– ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ | ಕಣಿವೆಯ ಒಡಲು ಕೊರೆದು ಸಮೀಕ್ಷೆ. ವಿವೇಕ ಮಹಾಲೆ, ಶಿವಮೊಗ್ಗ. ಹಲವಾರು ಯೋಜನೆಗಳ ಭಾರ ಹೇರಿಕೊಂಡು ನಲುಗುತ್ತಿರುವ ಶರಾವತಿ ಕಣಿವೆಗೆ ಮತ್ತೊಂದು ಕಂಟಕ ಎದುರಾಗಿದೆ. ಕಳೆದ ವರ್ಷವಷ್ಟೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ ವಿರುದ್ಧ ಧ್ವನಿ ಎತ್ತಿದ್ದ ಇಲ್ಲಿನ ಜನ ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಬೆಂಗಳೂರಿಗೆ ನೀರು ಹರಿಸುವ ಯೋಜನೆ ಕೈಬಿಟ್ಟಿದ್ದ ರಾಜ್ಯ ಸರಕಾರ ಈಗ ಮತ್ತೊಂದು ಯೋಜನೆ ಮೂಲಕ ಆತಂಕ ಮೂಡಿಸಿದೆ. ಪಶ್ಚಿಮಘಟ್ಟದ ಹೃದಯ ಭಾಗವಾಗಿರುವ ಶರಾವತಿ ಕಣಿವೆಯಲ್ಲಿ […]
Read More
– ಲಾಕ್‌ಡೌನ್ ಸಡಿಲಿಕೆ ಬಳಿಕ ಹಿಂದಿಗಿಂತಲೂ ಹೆಚ್ಚು ಡಿಮ್ಯಾಂಡ್ – ಚಿನ್ನ, ಬೆಳ್ಳಿ ಈಗ ಸಿಕ್ಕಾಪಟ್ಟೆ ಖರೀದಿ. ಎಚ್ ಪಿ ಪುಣ್ಯವತಿ, ಬೆಂಗಳೂರು : ಲಾಕ್‌ಡೌನ್ ಸಡಿಲಿಕೆ ನಂತರ ಚಿನ್ನಾಭರಣಗಳ ಉದ್ಯಮ ನಿರೀಕ್ಷೆಗೂ ಮೀರಿ ಚೇತರಿಕೆ ಕಂಡಿದೆ. ಲಾಕ್‌ಡೌನ್‌ಗೆ ಮೊದಲು ರಾಜ್ಯದಲ್ಲಿ ತಿಂಗಳಿಗೆ ಗರಿಷ್ಠ 850 ಕೆಜಿ ಚಿನ್ನ ಮಾರಾಟವಾಗುತ್ತಿದ್ದರೆ, ಜೂನ್ 1ರಿಂದ 7ರವರೆಗಿನ ಒಂದೇ ವಾರದಲ್ಲಿ 280 ಕೆಜಿ ಚಿನ್ನ ವ್ಯಾಪಾರ ಆಗಿದೆ. ಅಂದರೆ, ಚಿನ್ನ, ಬೆಳ್ಳಿ ಆಭರಣಗಳ ಖರೀದಿ ಪ್ರಮಾಣ ಹಿಂದಿಗಿಂತಲೂ ಶೇ. 40-45ರಷ್ಟು ಏರಿಕೆಯಾಗಿದೆ. […]
Read More
ಅಮೆರಿಕ ಹಾಗೂ ಚೀನಾಗಳು ಸದ್ದಿಲ್ಲದೆ ಕಿಲ್ಲರ್ ರೋಬಾಟ್‌ಗಳನ್ನು ತಯಾರಿಸುತ್ತಿವೆ ಎಂಬ ಗುಸುಗುಸು ಮಿಲಿಟರಿ ವಲಯದಲ್ಲೇ ಇದೆ. ಇವುಗಳನ್ನು ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಏನಿದು ಕೊಲೆಗಾರ ಯಂತ್ರ? ಅವುಗಳಿಂದ ಏನು ಅಪಾಯ? ಯುದ್ಧರಂಗದಲ್ಲಿ ಮಾನವರಿಲ್ಲದೆ ಬರೀ ಯಂತ್ರಗಳು ಹೊಡೆದಾಡುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಮುಂದುವರಿದ ದೇಶವೊಂದರ ದೈತ್ಯ ರೋಬಾಟ್‌ಗಳು ಪಕ್ಕದ ಬಲಹೀನ ದೇಶದ ಗಡಿಯೊಳಗೆ ನುಗ್ಗಿ ಸೈನಿಕರನ್ನು ಹುಳಗಳಂತೆ ಜಜ್ಜಿಹಾಕುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಇದ್ದಕ್ಕಿದ್ದಂತೆ ಆಕಾಶದಿಂದ ಸಾವಿರಾರು ಡ್ರೋನ್‌ಗಳು ಇದ್ದಕ್ಕಿದ್ದಂತೆ ಬೆಂಕಿಯ ಮಳೆ ಸುರಿಸುವುದನ್ನು ಊಹಿಸಿಕೊಳ್ಳಿ. ಮಿಲಿಟರಿಯಲ್ಲಿ ಕೊಲೆಗಾರ […]
Read More
– ಕೋರೆ-ಕತ್ತಿ ಫೈಟ್ ನಡುವೆ ಕಡಾಡಿ, ಗಸ್ತಿ ಎಂಟ್ರಿ. – ಘಟಾನುಘಟಿಗಳನ್ನು ಬದಿಗೊತ್ತಿ ಪಕ್ಷ ನಿಷ್ಠರಿಗೆ ಗಿಫ್ಟ್. ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯಸಭೆ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸುತ್ತಿದ್ದ ಮತ್ತು ಭಿನ್ನಮತದ ಮೂಲಕ ಒತ್ತಡ ಹಾಕುತ್ತಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಭರ್ಜರಿ ಶಾಕ್ ಕೊಟ್ಟಿದೆ. ಚರ್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ, ಪಕ್ಷ ನಿಷ್ಠರಾದ ಸಾಮಾನ್ಯ […]
Read More
– ವಿನುತಾ ಗೌಡ. ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದರು ಆತ್ಮನಿರ್ಭರತೆಯ ಬಗೆಗಿನ ವೆಬಿನಾರ್ ಒಂದರಲ್ಲಿ ಮಾತನಾಡುತ್ತಾ ಅಪರೂಪದ ಸಂಗತಿಯೊಂದನ್ನು ಪ್ರಸ್ಥಾಪಿಸಿದ್ದರು. ಕೃಷಿ, ಕೈಗಾರಿಕೆ, ಉದ್ದಿಮೆ ಮತ್ತು ರಕ್ಷ ಣಾ ಬಲಗಳಲ್ಲಿ ಆತ್ಮನಿರ್ಭರತೆಯ ಅನುಷ್ಠಾನ ಹೇಗೆ, ಎತ್ತ ಮುಂತಾದ ಚರ್ಚೆಗಳ ನಡುವೆಯೂ ಆತ್ಮನಿರ್ಭರಕ್ಕೆ ಒಂದು ವಿಭಿನ್ನ ದೃಷ್ಟಿಕೋನವಿದೆ ಎಂಬುದನ್ನು ಅವರು ತಿಳಿಸಿದ್ದರು. ಸ್ವಾವಲಂಬನೆ ಮತ್ತು ಆತ್ಮನಿರ್ಭರ ಪದಗಳಿಗಿರುವ ತೀರಾ ಹತ್ತಿರದ ಸಂಬಂಧಗಳನ್ನು ವಿವರಿಸುತ್ತಾ, ‘‘ಆತ್ಮನಿರ್ಭರ- ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಅದಕ್ಕೂ […]
Read More
-ವಿದ್ಯಾರ್ಥಿಗಳಿಗೂ ಶಿಕ್ಷಣ ಸಂಸ್ಥೆಗಳಿಗೂ ‘ಮೆಂಟರ್’ ವ್ಯವಸ್ಥೆ ಕಲ್ಪಿಸುವುದು ಸರಕಾರದ ನೀತಿಯಾಗಬೇಕು. ಪ್ರೊ.ಎಂ.ಆರ್.ದೊರೆಸ್ವಾಮಿ. ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ಹಾಗೂ ಸಬಲೀಕರಣಗೊಳಿಸುವುದೇ ಕ್ರಿಯಾಶೀಲ ಶಿಕ್ಷ ಣ ಸಂಸ್ಥೆಗಳ ಶ್ರೇಷ್ಠತೆಯ ಕುರುಹು. ಅವು ಶೈಕ್ಷ ಣಿಕ ಸೇವೆಯ ಗುಣಮಟ್ಟ ಮತ್ತು ಸಂಸ್ಥೆಗಳ ಫಲಿತಾಂಶವನ್ನು ನಿರೂಪಿಸುತ್ತವೆ. ಮಾರ್ಗದರ್ಶನದ ವಿಭಿನ್ನ ಆಯಾಮಗಳನ್ನು ಮತ್ತು ಅದನ್ನು ಮಾನವ ಕಾರ್ಯಕ್ಷ ಮತೆ ಮತ್ತು ಸಾಂಸ್ಥಿಕ ಸೇವೆಗಳ ವರ್ಧಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅನ್ವೇಷಿಸಲು ಇಚ್ಛಿಸುತ್ತೇನೆ. (ಮಾರ್ಗದರ್ಶಕ ಪದವನ್ನು ಗ್ರೀಕ್ ಮೂಲದ ಪದವಾಗಿಯೇ ಗ್ರಹಿಸಿದರೂ ಅಮೆರಿಕ ಮತ್ತು […]
Read More
ಜಾಗತಿಕ ವಾಣಿಜ್ಯ, ಆರ್ಥಿಕ ಸಮೀಕರಣವನ್ನು ತಿದ್ದಿ ಬರೆಯುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಜಿ7 ಗಂಪಿನಲ್ಲಿ ಭಾರತವನ್ನೂ ಸೇರಿಸಿಕೊಳ್ಳಬೇಕು ಎಂಬುದು ಅವರ ವಾದ. ಇದು ಯಾಕೆ ಹಾಗೂ ಇದರ ಪರಿಣಾಮಗಳೇನು? ಜಿ7 ದೇಶಗಳ ಈ ವರ್ಷದ (46ನೇ) ಶೃಂಗಸಭೆ ಜೂನ್ 10- 12ರಂದು ಅಮೆರಿಕದ ಕ್ಯಾಂಪ್ ಡೇವಿಡ್‌ನಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೂಡಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ: ‘‘ಹೊಸ ಜಾಗತಿಕ ಸನ್ನಿವೇಶದಲ್ಲಿ ಜಿ7 ಎಂಬುದು ಅಪ್ರಸ್ತುತ ಸಂಘಟನೆಯಾಗಿದೆ. ಭಾರತ, […]
Read More
ಇಂದಿನಿಂದ ಟೆಂಪಲ್, ಮಾಲ್, ಹೋಟೆಲ್ ಓಪನ್ | ಷರತ್ತುಗಳು ಅನ್ವಯ. ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ. ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಮಾಲ್‌ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. […]
Read More
ತಮ್ಮದೇ ದಾರಿ ಮತ್ತು ಗುರಿಗಳನ್ನು ಬೆನ್ನತ್ತಿ ಹೋಗುವ ಧೈರ್ಯಶಾಲಿಗಳಿಗೆ ಇಲಾನ್ ಮಸ್ಕ್ ದೊಡ್ಡ ಐಕಾನ್. -ಕೆ. ವೆಂಕಟೇಶ್. ಆತ ಮಹಾಮೌನಿಯಾಗಿದ್ದ. ಆತಂಕಿತರಾದ ಪೋಷಕರು ಈತ ಕಿವುಡನಿರಬೇಕು ಎಂದು ಭಾವಿಸಿದ್ದರು. ಶಾಲೆಯಲ್ಲಿ ಚಿಲ್ಟೇರಿಯಂತಿದ್ದ ಈತನನ್ನು ಎಲ್ಲರೂ ಆಟದ ವಸ್ತು ಮಾಡಿಕೊಂಡಿದ್ದರು. ಪ್ರಾಥಮಿಕ ಶಾಲೆಯಲ್ಲಿ ಮೆಟ್ಟಿಲುಗಳ ಮೇಲಿಂದ ತಳ್ಳಿ ಮಜಾ ತೆಗೆದುಕೊಂಡಿದ್ದರು. ಈತ ಆಸ್ಪತ್ರೆ ಸೇರಿದ. ಒಂದು ರೀತಿಯಲ್ಲಿ ಅಂತರ್ಮುಖಿಯಾದ ಆತ ಸದಾ ಆಕಾಶವನ್ನೇ ದಿಟ್ಟಿಸುತ್ತಿದ್ದ. ಪೋಷಕರು, ಶಿಕ್ಷಕರು ಮತ್ತು ಸಹಪಾಠಿಗಳು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿದ್ದ ಆತನಲ್ಲಿ ದೈಹಿಕ ನ್ಯೂನತೆಯೇನೂ ಇರಲಿಲ್ಲ. […]
Read More
– ಹರೀಶ್ ಕೇರ. ಶಾಲೆಗಳು ಯಾವಾಗ ಆರಂಭ? ಗೊತ್ತಿಲ್ಲ. ಕೊರೊನಾ ಸೋಂಕಿನ ಗ್ರಾಫ್ ಯಾವಾಗ ಇಳಿಯುತ್ತದೆ? ಗೊತ್ತಿಲ್ಲ. ಮತ್ತೆ ನಾವೆಲ್ಲ ಯಾವಾಗ ಕೈ ಕುಲುಕಬಹುದು? ಯಾವಾಗ ಅಪ್ಪಿಕೊಳ್ಳಬಹುದು? ಊರಿಗೆ ಹೋದವರು ಯಾವಾಗ ಹಿಂದಿರುಗಬಹುದು? ಪರದೇಶಗಳಲ್ಲಿರುವವರು ಯಾವಾಗ ಬರಬಹುದು? ಐಸಿಯುನಲ್ಲಿರುವವರು ಮನೆಗೆ ಮರಳಬಹುದೇ? ಮಾಸ್ಕ್ ಹಾಕಿದ ಮುಖಗಳ ಹಿಂದೆ ಯಾರಿದ್ದಾರೆ? ಕೊರೊನಾ ಹೋದ ಮೇಲೆ ಬದುಕುಳಿದವರ ಜೀವನ ಹೇಗಿರುತ್ತದೆ? ಆಗಲೂ ಸಣ್ಣಪುಟ್ಟ ಸಂಗತಿಗಳಿಗೆ ನಕ್ಕು ಹಗುರಾಗುವಷ್ಟು ಶಕ್ತಿ ನಮ್ಮಲ್ಲಿ ಉಳಿದಿರಬಹುದಾ? ಯಾವುದೂ ಗೊತ್ತಿಲ್ಲ. ಕತೆ, ಕಾದಂಬರಿ ಬರೆಯುವವರು ಮೊದಲ […]
Read More