ಟೂರಿಸಂಗೆ ಮರುಜೀವ

– ರಾಜ್ಯದ 35 ಲಕ್ಷ ಜನರ ಉದ್ಯೋಗ ಮರುಸ್ಥಾಪನೆಗೆ ಯತ್ನ – ವಿಕ ಸಾರಥ್ಯದ ಕರುನಾಡ ಕಟ್ಟೋಣ ಅಭಿಯಾನಕ್ಕೆ ಸಚಿವ ಸಿ.ಟಿ. ರವಿ ಚಾಲನೆ.  ವಿಕ ಸುದ್ದಿಲೋಕ ಬೆಂಗಳೂರು:  ಕೊರೊನಾ ಕಾರಣದಿಂದಾಗಿ ಎರಡೂವರೆ ತಿಂಗಳಿನಿಂದ ಸ್ತಬ್ಧವಾಗಿರುವ ಪ್ರವಾಸೋದ್ಯಮ ಮತ್ತು ಹೋಟೆಲ್ ಕ್ಷೇತ್ರದ ಪುನಶ್ಚೇತನದ ಮಾಸ್ಟರ್ ಪ್ಲ್ಯಾನ್ ಅನ್ನು ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ. ರವಿ ತೆರೆದಿಟ್ಟಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ ಪುನರುತ್ಥಾನಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಮಾಲೋಚನೆ ಮೂಲಕ ರೂಪಿಸುವ ‘ವಿಜಯ […]

Read More

ಕೆಲಸಕ್ಕೆ ಬೇಕಾಗಿದ್ದಾರೆ

– ಉದ್ಯೋಗ ನಷ್ಟದ ನಡುವೆಯೂ ಆಶಾಕಿರಣ | ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಸೃಷ್ಟಿ – ಕಾರ್ಮಿಕರ ವಲಸೆಯಿಂದ ಸ್ಥಳೀಯರಿಗೆ ಭರವಸೆ | ದೇಶಾದ್ಯಂತ ಹೊಸ ಟ್ರೆಂಡ್. ವಿಕ ಸುದ್ದಿಲೋಕ ಬೆಂಗಳೂರು:  ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕೈಗಾರಿಕೆ ಮತ್ತು ವ್ಯವಹಾರೋದ್ಯಮಗಳು ನಿಧಾನವಾಗಿ ಚಿಗುರಿಕೊಳ್ಳುತ್ತಿವೆ. ಈ ನಡುವೆ, ಉದ್ಯೋಗಿಗಳಿಗೂ ಬೇಡಿಕೆ ಸೃಷ್ಟಿಯಾಗಿ ಆಶಾವಾದ ಮೂಡಿಸಿದೆ.ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕ್ಷೇತ್ರ ತತ್ತರಿಸಿ ಹೋಗಿದ್ದು, ಕೈಗಾರಿಕೆ, ವ್ಯಾಪಾರೋದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದವು. ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ಜಾಬ್‌ಲಾಸ್‌ನ ಹೊಡೆತವೂ ತೀವ್ರವಾಗಿತ್ತು. ಈ ನಡುವೆ, ಆರ್ಥಿಕ […]

Read More

ಕೊರೊನಾ ಹಿನ್ನೆಲೆಯಲ್ಲಿ ಒಂದು ಧ್ಯಾನ !

– ಪಿ.ಶೇಷಾದ್ರಿ.   ಬೆಂಗಳೂರಿನಲ್ಲಿ ನಾನಿರುವ ಮನೆ ನಗರದ ನಡುವಿನ ವಸತಿ ಸಮುಚ್ಛಯದ ಆರನೇ ಮಹಡಿಯಲ್ಲಿದೆ. ಬೆಳಗ್ಗೆ ಎದ್ದ ತಕ್ಷಣ ನಮಗೆ ಕೇಳಿಸುವ ಮೊದಲ ಶಬ್ದ ಹಕ್ಕಿಗಳ ಚಿಲಿಪಿಲಿ. ಈ ನಗರದ ಮಧ್ಯೆ ಹಕ್ಕಿಗಳ ಕಲರವ ಕೇಳಲು ಮುಖ್ಯ ಕಾರಣವೆಂದರೆ ನಮ್ಮ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡಂತೆ ಇರುವ ಐದೆಕರೆ ಖಾಲಿ ಸೈಟು! ಪ್ರಾಯಶಃ ಯಾವುದೋ ತಕರಾರಿನಿಂದ ಅದು ಖಾಲಿ ಉಳಿದಿದೆ ಅಷ್ಟೆ. ಈ ಖಾಲಿ ಜಾಗದಲ್ಲಿ ದಟ್ಟವಾಗಿ ಗಿಡ ಮರಗಳು ಬೆಳೆದುಕೊಂಡು, ಪುಟ್ಟ ಕಾಡಿನಂತಿದೆ. ಇಲ್ಲಿ ಹಕ್ಕಿಗಳು ಸಂತೋಷದಿಂದ ಸಂಸಾರ […]

Read More

ಸುರಕ್ಷಿತವಾಗಿರಲಿ ಮರುವಲಸೆ – ಸ್ಥಳೀಯರು ವೃತ್ತಿ ಕೌಶಲ ಮೆರೆಯಬೇಕು

ಲಕ್ಷಾಂತರ ವಲಸೆ ಕಾರ್ಮಿಕರಿಗೆ ನೆಲೆ ನೀಡಿದ್ದ ರಾಜಧಾನಿ ಬೆಂಗಳೂರಿನತ್ತ ಮತ್ತೆ ಮರು ವಲಸೆ ಪರ್ವ ಆರಂಭವಾಗಿದೆ. ಇವರೆಲ್ಲ ಲಾಕ್‌ಡೌನ್‌ ಸಂದರ್ಭದಲ್ಲಿ ಉಂಟಾದ ದುಡಿಮೆ ನಷ್ಟ, ಹಸಿವುಗಳಿಂದ ಕಂಗೆಟ್ಟು ತಂತಮ್ಮ ಗ್ರಾಮಗಳತ್ತ ತೆರಳಿದ್ದವರು. ಈಗಾಗಲೇ ಜೂನ್ 1ರಿಂದ ಹಲವು ಉದ್ಯಮಗಳನ್ನು ಆರಂಭಿಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ನಿರೀಕ್ಷೆಗೂ ಮೊದಲೇ ಉದ್ದಿಮೆಗಳು ಮತ್ತೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇವರು ಮರಳಿ ಬರಲು ಸಿದ್ಧರಾಗಿದ್ದಾರೆ. ಇವರ ಮರುವಲಸೆಯ ಸಂದರ್ಭದಲ್ಲಿ ಕೋಲಾಹಲ, ಗೊಂದಲ ಉಂಟಾಗಿತ್ತು. ಅಂಥದೊಂದು ಬಿಕ್ಕಟ್ಟು ಮತ್ತೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಸರಕಾರ […]

Read More

ಮತ್ತೆ ಬೆಂಗಳೂರಿನತ್ತ

– ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ರಾಜಧಾನಿಯತ್ತ ಕಾರ್ಮಿಕರ ಪಯಣ – ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಇಲ್ಲ | ನಗರದಲ್ಲಿ ಹೋಟೆಲ್, ರಿಯಾಲ್ಟಿ ಚುರುಕು.  ವಿಕ ಬ್ಯೂರೊ ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಕಳೆದ ಕೆಲವು ದಿನಗಳಿಂದ ಮತ್ತೆ ರಾಜಧಾನಿಯತ್ತ ಮುಖ ಮಾಡುತ್ತಿರುವ ಸೂಚನೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಜೂ.1ರಿಂದ ಹೋಟೆಲ್‌ಗಳು ತೆರೆದುಕೊಳ್ಳಲಿದ್ದು, ಕಟ್ಟಡ ನಿರ್ಮಾಣ ಸೇರಿದಂತೆ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಈ ವಲಯದಲ್ಲಿ ತೊಡಗಿಸಿಕೊಂಡಿದ್ದವರಲ್ಲಿ ಹೆಚ್ಚಿನವರು ಇದೀಗ ಮರಳಿ ಬರಲು ಆರಂಭಿಸಿದ್ದಾರೆ. ಕೊರೊನಾ […]

Read More

ಓಪನ್ ಆಗಿಲ್ಲ ಕೈಗಾರಿಕಾ ಲಾಕ್

– ಕಾರ್ಖಾನೆಗಳು ತೆರೆದರೂ ಕಾರ್ಮಿಕರು, ಕಚ್ಚಾ ವಸ್ತು ಕೊರತೆ | ಬರುತ್ತಿಲ್ಲ ಹೊಸ ಆರ್ಡರ್ – ವಲಸೆಯದೇ ದೊಡ್ಡ ಹೊಡೆತ | ನೌಕರರಿಗೆ ಸೋಂಕು ತಗುಲಿದರೆ ಮತ್ತೆ ಮುಚ್ಚುವ ಆತಂಕ – ಸುದರ್ಶನ ಚನ್ನಂಗಿಹಳ್ಳಿ ಬೆಂಗಳೂರು ಲಾಕ್‌ಡೌನ್‌ ಸಡಿಲಿಕೆಯಾಗಿ ಕೈಗಾರಿಕೆಗಳ ಮರು ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಟ್ಟು ವಾರ ಕಳೆದರೂ ಉದ್ಯಮಗಳ ಲಾಕ್ ಇನ್ನೂ ಪೂರ್ಣ ಪ್ರಮಾಣದಲ್ಲಿತೆರೆದುಕೊಂಡಿಲ್ಲಮತ್ತು ಸದ್ಯಕ್ಕೆ ತೆರೆಯುವ ಲಕ್ಷಣವೂ ಕಾಣುತ್ತಿಲ್ಲ. ಒಂದು ಕಡೆ ಕಾರ್ಮಿಕರ ವಲಸೆ, ಇನ್ನೊಂದು ಕಡೆ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಉತ್ಪಾದನೆ ಆರಂಭಕ್ಕೆ […]

Read More

ಗಡಿ ಮೀರಿದರೆ ಅವಘಡ

– ಲಾಕ್ ಸಡಿಲಿಕೆಯಿಂದ ಜಿಲ್ಲಾಡಳಿತಗಳಿಗೆ ಎದುರಾಗಿದೆ ಅಗ್ನಿ ಪರೀಕ್ಷೆ – ರಾಜ್ಯ, ಅಂತರ್ಜಿಲ್ಲಾ ಗಡಿ ಪ್ರವೇಶದ ಮೇಲೆ ಕಣ್ಣಿಡದಿದ್ರೆ ಡೇಂಜರ್ ವಿಕ ಬ್ಯೂರೊ ಬೆಂಗಳೂರು: ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಮೇ 4ರಿಂದ ಜನ ಮತ್ತು ವಾಹನ ಸಂಚಾರ ನಿರ್ಬಂಧ ಸಡಿಲಗೊಳ್ಳುವುದರಿಂದ ಜನರು ಸ್ವಲ್ಪ ನಿರಾಳರಾಗಬಹುದು. ಆದರೆ, ಇದರೊಂದಿಗೆ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಸಂಚಾರಕ್ಕೂ ಅವಕಾಶ ಸಿಗುವುದರಿಂದ ಸ್ವಲ್ಪವೇ ಮೈಮರೆತರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳಿದ್ದ ಸಮಯದಲ್ಲೇ ಮಂಡ್ಯ ಜಿಲ್ಲೆಯೊಂದಕ್ಕೇ ಮಹಾರಾಷ್ಟ್ರದಿಂದ ಸಾವಿರಗಟ್ಟಲೆ […]

Read More

‘ಜಮೀರ ಹಮ್ಮೀರ’ ಎಂದ್ರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ

-ಯಾವುದೇ ಕೋಮಿನ ನಾಯಕರ ಅತಿರೇಕದ ನಡವಳಿಕೆ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಈಗ ಇಲ್ಲ. – ಶಶಿಧರ ಹೆಗಡೆ, ಬೆಂಗಳೂರು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪಿತಾಮಹ ಎಂದರೆ ಕಾಂಗ್ರೆಸ್ ಪಕ್ಷ. ಅದರಲ್ಲೂ ಮುಸ್ಲಿಂ ತುಷ್ಟೀಕರಣದಲ್ಲಿ ಪುರಾತನ ಕಾಂಗ್ರೆಸ್ ಪಕ್ಷದ ಚರಿತ್ರೆ ‘ಕಿರೀಟಪ್ರಾಯ’ವಾದುದು. ಮುಲಾಯಂ, ಲಾಲೂ, ದೀದಿ, ನಿತೀಶ್ ಕುಮಾರ್‌ರಂಥವರು ಪ್ರವರ್ಧಮಾನಕ್ಕೆ ಬರುವ ಮೊದಲು ಮುಸಲ್ಮಾನರ ದಷ್ಟಿಯಲ್ಲಿ ಕಾಂಗ್ರೆಸ್ ಯಾವತ್ತಿಗೂ ಚಾಂಪಿಯನ್ ಆಗಿತ್ತು. ಆದರೆ, ಕಾಂಗ್ರೆಸ್ ಹೊರತಾಗಿಯೂ ದೇಶದ ರಾಜಕಾರಣದಲ್ಲಿ ತಮ್ಮನ್ನು ಆಧರಿಸುವವರು ಸಿಕ್ಕಾಗ ಮುಸಲ್ಮಾನರ ನಿಷ್ಠೆಯೂ ಮುಲಾಯಂ, ಲಾಲೂಗಳತ್ತ […]

Read More

ಆರ್ಥಿಕ ಪುನಶ್ಚೇತನಕ್ಕೆ ಇದು ಸರಿಯಾದ ಕಾಲ

– ಕಿರಣ್‌ಕುಮಾರ್ ಡಿ.ಕೆ. ಹದಗೆಟ್ಟ ಅರ್ಥವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಹರಸಾಹಸಪಡುತ್ತಿದ್ದ ಕೇಂದ್ರ ಸರಕಾರಕ್ಕೆ ಮತ್ತೆ ಪುಟಿದೇಳಲು ಕೊರೊನಾ ಲಾಕ್‌ಡೌನ್ ಅವಕಾಶ ನೀಡಿದೆ! ಕೊರೊನಾ ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಪುನಶ್ಚೇತನ ಈ ಎರಡೂ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸುಲಭವಲ್ಲವಾದರೂ ದೇಶಾದ್ಯಂತ ಸೋಂಕಿನ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮೊದಲೇ ಆರ್ಥಿಕತೆಗೆ ಚೇತರಿಕೆ ನೀಡುವತ್ತ ಗಂಭೀರವಾಗಿ ಹೆಜ್ಜೆ ಇರಿಸಲು ಕೇಂದ್ರ ಸರಕಾರ ಮುಂದಡಿ ಇಡಲಾರಂಭಿಸಿದೆ. ದೇಶಾದ್ಯಂತ ಉತ್ಪಾದಕತೆಗೇ ಬ್ರೇಕ್ ಬಿದ್ದಿದೆ. ಹಣಕಾಸಿನ ಹರಿವು ಸಂಪೂರ್ಣ ಸ್ತಬ್ಧ ಎನ್ನುವಂತಾಗಿದೆ. ಹೀಗಿರುವಾಗ ಕೊರೊನಾ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top