ಕೊರೊನಾ ಕಾರಣದಿಂದ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಮಂಕಾಗಿದ್ದ ದೇಶದ ಆರ್ಥಿಕತೆ, ಚೇತರಿಕೆ ಹಾಗೂ ಉತ್ಸಾಹದ ಎಲ್ಲ ಸುಳಿವುಗಳನ್ನೂ ತೋರಿಸುತ್ತಿದೆ. ಉದಾಹರಣೆಗೆ, ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ತುಂಬು ಉತ್ಸಾಹ ಕಾಣಿಸುತ್ತಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಸತತ ಏರಿಕೆ ತೋರಿಸುತ್ತಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಪಿಐ) ದೇಶದಲ್ಲಿ ಜೂನ್ ಮೊದಲ ವಾರದಲ್ಲಿ 22,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದ್ದಾರೆ. ಏಪ್ರಿಲ್ನಲ್ಲಿ ಸಂಪೂರ್ಣ ಕುಸಿದಿದ್ದ ಉದ್ಯೋಗ ಮಾರುಕಟ್ಟೆಯಲ್ಲಿ, ಮೇ ತಿಂಗಳ ಮೊದಲ ವಾರದಲ್ಲಿ 21 ದಶಲಕ್ಷ ಉದ್ಯೋಗಗಳು […]