
ಸಮಾಜದ ಸಂಕಟ ನಿವಾರಣೆಗೆ ಧಾವಿಸುವ ರತನ್ ಟಾಟಾ ಅವರನ್ನು ಉದ್ಯಮಿಯಾಗಿ ಮಾತ್ರವಲ್ಲ, ಒಬ್ಬ ಉದಾರಿಯಾಗಿ ದೇಶದ ಜನ ನೆನೆಯುತ್ತಿದ್ದಾರೆ, ಗೌರವದಿಂದ ಕಾಣುತ್ತಿದ್ದಾರೆ. – ಹ.ಚ.ನಟೇಶ್‌ಬಾಬು ವ್ಯಾಪಾರಿಗಳು ಅಥವಾ ಉದ್ಯಮಿಗಳೆಂದರೆ ಸಮಾಜದಲ್ಲಿ ನಕಾರಾತ್ಮಕ ಭಾವನೆಗಳೇ ಹೆಚ್ಚು. ಲಾಭಕ್ಕಾಗಿ ಜನರನ್ನು ದೋಚುವ ಕಳ್ಳರಂತೆ ಉದ್ಯಮಿಗಳನ್ನು ಕೆಲವರು ಬಿಂಬಿಸುತ್ತಾರೆ. ಆದರೆ, ರತನ್ ಟಾಟಾ ಎಂದಾಗ ಎಲ್ಲರ ಮನದಲ್ಲಿ ಹೆಮ್ಮೆ ಮತ್ತು ಗೌರವದ ಭಾವ. 82 ವರ್ಷದ ರತನ್ ಟಾಟಾ, ಕೋವಿಡ್-19 ವಿರುದ್ಧದ ಸಮರಕ್ಕಾಗಿ 500 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರ […]