– 54 ದಿನಗಳ ಬಳಿಕ ಸಹಜ ಸ್ಥಿತಿಯತ್ತ ಜನಜೀವನ – ಸಾರಿಗೆ ಸೇರಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಗ್ರೀನ್ ಸಿಗ್ನಲ್ – ಕಂಟೈನ್ಮೆಂಟ್ ಝೋನ್‌ಗಳಿಗೆ ಮಾತ್ರ ಲಾಕ್‌ಡೌನ್ ಸೀಮಿತ – ಸೋಂಕು ನಿಯಂತ್ರಣ ಜವಾಬ್ದಾರಿ ಇನ್ನು ಜನರ ಕೈಗೆ ವಿಕ ಸುದ್ದಿಲೋಕ ಬೆಂಗಳೂರು ರಾಜ್ಯದಲ್ಲಿ ಲಾಕ್‌ಡೌನ್ ಬಹುತೇಕ ತೆರವಾಗಿದ್ದು, ಮಂಗಳವಾರದಿಂದ ಸಾಮಾನ್ಯ ಜನಜೀವನ ಸಹಜ ಸ್ಥಿತಿಯತ್ತ ಮರಳಲಿದೆ. ಮಾಲ್, ಸಿನಿಮಾ, ಹೋಟೆಲ್, ಶಾಲಾ ಕಾಲೇಜು, ಮೆಟ್ರೊ, ಮುಕ್ತ ಅಂತಾ ರಾಜ್ಯ ಪ್ರಯಾಣ ಹೊರತುಪಡಿಸಿ ರಾಜ್ಯದೊಳಗಿನ ಬಹುತೇಕ ಎಲ್ಲ […]
Read More
ಲಾಕ್‌ಡೌನ್ ಕಾರಣದಿಂದ ನಿಂತುಹೋಗಿದ್ದ ಕಚೇರಿ ಮೀಟಿಂಗ್‌ಗಳು, ಸಾಂಸ್ಕೃತಿಕ ಚಟುವಟಿಕೆಗಳು ಆನ್‌ಲೈನ್‌ನಲ್ಲಿ ಚಿಗುರುತ್ತಿವೆ. ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ, ವಿಶ್ವವಿದ್ಯಾಲಯ ಸೆಮಿನಾರ್‌ಗಳು – ಎಲ್ಲವೂ ‘ವೆಬಿನಾರ್’ ಎಂಬ ಹೆಸರಿನ ವರ್ಚುವಲ್ ಒಟ್ಟು ಸೇರುವಿಕೆಯ ಮೂಲಕ ಘಟಿಸುತ್ತಿವೆ. ಭವಿಷ್ಯದಲ್ಲಿ ಅತಿ ಸಾಮಾನ್ಯ ಅನ್ನಿಸಬಹುದಾದ ಈ ಬೆಳವಣಿಗೆಯ ಬಗ್ಗೆ ಸಮಗ್ರ ನೋಟ ಇಲ್ಲಿದೆ. ಕಚೇರಿಗಳು ಮನೆಗಳಿಗೆ ಶಿಫ್ಟ್ ಆಗಿವೆ. ವರ್ಕ್ ಫ್ರಮ್ ಹೋಮ್ ಪದ್ಧತಿಯಿಂದಾಗಿ ಆಡಳಿತ ಮಂಡಳಿಗಳು, ಟೀಮ್ ಸದಸ್ಯರು ಸೇರುವುದು ಆನ್‌ಲೈನ್‌ನಲ್ಲಷ್ಟೇ ಸಾಧ್ಯವಾಗಿದೆ. ಕವಿಗೋಷ್ಠಿ, ವಿಚಾರಸಂಕಿರಣ, ಸಂವಾದ, ಪುಸ್ತಕ ಬಿಡುಗಡೆ, […]
Read More
ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲೀಗ ಬಹುತೇಕ ಸೋಂಕು ಹತೋಟಿಗೆ ಬಂದಿದೆ. ಈ ಯಶಸ್ಸಿಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ದೂರದೃಷ್ಟಿ, ಮಾರ್ಗದರ್ಶನ ಮತ್ತು ಪ್ರಯತ್ನವೇ ಕಾರಣ. – ಮಲ್ಲಿಕಾರ್ಜುನ ತಿಪ್ಪಾರ. ಕೆ.ಕೆ.ಶೈಲಜಾ ಅಂದರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ‘ಶೈಲಜಾ ಟೀಚರ್’ ಎಂದರೆ ಸಾಕು, ಕೇರಳ ಮಾತ್ರವಲ್ಲ, ಇಡೀ ದೇಶದ ಜನರ ಕಣ್ಣು ಮುಂದೆ ಅವರ ಮುಖ ಸುಳಿಯುತ್ತದೆ. ಇಡೀ ಜಗತ್ತೇ ಕೊರೊನಾ ವಿರುದ್ಧ ಸೆಣೆಸಾಡುತ್ತಿರುವಾಗ ಕೇರಳದ ಆರೋಗ್ಯ ಮತ್ತು ಸಾಮಾಜಿಕ […]
Read More
– ಎನ್ ರವಿಶಂಕರ್. ದಿಗ್ಬಂಧನ 3.0 ಮುಗಿದು, ನಾಲ್ಕನೆಯದನ್ನು ಎದುರುಗೊಳ್ಳುತ್ತಿರುವ ಹೊತ್ತಿನಲ್ಲಿ ಕೊರೊನಾ ವಿರುದ್ಧದ ನಮ್ಮ ಹೋರಾಟದ ಪರಿಭಾಷೆ ಬದಲಾಗಿದೆ. ಕೊರೊನಾ ತೊಲಗಿಸೋಣ, ಹೊಡೆದೋಡಿಸೋಣ, ಬಗ್ಗು ಬಡಿಯೋಣ, ನಿಗ್ರಹಿಸೋಣ ಎಂಬಿತ್ಯಾದಿಯಾದ ಈವರೆಗೂ ಇದ್ದ ‘ಸಮರದ ಭಾಷೆ’ ಬದಲಾಗಿ, ಹೊಂದಾಣಿಕೆಯ ಭಾಷೆಗೆ ದಾರಿ ಮಾಡಿಕೊಟ್ಟಿದೆ. ನಾವು ಈ ವೈರಸ್‌ನೊಡನೆ ಹೊಂದಿಕೊಂಡು ಬಾಳು ಕಟ್ಟಿಕೊಳ್ಳಬೇಕು. ಇದು ನಮ್ಮೊಡನೆಯೇ ಬಹುಕಾಲ ಇರುತ್ತದೆ ಎನ್ನುವ ಪರಿಸ್ಥಿತಿಗೆ ಒಗ್ಗಿಕೊಂಡು, ನಮ್ಮ ಜೀವನಶೈಲಿಯಲ್ಲಿ ಅದಕ್ಕನುಗುಣವಾದ ಬದಲಾವಣೆಗಳನ್ನು ತಂದುಕೊಳ್ಳಬೇಕು. ಹೀಗೆ, ಬಿಕ್ಕಟ್ಟಿನಲ್ಲಿ ಬದಲಾಗುತ್ತಿರುವ ಭಾಷ್ಯವನ್ನು ಗಮನಿಸುತ್ತಾ, ಇಡೀ […]
Read More
– ಶಶಿಧರ ಹೆಗಡೆ. ರಾಜಕೀಯ ಯಾವತ್ತೂ ನಿಂತ ನೀರಲ್ಲ. ಜಡ್ಡು ಗಟ್ಟಿದ ವ್ಯವಸ್ಥೆಯಲ್ಲೂ ಇದೊಂದು ವಲಯ ಗತಿಶೀಲವಾಗಿರುತ್ತದೆ. ರಾಜಕಾರಣದೊಂದಿಗೆ ಮಹತ್ವಾಕಾಂಕ್ಷೆಯೂ ತಳುಕು ಹಾಕಿಕೊಂಡಿರುತ್ತದೆ. ಅದು ರಾಜಕಾರಣದಲ್ಲಿ ತೊಡಗಿಸಿಕೊಂಡವರನ್ನು ಚಟುವಟಿಕೆಯಿಂದ ಇಡುತ್ತದೆ. ಇದರ ನಡುವೆ ರಾಜಕಾರಣದಲ್ಲಿ ಧಡಕಿಯಾಗುವುದೂ ಸರ್ವೇಸಾಮಾನ್ಯ. ಪರಸ್ಪರ ಟೀಕೆ, ಟಿಪ್ಪಣಿಯಿಲ್ಲದಿದ್ದರೆ ರಾಜಕಾರಣಿಗಳಿಗೂ ತಿಂದದ್ದು ಪಚನವಾಗುವುದಿಲ್ಲ. ‘ಕುಶಾಲಿ’ಗಾದರೂ ಎದುರಾಳಿಯ ವಿರುದ್ಧ ದೋಷಾರೋಪ ಹೊರಿಸಿ ತಮ್ಮವರ ವಲಯದಲ್ಲಿ ಕುಶಾಲುತೋಪು ಹಾರಿಸದಿದ್ದರೆ ರಾಜಕಾರಣಿಗಳಿಗೆ ನಿದ್ದೆಯೂ ಬಾರದು. ರಾಜಕಾರಣ ಎನ್ನುವುದೇ ಒಂದು ಬಗೆಯ ಮಾಯೆ. ಈ ಮಾಯಾಲೋಕದಲ್ಲಿ ಇರುವವರು ಅಗೋಚರ ಶಕ್ತಿಯನ್ನು […]
Read More
– ರೈತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಭಯ – ನನ್ನ ಬೆಳೆ, ನನ್ನ ಹಕ್ಕು ಎನ್ನುವುದೇ ಕಾಯಿದೆಯ ಆಶಯ ವಿಕ ಸುದ್ದಿಲೋಕ ಬೆಂಗಳೂರು. ‘ನನ್ನ ಬೆಳೆ. ನನ್ನ ಹಕ್ಕು’ ಎಂಬ ಆಶಯದಡಿ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವ ದೃಷ್ಟಿಯಿಂದ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸಲು ಇದು ಸಹಾಯಕವಾಗಲಿದೆ. ಇದರಿಂದ ರೈತರಿಗೆ ಅನ್ಯಾಯವಾಗುವ ಪ್ರಶ್ನೆಯೇ ಇಲ್ಲ. ಅಂತಹ ಸಂದರ್ಭ ಬಂದರೆ ಈ ಸ್ಥಾನದಲ್ಲಿಒಂದು […]
Read More
– ನಾ. ತಿಪ್ಪೇಸ್ವಾಮಿ. ಕೊರೊನಾ ಮಹಾಮಾರಿಯಿಂದಾಗಿ ಅಮೆರಿಕ, ರಷ್ಯಾ, ಚೀನಾ, ಸ್ಪೇನ್ ಮುಂತಾದ ಶ್ರೀಮಂತ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಅತ್ಯಧಿಕ ಸಂಖ್ಯೆಯಲ್ಲಿಸಾವು ನೋವುಗಳು ಸಂಭವಿಸಿವೆ. ಈ ವೈರಸ್ ಭಾರತದಲ್ಲಿಯೂ ಹರಡಿದೆ. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಪ್ರಾಣಹಾನಿಯನ್ನು ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತದ ನಾಯಕತ್ವ ತೆಗೆದುಕೊಂಡ ನಿರ್ಣಯಗಳು ಹಾಗೂ ಈ ದೇಶದಲ್ಲಿಆಚರಣೆಯಲ್ಲಿರುವ ರೀತಿ ನೀತಿಗಳು. ಪ್ರಧಾನಿ ಮೋದಿ ಮಾ.22ರಂದು 21ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದರು. ಇದು ಅನೇಕರನ್ನು ದಿಗ್ಭ್ರಮೆಗೊಳಿಸಿತು. 130 ಕೋಟಿ ಜನರಿರುವ ಭಾರತದಲ್ಲಿ ಅನೇಕ […]
Read More
(ಇಂದು ಕ್ರಾಂತಿಕಾರಿ ಸುಖದೇವ್ ಜನ್ಮದಿನ) – ಮಯೂರಲಕ್ಷ್ಮಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಕ್ರಾಂತಿಕಾರಿಗಳು. ಅವರ ಬಲಿದಾನವನ್ನು ದೇಶ ಇಂದಿಗೂ ಸ್ಮರಿಸುತ್ತಿದೆ. ಈ ಮೂವರ ಪೈಕಿ ಸುಖದೇವ್ ಅವರ ಪೂರ್ತಿ ಹೆಸರು ಸುಖದೇವ್ ಥಾಪರ್. ಪಂಜಾಬಿನ ಲೂಧಿಯಾನಾದಲ್ಲಿ ಮೇ 15, 1907ರಲ್ಲಿ ರಾಮಲಾಲ್ ಥಾಪರ್ ಮತ್ತು ರಲ್ಲಿದೇವಿ ಅವರ ಪುತ್ರನಾಗಿ ಜನಿಸಿದವರು ಸುಖದೇವ್. ಪಂಜಾಬಿನ ಕ್ರಾಂತಿಕಾರಿ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದ ರಾಮ್‌ಲಾಲ್ ಅವರ ನಿಧನದ ನಂತರ ಸುಖದೇವ್ ಚಿಕ್ಕಪ್ಪ ಲಾಲಾ ಅಚಿಂತ್ಯರಾಮ್ […]
Read More
– ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ‘ಮನೆ ಮಾಡೇ ಗರತಿ ಎಂದರೆ ಮೆಲ್ಲಗೆ ಮನೆಯೊಳಗೆ ಬಂದು ಮನೆನೇ ಮಾರಿದ್ಲಂತೆ…’ ಎಂಬ ಗಾದೆ ಮಾತನ್ನು ನಮ್ಮೂರ ಕಡೆ ಜನ ಹೇಳ್ತಿರ್ತಾರೆ. ಹಾಗಾಗಿದೆ ದೇಶದ ಸ್ಥಿತಿ. ಕೊರೊನಾ ವೈರಸ್ ದಾಳಿಯಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿ ನರಳುತ್ತಿರುವ ನಮ್ಮ ರೈತ ಬಂಧುಗಳು ‘ನಮ್ಮನ್ನು ರಕ್ಷಿಸಿ, ಉಳಿಸಿ’ ಎಂದು ಗೋಗರೆಯುತ್ತಿರುವಾಗ, ಕೇಂದ್ರ ಸರಕಾರ ಅವರ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳನ್ನು ನಾಶ ಮಾಡಲು […]
Read More
– ಸುಗ್ರೀವಾಜ್ಞೆ ಜಾರಿಗೆ ತಂದರೆ 18ರಿಂದ ಬಂದ್ ಎಚ್ಚರಿಕೆ – ಸರಕಾರದ ಮೇಲೆ ಒತ್ತಡ, ಇಂದು ಸಂಪುಟದಲ್ಲಿ ಚರ್ಚೆ ವಿಕ ಸುದ್ದಿಲೋಕ ಬೆಂಗಳೂರು ಎಪಿಎಂಸಿ ಕಾಯಿದೆ ತಿದ್ದುಪಡಿ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಕಾಣಿಸಿಕೊಂಡಿದೆ. ಈ ನಡುವೆ, ರಾಜ್ಯ ಸರಕಾರವು ಕೇಂದ್ರದ ಒತ್ತಡಕ್ಕೆ ಮಣಿದು ಅವಸರದಿಂದ ಕಳುಹಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಬುಧವಾರ ವಾಪಸ್ ಕಳಿಸಿದ್ದಾರೆ. ಗುರುವಾರ ಸಂಪುಟದಲ್ಲಿ ಚರ್ಚೆ ನಡೆಸಿಯೇ ಸುಗ್ರೀವಾಜ್ಞೆಯನ್ನು ಅಂತಿಮಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಸರಕಾರದ ನಡೆ ಕುತೂಹಲ ಮೂಡಿಸಿದೆ. ಬುಧವಾರ ಎಪಿಎಂಸಿ ವರ್ತಕರು ರಾಜ್ಯದ ಬಹುತೇಕ […]
Read More