(ಆತ್ಮ ನಿರ್ಭರ ಭಾರತ್ ಭಾಗ 3) ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ಕಾಲ್ನಡಿಗೆಯಲ್ಲೇ ಹಳ್ಳಿಗಳಿಗೆ ಸಾಮೂಹಿಕ ವಲಸೆ ಹೊರಟಾಗ ಸಂಕೀರ್ಣ ಸಮಸ್ಯೆಯ ಸರಣಿ ಉದ್ಭವಿಸಿತು. ಆತ್ಮನಿರ್ಭರ ಭಾರತ್ ಪ್ಯಾಕೇಜಿನ ಎರಡನೇ ಕಂತಿನಲ್ಲಿ ವಲಸಿಗರಿಗೆ ಆದ್ಯತೆ ನೀಡಲಾಗಿತ್ತು. ವಲಸಿಗರಿಗೆ ಉಚಿತ ಆಹಾರ ವ್ಯವಸ್ಥೆ ಸಕಾಲಿಕ. ಜತೆಗೆ ನೇರ ನಗದು ಕಲ್ಪಿಸಬೇಕು ಎನ್ನುತ್ತಾರೆ ತಜ್ಞರು. ಕೊರೊನಾ ಬಿಕ್ಕಟ್ಟಿನ ಪರಿಣಾಮ ನಗರ ಮತ್ತು ಪಟ್ಟಣಗಳಲ್ಲಿ ಹಠಾತ್ ಕೆಲಸ ಕಳೆದುಕೊಂಡು ಪರದಾಡಿದ ಕೋಟ್ಯಂತರ ವಲಸಿಗ ಕಾರ್ಮಿಕರು ಹಳ್ಳಿಗಳತ್ತ ಸಾಮೂಹಿಕ ವಲಸೆ ಹೋಗಿದ್ದಾರೆ. ವಲಸಿಗರಿಂದ ಕೊರೊನಾ ಹರಡುವ […]
Read More
ಭಾರತ ಜತೆ ನೇರವಾಗಿ ಮುಖಾಮುಖಿಯಾಗದ ಚೀನಾ ದೇಶವು ನೇಪಾಳ, ಪಾಕಿಸ್ತಾನಗಳ ಮೂಲಕ ಗಡಿಯಲ್ಲಿ ತಂಟೆಯನ್ನು ಜೀವಂತವಾಗಿಟ್ಟಿರುತ್ತದೆ. ಭಾರತದಲ್ಲಿರುವ ಗಡಿಗಳನ್ನು ತನ್ನದೆಂದು ನೇಪಾಳ ಹೊಸ ನಕಾಶೆಯನ್ನು ಬಿಡುಗಡೆ ಮಾಡಿದ್ದು, ಈ ನಡೆಯ ಹಿಂದೆ ಚೀನಾದ ಕುಮ್ಮಕ್ಕಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಭಾರತದ ಗಡಿಯಲ್ಲಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರಾ ಪ್ರದೇಶಗಳನ್ನು ತನ್ನದೆಂದು ಸಾಬೀತುಪಡಿಸಲು ಈ ಪ್ರದೇಶಗಳನ್ನು ಒಳಗೊಂಡ ಹೊಸ ರಾಜಕೀಯ ನಕಾಶೆಯನ್ನು ನೇಪಾಳ ಬಿಡುಗಡೆ ಮಾಡಿದೆ. ಈ ಮೂಲಕ ಭಾರತ ಮತ್ತು ನೇಪಾಳ ಮಧ್ಯೆ ಗಡಿ ಸಮಸ್ಯೆ ತಲೆದೋರಿದೆ. […]
Read More
ಹೊಸದಿಲ್ಲಿ: ಬಡ ಕುಟುಂಬಗಳ ಆರೋಗ್ಯ ರಕ್ಷಣೆಯ ಮಹಾತ್ವಾಕಾಂಕ್ಷೆಯೊಂದಿಗೆ 2018ರಲ್ಲಿಶುರುವಾದ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಚಿಕಿತ್ಸೆ ಪಡೆದ ಫಲಾನುಭವಿಗಳ ಸಂಖ್ಯೆ 1 ಕೋಟಿಯ ಮೈಲುಗಲ್ಲುದಾಟಿದೆ. 53 ಕೋಟಿ ಜನರು ಆಯುಷ್ಮಾನ್ ಕಾರ್ಡ್ ಪಡೆದುಕೊಂಡಿದ್ದಾರೆ. ದೇಶದ 21,565 ಆಸ್ಪತ್ರೆಗಳಲ್ಲಿಈ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಪಡೆದ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಟ್ವಿಟರ್ ಮೂಲಕ ಪ್ರಕಟಿಸಿ ಜನರ ಆರೋಗ್ಯ ರಕ್ಷಣೆ ಬಗ್ಗೆ ಸರಕಾರಕ್ಕಿರುವ ಆದ್ಯತೆಯನ್ನು ಇದು ತೋರಿಸುತ್ತದೆ […]
Read More
– ಲಾಕ್‌ಡೌನ್ ಮತ್ತಷ್ಟು ಸಡಿಲ | ಮೇ 25 ರಿಂದ ದೇಶೀಯ ವಿಮಾನ ಹಾರಾಟ – ಕೈಗಾರಿಕೆಗಳಿಗೆ 9.25% ಬಡ್ಡಿಯಲ್ಲಿ ಸಾಲ | ವಯೋವಂದನಾ ವಿಸ್ತರಣೆ. ಹೊಸದಿಲ್ಲಿ: ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯ ಭಾಗವಾಗಿ ಸರಕಾರ ಮತ್ತಷ್ಟು ಉಪಕ್ರಮಗಳನ್ನು ಪ್ರಕಟಿಸಿದೆ. ಇದರ ಭಾಗವಾಗಿ ಸೋಮವಾರದಿಂದ (ಮೇ 25) ದೇಶಾದ್ಯಂತ ದೇಶೀಯ ವಿಮಾನಗಳ ಸೇವೆ ಆರಂಭವಾಗಲಿದೆ. ‘‘ಹಂತ ಹಂತವಾಗಿ ವಿಮಾನಯಾನ ಆರಂಭವಾಗಲಿದೆ. ಈ ಬಗ್ಗೆ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಏರ್‌ಪೋರ್ಟ್‌ಗಳಿಗೆ ಮಾಹಿತಿ ನೀಡಿ, ಸೋಮವಾರದ ವೇಳೆಗೆ ಹಾರಾಟಕ್ಕೆ […]
Read More
ಸಣ್ಣ ಮತ್ತು ಮಧ್ಯಮ ಉದ್ದಿಮೆ ಎನಿಸಿಕೊಳ್ಳಲು ಹೂಡಿಕೆ ಮತ್ತು ವಹಿವಾಟು ಅರ್ಹತೆಯ ಮಿತಿಯನ್ನು ಗಮನಾರ್ಹವಾಗಿ ವಿಸ್ತರಿಸುವ ಮೂಲಕ ‘ಆತ್ಮನಿರ್ಭರ ಭಾರತ್ ಪ್ಯಾಕೇಜ್’ನಲ್ಲಿ ಇಂಡಸ್ಟ್ರಿಯ ಭವಿಷ್ಯದ ವಿಕಾಸಕ್ಕೆ ಉತ್ತೇಜನ ನೀಡಲಾಗಿದೆ. ಹೀಗಿದ್ದರೂ, ವರ್ತಮಾನದ ಕೊರೊನಾ ಬಿಕ್ಕಟ್ಟು ಎದುರಿಸಲು ನೇರ ನೆರವನ್ನೂ ಹೆಚ್ಚಿಸಬಹುದಿತ್ತು ಎನ್ನುತ್ತಾರೆ ತಜ್ಞರು. – ಶೇ.30.54 ಜಿಡಿಪಿಯಲ್ಲಿ ಎಂಎಸ್ಎಂಇ ಪಾಲು – 11 ಕೋಟಿ ಎಂಎಸ್ಎಂಇ ವಲಯ ಸೃಷ್ಟಿಸಿರುವ ಉದ್ಯೋಗ (ಆತ್ಮ ನಿರ್ಭರ್ ಭಾರತ್- ಭಾಗ 2) ‘ಸಣ್ಣದಾಗಿರುವುದು ಚೆಂದ’ ನುಡಿಗಟ್ಟು ಸಣ್ಣ ಉದ್ದಿಮೆಗಳ ಬೆಳವಣಿಗೆಯ ದೃಷ್ಟಿಯಿಂದ […]
Read More
– ಚೀನಾಗೆ ಮಣಿದರೆ ಅನುದಾನ ಬಂದ್ ಎಚ್ಚರಿಕೆ – 30 ದಿನಗಳ ಗಡುವು ನೀಡಿದ ಟ್ರಂಪ್. ವಾಷಿಂಗ್ಟನ್: ಕೊರೊನಾ ಸಂಕಷ್ಟದ ಆರಂಭದಿಂದಲೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿರುದ್ಧ ಹರಿಹಾಯುತ್ತಿರುವ ಅಮೆರಿಕವು, ಡಬ್ಲ್ಯುಎಚ್‌ಒ ಚೀನಾ ಹಿಡಿತದಿಂದ ಹೊರಬರದಿದ್ದರೆ ತನ್ನ ಪಾಲಿನ ಅನುದಾನ ಶಾಶ್ವತವಾಗಿ ಸ್ಥಗಿತಗೊಳಿಸುವ ಎಚ್ಚರಿಕೆ ರವಾನಿಸಿದೆ. ಅಲ್ಲದೇ ಇದೇ ರೀತಿಯ ವರ್ತನೆ ತೋರಿದರೆ ಸದಸ್ಯತ್ವದಿಂದ ಹೊರಬರುವ ಸುಳಿವು ನೀಡಿದೆ. ಇದರೊಂದಿಗೆ ಅಮೆರಿಕ ಮತ್ತು ಚೀನಾ ನಡುವಿನ ಸಮರ ಇನ್ನಷ್ಟು ತೀವ್ರಗೊಂಡಿದೆ. ಪದೇಪದೆ ಕೊರೊನಾ ನಿಯಂತ್ರಣ ವಿಚಾರದಲ್ಲಿ […]
Read More
– ಅಕ್ಕಿ, ತರಕಾರಿ, ಹಾಲು ಇತ್ಯಾದಿ ಆಹಾರ ಉತ್ಪನ್ನಗಳಿಗಿಲ್ಲ ಬೇಡಿಕೆ. ಯಳನಾಡು ಮಂಜು, ದಾವಣಗೆರೆ. ಲಾಕ್‌ಡೌನ್ ಮುಗಿದ ನಂತರ ಬಹುತೇಕ ವಸ್ತುಗಳ ಬೆಲೆ ಗಗನ ಮುಖಿ ಆಗುತ್ತಿದೆ. ಸಿಮೆಂಟ್, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳಿಂದ ಹಿಡಿದು ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ತನಕ ಪ್ರಮುಖ ಉತ್ಪನ್ನಗಳ ದರ ಜಂಪ್ ಆಗಿದೆ. ಆದರೆ ಆಹಾರ ಉತ್ಪನ್ನಗಳ ಬೆಲೆ ಮಾತ್ರ ಕುಸಿಯತ್ತಿದ್ದು, ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಹುತೇಕ ಕೊರೊನಾ ನಿರ್ಬಂಧ ತೆರವಾದರೂ ಹೋಟೆಲ್ ಉದ್ಯಮಕ್ಕೆ […]
Read More
ಲಾಕ್‌ಡೌನ್ ನಿರ್ಬಂಧ ಹಿನ್ನೆಲೆಯಲ್ಲಿ ಬಾಗಿಲು ತೆರೆಯಲಾಗದ ಕಾಲೇಜುಗಳು ಆನ್‌ಲೈನ್ ಕ್ಲಾಸ್ ನಡೆಸುತ್ತಿವೆ. ವ್ಯಾಪಕ ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಇದಕ್ಕೊಂದು, ವಿಭಿನ್ನ ಪರಿಹಾರ ಕಂಡುಕೊಂಡಿದ್ದು, 20 ಅಡಿ ಎತ್ತರದ ಮರ ಏರಿ ಆನ್‌ಲೈನ್ ಕ್ಲಾಸಿಗೆ ಹಾಜರಾಗುತ್ತಿದ್ದಾನೆ! ಶಿರಸಿ ತಾಲೂಕು ಬಕ್ಕಳ ಗ್ರಾಮದ ಅಂಬಳಿಕೆ ಕಲ್ಲಗದ್ದೆ ಹಳ್ಳಿಯ ಶ್ರೀರಾಮ ಗೋಪಾಲ ಹೆಗಡೆ ಒಂದೂವರೆ ತಿಂಗಳಿಂದ ಮರ ಹತ್ತುವ ಮೂಲಕ ತನ್ನ ಸೆಲ್‌ಫೋನ್‌ಗೆ ಇಂಟರ್‌ನೆಟ್ […]
Read More
ಸಮರ್ಥ ಭಾರತವನ್ನು ಕಟ್ಟಬೇಕಾದರೆ ಅಂತಹ ಭಾರತದ ಚಿತ್ರ ಹೇಗಿರಬೇಕು ಎಂಬ ಕನಸನ್ನು ನಾವು ನಮ್ಮ ಮುಂದಿಟ್ಟುಕೊಳ್ಳಬೇಕು. ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀ (ಈ ಕುರಿತು ‘ಮೇರೇ ಸಪನೋಂ ಕಾ ಭಾರತ್’ ಎಂಬ ಅವರ ಪುಸ್ತಕವಿದೆ) ಸೇರಿದಂತೆ ಅನೇಕ ಮಹಾಪುರುಷರು ಬೇರೆಬೇರೆ ಸಂದರ್ಭಗಳಲ್ಲಿ ಭಾರತದ ಬಗೆಗಿನ ತಮ್ಮ ಚಿತ್ರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಸಮರ್ಥ ಭಾರತವೆಂದರೆ ಒಗ್ಗಟ್ಟಿನ ಏಕಾತ್ಮ ಭಾರತ. ಅನೇಕ ರಾಜ್ಯಗಳು, ಭಾಷೆಗಳು, ಮತ ಪಂಥ ಸಂಪ್ರದಾಯಗಳು, ಹೀಗೆ ವಿಭಿನ್ನ ರೀತಿಯಲ್ಲಿರುವ ವೈವಿಧ್ಯಮಯ ದೇಶ ಭಾರತ. ಇಲ್ಲಿಅನೇಕ […]
Read More
– ಚೀನಾದಿಂದ ಕಂಪನಿಗಳು ಬರಲು ಸೂಕ್ತ ವಾತಾವರಣ ಸೃಷ್ಟಿಸಬೇಕು. ಐದು ನಿರಂತರ ಪ್ರೆಸ್‌ಮೀಟ್‌ಗಳ ಮೂಲಕ ಜಗತ್ತಿನ ಮೂರನೇ ಅತಿ ದೊಡ್ಡ ಪ್ಯಾಕೇಜ್ ಘೋಷಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಗ್ಗೆ ಹೆಚ್ಚಿನ ವಿವರಗಳನ್ನು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ದ ರಾಜೀವ ದೇಶಪಾಂಡೆ, ಸಿದ್ಧಾರ್ಥ, ಸುರೋಜಿತ್ ಗುಪ್ತಾ ಜೊತೆಗೆ ನಡೆಸಿದ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. – ಪ್ಯಾಕೇಜ್‌ಗೆ ನೀವು ಪರಿಗಣಿಸಿದ ಅಂಶಗಳೇನು? – ಲಾಕ್‌ಡೌನ್ ಘೋಷಿಸಿದ ಗಳಿಗೆಯಿಂದಲೂ ಇದರ ಅವಶ್ಯಕತೆ ನಮ್ಮ ಗಮನದಲ್ಲಿತ್ತು. […]
Read More