ಕೃಷಿ ಮಾರುಕಟ್ಟೆಯನ್ನು ಬಲಪಡಿಸಲು ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿರುವ ಸಲಹೆ ಈಗ ವಿವಾದ ಸೃಷ್ಟಿಸಿದೆ. ಇದರ ಸಾಧ್ಯತೆ- ಅಪಾಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು 2017ರ ‘ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯಿದೆ’ಯನ್ನು (ಎಪಿಎಂಎಲ್ ಕಾಯಿದೆ) ಜಾರಿಗೊಳಿಸಲು ಕೇಂದ್ರ ಸರಕಾರ ನೀಡಿರುವ ಸಲಹೆಯನ್ನು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗುಜರಾತ್ ಅನುಸರಿಸಿವೆ. ಉತ್ತರ ಪ್ರದೇಶ ಪ್ರಯತ್ನಿಸುತ್ತಿದೆ. ಇದರಿಂದ ಖಾಸಗಿ ವಲಯದ ಕಂಪನಿಗಳೂ ಎಪಿಎಂಸಿ […]
Read More
– ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಸುಗ್ರೀವಾಜ್ಞೆ ರಾಜ್ಯಪಾಲರ ಅಂಗಳಕ್ಕೆ – ಮಧ್ಯವರ್ತಿಗಳು-ಕಾರ್ಪೊರೇಟ್ ಕಂಪನಿಗಳಿಗೆ ಲಾಭ, ರೈತರಿಗೆ ನಷ್ಟದ ಆತಂಕ – ರೈತ ನಾಯಕ ಯಡಿಯೂರಪ್ಪ ಸರಕಾರ ಕೇಂದ್ರದ ಒತ್ತಡಕ್ಕೆ ಮಣಿಯದಿರಲಿ ಎಂಬ ಆಗ್ರಹ – ಶಶಿಧರ ಹೆಗಡೆ, ಬೆಂಗಳೂರು ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರಕಾರವು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿದ್ದು, ಇದು ಈಗಾಗಲೇ ರಾಜ್ಯಪಾಲರ ಅಂಗಳ ತಲುಪಿದೆ. ಇದು ಜಾರಿಗೆ ಬಂದರೆ ರೈತರು ಬೆಳೆದ ಬೆಳೆಗೆ ಆಧಾರಸ್ತಂಭವಾಗಿರುವ ಎಪಿಎಂಸಿ ವ್ಯವಸ್ಥೆಯೇ ಕುಸಿದು ಬೀಳಲಿದೆ. ಭವಿಷ್ಯದಲ್ಲಿ ರೈತರಿಗೆ […]
Read More
– ಕಾರ್ಖಾನೆಗಳು ತೆರೆದರೂ ಕಾರ್ಮಿಕರು, ಕಚ್ಚಾ ವಸ್ತು ಕೊರತೆ | ಬರುತ್ತಿಲ್ಲ ಹೊಸ ಆರ್ಡರ್ – ವಲಸೆಯದೇ ದೊಡ್ಡ ಹೊಡೆತ | ನೌಕರರಿಗೆ ಸೋಂಕು ತಗುಲಿದರೆ ಮತ್ತೆ ಮುಚ್ಚುವ ಆತಂಕ – ಸುದರ್ಶನ ಚನ್ನಂಗಿಹಳ್ಳಿ ಬೆಂಗಳೂರು ಲಾಕ್‌ಡೌನ್ ಸಡಿಲಿಕೆಯಾಗಿ ಕೈಗಾರಿಕೆಗಳ ಮರು ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಟ್ಟು ವಾರ ಕಳೆದರೂ ಉದ್ಯಮಗಳ ಲಾಕ್ ಇನ್ನೂ ಪೂರ್ಣ ಪ್ರಮಾಣದಲ್ಲಿತೆರೆದುಕೊಂಡಿಲ್ಲಮತ್ತು ಸದ್ಯಕ್ಕೆ ತೆರೆಯುವ ಲಕ್ಷಣವೂ ಕಾಣುತ್ತಿಲ್ಲ. ಒಂದು ಕಡೆ ಕಾರ್ಮಿಕರ ವಲಸೆ, ಇನ್ನೊಂದು ಕಡೆ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಉತ್ಪಾದನೆ ಆರಂಭಕ್ಕೆ […]
Read More
ಲಂಡನ್‌ನಿಂದ ಮರಳಿದ ವಿದ್ಯಾರ್ಥಿನಿ ಮೇಘನಾ ಅನುಭವ – ಏರ್ ಇಂಡಿಯಾದಿಂದ ಉತ್ಪಮ ಸ್ಪಂದನೆ, ನಿಲ್ದಾಣದಲ್ಲೂ ಉತ್ತಮ ವ್ಯವಸ್ಥೆ ಬೆಂಗಳೂರು: ವಿಮಾನದಲ್ಲಿದ್ದ ಎಲ್ಲರಿಗೂ ಮಾಸ್ಕ್, ಫೇಸ್‌ಶೀಲ್ಡ್ ಇರಲಿಲ್ಲ. ಮೂವರಲ್ಲಿ ಒಬ್ಬರಿಗೆ ಸುರಕ್ಷತಾ ಸಾಧನಗಳ ಕೊರತೆ ಇತ್ತು…. ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಕೇಂದ್ರ ಸರಕಾರ ಮಾಡಿದ ವಿಶೇಷ ವ್ಯವಸ್ಥೆಯಡಿ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‌ನಿಂದ ಸೋಮವಾರ ನಸುಕಿನಲ್ಲಿ ನಗರಕ್ಕೆ ಮರಳಿದ ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಚರ್ ವಿದ್ಯಾರ್ಥಿನಿ ಮೇಘನಾ ತಮ್ಮ ಅನುಭವ ಹಂಚಿಕೊಂಡರು. ಕೆಲವು ಪ್ರಯಾಣಿಕರು ತಾವೇ ತಂದಿದ್ದ ಮಾಸ್ಕ್, ಗ್ಲೌಸ್ ಬಳಕೆ […]
Read More
– ಜಯಂತ್ ಗಂಗವಾಡಿ ಬೆಂಗಳೂರು. ನಾನು ಬೆಂಗಳೂರಿಗೆ ವಾಪಸ್ ಬರುತ್ತೇನೆ ಅನ್ನೋ ನಂಬಿಕೆಯೇ ಹೊರಟು ಹೋಗಿತ್ತು. ಮೇ 10ರ ಸಂಜೆ 5 ಗಂಟೆ ಸುಮಾರಿಗೆ ‘ಲಂಡನ್‌ನಿಂದ ಬೆಂಗಳೂರಿಗೆ ರಾತ್ರಿ 9.45ಕ್ಕೆ ವಿಮಾನ ಹೊರಡಲಿದೆ’ ಎಂದು ‘ಏರ್ ಇಂಡಿಯಾ’ ಕಚೇರಿಯಿಂದ ಫೋನ್ ಕರೆ ಬಂದಾಕ್ಷಣ ನಂಬಲು ಸಾಧ್ಯವಾಗದೆ ಜೋರಾಗಿ ಅತ್ತು ಬಿಟ್ಟೆ. ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಇಂಗ್ಲೆಂಡ್‌ನಲ್ಲಿ ಅನುಭವಿಸಿದ ಲಾಕ್‌ಡೌನ್ ನೋವಿನ ಕತೆಯನ್ನು ‘ವಿಜಯ ಕರ್ನಾಟಕ’ದ ಮುಂದೆ ತೆರೆದಿಟ್ಟದ್ದು ಹೀಗೆ. […]
Read More
ಕಣ್ಣೆದುರೇ ಮಗು ಇದ್ದರೂ ಮುದ್ದಾಡಲು ಆಗದ ಸ್ಥಿತಿ… ಹೆರಿಗೆ ದಿನಾಂಕ ಹತ್ತಿರವೇ ಇದ್ದರೂ ಕರ್ತವ್ಯದ ಕರೆಯೇ ಮೇಲು… ಅಮ್ಮಾ, ನಿನ್ನ ನೋಡಬೇಕು ಎನ್ನುವ ಒಡಲ ಕುಡಿಗಳ ಅಳಲು… ಎಂಥದ್ದೇ ಪರಿಸ್ಥಿತಿಯಲ್ಲೂ ರೋಗಿಗಳ ಆರೈಕೆ ಮಾಡಬೇಕೆಂಬ ವೃತ್ತಿಪ್ರಜ್ಞೆ… ಕೊರೊನಾ ಸಂದರ್ಭದಲ್ಲಿ ಆರೈಕೆ ಮಾಡುತ್ತಿರುವ ದಾದಿಯರ ಬಿಡಿ ಬಿಡಿ ಭಾವಗಳಿವು. ಅಂತರಾಷ್ಟ್ರೀಯ ದಾದಿಯರ ದಿನದ ನೆಪದಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸುಯೋಗ ನಮಗೆಲ್ಲರಿಗೂ ದೊರೆತಿದೆ. ನಾವಿಲ್ಲಿ ಕೆಲವು ದಾದಿಯರ ಸೇವೆಯ ಕತೆಯನ್ನು ನಿಮ್ಮ ಮುಂದೆ ಹರವಿಟ್ಟಿದ್ದೇವೆ. ಓದಿಕೊಳ್ಳಿ. ಹೆರಿಗೆಗೆ […]
Read More
ಲಾಕ್‌ಡೌನ್‌ನ ಸಾಧಕ ಬಾಧಕಗಳ ವಾಗ್ವಾದ ಏನೇ ಇರಲಿ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಎಲ್ಲವೂ ಬಂದ್ ಆಗಿದ್ದರಿಂದ ವಾತಾವರಣ ಪರಿಶುದ್ಧವಾಗಿದೆ. ನದಿ, ಹೊಳೆಗಳು ಪರಿಶುಭ್ರವಾಗಿವೆ. ವನ್ಯಜೀವಿಗಳಿಗೆ ಹೊಸ ಬಗೆಯ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಡಿನ ಸೋಂಕೇ ಇಲ್ಲದ ನಗರಗಳಲ್ಲೂ ಚಿರತೆ, ಜಿಂಕೆ, ಕಾಡುಕೋಣ, ನವಿಲುಗಳು ಮುಕ್ತವಾಗಿ ಸಂಚರಿಸುತ್ತಿವೆ. ರಸ್ತೆಗಳನ್ನೇ ತಮ್ಮ ವಾಸಸ್ಥಾನದ ‘ವಿಸ್ತರಣೆ’ಯಾಗಿಸಿಕೊಂಡಿವೆ. ರಾಜ್ಯಾದ್ಯಂತ ನಾಗರಿಕ ವಲಯಕ್ಕೆ ಲಗ್ಗೆ ಹಾಕಿದ ಹೊಸ ಅತಿಥಿಗಳ ನೋಟ ಇಲ್ಲಿದೆ. ಬಂದನಾ ಹುಲಿರಾಯ ಮೈಸೂರು: ಕೊಡಗಿನ ದಕ್ಷಿಣ ಭಾಗದಲ್ಲಿ […]
Read More
ಕೊರೊನಾದಿಂದ ಬದಲಾದ ಟ್ರೆಂಡ್: ಯೂಟ್ಯೂಬ್‌ನಲ್ಲೇ ಪೂಜೆ ನೇರ ಪ್ರಸಾರ, ನಿತ್ಯ ಪ್ರವಚನ, ಸತ್ಸಂಗ – ಗೌರಿಪುರ ಚಂದ್ರು ಬೆಂಗಳೂರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಮಠ, ಮಂದಿರಗಳಿಗೆ ಹೋಗುವುದು ನಿಂತಿದೆ. ಆದರೆ ಆನ್‌ಲೈನ್ ಮಾರ್ಗದ ಮೂಲಕ ಮನೆಮನೆಗಳಲ್ಲಿ ಭಕ್ತಿ ದಾಸೋಹ ಮುಂದುವರಿದಿದೆ. ಸ್ಕೈಪ್, ಫೇಸ್‌ಬುಕ್ ಪೇಜ್ ಹಾಗೂ ವಿಡಿಯೊ ಚಾಟಿಂಗ್ ಮೂಲಕ ವೇದ, ಉಪನಿಷತ್, ಸುಧಾಮಂಗಳ ಪಾಠ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರವಚನ ಪ್ರಿಯರು, ಅಧ್ಯಾತ್ಮ ಆಸಕ್ತರು ಯೂಟ್ಯೂಬ್ ಮೊರೆ ಹೋಗುತ್ತಿದ್ದಾರೆ. ಫೇಸ್‌ಬುಕ್‌ನಲ್ಲೂ ಸ್ಪಿರಿಚುಯಲ್ ಉಪನ್ಯಾಸಗಳು ನಿತ್ಯ ಬಿತ್ತರವಾಗುತ್ತಿವೆ. ಉತ್ತರಾದಿಮಠದ […]
Read More
– ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ Yes, the show must go on… ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿ ನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ. ಕೊರೊನಾ ವೈರಸ್‌ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್‌ಗಳನ್ನು ಈ […]
Read More
ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆಗಳನ್ನಷ್ಟೇ ತೋರಿಸುವ ಫೋಟೊಗಳನ್ನು ತೆಗೆದ ಮೂವರಿಗೆ ಈ ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಕೊಡಮಾಡಲಾಗಿದೆ. ಅಲ್ಲಿ ಉಗ್ರರ ದಾಳಿಗೆ ಬಲಿಯಾದ ಯೋಧರ ಕುಟುಂಬಗಳ ಕಣ್ಣೀರು ಅವರ ಕ್ಯಾಮೆರಾದ ಕಣ್ಣಿಗೆ ಬೀಳಲೇ ಇಲ್ಲ. – ರಮೇಶ್ ಕುಮಾರ್ ನಾಯಕ್. ‘ಪ್ರತಿಷ್ಠಿತ’ ಎಂಬ ಲೇಬಲ್ ಅಂಟಿಸಿಕೊಂಡಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೇಶ ವಿರೋಧಿ, ದೇಶವಾಸಿಗಳ ಭಾವನೆ ವಿರೋಧಿ ಸರಕುಗಳ ಸರದಾರರನ್ನು ಹುಡುಕಿಕೊಂಡು ಬರುವುದು ಹೊಸ ಸಂಗತಿಯೇನಲ್ಲ. ಭಾರತದ ಉನ್ನತ ಸಂಸ್ಕೃತಿ, ಆದರ್ಶ, ಆಚಾರ-ವಿಚಾರ, ಉದಾತ್ತ ಮನೋಭಾವ, ಮಾನವೀಯ […]
Read More