ಇದು, ಎಪಿಎಂಸಿ ಮುಚ್ಚುವ ಹುನ್ನಾರ – ಸಿದ್ದರಾಮಯ್ಯ

– ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ‘ಮನೆ ಮಾಡೇ ಗರತಿ ಎಂದರೆ ಮೆಲ್ಲಗೆ ಮನೆಯೊಳಗೆ ಬಂದು ಮನೆನೇ ಮಾರಿದ್ಲಂತೆ…’ ಎಂಬ ಗಾದೆ ಮಾತನ್ನು ನಮ್ಮೂರ ಕಡೆ ಜನ ಹೇಳ್ತಿರ್ತಾರೆ. ಹಾಗಾಗಿದೆ ದೇಶದ ಸ್ಥಿತಿ. ಕೊರೊನಾ ವೈರಸ್‌ ದಾಳಿಯಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿ ನರಳುತ್ತಿರುವ ನಮ್ಮ ರೈತ ಬಂಧುಗಳು ‘ನಮ್ಮನ್ನು ರಕ್ಷಿಸಿ, ಉಳಿಸಿ’ ಎಂದು ಗೋಗರೆಯುತ್ತಿರುವಾಗ, ಕೇಂದ್ರ ಸರಕಾರ ಅವರ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳನ್ನು ನಾಶ ಮಾಡಲು […]

Read More

ಎಪಿಎಂಸಿಗಾಗಿ ಹೋರಾಟ – ಸುಗ್ರೀವಾಜ್ಞೆ ಜಾರಿಗೆ ತಂದರೆ 18ರಿಂದ ಬಂದ್‌ ಎಚ್ಚರಿಕೆ

– ಸುಗ್ರೀವಾಜ್ಞೆ ಜಾರಿಗೆ ತಂದರೆ 18ರಿಂದ ಬಂದ್‌ ಎಚ್ಚರಿಕೆ – ಸರಕಾರದ ಮೇಲೆ ಒತ್ತಡ, ಇಂದು ಸಂಪುಟದಲ್ಲಿ ಚರ್ಚೆ ವಿಕ ಸುದ್ದಿಲೋಕ ಬೆಂಗಳೂರು ಎಪಿಎಂಸಿ ಕಾಯಿದೆ ತಿದ್ದುಪಡಿ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಕಾಣಿಸಿಕೊಂಡಿದೆ. ಈ ನಡುವೆ, ರಾಜ್ಯ ಸರಕಾರವು ಕೇಂದ್ರದ ಒತ್ತಡಕ್ಕೆ ಮಣಿದು ಅವಸರದಿಂದ ಕಳುಹಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಬುಧವಾರ ವಾಪಸ್‌ ಕಳಿಸಿದ್ದಾರೆ. ಗುರುವಾರ ಸಂಪುಟದಲ್ಲಿ ಚರ್ಚೆ ನಡೆಸಿಯೇ ಸುಗ್ರೀವಾಜ್ಞೆಯನ್ನು ಅಂತಿಮಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಸರಕಾರದ ನಡೆ ಕುತೂಹಲ ಮೂಡಿಸಿದೆ. ಬುಧವಾರ ಎಪಿಎಂಸಿ ವರ್ತಕರು ರಾಜ್ಯದ ಬಹುತೇಕ […]

Read More

ತಿದ್ದುಪಡಿಯಲ್ಲ, ಸುಧಾರಣೆ – ಎಪಿಎಂಸಿ ತರಾತುರಿಯ ಬದಲಾವಣೆ ಯಾಕೆ?

ಶ್ರೀಮಂತ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ರೈತರನ್ನು ಸುಲಿಗೆ ಮಾಡುವುದನ್ನು ತಡೆಯಲೆಂದು ಎಪಿಎಂಸಿ ಕಾಯಿದೆ ರೂಪಿಸಿ ಜಾರಿಗೆ ತರಲಾಗಿತ್ತು. ಈಗ ಆ ಎಪಿಎಂಸಿ ಕಾಯಿದೆಯಲ್ಲಿ ದಿಢೀರ್‌ ತಿದ್ದುಪಡಿ ಮಾಡಲು ಸರಕಾರ ಮುಂದಾಗಿದೆ. ತಿದ್ದುಪಡಿ ಕಾಯಿದೆ ಸಂಬಂಧ ಸುಗ್ರೀವಾಜ್ಞೆ ಪ್ರಸ್ತಾಪವನ್ನು ಕೇಂದ್ರ ಸರಕಾರದ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಇದಕ್ಕೆ ಮುನ್ನ ತಿದ್ದುಪಡಿ ಸಂಬಂಧಿಸಿ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕಿತ್ತು; ಸಂಪುಟ ಸಭೆಯಲ್ಲಿ ಅನುಮೋದನೆ ಆಗಬೇಕಿತ್ತು. ಎರಡೂ ಆಗಿಲ್ಲ. ಇಷ್ಟೊಂದು ತರಾತುರಿಯಲ್ಲಿ ಲಾಕ್‌ಡೌನ್‌ ನಡುವೆಯೇ, ಎಪಿಎಂಸಿ ಕಾಯಿದೆ ಬದಲಾಯಿಸುವ ತರಾತುರಿ ಏನಿದೆ? ಇದು […]

Read More

ಎಪಿಎಂಸಿ ದುರ್ಬಲವಾದರೆ ರೈತರಿಗೆ ಸಂಕಷ್ಟ

ಕೃಷಿ ಮಾರುಕಟ್ಟೆಯನ್ನು ಬಲಪಡಿಸಲು ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿರುವ ಸಲಹೆ ಈಗ ವಿವಾದ ಸೃಷ್ಟಿಸಿದೆ. ಇದರ ಸಾಧ್ಯತೆ- ಅಪಾಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು 2017ರ ‘ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯಿದೆ’ಯನ್ನು (ಎಪಿಎಂಎಲ್ ಕಾಯಿದೆ) ಜಾರಿಗೊಳಿಸಲು ಕೇಂದ್ರ ಸರಕಾರ ನೀಡಿರುವ ಸಲಹೆಯನ್ನು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗುಜರಾತ್ ಅನುಸರಿಸಿವೆ. ಉತ್ತರ ಪ್ರದೇಶ ಪ್ರಯತ್ನಿಸುತ್ತಿದೆ. ಇದರಿಂದ ಖಾಸಗಿ ವಲಯದ ಕಂಪನಿಗಳೂ ಎಪಿಎಂಸಿ […]

Read More

ಎಪಿಎಂಸಿ ಉಳಿಸಿ

– ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಸುಗ್ರೀವಾಜ್ಞೆ ರಾಜ್ಯಪಾಲರ ಅಂಗಳಕ್ಕೆ – ಮಧ್ಯವರ್ತಿಗಳು-ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ, ರೈತರಿಗೆ ನಷ್ಟದ ಆತಂಕ – ರೈತ ನಾಯಕ ಯಡಿಯೂರಪ್ಪ ಸರಕಾರ ಕೇಂದ್ರದ ಒತ್ತಡಕ್ಕೆ ಮಣಿಯದಿರಲಿ ಎಂಬ ಆಗ್ರಹ – ಶಶಿಧರ ಹೆಗಡೆ, ಬೆಂಗಳೂರು ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರಕಾರವು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿದ್ದು, ಇದು ಈಗಾಗಲೇ ರಾಜ್ಯಪಾಲರ ಅಂಗಳ ತಲುಪಿದೆ. ಇದು ಜಾರಿಗೆ ಬಂದರೆ ರೈತರು ಬೆಳೆದ ಬೆಳೆಗೆ ಆಧಾರಸ್ತಂಭವಾಗಿರುವ ಎಪಿಎಂಸಿ ವ್ಯವಸ್ಥೆಯೇ ಕುಸಿದು ಬೀಳಲಿದೆ. ಭವಿಷ್ಯದಲ್ಲಿ ರೈತರಿಗೆ […]

Read More

ಪ್ಯಾಕೇಜ್ ಅನುಷ್ಠಾನ ಮುಖ್ಯ – ಬೃಹತ್ ನೆರವು ಸಂತ್ರಸ್ತರನ್ನು ತಲುಪಲಿ

ಸೋಮವಾರ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಬೇಗುದಿಯನ್ನು ತಕ್ಕಮಟ್ಟಿಗೆ ತಣಿಸಲು ಈ ಪ್ಯಾಕೇಜ್ ನೆರವಾಗಬಹುದು ಎಂದು ಆಶಿಸಬಹುದು. ಇದು ಜಿಡಿಪಿಯ ಶೇ.10ರಷ್ಟಿದ್ದು, ಗಣನೀಯ ಪ್ರಮಾಣದ ನೆರವೇ ಆಗಿದೆ. ರೈತರು, ಸಣ್ಣ ಹಾಗೂ ಕಿರು ಉದ್ಯಮಗಳು, ಕೈಗಾರಿಕೆ, ಮಧ್ಯಮ ವರ್ಗದವರಿಗೆ ಈ ಪ್ಯಾಕೇಜ್ ಸಲ್ಲಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಕೊರೊನಾ ಸಮರವನ್ನು […]

Read More

ಓಪನ್ ಆಗಿಲ್ಲ ಕೈಗಾರಿಕಾ ಲಾಕ್

– ಕಾರ್ಖಾನೆಗಳು ತೆರೆದರೂ ಕಾರ್ಮಿಕರು, ಕಚ್ಚಾ ವಸ್ತು ಕೊರತೆ | ಬರುತ್ತಿಲ್ಲ ಹೊಸ ಆರ್ಡರ್ – ವಲಸೆಯದೇ ದೊಡ್ಡ ಹೊಡೆತ | ನೌಕರರಿಗೆ ಸೋಂಕು ತಗುಲಿದರೆ ಮತ್ತೆ ಮುಚ್ಚುವ ಆತಂಕ – ಸುದರ್ಶನ ಚನ್ನಂಗಿಹಳ್ಳಿ ಬೆಂಗಳೂರು ಲಾಕ್‌ಡೌನ್‌ ಸಡಿಲಿಕೆಯಾಗಿ ಕೈಗಾರಿಕೆಗಳ ಮರು ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಟ್ಟು ವಾರ ಕಳೆದರೂ ಉದ್ಯಮಗಳ ಲಾಕ್ ಇನ್ನೂ ಪೂರ್ಣ ಪ್ರಮಾಣದಲ್ಲಿತೆರೆದುಕೊಂಡಿಲ್ಲಮತ್ತು ಸದ್ಯಕ್ಕೆ ತೆರೆಯುವ ಲಕ್ಷಣವೂ ಕಾಣುತ್ತಿಲ್ಲ. ಒಂದು ಕಡೆ ಕಾರ್ಮಿಕರ ವಲಸೆ, ಇನ್ನೊಂದು ಕಡೆ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಉತ್ಪಾದನೆ ಆರಂಭಕ್ಕೆ […]

Read More

ಮೂವರಲ್ಲಿ ಒಬ್ಬರಿಗೆ ಮಾಸ್ಕ್‌ ಇರಲಿಲ್ಲ

ಲಂಡನ್‌ನಿಂದ ಮರಳಿದ ವಿದ್ಯಾರ್ಥಿನಿ ಮೇಘನಾ ಅನುಭವ – ಏರ್‌ ಇಂಡಿಯಾದಿಂದ ಉತ್ಪಮ ಸ್ಪಂದನೆ, ನಿಲ್ದಾಣದಲ್ಲೂ ಉತ್ತಮ ವ್ಯವಸ್ಥೆ ಬೆಂಗಳೂರು: ವಿಮಾನದಲ್ಲಿದ್ದ ಎಲ್ಲರಿಗೂ ಮಾಸ್ಕ್‌, ಫೇಸ್‌ಶೀಲ್ಡ್‌ ಇರಲಿಲ್ಲ. ಮೂವರಲ್ಲಿ ಒಬ್ಬರಿಗೆ ಸುರಕ್ಷತಾ ಸಾಧನಗಳ ಕೊರತೆ ಇತ್ತು…. ಭಾರತೀಯರನ್ನು ವಾಪಸ್‌ ಕರೆಸಿಕೊಳ್ಳಲು ಕೇಂದ್ರ ಸರಕಾರ ಮಾಡಿದ ವಿಶೇಷ ವ್ಯವಸ್ಥೆಯಡಿ ಏರ್‌ ಇಂಡಿಯಾ ವಿಮಾನದಲ್ಲಿ ಲಂಡನ್‌ನಿಂದ ಸೋಮವಾರ ನಸುಕಿನಲ್ಲಿ ನಗರಕ್ಕೆ ಮರಳಿದ ಲ್ಯಾಂಡ್‌ಸ್ಕೇಪ್‌ ಆರ್ಕಿಟೆಕ್ಚರ್‌ ವಿದ್ಯಾರ್ಥಿನಿ ಮೇಘನಾ ತಮ್ಮ ಅನುಭವ ಹಂಚಿಕೊಂಡರು. ಕೆಲವು ಪ್ರಯಾಣಿಕರು ತಾವೇ ತಂದಿದ್ದ ಮಾಸ್ಕ್‌, ಗ್ಲೌಸ್‌ ಬಳಕೆ […]

Read More

ಪರದೇಶಕ್ಕಿಂತ ನಮ್ಮೂರೇ ಸಾಕಪ್ಪ: ಇಂಗ್ಲೆಂಡ್‌ನಿಂದ ವಾಪಸಾದ ಸೌಂದರ್ಯ ಜಯಮಾಲಾ ಅನಿಸಿಕೆ!

– ಜಯಂತ್‌ ಗಂಗವಾಡಿ ಬೆಂಗಳೂರು.  ನಾನು ಬೆಂಗಳೂರಿಗೆ ವಾಪಸ್‌ ಬರುತ್ತೇನೆ ಅನ್ನೋ ನಂಬಿಕೆಯೇ ಹೊರಟು ಹೋಗಿತ್ತು. ಮೇ 10ರ ಸಂಜೆ 5 ಗಂಟೆ ಸುಮಾರಿಗೆ ‘ಲಂಡನ್‌ನಿಂದ ಬೆಂಗಳೂರಿಗೆ ರಾತ್ರಿ 9.45ಕ್ಕೆ ವಿಮಾನ ಹೊರಡಲಿದೆ’ ಎಂದು ‘ಏರ್‌ ಇಂಡಿಯಾ’ ಕಚೇರಿಯಿಂದ ಫೋನ್‌ ಕರೆ ಬಂದಾಕ್ಷಣ ನಂಬಲು ಸಾಧ್ಯವಾಗದೆ ಜೋರಾಗಿ ಅತ್ತು ಬಿಟ್ಟೆ. ನಟಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಇಂಗ್ಲೆಂಡ್‌ನಲ್ಲಿ ಅನುಭವಿಸಿದ ಲಾಕ್‌ಡೌನ್‌ ನೋವಿನ ಕತೆಯನ್ನು ‘ವಿಜಯ ಕರ್ನಾಟಕ’ದ ಮುಂದೆ ತೆರೆದಿಟ್ಟದ್ದು ಹೀಗೆ. […]

Read More

ಕೈಗಾರಿಕೆಗಳಿಗೆ ಉತ್ತೇಜನ ನೀಡಿ – ಆರ್ಥಿಕತೆ ಚುರುಕಾಗಲು ಉದ್ಯಮ ಅಗತ್ಯ

ಹಂತಹಂತವಾಗಿ ಲಾಕ್‌ಡೌನ್ ಸಡಿಲಿಸುತ್ತಿರುವ ಸರಕಾರ, ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ನಿಗದಿತ ಸಿಬ್ಬಂದಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದೆ. ಆದರೆ ಕೈಗಾರಿಕೆಗಳು ಈ ಎರಡು ತಿಂಗಳ ಲಾಕ್‌ಡೌನ್ ಸೃಷ್ಟಿಸಿದ ಬಹಳ ಆಳವಾದ ಸಮಸ್ಯೆಗಳಿಂದ ನರಳುತ್ತಿವೆ. ಈ ಅವಧಿಯಲ್ಲಿ ಕೆಲಸ ನಿರ್ವಹಿಸದ ಕಾರಣದಿಂದ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿದೆ. ತಮ್ಮ ಉತ್ಪನ್ನಗಳಿಗೆ ಹೊರಗೆ ಬೇಡಿಕೆ ಯಾವ ಪ್ರಮಾಣದಲ್ಲಿದೆ ಎಂಬುದು ಗೊತ್ತಿಲ್ಲದ ಸನ್ನಿವೇಶದಲ್ಲಿ ಕೈಗಾರಿಕೆಗಳು ಕೆಲಸ ಆರಂಭಿಸಬೇಕಿದೆ. ಕಾರ್ಮಿಕರ ಕೊರತೆ ತೀವ್ರವಾಗಿದೆ. ಸಾರಿಗೆ ಸಂಪರ್ಕದ ನಿರ್ಬಂಧದಿಂದ ಕಚ್ಚಾವಸ್ತುಗಳ ಕೊರತೆ ಕಾಡುತ್ತಿದೆ. ಕಳೆದೆರಡು ತಿಂಗಳಿನಿಂದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top