ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಭವಿಷ್ಯದ ಶಿಕ್ಷಣದ ಅಡಿಪಾಯವನ್ನು ಹಾಕುತ್ತದೆ. ಆದರೆ, ಕೊರೊನಾ ಎಫೆಕ್ಟ್‌ನಿಂದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕೆ, ಬೇಡವೆ ಎಂದು ತೀರ್ಮಾನಿಸವುದರಲ್ಲಿ ಕಾಲ ಕಳೆದುಹೋಯಿತು. ಕೊನೆಗೂ ಜೂ.25ರಿಂದ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಯಿತು. ಯಾವುದೇ ಕಾರಣಕ್ಕೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಒಳ್ಳೆಯ ಬೆಳವಣಿಗೆಯೇ ಸರಿ. […]
Read More
ಜುಲೈ 1ನೇ ತಾರೀಕಿನಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಆರಂಭಿಸುವ ಚಿಂತನೆ ಮುನ್ನೆಲೆಗೆ ಬಂದಿದೆ. ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಕಚೇರಿ ಸಿಬ್ಬಂದಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಜೂನ್ 5ರಿಂದಲೇ ಕಚೇರಿ ಕರ್ತವ್ಯಕ್ಕೆ ಹಾಜರಾಗಬೇಕು ಹಾಗೂ ಜೂನ್ 8ರಿಂದ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಜೂನ್ 10ರಿಂದ 15ರವರೆಗೆ ಎಸ್‌ಡಿಎಂಸಿ ಸಭೆಗಳು ನಡೆಯಬೇಕು, ಜೂನ್ 15ರಿಂದ 20ರವರೆಗೆ ಶಾಲೆಯಿಂದ ಹೊರಗುಳಿದವರಿಗಾಗಿ ದಾಖಲಾತಿ ಆಂದೋಲನ ನಡೆಯಲಿದೆ ಎಂದೂ ಆಯುಕ್ತರು ನಿರ್ದೇಶಿಸಿದ್ದಾರೆ. […]
Read More
– ಎಸ್ಸೆಸ್ಸೆಲ್ಸಿ ಎಕ್ಸಾಂ ರದ್ದತಿ, ಮಂದೂಡಿಕೆ ಬೇಡ: ತಜ್ಞರ ಅಭಿಮತ – ಸೆಂಟರ್‌ಗೆ ಹೋಗುವ ಬದಲು ಸ್ಕೂಲಲ್ಲೇ ಬರೆಸುವುದು ಸೂಕ್ತ. ವಿಕ ಸುದ್ದಿಲೋಕ ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಕೇ ಬೇಡವೇ ಎಂಬ ಚರ್ಚೆ ಜೋರಾಗಿರುವ ನಡುವೆಯೇ, ವಿದ್ಯಾರ್ಥಿಗಳಿಗೆ ಅವರು ಕಲಿತ ಶಾಲೆಯಲ್ಲೇ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆ ನಡೆಸಿದರೆ ಯಾವುದೇ ಸಮಸ್ಯೆ ಇಲ್ಲ ಎಂಬ ‘ಮಧ್ಯಮ ಸಲಹೆ’ಯೊಂದು ಕೇಳಿಬಂದಿದ್ದು, ಇದನ್ನು ಶಿಕ್ಷಣ ವಲಯವೂ ಬೆಂಬಲಿಸಿದೆ. ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲರನ್ನೂ ಉತ್ತೀರ್ಣಗೊಳಿಸುವುದು ಸಮಂಜಸವಲ್ಲ […]
Read More
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಪರೀಕ್ಷೆಗಳನ್ನು ಯಾವಾಗ ನಡೆಸಬೇಕು, ನಡೆಸಬೇಕೋ ಬೇಡವೋ, ನಡೆಸಿದರೆ ಹೇಗೆ, ನಡೆಸದಿದ್ದರೆ ಏನು ತೊಂದರೆ ಮುಂತಾದ ಚರ್ಚೆಗಳು ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿವೆ. ಜೂನ್ 25ರಿಂದ ಜುಲೈ 4ರವರೆಗೆ ಸರಕಾರ ಪರೀಕ್ಷೆ ನಿಗದಿಪಡಿಸಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಾಗ ಪರೀಕ್ಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಅವರನ್ನು ಕೊರೊನಾ ಆತಂಕಕ್ಕೆ ತಳ್ಳಿದಂತಾಗಬಹುದು ಮತ್ತು ಒತ್ತಡ ಸೃಷ್ಟಿಗೆ ಕಾರಣವಾಗಬಹುದು. ಇದರಿಂದ ಅವರು ಪರೀಕ್ಷೆಯನ್ನೂ ಸರಿಯಾಗಿ ಬರೆಯಲಾಗದೆ ಹೋಗಬಹುದು ಎಂಬ ವಾದದಲ್ಲಿ ಭಾಗಶಃ ಸತ್ಯವಿದೆ. […]
Read More