
ಅಮೆರಿಕ, ಜಪಾನ್ ಸೇರಿ ಅನೇಕ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿವೆ. ಕೋವಿಡ್-19 ಬಿಕ್ಕಟ್ಟು ಚೀನಾಗೆ ದುಬಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತ ಹೊಸ ಅವಕಾಶಗಳನ್ನು ತನ್ನದಾಗಿಸಿಕೊಂಡು, ಗಣನೀಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆ ಇದೆ. ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾವನ್ನು ‘ಜಗತ್ತಿನ ಉತ್ಪಾದನೆಯ ಕಾರ್ಖಾನೆ’ ಎಂದು ಸಂತಸದಿಂದ ಕರೆಯುತ್ತಿತ್ತು. ನಾನಾ ರಾಷ್ಟ್ರಗಳು ಚೀನಾದ ಅಗ್ಗದ ಮಾಲುಗಳಿಂದ ಸಂಸ್ಕರಿತ, ಉತ್ತಮ ದರ್ಜೆಯ ಪ್ರಾಡಕ್ಟ್‌ಗಳ ತನಕ ಎಲ್ಲವನ್ನೂ ಸ್ವೀಕರಿಸುತ್ತಿತ್ತು. ವ್ಯಾಪಾರದ ಮೂಲಕ ಚೀನಾ […]