ಕೃಷಿ ಭೂಮಿ ಮುಕ್ತ ಖರೀದಿ

– 1961ರ ಕರ್ನಾಟಕ ಭೂಸುಧಾರಣೆ ಕಾಯಿದೆಗೆ ರಾಜ್ಯ ಸರಕಾರದ ತಿದ್ದುಪಡಿ – ಇನ್ನು ಯಾರು ಬೇಕಾದರೂ, ಕೃಷಿಕರಲ್ಲದಿದ್ದರೂ ಕೃಷಿ ಜಮೀನು ಖರೀದಿಸಬಹುದು. ವಿಕ ಸುದ್ದಿಲೋಕ, ಬೆಂಗಳೂರು. ಕೃಷಿಯೇತರ ಆದಾಯ ಹೊಂದಿದವರು ಕೃಷಿ ಭೂಮಿ ಖರೀದಿಸಲು ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ರಹದಾರಿ ಸಿಕ್ಕಿದೆ. ಕರ್ನಾಟಕ ಭೂಸುಧಾರಣೆ ಕಾಯಿದೆ 1961ರ ಕಲಂ 79ಎ ಮತ್ತು 79ಬಿಗೆ ತಿದ್ದುಪಡಿ ತರಲು ನಡೆದ […]

Read More

ಆನೆ ಬಂತೊಂದಾನೆ, ಭಾರತೀಯರ ಪ್ರೀತಿಯ ಆನೆ

– ಅಪಾರ ಬಲವಿದ್ದರೂ ಸ್ವಭಾವತಃ ಸೌಮ್ಯವಾದ ಆನೆ ದೇವರಿಗೆ ಭಾರತೀಯರ ಹೃದಯದಲ್ಲಿ ಅನನ್ಯ ಸ್ಥಾನ. – ಡಾ. ವಿ.ಬಿ. ಆರತೀ. ಕೇರಳದಲ್ಲಿ ಇತ್ತೀಚೆಗೆ, ಗರ್ಭಿಣಿ ಆನೆಗೆ ಬಾಂಬ್ ಹೊಂದಿದ ಹಣ್ಣನ್ನು ತಿನ್ನಿಸಿ, ಸಾಯಿಸಿದ ದುಷ್ಕೃತ್ಯವನ್ನು ದೇಶಕ್ಕೆ ದೇಶವೇ ಖಂಡಿಸಿತು. ಯಾವುದೇ ಪ್ರಾಣಿಯನ್ನು ಇಷ್ಟು ಕ್ರೂರವಾಗಿ ಕೊಂದರೆ ಸಜ್ಜನ ಮನಸ್ಸು ನೊಂದುಕೊಳ್ಳುತ್ತದೆ. ಕಾಡುಗಳ್ಳರ ಪೈಕಿ ವೀರಪ್ಪನ್ ಬಗ್ಗೆ ಹೆಚ್ಚು ಆಕ್ರೋಶವಿದ್ದದ್ದೂ ಆತ ಹಂತಕನೆಂದೇ ಅಲ್ಲವೆ? ಭಾರತೀಯ ಮನದಲ್ಲಿ, ಧರ್ಮ- ಸಂಸ್ಕೃತಿ- ರಾಜಪರಂಪರೆಗಳಲ್ಲಿ ಆನೆಗೆ ಇರುವ ಸ್ನೇಹಾದರಗಳೂ ಪ್ರಾಶಸ್ತ್ಯವೂ ಅಂತಹದ್ದು! […]

Read More

ಪಂಡಿತ್ ರಾಮ್‌ಪ್ರಸಾದ್ ಬಿಸ್ಮಿಲ್

– ಮಯೂರಲಕ್ಷ್ಮೀ. 1897, ಜೂನ್ 11ರಂದು ಬ್ರಿಟಿಷರ ಆಡಳಿತದ ವಾಯುವ್ಯ ಪ್ರಾಂತದ ಶಹಜಹಾನ್ಪುರದಲ್ಲಿ ಜನ್ಮ ತಳೆದ ಪಂಡಿತ್ ರಾಮ್‌ಪ್ರಸಾದ್ ಬಿಸ್ಮಿಲ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಬಲಿದಾನಿ. ತಂದೆಯವರಿಂದ ಮನೆಯಲ್ಲೇ ಶಿಕ್ಷಣ ಪಡೆದ ರಾಮ್‌ಪ್ರಸಾದ್ ಬಿಸ್ಮಿಲ್ ಬಾಲ್ಯದಿಂದಲೇ ಸಾಹಿತ್ಯ ರಚನೆ ಮತ್ತು ಭಾಷಾ ನೈಪುಣ್ಯ ಹೊಂದಿದ್ದರು. ಮೌಲ್ವಿಯೊಬ್ಬರಿಂದ ಉರ್ದು ಭಾಷೆಯಲ್ಲೂ ಪಾಂಡಿತ್ಯ ಪಡೆದಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ‘ಬಿಸ್ಮಿಲ್’ ಎಂದೇ ಜನಪ್ರಿಯರಾಗಿದ್ದು ರಾಮ್, ಅಗ್ಯತ್ ಎನ್ನುವ ಕಾವ್ಯನಾಮಗಳಲ್ಲಿ ಅಸಂಖ್ಯಾತ ದೇಶಭಕ್ತಿಯ ಕವನಗಳನ್ನು ರಚಿಸಿದರು. ಲಾಲಾ ಹರದಯಾಳ್ […]

Read More

ಗೋ ರಕ್ಷಣೆ ಕಾನೂನಿನ ಹುಡುಕಾಟ

ಗೋ ಸಂರಕ್ಷಣೆ, ಗೋಹತ್ಯೆ ನಿಷೇಧ- ಇತ್ಯಾದಿ ಹೆಸರುಗಳಿಂದ ಪ್ರಸ್ತಾವಿತವಾಗುವ ವಿಷಯ ಭಾರತದಲ್ಲಿ ಬಹುತೇಕ ಗೊಂದಲದ ಗೂಡಾಗಿದೆ. ಈ ಬಗ್ಗೆ ಒಂದೊಂದು ರಾಜ್ಯ ಒಂದೊಂದು ಕಾನೂನು ಹೊಂದಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರಕಾರ, ರಾಜ್ಯದಲ್ಲಿದ್ದ ಗೋ ಹತ್ಯೆ ತಡೆ ಕಾಯಿದೆ-1955ನ್ನು ಮತ್ತಷ್ಟು ಬಿಗಿ ಮಾಡಿದೆ. ಅದರ ಪ್ರಕಾರ, ಇನ್ನು ಮುಂದೆ ಗೋ ಹತ್ಯೆ ಮಾಡುವವರಿಗೆ ಗರಿಷ್ಠ 10 ವರ್ಷ ಜೈಲು. ದಂಡದ ಮೊತ್ತ ಹತ್ತು ಸಾವಿರದಿಂದ 5 ಲಕ್ಷದವರೆಗೆ ಏರಿಕೆ. ಗೋ ಹತ್ಯೆಯಿಂದ […]

Read More

ಹೆಚ್ಚುತ್ತಿರುವ ವಾಹನ ಸಂಚಾರ, ಟೋಲ್ ಕಲೆಕ್ಷನ್ನೇ ಆಧಾರ

– ಬೆಂಗಳೂರು ಪರಿಸರದಲ್ಲಿ ಲಾಕ್‌ಡೌನ್‌ ಪೂರ್ವಕ್ಕಿಂತಲೂ ಹೆಚ್ಚು ವೆಹಿಕಲ್ – ಉಳಿದೆಡೆಯೂ ನಿಧಾನವಾಗಿ ಪರಿಸ್ಥಿತಿ ಸುಧಾರಣೆ. ವಿಕ ಸುದ್ದಿಲೋಕ, ಬೆಂಗಳೂರು : ಲಾಕ್‌ಡೌನ್‌ ಸಡಿಲಿಕೆ ಬಳಿಕ ವಾಹನಗಳ ಸಂಚಾರ ಕ್ರಮೇಣ ಹಳಿಗೆ ಮರುಳುತ್ತಿದೆ. ಬೆಂಗಳೂರಿನ ಸುತ್ತಲಿರುವ ಟೋಲ್ ಕೇಂದ್ರಗಳ ಮೂಲಕ ಹೆಚ್ಚಿನ ವಾಹನಗಳು ಚಲಿಸುತ್ತಿರುವುದು ಕಂಡುಬಂದಿದೆ. ರಾಜ್ಯದ ಹಲವು ಟೋಲ್ ಕೇಂದ್ರಗಳು ಪರಿಸ್ಥಿತಿಯೂ ಸುಧಾರಿಸುತ್ತಿದೆ. ಒಂದೊಮ್ಮೆ ಅಂತಾರಾಜ್ಯ ವಾಹನ ಸಂಚಾರ ಆರಂಭವಾದರೆ ಎಂದಿನ ಸ್ಥಿತಿಗೆ ಮರಳಲಿದೆ. ಮಾರ್ಚ್ 25ರಂದು ಲಾಕ್‌ಡೌನ್‌ ಜಾರಿಯಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಎಲ್ಲ ಹೆದ್ದಾರಿಗಳ […]

Read More

ರೋಗ ಲಕ್ಷಣವಿಲ್ಲದವರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ! – ಡಬ್ಲ್ಯೂಎಚ್ಒ ಹೇಳಿಕೆಯಿಂದ ಜಗತ್ತಿನಾದ್ಯಂತ ಚರ್ಚೆ ಶುರು

ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್-19 ವೈರಸ್‌ನ ಯಾವುದೇ ಲಕ್ಷ ಣಗಳು ತೋರದವರಿಂದ (ಅಸಿಮ್ಟಮ್ಯಾಟಿಕ್) ಸೋಂಕು ಪ್ರಸರಣ ಸಾಧ್ಯತೆ ಕಡಿಮೆ ಎಂಬ ಹೊಸ ಪ್ರತಿಪಾದನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದುವರೆಗೆ ಸೋಂಕು ಲಕ್ಷಣವಿಲ್ಲದ ವ್ಯಕ್ತಿ ಯಾರ ಅರಿವಿಗೂ ಬಾರದಂತೆ ಹಲವರನ್ನು ಸೋಂಕಿನ ಸುಳಿಗೆ ಸಿಲುಕಿಸುವ ಅಪಾಯವಿದೆ ಎಂಬ ಆತಂಕವಿತ್ತು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್-19ಗೆ ಸಂಬಂಧಿಸಿದ ತಾಂತ್ರಿಕ ತಂಡದ ಮುಖ್ಯಸ್ಥೆಯಾಗಿರುವ ಡಾ. ಮಾರಿಯಾ ವ್ಯಾನ್ ಕೆರ್ಕೋವ್ ಅವರು, ‘‘ಲಭ್ಯವಿರುವ ಕೆಲವು ಅಧ್ಯಯನಗಳ ವರದಿಯಾಧಾರ ಮೇಲೆ ಹೇಳುವುದಾದರೆ ಅಸಿಮ್ಟಮ್ಯಾಟಿಕ್ […]

Read More

ಆನ್‌ಲೈನ್‌ ಕ್ಲೋಸ್

– ಎಲ್‌ಕೆಜಿಯಿಂದ 5ನೇ ತರಗತಿವರೆಗಿನ ಆನ್‌ಲೈನ್‌ ಪಾಠಕ್ಕೆ ಸರಕಾರ ತಡೆ – ಆನ್‌ಲೈನ್‌ ಹೆಸರಲ್ಲಿ ಶುಲ್ಕ ಪಡೆದರೆ ಕ್ರಮ | ಶೈಕ್ಷಣಿಕ ಶುಲ್ಕ ಹೆಚ್ಚಳವೂ ಬೇಡ ವಿಕ ಸುದ್ದಿಲೋಕ, ಬೆಂಗಳೂರು. ಎಲ್‌ಕೆಜಿ-ಯುಕೆಜಿಯಿಂದ 5ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ‘ಆನ್‌ಲೈನ್‌ ತರಗತಿ’ ನಡೆಸಬಾರದು ಎಂದು ಸರಕಾರ ಆದೇಶಿಸಿದೆ ಮತ್ತು ಈಗ ಖಾಸಗಿ ಶಾಲೆಗಳು ನಡೆಸುತ್ತಿರುವ ತರಗತಿಗಳನ್ನು ನಿಲ್ಲಿಸುವಂತೆ ಸೂಚಿಸಿದೆ. ನಗರದ ಸಮಗ್ರ ಶಿಕ್ಷಣ ಅಭಿಯಾನದ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ […]

Read More

ಪರಿಶಿಷ್ಟ ಸಮುದಾಯ ನಾಯಕರ ವಿಶಿಷ್ಟ ರಾಜಕಾರಣ

– ಮಹದೇವ್ ಪ್ರಕಾಶ್. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ರಾಜಕೀಯದಲ್ಲಿ ಪರಮಾಧಿಕಾರ ದೊರೆಯುವುದು ಅಷ್ಟು ಸುಲಭದ ಮಾತಲ್ಲ. ಶತಮಾನಗಳ ಶೋಷಣೆಗೆ ಗುರಿಯಾಗಿರುವ ಇಂತಹ ಸಮುದಾಯಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವೈಧಾನಿಕ ರಕ್ಷಣೆ ನೀಡಿದ್ದರೂ, ಪರಮಾಧಿಕಾರ ಈ ಸಮುದಾಯಗಳಿಗೆ ಗಗನ ಕುಸುಮವೇ ಆಗಿದೆ. ಪ್ರಧಾನಿ ಹುದ್ದೆಯಂತೂ ಕನಸಿನಲ್ಲಿ ನೆನೆಸಲು ಸಾಧ್ಯವಿಲ್ಲ. 1979ರಲ್ಲಿ ಬಾಬು ಜಗಜೀವನ್ ರಾಂ ಯಶಸ್ವಿಯಾಗಿ ಉಪಪ್ರಧಾನಿ ಹುದ್ದೆಗೇರಿದ ಪರಿಶಿಷ್ಟ ಸಮುದಾಯದ ಅಗ್ರಗಣ್ಯ ನಾಯಕ. ಇನ್ನೇನು ಜಗಜೀವನ್ ರಾಂ ಪ್ರಧಾನಿ ಆಗಿಯೇಬಿಟ್ಟರು ಅನ್ನುವಂಥ ವಾತಾವರಣ ಸೃಷ್ಟಿಯಾಗಿತ್ತು. […]

Read More

ಈಡೇರಿದ ದಶಕಗಳ ಕನಸು – ಅಯೋಧ್ಯೆಯಲ್ಲಿಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ(ಜೂ.10)ರಂದು ಶಿಲಾನ್ಯಾಸ ನಡೆಯಲಿದೆ. ರಾಮಜನ್ಮಭೂಮಿ ವ್ಯಾಪ್ತಿಯಲ್ಲೇ ಇರುವ ‘ಕುಬೇರ ತಿಲ’ ಮಂದಿರದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡುವುದರೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ‘‘ಲಂಕಾ ಮೇಲಿನ ದಾಳಿಗೂ ಮುನ್ನ ಶ್ರೀರಾಮಚಂದ್ರನು ಶಿವನನ್ನು ಪ್ರಾರ್ಥಿಸಿದ್ದ. ಅದೇ ಸಂಪ್ರದಾಯವನ್ನು ಈಗ ಪಾಲಿಸುತ್ತಿದ್ದೇವೆ. ರುದ್ರಾಭಿಷೇಕದ ಬಳಿಕವೇ ರಾಮ ಮಂದಿರ ಶಿಲಾನ್ಯಾಸದ ಕಾರ್ಯಕ್ರಮಗಳು ಆರಂಭವಾಗಲಿವೆ,’’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಕ್ತಾರರಾದ ಮಹಾಂತ ಕಮಲನಯನ ದಾಸ್ […]

Read More

ಎಸ್ಸೆಸ್ಸೆಲ್ಸಿ ಪರೀಕ್ಷೆ ಖಚಿತ

– ಸುರಕ್ಷತಾ ಕ್ರಮಗಳೊಂದಿಗೆ ಎಕ್ಸಾಮ್: ಸುರೇಶ್ ಕುಮಾರ್. – ತಮಿಳುನಾಡು, ಪುದುಚೆರಿ, ತೆಲಂಗಾಣದಲ್ಲಿ ಪರೀಕ್ಷೆ ರದ್ದು. ವಿಕ ಸುದ್ದಿಲೋಕ ಉಡುಪಿ/ಬೆಂಗಳೂರು. ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ಖಚಿತವಾಗಿ ನಡೆಸುತ್ತೇವೆ, ಈ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಬಾರದು ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿ ಸುಳ್ಳು ವದಂತಿ ಹರಡುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆ ತಮಿಳುನಾಡು, ಪುದುಚೆರಿ ಮತ್ತು ತೆಲಂಗಾಣ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top