ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ. ಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ […]
Read More
ನೋಟುರದ್ದತಿ ನಿರ್ಧಾರವನ್ನು ಎರಡು ಮುಖಗಳಲ್ಲಿ ನೋಡಬೇಕಿದೆ. ಒಂದು ಸ್ವಚ್ಛ ಆರ್ಥಿಕತೆ ಮತ್ತು ಸುಭದ್ರ ಆರ್ಥಿಕತೆ ದೃಷ್ಟಿಯಿಂದ. ಮತ್ತೊಂದು ಸ್ವಚ್ಛ ರಾಜಕೀಯ ಮತ್ತು ಸಮರ್ಥ ರಾಜಕೀಯ ದೃಷ್ಟಿಕೋನದಿಂದ. ಸ್ವಚ್ಛ ಆರ್ಥಿಕತೆ ಮತ್ತು ಸ್ವಚ್ಛ ರಾಜಕೀಯ ಎರಡೂ ಮೇಳೈಸಿದರೆ ಇನ್ನೂ ಹೆಚ್ಚಿನ ಪರಿಣಾಮವನ್ನು ನಾವು ನಿರೀಕ್ಷಿಸಬಹುದು. ನೋಟುರದ್ದತಿ ನಿರ್ಧಾರದ ಬಳಿಕ ದಿನಕ್ಕೊಂದು ಕುತೂಹಲಕರ ಸಂಗತಿಗಳು ಬೆಳಕಿಗೆ ಬರುತ್ತಿವೆ! ಒಂದು ಕಡೆ, ನೋಟು ರದ್ದತಿ ನಿರ್ಧಾರದಿಂದ ಜನಸಾಮಾನ್ಯರಿಗೆ, ಬಡಬಗ್ಗರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾಯಿತು. ಮತ್ತೊಂದೆಡೆ, ಮುಖ್ಯಮಂತ್ರಿ, ಮಂತ್ರಿಗಳಿಗೆ ಆಪ್ತರು […]
Read More
ಓರ್ವ ವ್ಯಕ್ತಿ ಮಾಡಿದ್ದಕ್ಕೆಲ್ಲ ಜೈ ಎನ್ನಬೇಕೆಂಬುದು ಸರಿಯಾದ ವಾದವಲ್ಲ. ಆದರೆ ಸರಿಯಾದ, ಕಠಿಣವಾದ ಮತ್ತು ಬಹು ಅಪೇಕ್ಷಿತವಾದ ಕಾರ್ಯಕ್ಕೆ ಮುಂದಾದಾಗ ಸಹಾಯ, ಸಹಕಾರ ಕೊಡದಿದ್ದರೆ ಆ ವ್ಯಕ್ತಿಗೆ ಮಾತ್ರವಲ್ಲ ರಾಷ್ಟ್ರಕ್ಕೂ ನಷ್ಟವಾಗುತ್ತದೆ. ಈಗಿನ ಸನ್ನಿವೇಶದಲ್ಲಿ ಈ ಮಾತು ಹೆಚ್ಚು ಅರ್ಥಪೂರ್ಣ. ಭಾರತೀಯರಾದ ನಾವು ಬೆಳೆಸಿಕೊಂಡಿರುವ ರೂಢಿಯೇ ಹಾಗೆ. ಯಾರು ಯಾವುದೇ ಯೋಜನೆ ರೂಪಿಸಲಿ ಉಪಯೋಗಕ್ಕಿಂತ ಅದರ ದುರುಪಯೋಗದ ಕಡೆಗೇ ಮೊದಲು ಗಮನ ಕೊಡುತ್ತೇವೆ. ಹೀಗಾಗಿ ಮೂಲಯೋಜನೆ ರೂಪಿಸುವವರು ಅದರ ದುರ್ಬಳಕೆ ಮಾಡಿಕೊಳ್ಳುವವರಿಗೆ ಚಳ್ಳೆಹಣ್ಣು ತಿನ್ನಿಸುವುದು ಹೇಗೆಂಬುದರ ಕುರಿತೇ […]
Read More
ದೇಶದಲ್ಲಿ ಹಲವು ಸಮಸ್ಯೆಗಳಿರಬಹುದು. ಆದರೆ ಕಿತ್ತು ತಿನ್ನುತ್ತಿರುವುದು ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆ ಈ ಮೂರೇ ಅಂಶಗಳು. ಚಾಲ್ತಿ ನೋಟುಗಳ ಹಠಾತ್ ರದ್ದತಿ ಈ ಪಿಡುಗಿಗೆ ಸಿಂಹಪಾಲು ಪರಿಹಾರ ನೀಡಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ಇಂತಹ ಇನ್ನಷ್ಟು ಉಪಕ್ರಮಗಳನ್ನು ನಾವು ನಿರೀಕ್ಷೆ ಮಾಡೋಣ. `ಕುರಿ ಕೇಳಿಕೊಂಡೇ ಮಸಾಲೆ ಅರೀಬೇಕು’- ಇದು ಈ ದೇಶದಲ್ಲಿ ಇದುವರೆಗಿನ ಸಂಪ್ರದಾಯ. ಏಕೆಂದರೆ ನಮ್ಮದು ಪ್ರಜಾತಂತ್ರ ದೇಶ ನೋಡಿ! ಇದೇ ಮೊದಲ ಬಾರಿಗೆ ಆ ಸಂಪ್ರದಾಯ ಮುರಿದ ಪ್ರಧಾನಿ ನರೇಂದ್ರ ಮೋದಿ ಕುರಿ, […]
Read More
ಪ್ರಜಾತಂತ್ರದ ಮೂರು ಮುಖ್ಯ ಅಂಗಳಲ್ಲಿ ಶಾಸಕಾಂಗ ಮತ್ತು ಕಾರ್ಯಂಗದ ಬಗ್ಗೆ ಈಗಾಗಲೇ ಜನರು ಭರವಸೆ ಕಳೆದುಕೊಂಡಿದ್ದಾರೆ ಎಂಬ ಮಾತು ದಟ್ಟವಾಗಿದೆ. ಹಾಗಾದರೆ ಮೂರನೇ ಮುಖ್ಯ ಅಂಗವಾದ ನ್ಯಾಯಾಂಗವಾದರೂ ಈ ಅಪವಾದದಿಂದ ದೂರ ಉಳಿಯಬೇಕಲ್ಲವೇ? ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮೂರು ಆಧಾರಸ್ತಂಭಗಳು ಎಂಬುದು ಒಂದು ಸ್ಥಾಪಿತ ಹೇಳಿಕೆಯಾಗಿ, ಅದು ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದ ನಂಬಿಕೆ ಎಂದರೂ ತಪ್ಪಲ್ಲ. ಅದಿಲ್ಲ ಅನ್ನುವುದಾದರೆ ಶಾಸಕಾಂಗ ಮತ್ತು ನ್ಯಾಯಾಂಗಗಳ ವ್ಯಾಪ್ತಿ ಹಾಗೂ ಹೆಚ್ಚುಗಾರಿಕೆ ವಿಷಯಕ್ಕೆ ಸಂಬಂಧಿಸಿ ಈ […]
Read More
ಶ್ರೀನಿವಾಸ ಪ್ರಸಾದ್ ರಾಜೀನಾಮೆ ಅಂಗೀಕಾರಕ್ಕೆ ಮೀನಮೇಷ ನಡೆದಿದೆ. ಉಪಚುನಾವಣಾ ಕದನಕಣಕ್ಕೆ ಹೆದರಿ ಸರ್ಕಾರ ಇಂಥ ನಿಲುವಿಗೆ ಬಂದಿದೆ ಎಂಬ ಚರ್ಚೆಯೂ ಶುರುವಾಗಿದೆ. ಹಾಗಾದರೆ ಇದು ಸಿದ್ದು ಸರ್ಕಾರದ ಯಡವಟ್ಟುಗಳ ಸಾಲಿಗೆ ಹೊಸ ಸೇರ್ಪಡೆ ಆಗುವುದೇ? ಹಿಂದೆಯೂ ಸರ್ಕಾರ ಅನೇಕ ಪ್ರಕರಣಗಳಲ್ಲಿ ಎಡವಟ್ಟು ಮಾಡಿಕೊಂಡಿದ್ದಿದೆ. ಸರಿಯಾಗಿ ಹತ್ತು ವರ್ಷದ ನಂತರ ಮತ್ತೊಂದು ಅಂಥದ್ದೇ ಸನ್ನಿವೇಶ ನಿರ್ವಣವಾಗಿದೆ! ಪಾತ್ರಧಾರಿಗಳು ಅದಲುಬದಲು ಅಷ್ಟೇ. ಅಂದು ಸಿದ್ದರಾಮಯ್ಯ. ಇಂದು ಶ್ರೀನಿವಾಸ ಪ್ರಸಾದ್. ದೇವೇಗೌಡರು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿದರು ಎಂಬ ಕಾರಣಕ್ಕೆ ಬಂಡಾಯ ಸಾರಿ […]
Read More
ರಕ್ತಸಿಕ್ತ ಕಮ್ಯುನಿಸ್ಟ್ ಇತಿಹಾಸದ ಪುಟ ತಿರುವಿದರೆ ರೆಡ್ ಆರ್ವಿು, ಇಟಲಿಯ ರೆಡ್ ಬ್ರಿಗೇಡ್, ಫ್ರೆಂಚ್ನ ಡೈರೆಕ್ಟ್ ಆಕ್ಷನ್, ಅಡಾಲ್ಪ್ ಹಿಟ್ಲರ್, ಜೋಸೆಫ್ ಸ್ಟಾಲಿನ್, ಶ್ರೀಲಂಕಾದ ಎಲ್ಟಿಟಿಇ, ಮುಸಲೋನಿ ಕಾಣಿಸುತ್ತಾರೆ. ಆದರೆ ರಕ್ತಚೆಲ್ಲದೆ ಹತ್ಯೆ ಮಾಡಿ ಮುಗಿಸುವ ಹೊಸ ಐಡಿಯಾ ಹೇಳಿಕೊಟ್ಟ ‘ಪಿನರಾಯಿ ಪ್ಲಾನ್’ ಎಷ್ಟು ಜನರಿಗೆ ಗೊತ್ತು? ಶ್!!….ಇದು ರಕ್ತಸಿಕ್ತ ಚರಿತೆ.. ‘ನಾವು ಬಂಗಾಳಿಗಳಿಂದ ಕಲಿಯಬೇಕಿದೆ. (ವಿರೋಧಿಗಳನ್ನು ಹೇಗೆ ಕೊಲ್ಲಬೇಕೆಂಬುದನ್ನು) ನೆಲದ ಮೇಲೆ ಒಂದು ಹನಿ ರಕ್ತ ಚೆಲ್ಲದೆ ಬಂಗಾಳಿಗಳು ಆ ಕೆಲಸ ಮಾಡಿ ಮುಗಿಸುತ್ತಾರೆ. ಅನಾಮತ್ತಾಗಿ […]
Read More
ಪಾಕಿಸ್ತಾನ ಇನ್ನೆಂದೂ ಬುದ್ಧಿ ಕಲಿತು ತನ್ನ ತಪ್ಪನ್ನು ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ ಎಂಬುದಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ದಾಳಿಯನ್ನೇ ಮಾಡಿಲ್ಲ, ಗಡಿಯಾಚೆಗಿನಿಂದ ಅಪ್ರಚೋದಿತವಾಗಿ ಗುಂಡಿನ ದಾಳಿಯನ್ನಷ್ಟೇ ಮಾಡಲಾಗಿದೆ. ನಮ್ಮ ಕಡೆ ಇಬ್ಬರೇ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂಬ ಆತ್ಮವಂಚನೆಯ, ಹೇಡಿತನದ ಹೇಳಿಕೆಯೇ ಸಾಕು! ಒಂದೇ ಮಾತಲ್ಲಿ ಹೇಳುವುದಾದರೆ ‘ಭಯೋತ್ಪಾದನೆ ಮತ್ತು ಮತಾಂಧತೆಯ ಉಪಟಳದ ವಿಚಾರದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನ ದೇಶಗಳ ಸಹನೆಯ ಕಟ್ಟೆ ಒಡೆದಿತ್ತು, ಉಗ್ರವಾದಿಗಳನ್ನು ಸಾಕಿ ಸಲಹುತ್ತಲೇ ಬಂದ ಪಾಕಿಸ್ತಾನದ ಪಾಪದ ಕೊಡ […]
Read More
ಸಾಮಾಜಿಕ ಹೋರಾಟವೇ ಬೇರೆ. ರಾಜಕೀಯ ಹೋರಾಟವೇ ಬೇರೆ. ಎರಡನ್ನೂ ಬೆರೆಸಿದರೆ ಏನು ಅನಾಹುತ ಆಗಬಹುದೋ ಅದೇ ಆಗುತ್ತಿದೆ ಈಗ ಆಮ್ ಆದ್ಮಿ ಪಕ್ಷದ ಸಂದರ್ಭದಲ್ಲಿ. ಅಣ್ಣಾ ಹಜಾರೆಗೆ ಗೊತ್ತಿದ್ದ ಈ ಸತ್ಯ ಕೇಜ್ರಿವಾಲ್‌ಗೆ ಗೊತ್ತಾಗದೆ ಹೋದದ್ದೇ ಅಚ್ಚರಿ. ಅದೊಂದು ಸಣ್ಣ ಹೇಳಿಕೆ. ಆದರೆ ಅದರ ಹಿಂದೆ ಹುಟ್ಟಿಕೊಳ್ಳುವ ಆಲೋಚನೆ ಸಣ್ಣದಲ್ಲ. ನೀವೂ ಓದಿರುತ್ತೀರಿ. ದೆಹಲಿಯಲ್ಲಿ ಚಿಕೂನ್‌ಗುನ್ಯಾ, ಡೆಂಘೆ ಕಾಯಿಲೆ ಹತೋಟಿ ಮೀರುತ್ತಿರುವುದರ ಕುರಿತು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿದ ಹೇಳಿಕೆ ಅದು- ‘ಹೌದು, ನಾನು ಅಸಹಾಯಕ, […]
Read More
ನಕಲಿ ಮತ್ತು ಅಸಲಿ ವಿವಾದವನ್ನು ಬದಿಗಿಟ್ಟು ನೋಡುವುದಾದರೆ, ಕೃಷಿ ಪ್ರಧಾನ ಭಾರತದಲ್ಲಿ ಗೋರಕ್ಷಣೆಯ ವಿಷಯ ಮಾತನಾಡುವುದು ತಪ್ಪು ಅನ್ನುವುದು ಹೇಗೆ? ಒಂದು ಕ್ಷಣ ದೇವರು, ಧರ್ಮ, ಪಾಪ ಪುಣ್ಯದ ಮಾತನ್ನು ಬದಿಗಿಡೋಣ. ವ್ಯಾವಹಾರಿಕವಾಗಿ ನೋಡಿದರೂ ಗೋ ಸಂತತಿಯ ನಾಶ ಈ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವೇ ಸರಿ. ಮೋಡಿಗಾರ ಪ್ರಧಾನಿ ನರೇಂದ್ರ ಮೋದಿ ಬರುಬರುತ್ತ ಗೊಂದಲಕ್ಕೆ ಸಿಲುಕುತ್ತಿದ್ದಾರಾ? ಹತಾಶೆಗೆ ಒಳಗಾಗುತ್ತಿದ್ದಾರಾ? ಮುಂಬರುವ ಚುನಾವಣಾ ಸೋಲಿನ ಸಾಧ್ಯತೆಯಿಂದ ಅಧೀರರಾಗಿ ಹೆಜ್ಜೆ ತಪ್ಪುತ್ತಿದ್ದಾರಾ? ಇಂಥ ಪ್ರಶ್ನೆಗಳು ಇತ್ತೀಚೆಗೆ ಮತ್ತೆ ಮತ್ತೆ […]
Read More