
ವಿಕ ಸುದ್ದಿಲೋಕ ಬೆಂಗಳೂರು: ಹಲವು ಕಡೆಗಳಲ್ಲಿ ಅವರ ಮೇಲೆ ಹಲ್ಲೆನಡೆಯಿತು, ಕೆಲವೆಡೆ ಅವರ ಕಡತಗಳನ್ನು ಕಿತ್ತೆಸೆದರು, ಬಾಯಿಗೆ ಬಂದಂತೆ ನಿಂದಿಸಿದರು.. ಆದರೂ ಅವರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ಮೂಲಸೌಕರ್ಯಗಳಿಲ್ಲ, ರೋಗಗಳ ಆತಂಕ ತುಂಬಿರುವ ಜಾಗಗಳಲ್ಲಿ ಅವರು ಒಬ್ಬಂಟಿಯಾಗಿ ಸಂಚರಿಸಬೇಕು.. ಅಷ್ಟಾದರೂ ಅವರು ಎದೆಗುಂದಲಿಲ್ಲ. ಸಕಾಲದಲ್ಲಿ ವೇತನ ನೀಡಲಿಲ್ಲವೆಂದು ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ, ಸಂಕಷ್ಟದ ಈ ಕಾಲದಲ್ಲಿ ಅದನ್ನೇ ಬಳಸಿ ಬ್ಲ್ಯಾಕ್‌ಮೇಲ್ ಮಾಡಲಿಲ್ಲ. – ಇದು ಕೊರೊನಾ ವಿರುದ್ಧ ಸಮರದಲ್ಲಿ ನೈಜ ಸೇನಾನಿಗಳಾಗಿ ಊರೂರುಗಳಲ್ಲಿ ಕಾರ್ಯಾಚರಿಸುತ್ತಿರುವ ಆಶಾ […]