– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ಹಾಲ್ದೊಡ್ಡೇರಿ ಮಂಚೂ ಸೇನೆಗಳು ಈ ಹಿಂದೆ ಟಿಬೆಟ್‌ಗೆ ಬಂದಿದ್ದಾಗ ಅಧಿಕಾರದಲ್ಲಿದ್ದ ದಲಾಯಿ ಲಾಮಾ ಕಾಲವಾಗಿ, ಹೊಸ ದಲಾಯಿಗಾಗಿ ದೀರ್ಘ ಶೋಧ ನಡೆದಿತ್ತು. ಆಗ ಹುಡುಕಾಟಕ್ಕೆ ಸಿಕ್ಕ ‘ದಲಾಯಿ’ ಮಗುವನ್ನು ಪೊಟಾಲಾ ಅರಮನೆಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ದಲಾಯಿ ಲಾಮನ ಹೆಸರಲ್ಲಿ ಟಿಬೆಟಿನ ಮಂತ್ರಿಮಂಡಲ ರಾಜ್ಯಭಾರ ಮಾಡುತ್ತಿತ್ತು. ಚೀನದ ಬಂಧ ವಿಮೋಚನಾ ಪಡೆಗಳು ಟಿಬೆಟಿನ ಗಡಿಯ ಬಳಿಗೆ ಬಂದಾಗ ದಲಾಯಿ ಲಾಮಾಗೆ ಇನ್ನೂ ಹತ್ತು ಹನ್ನೆರಡರ ವಯಸ್ಸು. ಆದರೂ ಆತ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ […]
Read More
ಭಾರತ ಗಡಿಯಲ್ಲಿ ನಡೆಸುತ್ತಿರುವ ನಿರ್ಮಾಣ ಚಟುವಟಿಕೆ, ಅದರಲ್ಲೂ ಮುಖ್ಯವಾಗಿ ಡಿಎಸ್‌ಡಿಬಿಒ ರಸ್ತೆ ಎಂದೇ ಹೆಸರಾಗಿರುವ ಗಡಿಯಂಚಿನ ರಸ್ತೆ ಚೀನಾದ ಕಿರಿಕಿರಿಗೆ ಕಾರಣವಾಗಿದೆ. ಈ ರಸ್ತೆಯ ಪ್ರಾಮುಖ್ಯತೆ ಏನು? ತಿಳಿಯೋಣ ಬನ್ನಿ. ಚೀನಾ ಹಾಗೂ ಭಾರತದ ಯೋಧರ ನಡುವೆ ಚಕಮಕಿ ನಡೆದ ಗಲ್ವಾನ್ ನದಿ ಹಾಗೂ ವಾಸ್ತವಿಕ ಗಡಿ ರೇಖೆಗೆ ಸಮಾನಾಂತರವಾಗಿ ಒಂದು ಸರ್ವಋುತು ರಸ್ತೆಯನ್ನು ಭಾರತ ನಿರ್ಮಿಸುತ್ತಿದೆ. ಇದು ದರ್ಬುಕ್- ಶಾಯಕ್- ದೌಲತ್ ಬೇಗ್ ಓಲ್ಡಿ ರಸ್ತೆ (ಡಿಎಸ್‌ಡಿಬಿಒ ರೋಡ್) ಎಂದೇ ಹೆಸರಾಗಿದೆ. ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖ […]
Read More
– ಮುದ್ರಾಂಕ ಶುಲ್ಕ ವಿನಾಯಿತಿ | ಅಕ್ರಮ ಸಕ್ರಮಕ್ಕೆ ಹೊಸ ಕಾಯಿದೆ ವಿಕ ಸುದ್ದಿಲೋಕ, ಬೆಂಗಳೂರು ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡುವ ಭೂಸುಧಾರಣಾ ಕಾಯಿದೆ ತಿದ್ದುಪಡಿಯ ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರಕಾರ ಇದೀಗ 2ನೇ ಹಂತದ ಭೂಸುಧಾರಣೆಗೆ ಸಿದ್ಧವಾಗಿದೆ. ನೋಂದಣಿ ಶುಲ್ಕದಲ್ಲಿ ವಿನಾಯಿತಿ, ಭೂ ಖರೀದಿ ನಿಯಮ ಸರಳೀಕರಣ ಸೇರಿದಂತೆ ಮಹತ್ವದ ತೀರ್ಮಾನಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ […]
Read More
ಬೆಂಗಳೂರು: ಕೊರೊನಾ ಸಂಕಷ್ಟದಿಂದ ಜನಜೀವನ ಪುಟಿದೇಳಲೇಬೇಕು. ರಾಜ್ಯದಲ್ಲಿ ತಕ್ಷಣಕ್ಕೆ ಚೇತರಿಕೆ ಕಾಣಬಲ್ಲ ಕ್ಷೇತ್ರಗಳಲ್ಲಿ ಒಂದಾದ ರಿಯಾಲ್ಟಿ ಕ್ಷೇತ್ರದ ಪುನಶ್ಚೇತನಕ್ಕೆ ಸರ್ವ ನೆರವು ನೀಡಲು ಸರಕಾರ ಬದ್ಧವಾಗಿದೆ. ಈಗಾಗಲೇ ಹಲವು ಕ್ರಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ವಿಜಯ ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ‘ಕರುನಾಡ ಕಟ್ಟೋಣ ಬನ್ನಿ’ ಅಭಿಯಾನದಡಿ ನಡೆದ ‘ರಿಯಾಲ್ಟಿ ಕ್ಷೇತ್ರದ ಪುನಶ್ಚೇತನ: ಚಿಂತನ ಮಂಥನ’ ಡಿಜಿಟಲ್ ಸಂವಾದದಲ್ಲಿ ಮಾತನಾಡಿದರು. ಬೆಂಗಳೂರಿನ ಕ್ರೆಡೈ […]
Read More
– ಪೂರ್ವ ಲಡಾಖ್ ಸಂಘರ್ಷದ ಮಧ್ಯೆ ಸೇತುವೆ ಪೂರ್ಣ – ಯುದ್ಧ ವಿಮಾನಗಳ ಹಾರಾಟ | ಚೀನಾಕ್ಕೆ ಪಾಠ ಕಲಿಸದೇ ಬಿಡಲ್ಲ: ಮೋದಿ ಲಡಾಖ್: ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರಿದಿರುವ ಮಧ್ಯೆಯೇ, ಭಾರತೀಯ ಸೇನೆಯ ಎಂಜಿನಿಯರಿಂಗ್ ವಿಭಾಗ ಸದ್ದಿಲ್ಲದೆ ಗಲ್ವಾನ್ ನದಿಗೆ 60 ಮೀಟರ್ ಉದ್ದನೆಯ ಸೇತುವೆ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರೊಂದಿಗೆ ಈ ಸೂಕ್ಷ್ಮ ಪ್ರದೇಶದ ಮೇಲೆ ಭಾರತ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ. ಇದರ ಮಧ್ಯೆ ಭಾರತದ ಯುದ್ಧ […]
Read More
– ಹಿಮಾಲಯದ ದಳ್ಳುರಿ – ಭಾಗ 2 ‘‘ಅನ್ಯ ಜನತೆಯ ಮೇಲೆ ಯಾರೇ ಯುದ್ಧ ಸಾರಲಿ, ಹಾಗೆ ಮಾಡುವವರು ಅರೆ ಹುಚ್ಚರಾಗಿರುತ್ತಾರೆ’’- ಇದೊಂದು ಹಳೆಯ ಚೀನೀ ಗಾದೆ. ಆಕ್ರಮಣವೇ ರಾಷ್ಟ್ರೀಯ ಪ್ರವೃತ್ತಿಯಾದ ಒಂದು ದೇಶದಲ್ಲಿ ಅಂಥ ಗಾದೆ ಮಾತು ಹುಟ್ಟಿದ್ದೂ ಆಶ್ಚರ್ಯವೇ. ಈಗಿನ ಚೀನೀಯರಿಗಂತೂ ಅದರ ನೆನಪು ಕೂಡಾ ಇದ್ದಂತಿಲ್ಲ. ಈ ‘ಅರೆ-ಹುಚ್ಚರು’ 1950ರಲ್ಲಿ ಅನ್ಯರ ಮೇಲೆ ಯುದ್ಧ ಸಾರಿದರು. ತನ್ನ ಕಾಲು ಭಾಗದಷ್ಟು, ಸುಮಾರು ಪಶ್ಚಿಮ ಯೂರೋಪಿನಷ್ಟು ವಿಸ್ತಾರವುಳ್ಳ ಒಂದು ನೆರೆದೇಶದ ಕೇವಲ ಮೂವತ್ತು ಲಕ್ಷ […]
Read More
ನಲವತ್ತು ವರ್ಷಗಳಿಂದ ಈಚೆಗೆ ಗಲ್ವಾನ್ ಪ್ರಕರಣ ನಡೆಯುವವರೆಗೆ ಭಾರತ- ಚೀನಾ ಗಡಿಯಲ್ಲಿ ಒಂದೇ ಒಂದು ಗುಂಡು ಹಾರಿಲ್ಲ, ಒಬ್ಬನೇ ಒಬ್ಬ ಯೋಧ ಮೃತಪಟ್ಟಿಲ್ಲ. ಇದಕ್ಕೆ ಕಾರಣವಾಗಿರುವುದು ಮೂರು ಒಪ್ಪಂದಗಳು. ಚೀನಾ ಈಗ ಈ ಮೂರೂ ಒಪ್ಪಂದಗಳನ್ನು ಸಾರಾ ಸಗಟಾಗಿ ಉಲ್ಲಂಘಿಸಿದೆ. ಯಾವುವೀ ಮೂರು ಒಪ್ಪಂದ? 1993ರ ಒಪ್ಪಂದ ಭಾರತ ಹಾಗೂ ಚೀನಾದ ಗಡಿ ಭದ್ರತೆಯ ವಿಚಾರದಲ್ಲಿ ಮೊದಲ ಬಾರಿ ಏರ್ಪಟ್ಟ ಒಪ್ಪಂದ 1993ರದ್ದು. ಈ ಒಪ್ಪಂದಕ್ಕೆ ಸಹಿ ಹಾಕಿದವರು ಆಗಿನ ಭಾರತ ಪ್ರಧಾನಿ ಪಿ.ವಿ. ನರಸಿಂಹರಾವ್. ಇದಕ್ಕೂ […]
Read More
ಕನ್ನಡದ ಖ್ಯಾತ ಕಾದಂಬರಿಕಾರ ನಿರಂಜನ ಅವರು ಬರೆದ ‘ಹಿಮಾಲಯದ ದಳ್ಳುರಿ’ ಕೃತಿ ಭಾರತ ಮತ್ತು ಚೀನಾ ಸಂಘರ್ಷದ ಇತಿಹಾಸವನ್ನು ದಾಖಲಿಸಿರುವ ಒಂದು ಆಕರಗ್ರಂಥ. ಚೀನಾ ದೇಶ ಭಾರತದ ಮೇಲೆ ದುರಾಕ್ರಮಣ ನಡೆಸುತ್ತಿದ್ದ ಸಂದರ್ಭದಲ್ಲಿಯೇ (1962ರ ನವೆಂಬರ್ 15) ಈ ಪುಸ್ತಕ ಪ್ರಕಟವಾಗಿತ್ತು. ವಿಜಯ ಕರ್ನಾಟಕಕ್ಕಾಗಿ ಇದರ ಸಂಗ್ರಹ ನಿರೂಪಣೆ ಸುಧೀಂದ್ರ ಹಾಲ್ದೊಡ್ಡೇರಿ. – ನಿರಂಜನ ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತವನ್ನು ಬ್ರಿಟಿಷರು ಆಕ್ರಮಿಸಿದಾಗ, ಕಾಶ್ಮೀರದಿಂದ ಬರ್ಮಾದವರೆಗೂ ತಮ್ಮ ಗಡಿಯನ್ನು ಅವರು ಭದ್ರಗೊಳಿಸಿದರು. ಲಡಾಖ್ ಪ್ರದೇಶದಲ್ಲಿ ಆ ಮೊದಲೇ ಗಡಿಯ […]
Read More
ಈಗ ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಎರಡೇ- ಮುಂದೇನು? ಈಗ ಯಾಕೆ ಈ ಸಂಘರ್ಷ ನಡೆಯಿತು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ವಿದೇಶಾಂಗ ತಜ್ಞರು ಮಾಡುತ್ತಿದ್ದಾರೆ. ಅಣ್ವಸ್ತ್ರ ಹೊಂದಿರುವ ಎರಡು ಪ್ರಬಲ ರಾಷ್ಟ್ರಗಳು ಹೀಗೆ ಅನಪೇಕ್ಷಿತ ಸಂದರ್ಭದಲ್ಲಿ ಕಾದಾಟಕ್ಕಿಳಿದಿರುವುದು ದಿಗಿಲಿಗೆ ಕಾರಣವಾಗಿದೆ. ಆದರೆ, ಚೀನಾದಲ್ಲಿ ಕೋವಿಡ್ 19 ವೈರಸ್ ಪತ್ತೆಯಾದ ನಂತರ ಚೀನಾದ ನಡವಳಿಕೆಯನ್ನು ವಿಶ್ಲೇಷಿಸಿದರೆ ನಮ್ಮೆಲ್ಲ ಅನುಮಾನಗಳಿಗೆ ಪರಿಹಾರ ದೊರೆಯಬಹುದು. ಕಳೆದ ಕೆಲವು ತಿಂಗಳಿಂದ ಅನೇಕ ಆಕ್ರಮಣಕಾರಿ ನಡೆಗಳನ್ನು ಚೀನಾ ಪ್ರದರ್ಶಿಸಿದೆ. ಹಾಂಕಾಂಗ್‌ನಲ್ಲಿ ಅಸ್ತಿತ್ವದಲ್ಲಿದ್ದ […]
Read More
– ಭಾರತ ಶಾಂತಿ ಪ್ರಿಯ, ಆದರೆ ಕೆದಕಿದರೆ ಸಹಿಸಲ್ಲ – ಚೀನಾಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್ – ತನ್ನ ಯೋಧರ ಸಾವಿನ ಸಂಖ್ಯೆ ಮುಚ್ಚಿಡುತ್ತಿರುವ ಡ್ರ್ಯಾಗನ್ ಹೊಸದಿಲ್ಲಿ: ಲಡಾಖ್ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಭಾರತ ಶಾಂತಿ ಪ್ರಿಯ ದೇಶ ನಿಜ. ಆದರೆ ಪ್ರಚೋದಿಸಿದರೆ ಮುಟ್ಟಿ ನೋಡಿಕೊಳ್ಳುವಂತೆ ದಿಟ್ಟ ಉತ್ತರ ನೀಡುವ ಸಾಮರ್ಥ್ಯ ನಮಗಿದೆ. ಅದು ಎಂಥದ್ದೇ ಸಂದರ್ಭವಾದರೂ ಸರಿ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ… ಇದು ಯುದ್ಧೋನ್ಮಾದಿ ಚೀನಾಗೆ […]
Read More