ತಳ ಸಮುದಾಯದಿಂದ ಬಂದು ಮೇಲ್ಮನೆ ಸೇರಿದ ಶಾಂತಾರಾಮ ಸಿದ್ದಿ ಹಿಂದಿದೆ ನಿಸ್ವಾರ್ಥ ಸೇವೆಯ ಚರಿತ್ರೆ – ಹರಿಪ್ರಕಾಶ ಕೋಣೆಮನೆ. ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯ ಅಶೋಕ ಗಸ್ತಿ, ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ, ಕರ್ನಾಟಕ ವಿಧಾನ ಪರಿಷತ್ತಿಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸಾಯಬಣ್ಣ ತಳವಾರ್ ಹಾಗೂ ಬುಡಕಟ್ಟು ಸಮದಾಯದ ಶಾಂತಾರಾಮ್ ಸಿದ್ದಿ ಅವರ ಆಯ್ಕೆ ವಿಚಾರದಲ್ಲಿ ಒಂದು ರೀತಿಯ ಸದಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಮೂಡಿದೆ. ಶಾಸನ ಸಭೆಗಳಲ್ಲಿ , ಅಧಿಕಾರದ ಆಯಕಟ್ಟಿನ ತಾಣಗಳಲ್ಲಿ ಸರ್ವರಿಗೂ ಪ್ರಾತಿನಿಧ್ಯ […]
Read More
– ಶಶಿಧರ ಹೆಗಡೆ. ನ್ಯಾಯ ನಿರ್ಣಯದ ವಿಚಾರ ಬಂದಾಗ ಸರ್ವಶ್ರೇಷ್ಠ ಹೋಲಿಕೆಗಾಗಿ ‘ಹಂಸಕ್ಷೀರ ನ್ಯಾಯ’ವೆಂದು ಹೇಳುವುದುಂಟು. ಹಂಸವೆಂದರೆ ಪಕ್ಷಿ. ಕ್ಷೀರವೆಂದರೆ ಹಾಲು. ಹಾಗಾಗಿ ಈ ಹೋಲಿಕೆಯೇ ವಿಚಿತ್ರವೆನಿಸಬಹುದು. ಹಂಸ ಪಕ್ಷಿ, ಕ್ಷೀರ ಮತ್ತು ನ್ಯಾಯಕ್ಕೆ ಎಲ್ಲಿಂದೆಲ್ಲಿಯ ಸಂಬಂಧವೆಂದು ಕೇಳಬಹುದು. ಪ್ರಾಯಶಃ ಇದೇ ಕಾರಣದಿಂದ ಈ ನುಡಿಕಟ್ಟು ಒಗಟಾಗಿಯೇ ಉಳಿದುಬಿಟ್ಟಿರಬಹುದು. ಹಂಸಪಕ್ಷಿಯ ಎದುರು ಕ್ಷೀರ ತುಂಬಿದ ಪಾತ್ರೆಯನ್ನು ಇಟ್ಟರೆ ಅದು ಕ್ಷೀರಪಾನವೊಂದನ್ನೇ ಮಾಡುತ್ತದೆ! ಅಂದರೆ ಹಾಲಿಗೆ ನೀರು ಬೆರೆಸಿ ಕೊಟ್ಟಿದ್ದಾರೆ ಎಂದುಕೊಳ್ಳಿ. ಹಂಸಪಕ್ಷಿಯು ಹಾಲನ್ನಷ್ಟೇ ಹೀರಿಕೊಳ್ಳುತ್ತದೆ. ಅರ್ಥಾತ್ ಹಾಲಿನೊಂದಿಗೆ […]
Read More
– ಕೋರೆ-ಕತ್ತಿ ಫೈಟ್ ನಡುವೆ ಕಡಾಡಿ, ಗಸ್ತಿ ಎಂಟ್ರಿ. – ಘಟಾನುಘಟಿಗಳನ್ನು ಬದಿಗೊತ್ತಿ ಪಕ್ಷ ನಿಷ್ಠರಿಗೆ ಗಿಫ್ಟ್. ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯಸಭೆ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸುತ್ತಿದ್ದ ಮತ್ತು ಭಿನ್ನಮತದ ಮೂಲಕ ಒತ್ತಡ ಹಾಕುತ್ತಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಭರ್ಜರಿ ಶಾಕ್ ಕೊಟ್ಟಿದೆ. ಚರ್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ, ಪಕ್ಷ ನಿಷ್ಠರಾದ ಸಾಮಾನ್ಯ […]
Read More
ರಾಜ್ಯದಿಂದ ತೆರವಾಗಿರುವ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಂಡಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್.ಡಿ.ದೇವೇಗೌಡರು ಅಭ್ಯರ್ಥಿಗಳಾಗಿರುವುದರಲ್ಲಿ ಏನೂ ಅಚ್ಚರಿಯಿಲ್ಲ. ಈಗಾಗಲೇ ಇವರ ಪ್ರಾತಿನಿಧ್ಯವನ್ನು ಜನ ದಶಕಗಳಿಂದ ಕಂಡಿದ್ದಾರೆ. ಬಿಜೆಪಿಯಿಂದಲೂ ಬಲಾಢ್ಯರಾದ ಹಲವು ವ್ಯಕ್ತಿಗಳ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಆದರೆ ಅಚ್ಚರಿ ಎನ್ನುವಂತೆ ಅನಾಮಿಕರಾದ ಇಬ್ಬರ ಆಯ್ಕೆಯಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್ ಪ್ರಕಟಿಸಿ ಬಿಜೆಪಿ […]
Read More