾವ ಮೂಡಿಸಿದೆ. ಕಲಬುರಗಿಯಲ್ಲಿ 2 ಹಾಗೂ ದಕ್ಷಿಣ ಕನ್ನಡದಲ್ಲಿ1 ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನ ಹಂಪಿನಗರದ ನಿವಾಸಿ, 45 ವರ್ಷದ ಮಹಿಳೆ ಚಿಕಿತ್ಸೆ […]
Read More
ರಾಜ್ಯದ ಸರಕಾರಿ ಸಿಬ್ಬಂದಿ ಪರಿಸ್ಥಿತಿ ಆಯೋಮಯ -ಕರ್ತವ್ಯಕ್ಕೆ ಹಾಜರಾಗಲು ಎಲ್ಲ ಇಲಾಖೆ ಸಿಬ್ಬಂದಿಗೆ ಸೂಚನೆ – ಆದರೆ ವಾಹನ ಸೌಲಭ್ಯ, ಸಾಮಾಜಿಕ ಅಂತರದ ವ್ಯವಸ್ಥೆ ಇಲ್ಲ – ಶಶಿಧರ ಹೆಗಡೆ, ಬೆಂಗಳೂರು. ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಚೇರಿ ಕರ್ತವ್ಯಕ್ಕೆ ಹಾಜರಾಗುವಂತೆ ನಾನಾ ಇಲಾಖೆಗಳ ಕೆಳ ಹಂತದ ಸಿಬ್ಬಂದಿಗಳಿಗೆ ರಾಜ್ಯ ಸರಕಾರ ಸೂಚಿಸಿದೆ. ಆದರೆ ಇದಕ್ಕೆ ಪೂರಕವಾಗಿ ಸರಕಾರ ಸೂಕ್ತ ವ್ಯವಸ್ಥೆ ಮಾಡಿಲ್ಲ. ಸಿಬ್ಬಂದಿ ಕಚೇರಿಗೆ ಬರಲು ವಾಹನ ಸೌಕರ್ಯವಿಲ್ಲ. ಜತೆಗೆ ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರ […]
Read More
– ಆರ್. ತುಳಸಿಕುಮಾರ್, ಬೆಂಗಳೂರು / ಸುನೀಲ್ ಕುಮಾರ್, ಕೋಲಾರ. ವಿಕ ವಿಶೇಷ: ದರ ಕುಸಿತದಿಂದ ಕಂಗಾಲಾಗಿರುವ ರೈತರೀಗ ಟೋಲ್ ಹೊಡೆತದಿಂದ ಕಂಗೆಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ವಾಹನಗಳ ಅಭಾವವಿರುವುದರ ನಡುವೆಯೇ, ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸುವ ಹೊರೆ ಬಿದ್ದಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗದಂತೆ ಕೇಂದ್ರ ಸರಕಾರವು ಟೋಲ್ ಸಂಗ್ರಹಕ್ಕೆ ತಾತ್ಕಾಲಿಕ ತಡೆಯೊಡ್ಡಿತ್ತು. ಇದು ರೈತರಿಗೆ ಅನುಕೂಲ ಮಾಡಿಕೊಟ್ಟಿತ್ತು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಮತ್ತಿತರ […]
Read More
-ಯಾವುದೇ ಕೋಮಿನ ನಾಯಕರ ಅತಿರೇಕದ ನಡವಳಿಕೆ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಈಗ ಇಲ್ಲ. – ಶಶಿಧರ ಹೆಗಡೆ, ಬೆಂಗಳೂರು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪಿತಾಮಹ ಎಂದರೆ ಕಾಂಗ್ರೆಸ್ ಪಕ್ಷ. ಅದರಲ್ಲೂ ಮುಸ್ಲಿಂ ತುಷ್ಟೀಕರಣದಲ್ಲಿ ಪುರಾತನ ಕಾಂಗ್ರೆಸ್ ಪಕ್ಷದ ಚರಿತ್ರೆ ‘ಕಿರೀಟಪ್ರಾಯ’ವಾದುದು. ಮುಲಾಯಂ, ಲಾಲೂ, ದೀದಿ, ನಿತೀಶ್ ಕುಮಾರ್‌ರಂಥವರು ಪ್ರವರ್ಧಮಾನಕ್ಕೆ ಬರುವ ಮೊದಲು ಮುಸಲ್ಮಾನರ ದಷ್ಟಿಯಲ್ಲಿ ಕಾಂಗ್ರೆಸ್ ಯಾವತ್ತಿಗೂ ಚಾಂಪಿಯನ್ ಆಗಿತ್ತು. ಆದರೆ, ಕಾಂಗ್ರೆಸ್ ಹೊರತಾಗಿಯೂ ದೇಶದ ರಾಜಕಾರಣದಲ್ಲಿ ತಮ್ಮನ್ನು ಆಧರಿಸುವವರು ಸಿಕ್ಕಾಗ ಮುಸಲ್ಮಾನರ ನಿಷ್ಠೆಯೂ ಮುಲಾಯಂ, ಲಾಲೂಗಳತ್ತ […]
Read More
12ನೆಯ ಶತಮಾನದಲ್ಲೇ ಸಮ ಸಮಾಜ, ಸರ್ವೋದಯದ ಸಮಾಜದ ಕನಸು ಕಂಡ ಬಸವಣ್ಣ ಕ್ರಾಂತಿಯನ್ನು ಮೊಳಗಿಸಿ, ಇಡೀ ಜಗತ್ತಿಗೇ ಬೆಳಕಾದರು. ಅಂದು ಬಸವಾದಿ ಶರಣರು ಬಿತ್ತಿದ ವಿಚಾರಗಳು ಇಂದಿನ ಸಮಸ್ಯೆಗಳಿಗೂ ಪರಿಹಾರವನ್ನು ಕಲ್ಪಿಸುವ ಆದರ್ಶದ ಮಾರ್ಗಗಳಾಗಿವೆ. ವರ್ತಮಾನದ ಬಿಕ್ಕಟ್ಟುಗಳು, ತಲ್ಲಣಗಳಿಗೆ ಬಸವಣ್ಣ ಹೇಗೆ ಪ್ರಸ್ತುತ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನಾಡನ್ನು ಕಟ್ಟುವ ಕಲ್ಯಾಣದ ಪ್ರಜ್ಞೆ ಬಸವಣ್ಣ – ಡಾ. ಬಿ.ವಿ.ವಸಂತಕುಮಾರ್ ಬಸವಣ್ಣ ಎಂಬುದು ಒಂದು ವ್ಯಕ್ತಿಯ ಹೆಸರು ಮಾತ್ರವಲ್ಲ, ಬಸವಣ್ಣ ಎಂಬುದು ಅವಿನಾಶಿಯಾದ ಅನಂತತೆಯ ಘನ ವ್ಯಕ್ತಿತ್ವವದ […]
Read More
ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕೊರೊನಾದಿಂದ ಒಟ್ಟೊಟ್ಟಿಗೆ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಲಾಕ್‌ಡೌನ್‌ನಿಂದ ಹತ್ತು ಹಲವು ಕಂಟಕಗಳು ಎದುರಾದವು. ನಿಜಕ್ಕೂ ಇದೊಂದು ಸವಾಲಿನ ಸನ್ನಿವೇಶ. ಇಂಥ ಸಂದರ್ಭದಲ್ಲಿ ನಮ್ಮ ಸಂಸದರು ಹೇಗೆ ಸ್ಪಂದಿಸಿದರು? ಜನರಿಗೆ ಹೇಗೆ ನೆರವಾದರು ಎಂಬುದರ ಕುರಿತು ವಿಕ ರಿಯಾಲಿಟಿ ಚೆಕ್ ನಡೆಸಿ ಸಂಸದರ ಸಾಧನೆಯನ್ನು ಪರಿಗಣಿಸಿ ಉತ್ತಮ, ಸಾಧಾರಣ, ಕಳಪೆಯೆನ್ನುವ ಗ್ರೇಡ್ ನೀಡಿದೆ. ಉತ್ತಮ: -ನಾರಾಯಣ ಸ್ವಾಮಿ ದಾಸೋಹ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. […]
Read More