
ಮೇ 3 ಹತ್ತಿರ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮೊದಲು ಹೇಳಿದಂತೆ ನಮ್ಮ ಲಾಕ್‌ಡೌನ್ ಅಂದು ಕೊನೆಗೊಳ್ಳಬೇಕು. ಆದರೆ ನಾವು ಲಾಕ್‌ಡೌನ್ ತೆರವಿಗೆ ಸಂಪೂರ್ಣ ಸಜ್ಜಾಗಿದ್ದೇವಾ? ಮೇ 3ರಂದು ಲಾಕ್‌ಡೌನ್ ಭಾಗಶಃ ತೆರವಾಗಬಹುದು ಎಂದೇ ಎಲ್ಲರ ನಂಬಿಕೆ. ಶಾಲೆಗಳು, ಕಾಲೇಜುಗಳು ಕಾರ್ಯಾರಂಭಿಸಬಹುದು. ಆದರೆ ಬಾರ್‌ಗಳು, ಮಾಲ್‌ಗಳು, ಥಿಯೇಟರ್‌ಗಳು ಓಪನ್ ಆಗಲಿಕ್ಕಿಲ್ಲ. ಬಹಳ ಬೇಗನೆ ಲಾಕ್‌ಡೌನ್ ತೆರವು ಮಾಡಿದರೆ ಅದರ ಪರಿಣಾಮ ಸೋಂಕು ಅಧಿಕಗೊಂಡು ಸಾವಿರಾರು ಮಂದಿ ಸಾಯಬಹುದು. ಬಹಳ ತಡವಾಗಿ ತೆರವು ಮಾಡಿದರೂ ಆರ್ಥಿಕತೆಗೆ ಹೆಚ್ಚಿನ […]