
ಬುಡಕಟ್ಟು ಯುವತಿ ಈಗ ಅಸಿಸ್ಟಂಟ್ ಕಲೆಕ್ಟರ್ -ಮಲಯಾಳಂನಲ್ಲೇ ಐಎಎಸ್ ಪರೀಕ್ಷೆ ಬರೆದಿದ್ದರು ತಿರುವನಂತಪುರಂ: ಮುಂದೆ ಗುರಿ, ಹಿಂದೆ ಗುರು ಜತೆಗೊಂದಿಷ್ಟು ಛಲ, ಪರಿಶ್ರಮವಿದ್ದರೆ ನಿಜಕ್ಕೂ ಅಸಾಧ್ಯವಾದುದು ಯಾವುದೂ ಇಲ್ಲ. ಜಾತಿ, ಕುಲ, ಬಡತನ, ಸಾಮಾಜಿಕ ಸ್ಥಾನಮಾನ ಯಾವುದೂ ಸಾಧನೆಗೆ ಅಡ್ಡಿಯಾಗುವುದಿಲ್ಲ. ಇದನ್ನು ಕೇರಳದ ಬುಡಕಟ್ಟು ಸಮುದಾಯದ ಯುವತಿ ಶ್ರೀಧನ್ಯಾ ಸುರೇಶ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. 2018ರಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸ್ ಮಾಡಿದ ಕೇರಳದ ಬುಡಕಟ್ಟು ಸಮುದಾಯದ ಮೊದಲ ಯುವತಿ ಎಂಬ ಹಿರಿಮೆಗೆ ಪಾತ್ರರಾದ ಶ್ರೀಧನ್ಯಾ ಈಗ ಕೊಯಿಕ್ಕೋಡ್‌ನ […]