
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾದ ಮೂರು ವಾರಗಳ ಮೊದಲ ಲಾಕ್‌ಡೌನ್ ಮುಗಿದು ಈಗ ಮೇ.3ರವರೆಗೆ ಎರಡನೇ ಹಂತದ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಸೋಂಕು ಹರಡಿರುವ ಇತರ ಹಲವು ದೇಶಗಳಿಗೆ ಹೋಲಿಸಿದರೆ, ಲಾಕ್‌ಡೌನ್ ಅವಧಿಯಲ್ಲಿ ಸೋಂಕಿನ ಪ್ರಮಾಣವನ್ನು ಸಾಕಷ್ಟು ಪರಿಣಾಮಕಾರಿಯಾಗಿಯೇ ತಡೆಗಟ್ಟಲಾಗಿದೆ. ಸೋಂಕುಗಳು ಮಿತಿ ಮೀರಿ ಹೋಗದಂತೆ ಇದು ಸಹಕರಿಸಿದೆ. ಆದರೆ ಈ ಲಾಕ್‌ಡೌನ್ ದುಷ್ಪರಿಣಾಮವಾಗಿ ಆರ್ಥಿಕತೆ ದೊಡ್ಡ ಹೊಡೆತ ತಿಂದಿದೆ. ಇದನ್ನು ಸರಿದೂಗಿಸಿಕೊಂಡು ಹೋಗಲು ಮುಂದಿನ ಅವಧಿಯಲ್ಲಿ ಲಾಕ್‌ಡೌನ್‌ನ ಕೆಲವು ಉಪಕ್ರಮಗಳನ್ನು ಸಡಿಲಗೊಳಿಸುವ ಚಿಂತನೆಗೆ ಕೇಂದ್ರ […]