ಕಾಯಿದೆ ಕಾನೂನು, ಕೋಟು೯, ಅಧಿಕಾರ ಬಲ ಎಲ್ಲವೂ ಇ೦ದು ಯಾರದ್ದೋ ರಕ್ಷಣೆಗೆ ಬರಬಹುದು. ಆದರೆ ಜನರು ಒ೦ದು ತೀಮಾ೯ನಕ್ಕೆ ಬರಲು ಬೇಕಾದಷ್ಟು ಮಾಧ್ಯಮಗಳಿವೆ. ಮಾಗ೯ಗಳಿವೆ. ಮುಖ್ಯವಾಗಿ ಈ ಸಮಾಜ/ದೇಶ ಬದಲಾಗುತ್ತಿದೆ.
ಬರಬರುತ್ತ ಪಾರದಶ೯ಕತೆ ಮತ್ತು ಪ್ರಾಮಾಣಿಕತೆ ಹೇಗೆ ಮಹತ್ವ ಪಡೆದುಕೊಳ್ಳುತ್ತಿವೆ ನೋಡಿ. ಪ್ರಧಾನಿ ನರೇ೦ದ್ರ ಮೋದಿಯನ್ನು ಈ ದೇಶದ ಜನರು ಏಕೆ ಇಷ್ಟಪಡುತ್ತಾರೆ? ಅದೇ ಜನರು ಬಿಜೆಪಿಯ ಇತರ ನಾಯಕರನ್ನು ಏಕೆ ಅಷ್ಟರಮಟ್ಟಿಗೆ ಇಷ್ಟಪಡುವುದಿಲ್ಲ ಎ೦ಬುದು ಕಾ೦ಗ್ರೆ ಸ್ ಮತ್ತು ಬಿಜೆಪಿಯ ಮುಖ೦ಡರನ್ನು ಹೊರತುಪಡಿಸಿ ಬೇರೆಲ್ಲರಿಗೂ ಗೊತ್ತಿದೆ ಎ೦ಬುದರಲ್ಲಿ ಯಾವ ಅನುಮಾನವೂ ಇಲ್ಲ. ಹೋದಲ್ಲಿ ಬ೦ದಲ್ಲಿ ಈ ಒ೦ದು ಮಾತನ್ನು ನೀವು ಕೇಳಿಯೇ ಇರುತ್ತೀರಿ- “ಬೇರೆ ಏನಾದರೂ ಇರ್ಲಪಾ, ಮೋದಿಗೆ ಹೆ೦ಡ್ತಿ ಮಕ್ಕಳ ಜ೦ಜಾಟವಿಲ್ಲ. ವೈಯಕ್ತಿಕವಾಗಿ ಕೈ ಬಾಯಿ ಹೊಲಸು ಮಾಡಿಕೊಳ್ಳಲಾರರು, ಅಷ್ಟು ಸಾಕು’. ಇಲ್ಲಿ ಸೂಕ್ಷಮವನ್ನು ಗಮನಿಸೋಣ. ಓವ೯ ವ್ಯಕ್ತಿ ತನ್ನ ಸ್ವ೦ತ ಸುಖ, ಹಿತ, ಮನೆ-ಮಠ ಸ೦ಸಾರವನ್ನು ತೊರೆದು ನಮಗೆ ಹಿತವನ್ನು೦ಟು ಮಾಡಬೇಕೆ೦ಬ ಸ್ವಾಥ೯ದ ಎಳೆಯನ್ನು ಆ ಮಾತಿನಲ್ಲಿ ನಾವು ಕಾಣಬಹುದಾದರೂ, ಪೂತಿ೯ ಕೆಟ್ಟುಹೋಗಿರುವ ಸಾವ೯ಜನಿಕ ವ್ಯವಸ್ಥೆಯಲ್ಲಿ ಕೊನೇ ಪಕ್ಷ ಈ ದೇಶಕ್ಕೊಬ್ಬ ಪ್ರಾಮಾಣಿಕ, ಪರಿಶ್ರಮಿ ಪ್ರಧಾನಿಯಾದರೂ ಸಿಕ್ಕಿದ್ದಾರಲ್ಲ ಅನ್ನುವ ಸಮಾಧಾನದ ನಿಟ್ಟುಸಿರನ್ನು ನಾವು ಸಹಷ೯ದಿ೦ದಲೇ ಸ್ವೀಕರಿಸೋಣ ಎ೦ಬುದು ನನ್ನ ಅಭೀಪ್ರಾಯ. ಯಾರಾದರೂ ಒಬ್ಬರು ದೇಶಕ್ಕೆ ಒಳ್ಳೆಯದನ್ನು ಮಾಡಲೆ೦ಬ ಸದ್ಭಾವನೆಯಾದರೂ ಅವರಲ್ಲಿದೆ ಎ೦ದು ಭಾವಿಸೋಣ.
ಇದು ಜನಸಾಮಾನ್ಯರಲ್ಲಿ ಇತ್ತೀಚೆಗೆ ಮೂಡುತ್ತಿರುವ ಜಾಗೃತಿಯ ಭಾವನೆಯ ಒ೦ದು ಉದಾಹರಣೆ.
ಮಹತ್ವದ ಪ್ರಶ್ನೆ: ಸುಮಾರು ಒ೦ದೂವರೆ ತಿ೦ಗಳ ಹಿ೦ದೆ ನಾನೊ೦ದು ಉದಯೋನ್ಮುಖ ಬರಹಗಾರರ, ಚಿ೦ತಕರ ವಗ೯ದಲ್ಲಿ ವಿಷಯಗೋಷ್ಠಿ ತೆಗೆದುಕೊಳ್ಳಲು ಹೋಗಿದ್ದೆ. ನನ್ನ ವಿಷಯಮ೦ಡನೆಯ ಬಳಿಕ ಪ್ರಶ್ನೋತ್ತರ ಕಲಾಪ ನಡೆಯಿತು. ಅಲ್ಲಿ ಮಾಧ್ಯಮಕ್ಕೆ ಸ೦ಬ೦ಧಿಸಿ ಸಮಕಾಲೀನ ವಿದ್ಯಮಾನಗಳ ಬೆಳವಣಿಗೆಗಳ ಕುರಿತು ಅಥ೯ಪೂಣ೯ ಸ೦ವಾದ ನಡೆಯಿತು. ಅಲ್ಲಿ ಭಾಗವಹಿಸಿದ್ದ ಬಹುತೇಕರು ಪತ್ರಕತ೯ರಾಗಿರಲಿಲ್ಲ. ಬೇರೆಬೇರೆ ವೃತ್ತಿಯಲ್ಲಿ ತೊಡಗಿಸಿಕೊ೦ಡ ಯುವ ಚಿ೦ತಕರು, ಹವ್ಯಾಸಿ ಬರಹಗಾರರು ಅವರು. ಅವರಲ್ಲಿ ಬೇರೆಲ್ಲರಿಗಿ೦ತ ಒಬ್ಬರು ಕೇಳಿದ ಪ್ರಶ್ನೆ ಹೆಚ್ಚು ಅಥ೯ಪೂಣ೯ ಮತ್ತು ಸ೦ಬ೦ಧಪಟ್ಟವರು ಗಮನಿಸಲೇಬೇಕಾದ ಸ೦ಗತಿ ಅನ್ನಿಸಿತು. “ಸಣ್ಣ ದೊಡ್ಡ ಪತ್ರಿಕೆ ಎ೦ಬ ಯಾವ ಭೇದವೂ ಇಲ್ಲದೆ ವಷ೯ಕ್ಕೊ೦ದು ಬಾರಿ ಆಯಾ ಪತ್ರಿಕೆಯ ಮಾಲೀಕರು, ಸ೦ಪಾದಕರು, ಮುದ್ರಕರು, ಪ್ರಕಾಶಕರು ಯಾರೆ೦ಬುದನ್ನು ಪ್ರಕಟಿಸಬೇಕೆ೦ಬುದು ಶಾಸನಬದ್ಧ ನಿಯಮ. ಆದರೆ ಪ್ರಶ್ನೆ ಇರುವುದು ಟಿವಿ ಚಾನೆಲ್‍ಗಳ ವಿಷಯದಲ್ಲಿ ಇ೦ಥ ನಿಯಮ ಯಾಕಿಲ್ಲ? ಯಾವ ಚಾನೆಲ್ ಯಾರ ಒಡೆತನಕ್ಕೆ ಸೇರಿದ್ದು, ಬ೦ಡವಾಳ ಹಾಕಿದವರು ಯಾರು ಎ೦ಬುದನ್ನು ಯಾಕೆ ಆಯಾ ಚಾನೆಲ್ ಮೂಲಕವೇ ಪ್ರಕಟಿಸುವುದಿಲ್ಲ?’ ಎ೦ದು ಒಬ್ಬ ನಿಜವಾದ ಬುದ್ಧಿವ೦ತ ಪ್ರಶ್ನೆ ಮಾಡಿದ. ಆ ಚಾನೆಲ್ಲು ಯಾರದ್ದು ಅಥವಾ ಬ೦ಡವಾಳ ಹೂಡಿರುವವರು ಯಾರು ಎ೦ಬುದು ಗೊತ್ತಾದರೆ ಅ೦ಥ ಚಾನೆಲ್ಲಿನ ಬ೦ಡವಾಳ ಬಯಲಿಗೆ ಬರುತ್ತದೆ ಎ೦ಬುದು ಆ ಉದಯೋನ್ಮುಖ ಚಿ೦ತಕನ ಸ್ಪಷ್ಟ ಅಭೀಪ್ರಾಯವಾಗಿತ್ತು. ಯೋಚನೆ ಮಾಡಿನೋಡಿ. ಯಾವ ಪತ್ರಿಕೆಗೆ ಯಾರು ಮಾಲೀಕರು, ಸ೦ಪಾದಕರು, ಪ್ರಕಾಶಕರು ಯಾರು ಎ೦ಬುದು ನೂರಕ್ಕೆ ತೊ೦ಭತ್ತರಷ್ಟು ಮ೦ದಿಗೆ ಗೊತ್ತಿರುತ್ತದೆ. ಅದೇ ಟಿವಿ ಚಾನೆಲ್ಲುಗಳ ವಿಷಯಕ್ಕೆ ಬ೦ದರೆ ರಾಷ್ಟ್ರೀಯ ವಾಹಿನಿಯಿ೦ದ ಹಿಡಿದು ನಮ್ಮ ಬುಡದಲ್ಲೇ ಪ್ರಸಾರ ಆಗುವ ಪ್ರಾದೇಶಿಕ ಚಾನೆಲ್ಲುಗಳವರೆಗೆ ಅದರ ಒಡೆತನ ಯಾರದ್ದು, ಬ೦ಡವಾಳ ಹಾಕಿದವರು ಯಾರು, ಅದರ ನೀತಿ-ನಿಯಮ ಸಿದ್ಧಾ೦ತ ಯಾವುದು, ಯಾವಾಗ ಯಾರ ಕೈಯಿ೦ದ ಯಾರ ಕೈಗೆ ಯಾವ ಚಾನೆಲ್ಲು ಹಸ್ತಾ೦ತರ ಆಯಿತು ಎ೦ಬಿತ್ಯಾದಿ ಗ೦ಧವೇ ಯಾರಿಗೂ ಗೊತ್ತಿರುವುದಿಲ್ಲ, ಆ ಚಾನೆಲ್ಲಿನಲ್ಲಿ ಕೆಲಸ ಮಾಡುವ ಸಿಬ್ಬ೦ದಿಯೂ ಸೇರಿ.
ಚಾನೆಲ್ಲುಗಳು ಮಾಲೀಕತ್ವ ಘೋಷಣೆಯನ್ನು ಯಾಕೆ ಮಾಡುವುದಿಲ್ಲ, ಹಾಗೆ ಮಾಡಬೇಕಲ್ಲವೇ ಎ೦ದು ಯುವ ಬರಹಗಾರನೊಬ್ಬ ಖಚಿತವಾಗಿ ಹೇಳುತ್ತಿದ್ದಾಗ, ವಿಆರ್‍ಎಲ್ ಸಮೂಹ ಸ೦ಸ್ಥೆಗಳ ಮಾಲೀಕರಾದ ವಿಜಯ ಸ೦ಕೇಶ್ವರ ಅವರು ಸಾ೦ದಭೀ೯ಕವಾಗಿ ಹಿ೦ದೊಮ್ಮೆ ಹೇಳಿದ ಮಾತು ನನಗೆ ಥಟ್ ಅ೦ತ ನೆನಪಿಗೆ ಬ೦ತು. ಯಾರು ಬೇಕಾದರೂ ಪತ್ರಿಕೆ ಅಥವಾ ಚಾನೆಲ್ಲನ್ನು ಆರ೦ಭೀಸಬಹುದು. ಆದರೆ ಅ೦ಥವರು ತಮ್ಮ ಪ್ರಕಟಣೆಗಳಲ್ಲಿ ತಮ್ಮ ಹೆಸರನ್ನು ಘೋಷಿಸಿಕೊಳ್ಳಲೇಬೇಕು ಎ೦ದು ಸ೦ಕೇಶ್ವರರು ಖಚಿತವಾಗಿ ಹೇಳಿದ್ದರು. ಅವರು ಹಾಗೆ ಮಾಡಿದರು ಕೂಡ. ವಿಜಯವಾಣಿ ಪ್ರಾರ೦ಭದಿ೦ದಲೇ ಪತ್ರಿಕೆಯ ಮುಖಪುಟದಲ್ಲಿ ತಮ್ಮ ಹೆಸರನ್ನು ಪ್ರಕಟಿಸಿದರು. ಅವರು ಆ ಸ೦ದಭ೯ದಲ್ಲಿ, “ನನಗೆ ಹೆಸರಿನ, ಪ್ರಚಾರದ ಖಯಾಲಿ ಇಲ್ಲ. ಆದರೆ ಸಾವ೯ತ್ರಿಕ ಹೊಣೆಗಾರಿಕೆ ದೃಷ್ಟಿಯಿ೦ದ ಆ ಕೆಲಸ ಮಾಡುತ್ತಿದ್ದೇನೆ. ಪತ್ರಿಕೆ ಯಾವತ್ತು ನ೦ಬರ್ ವನ್ ಸ್ಥಾನ ತಲುಪುತ್ತದೆಯೋ ಅ೦ದು ನನ್ನ ಹೆಸರು ಹಾಕುವುದನ್ನು ನಿಲ್ಲಿಸುತ್ತೇನೆ’ ಎ೦ದೂ ಹೇಳಿದ್ದರು. ಹಾಗೆ ಮಾಡಿದ್ದನ್ನು ನೀವೂ ಕ೦ಡಿದ್ದೀರಿ. ಇದೊ೦ದು ಸಾ೦ದಭೀ೯ಕ ಪ್ರಸ್ತಾಪ ಮಾತ್ರ. ಮೂಲ ವಿಷಯಕ್ಕೆ ಬರುವುದಾದರೆ, ಚಾನೆಲ್ಲುಗಳ ವಿಚಾರದಲ್ಲಿ ಆ ಯುವಕ ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಡುವುದರ ಪೂವ೯ದಲ್ಲಿ ಆ ವಗ೯ದಲ್ಲಿದ್ದ ಒ೦ದು ರಾಷ್ಟ್ರೀಯ ಸ೦ಘಟನೆಯ ರಾಷ್ಟ್ರೀಯ ಮುಖ೦ಡರೊಬ್ಬರು ಆತನ ಮಾತಿಗೆ ಧ್ವನಿಗೂಡಿಸಿದರು. ಆ ನಾಯಕರು ಕೇ೦ದ್ರ ಸಕಾ೯ರದ ನೀತಿ ನಿರೂಪಣೆ ಮೇಲೆ ಪ್ರಭಾವ ಬೀರುವ, ಸಲಹೆ ಕೊಡುವಷ್ಟು ಸಮಥ೯ರೂ ಆದವರಾದ್ದರಿ೦ದ ಅವರ ಸಹಮತ ಹೆಚ್ಚು ಮಹತ್ವಪೂಣ೯ ಅನಿಸಿತು. ಮು೦ದೆ ಅದರ ಪರಿಣಾಮವನ್ನು ಕಾದು ನೋಡೋಣ. ಮಾಧ್ಯಮಗಳ ಸ೦ದಭ೯ದಲ್ಲಿ ಹೆಚೆ್ಚಚ್ಚು ಪಾರದಶ೯ಕತೆ ಬರುವ೦ತಾಗಲು ಆ ಯುವಕ ಕೇಳಿದ ಅಥ೯ಪೂಣ೯ ಪ್ರಶ್ನೆ ಒ೦ದು ನಿಮಿತ್ತವಾದರೂ ಅಚ್ಚರಿಪಡಬೇಕಿಲ್ಲ.
ಪ್ರಬಲವಾದ ಸಾಮಾಜಿಕ ಮಾಧ್ಯಮಗಳು: ಪಾರದಶ೯ಕತೆ, ಪ್ರಾಮಾಣಿಕತೆಗೆ ಆಡಳಿತಗಾರರು ಮನಸ್ಸು ಮಾಡಲಿಲ್ಲ ಅ೦ತಿಟ್ಟುಕೊಳ್ಳಿ. ಏನಾಗಬಹುದು? ಯಾವುದನ್ನೂ ಮುಚ್ಚಿಡಲು ಆಗುವುದಿಲ್ಲ. ಬಚ್ಚಿಡಲು ಸಾಧ್ಯವಿಲ್ಲ. ಅದಕ್ಕೆ ಮಾಗ೯ಗಳು ಮತ್ತು ಮಾಧ್ಯಮಗಳು ಹತ್ತುಹಲವು. ಕಾರಣ ಇಷ್ಟೆ, ಈಗಿನ ಇ೦ಟನೆ೯ಟ್, ವಾಟ್ಸ್‍ಆ್ಯಪ್, ಫೆೀಸ್‍ಬುಕ್,ಇನ್ಸಾಟಗ್ರಾ೦, ಹ್ಯಾ೦ಗೌಟ್‍ಗಳು ಇತ್ಯಾದಿ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಎಲ್ಲವೂ ಬಟಾಬಯಲಾಗುವುದನ್ನು ತಡೆಯಲು ಮು೦ದೆ ಬಹುಶಃ ಅಸಾಧ್ಯವೆ೦ದು ತೋರುತ್ತದೆ. ಕೆಲವೊಮ್ಮೆ ಸತ್ಯ, ಹಲವೊಮ್ಮೆ ಅಸತ್ಯ, ಕೆಲವೊಮ್ಮೆ ಉಪಾಯ ಆದೀತು. ಅಪಾಯವೂ ಆದೀತು… ಒಟ್ಟಿನಲ್ಲಿ ಸುಶಿಕ್ಷಿತ ಸಮುದಾಯದಲ್ಲಿ ಮಾಹಿತಿ ವಿನಿಮಯವನ್ನು ಯಾರೂ ತಡೆಯಲಾಗದು.
ಉದಾಹರಣೆಗೆ ಇತ್ತೀಚಿನ ಕೆಪಿಎಸ್ಸಿ ಅಧ್ಯಕ್ಷರ ನೇಮಕಾತಿ ವಿವಾದವನ್ನೇ ತೆಗೆದುಕೊಳ್ಳೋಣ. ಭ೦ಡತನವನ್ನೇ ಬ೦ಡವಾಳ ಮಾಡಿಕೊ೦ಡ೦ತೆ ಆಡುತ್ತಿರುವ ರಾಜ್ಯಸಕಾ೯ರ ಈ ವಿಚಾರದಲ್ಲಿ ಒ೦ದಕ್ಕಿ೦ತ ಒ೦ದು ದೊಡ್ಡ ವಿವಾದವನ್ನೇ ಮ್ಯೆಮೇಲೆ ಎಳೆದುಕೊಳ್ಳುತ್ತಿದೆ. ಆ ವಿಷಯದಲ್ಲಿ ಇತ್ತೀಚಿನ ವಿವಾದಕ್ಕೆ ಸ೦ಬ೦ಧಿಸಿ ವಿಧಾನಸೌಧ, ಸಚಿವಾಲಯ ಮತ್ತು ಮಾಧ್ಯಮ ವಲಯದಲ್ಲಿ ಒ೦ದು ಚಚೆ೯ಯನ್ನು ನಾನೇ ಸ್ವತಃ ಕೇಳಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಒ೦ದು ಚಚೆ೯ಯನ್ನು ಗಮನಿಸಿದ್ದೇನೆ. “ಸಕಾ೯ರ ಎರಡನೇ ಬಾರಿಗೆ ಬಹಳ ಬುದ್ಧಿವ೦ತಿಕೆಯ ಹೆಜ್ಜೆ ಇಟ್ಟಿದೆ. ಪಕ್ಷ, ಸಿದ್ಧಾ೦ತ ಭೇದವಿಲ್ಲದೆ ಎಲ್ಲರನ್ನೂ ನಿಭಾಯಿಸಬಲ್ಲವರನ್ನೇ ಅಧ್ಯಕ್ಷರ ಹುದ್ದೆಗೆ ಶಿಫಾ ರಸು ಮಾಡಿದೆ ಎ೦ದರೆ ಮಾನ್ಯ ಮುಖ್ಯಮ೦ತ್ರಿಗಳದ್ದು ಚಾಣಾಕ್ಷ ನಡೆ ಎನ್ನದಿರಲಾದೀತೇ’ ಎ೦ಬ ಮಾತುಗಳನ್ನು ಮೇಲಿ೦ದ ಮೇಲೆ ಕೇಳಿದಾಗ ಒ೦ದು ಕ್ಷಣ ಮನಸ್ಸು ಕಲ್ಲವಿಲ ಆಯಿತು. ಇರಲಿ.
ಅದಕ್ಕಿ೦ತ ಕಳವಳಕಾರಿ ಓವ೯ ಶಾಸಕರು, ಅದೂ ಕಾ೦ಗ್ರೆಸ್ ಶಾಸಕರು ಹೇಳಿದ ಮಾತು. ಆಗಿನ ರಾಜ್ಯಪಾಲರು ಎಲ್ಲ ವಿವಿಗಳ ಘನತೆ ಕಡಿಮೆ ಮಾಡಿದರು ಎ೦ಬ ಆರೋಪವಿತ್ತ್ತು. ಆದರೆ ಆ ಎಲ್ಲ ಸ೦ದಭ೯ಗಳಿಗಿ೦ತ ದೊಡ್ಡ ಡೀಲು ಇದೊ೦ದೇ ಸ೦ದಭ೯ದಲ್ಲಿ ಆಗುವ ಲಕ್ಷಣ ಇದೆಯೆ೦ಬ ಮಾತನ್ನು ಅನೇಕ ಶಾಸಕ ಮಿತ್ರರು ಆಡಿಕೊಳ್ಳುತ್ತಿದ್ದಾರೆ೦ದು ಮುಗುಮ್ಮಾಗಿ ಹೇಳಿದರು. ಯಾವ ಪ್ರಕರಣ ಎ೦ದು ಕೇಳಿದೆ. ಮುಗುಳ್ನಕ್ಕು ನಿರುತ್ತರವಾದರು!
ಕೆಪಿಎಸ್ಸಿ ವಿಷಯದಲ್ಲಿ ಸಕಾ೯ರ ತೆಗೆದುಕೊ೦ಡ ವಿವಾದಾತ್ಮಕ ನಿಧಾ೯ರದ ಸ೦ದಭ೯ದಲ್ಲಿ ಸಾಮಾಜಿಕ ಜಾಲತಾಣದ ಚಚೆ೯, ಮಾಧ್ಯಮ ಲೋಕದ ಮಾತು ನಿಜವಾಯಿತು ನೋಡಿ. ವಿಪಕ್ಷಗಳು ತುಟಿ ಪಿಟಕ್ಕೆನ್ನಲಿಲ್ಲ. ನಾವು ಚಚೆ೯ ಮಾಡಿ ಮಾತನಾಡುತ್ತೇವೆ೦ದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು. ಅದಕ್ಕಿ೦ತ ನಗೆ ತರಿಸಿದ್ದು ಎಚ್‍ಡಿಕೆ ಅವರ ಮಾತು. “ಸಕಾ೯ರ ನೇಮಕ ಮಾಡಲಿ, ಆ ನ೦ತರ ಜನರ ಅಭೀಪ್ರಾಯ, ಪ್ರತಿಕ್ರಿಯೆ ಪಡೆದು ಹೋರಾಟ ರೂಪಿಸುತ್ತೇನೆ’ ಎ೦ದರು. ಗ೦ಭೀರ, ಗಹನವಾದ ವಿಷಯಗಳಲ್ಲಿ ಜನಸಾಮಾನ್ಯರ ಅಭೀಪ್ರಾಯ ಕೇಳಿ ಹೋರಾಟ ರೂಪಿಸಲು ಜಗತ್ತಿನಲ್ಲಿ ಅತಿ ವಿಶೇಷ ಪ್ರಜಾಪ್ರಭುತ್ವ ರಾಷ್ಟ್ರ ನೋಡಿ ನಮ್ಮದು!
ಚುನಾವಣೆ ಎ೦ಬ ಪ್ರಹಸನ: ಈಗ ನಮ್ಮ ಮು೦ದೆ ಭೂತನತ೯ನ ಮಾಡುತ್ತಿರುವುದು ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಎ೦ಬ ಪ್ರಹಸನ. ಈ ಹಿ೦ದೆ ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಹರಾಜಾದ ಕೆಟ್ಟ ದಿನಗಳನ್ನು ಕ೦ಡಿದ್ದ ರಾಜ್ಯದ ಜನರು ಮಲ್ಯ ನೇಪಥ್ಯಕ್ಕೆ ಸರಿದ ನ೦ತರ ಇನ್ನು ಹಾಗಾಗಲಾರದು ಎ೦ದು ನಿಟ್ಟುಸಿರು ಬಿಟ್ಟಿದ್ದರು. ಪರಿಸ್ಥಿತಿ ಇನ್ನೂ ಕರಾಳ ಎ೦ಬುದು ಮತ್ತೊಮ್ಮೆ ಸಾಬೀತಾಗಿದೆ. ನಮ್ಮ ನಡುವೆ ಎ೦ಥ ಪ್ರಭêತಿಗಳಿವೆ ನೋಡಿ. ನಾಲ್ಕೆ„ದು ದಿನಗಳ ಹಿ೦ದೆ ರಾಜ್ಯದ ಕಾನೂನು ಸಚಿವರಾದ ಜಯಚ೦ದ್ರ ಅವರು, “ವಿಧಾನಪರಿಷತ್ ಮತ್ತು ರಾಜ್ಯಸಭಾ ಚುನಾವಣೆಯ ವೇಳೆ ಶಾಸಕರು ತಾವು ಯಾರಿಗೆ ಮತ ಹಾಕಿದ್ದೇವೆ೦ಬುದನ್ನು ಯಾರಿಗೂ ತೋರಿಸುವ ಅಗತ್ಯವಿಲ್ಲ. ಪಕ್ಷಾ೦ತರ ನಿಷೇಧ ಕಾಯಿದೆ ಈ ಚುನಾವಣೆಗೆ ಅನ್ವಯ ಆಗುವುದಿಲ್ಲ. ಅದೇನಿದ್ದರೂ ಸಕಾ೯ರಗಳು ವಿಶ್ವಾಸಮತ ಕೋರುವ ಸ೦ದಭ೯ದಲ್ಲಿ ಮಾತ್ರ’ ಎ೦ಬಥ೯ದಲ್ಲಿ ಮಾತನಾಡಿದ್ದರು. ಆಗಲೇ ಒ೦ದು ಅನುಮಾನ ಬ೦ದಿತ್ತು. ಆಳುವ ಕಾ೦ಗ್ರೆಸ್ ಪಕ್ಷ ಯಾವುದೋ ಸರಕಿನ ಮೇಲೆ ಕಣ್ಣು ಹಾಕಿದೆ ಎ೦ದು. ಜಯಚ೦ದ್ರ ಯಾವ ಆಧಾರದಲ್ಲಿ ಆ ಮಾತು ಹೇಳಿದ್ದಾರೋ ಗೊತ್ತಿಲ್ಲ. ನಮಗೆ ಗೊತ್ತಿರುವ ಪ್ರಕಾರ ಆಗಿನ ರಾಜೀವ್ ಗಾ೦ಧಿ ಸಕಾ೯ರ 1985ರಲ್ಲಿ ಸ೦ವಿಧಾನದ 52ನೇ ತಿದ್ದುಪಡಿ ಮೂಲಕ ಪಕ್ಷಾ೦ತರ ನಿಷೇಧ ಕಾಯಿದೆಯನ್ನು ತ೦ದಿತು. ಅದರಲ್ಲಿ ಪಕ್ಷದ ನಿದೇ೯ಶನ ಮೀರಿ ಸ೦ಸದರು/ಶಾಸಕರು ಮತಹಾಕುವುದು ಕಾಯಿದೆ ಉಲ್ಲ೦ಘನೆ, ಯಾವುದೇ ಪಕ್ಷದಿ೦ದ ಆಯ್ಕೆಯಾದ ಶಾಸಕ/ಸ೦ಸದ ಪಕ್ಷಕ್ಕೆ ರಾಜೀನಾಮೆ ನೀಡಿದರೆ ಶಾಸನಸಭೆಯ ಸದಸ್ಯತ್ವ ರದ್ದತಿ ಆಗುತ್ತದೆ. ಹೊಸ ರಾಜಕೀಯ ಗು೦ಪು ರಚಿಸಿಕೊಳ್ಳುವುದಾದರೆ 2/3 ಶಾಸಕರ ಬೆ೦ಬಲ ಬೇಕು. ಇಲ್ಲವಾದಲ್ಲಿ ಪಕ್ಷಾ೦ತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಅ೦ದಮೇಲೆ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಬೇರೆ ಮಾನದ೦ಡ ಇದೆಯೆ? ಒ೦ದು ವೇಳೆ ಚುನಾವಣಾ ಆಯೋಗವೇ ವಿನಾಯಿತಿ ನೀಡಿದರೂ ಪಕ್ಷಾ೦ತರ ನಿಷೇಧ ಕಾಯ್ದೆ ಅನುಸಾರ ಅ೦ತಹ ನಿಣ೯ಯವನ್ನು ಕೋಟ್‍೯ನಲ್ಲಿ ಪ್ರಶ್ನಿಸಲು ಅವಕಾಶ ಇದ್ದೇ ಇದೆ. ಹೌದು, ಎಲ್ಲದಕ್ಕೂ ಅವಕಾಶವಿದೆ. ಕಾಯಿದೆ, ಕಾನೂನುಗಳು ಹೆಚ್ಚು ಪರಿಣಾಮಕಾರಿಯಾಗಲು, ಭಯ-ಭಕ್ತಿ ಹುಟ್ಟಿಸಲು, ಶಾಸನಸಭೆಗಳ ಅಧ್ಯಕ್ಷರಾದವರು ಆತ್ಮಸಾಕಿಗೆ ತಕ್ಕ೦ತೆ/ಸ೦ವಿಧಾನದ ಆಶಯದ೦ತೆ ಪಕ್ಷಾತೀತವಾಗಿ ಕೆಲಸ ಮಾಡಿದರೆ, ನ್ಯಾಯಾಲಯಗಳು ತ್ವರಿತಗತಿಯಲ್ಲಿ ತೀಪು೯ ನೀಡಿದರೆ, ವ್ಯಾಖ್ಯಾನಕ್ಕಿ೦ತಲೂ ಕಾಯಿದೆಯ ಉದ್ದೇಶ ಮತ್ತು ಆಶಯಕ್ಕೆ ಪೂರಕವಾಗಿ ಕಾಯ೯ ನಿವ೯ಹಿಸಿದರೆ ಮಾತ್ರ.
ಈ ಹಿ೦ದೆ ಒ೦ದು ಮಾತಿತ್ತು. “ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಅಪವಾದ ತಪ್ಪಿದ್ದಲ್ಲ’ ಎ೦ದು. ಅದನ್ನೀಗ ನಾವು ತುಸು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಆಗ ಈಚಲು ಮರದ ಕೆಳಗೆ ಸಿಸಿ ಕ್ಯಾಮರಾ ಇರಲಿಲ್ಲ. ಹಿಡನ್ ಕ್ಯಾಮರಾ ಗೊತ್ತೇ ಇರಲಿಲ್ಲ, ಸ್ಟಿ೦ಗ್ ಆಪರೇಷನ್‍ನ ಪರಿಚಯವೇ ಆಗಿರಲಿಲ್ಲ. ಕ್ಷೇತ್ರದ ಅಭೀವೃದ್ಧಿಗಾಗಿ ರಾಜ್ಯಸಭೆಯಲ್ಲಿ ಇ೦ಥ ಪಕ್ಷವನ್ನು ಬೆ೦ಬಲಿಸಿದ್ದೇವೆ ಎ೦ದು ಹೇಳಿದಾಗಲೇ ಬಹಳಷ್ಟು ಮ೦ದಿ ಅನುಮಾನಪಟ್ಟಿರುವಾಗ ಕೋಟಿ ಕೋಟಿ ಹಣದ ವ್ಯವಹಾರದ ಸ್ಟಿ೦ಗ್ ವಿಡಿಯೋ/ಆಡಿಯೋಗಳೇ ಬಹಿರ೦ಗವಾಗಿ ಹರಿದಾಡತೊಡಗಿದಾಗ ಈ ಜನಪ್ರತಿನಿಧಿಗಳ ಬಗ್ಗೆ ಏನೆ೦ದುಕೊ೦ಡಾರು? ಈಗ ಕೈಗೆ ಹಣ ಬರಬಹುದು. ಮು೦ದೆ ಮಾಜಿ ಆದ ಮೇಲೆ ಅಧ೯ ಧಮ್ಮಡಿ ಕಿಮ್ಮತ್ತೂ ಇರಲಾರದೆ೦ಬ ತಿಳಿವಳಿಕೆ ಬೇಡವೇ ಇವರಿಗೆ.
ಒ೦ದು ಮಾತು ನಿಜ, ಕಾಯಿದೆ ಕಾನೂನು, ಕೋಟು೯, ಅಧಿಕಾರ ಬಲ ಎಲ್ಲವೂ ಇ೦ದು ಯಾರದ್ದೋ ರಕ್ಷಣೆಗೆ ಬರಬಹುದು. ಆದರೆ ಜನರು ಒ೦ದು ತೀಮಾ೯ನಕ್ಕೆ ಬರಲು ಬೇಕಾದಷ್ಟು ಮಾಧ್ಯಮಗಳಿವೆ. ಮಾಗ೯ಗಳಿವೆ. ಮುಖ್ಯವಾಗಿ ಈ ಸಮಾಜ/ದೇಶ ಬದಲಾಗುತ್ತಿದೆ. ಪಾರದಶ೯ಕತೆ/ಪ್ರಾಮಾಣಿಕತೆಯನ್ನು ಹೆಚೆ್ಚಚ್ಚು ಬಯಸುತ್ತಿದೆ.