ಸೂಪರ್ ಸಿಕ್ಸಸ್

– ಎಸ್ಸೆಸ್ಸೆಲ್ಸಿ 71.80% ರಿಸಲ್ಟ್ | ಆರು ಮಂದಿಗೆ 625/625 ಅಂಕ – ಗ್ರೇಡಿಂಗ್ ಪದ್ಧತಿ ಜಾರಿ: 10 ಜಿಲ್ಲೆಗಳಿಗೆ ‘ಎ’ಶ್ರೇಣಿ | ಮತ್ತೆ ಬಾಲಕಿಯರೇ ಮೇಲುಗೈ ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಆಂತಕದ ನಡುವೆಯೂ ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಈ ಬಾರಿ ಒಟ್ಟು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ಸೋಂಕಿನ ಭೀತಿ ನಡುವೆ ಪರೀಕ್ಷೆ ನಡೆದಿದ್ದು ಒಂದು ಸಾಧನೆಯಾದರೆ, ದಿಟ್ಟತನದಿಂದ ಪರೀಕ್ಷೆ ಎದುರಿಸಿ […]

Read More

ಸಿಇಟಿ ಪರೀಕ್ಷೆಯೂ ಸುಗಮ – ಶಾಲಾರಂಭಕ್ಕೆ ಇದು ಸ್ಫೂರ್ತಿಯಾಗಲಿ

ಕರ್ನಾಟಕ ಸರಕಾರ ಇಂಜಿನಿಯರಿಂಗ್‌ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಗುರುವಾರ ಹಾಗೂ ಶುಕ್ರವಾರ ಸುಮಾರು 497 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪಿಯುಸಿ ಇಂಗ್ಲಿಷ್‌ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಲಾಕ್‌ಡೌನ್‌ ಸಂದರ್ಭದಲ್ಲಿಯೇ ಯಶಸ್ವಿಯಾಗಿ ನಡೆಸಿದ್ದ ಸರಕಾರ, ಈಗ ಸಿಇಟಿಯನ್ನೂ ನೆರವೇರಿಸಿ ಸೈ ಎನ್ನಿಸಿಕೊಂಡಿದೆ. ಇದರಲ್ಲಿ 63 ಮಂದಿ ಕೋವಿಡ್‌ ಸೋಂಕಿತರೂ ಇದ್ದುದು ವಿಶೇಷ. ಈ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ವಂಚಿತರಾಗದಂತೆ ನೋಡಿಕೊಂಡ ಪರೀಕ್ಷಾ ಪ್ರಾಧಿಕಾರದ […]

Read More

ತಕ್ಷಣದಿಂದಲೇ ಪದವಿ ಪ್ರವೇಶ

– ಆನ್‌ಲೈನ್‌ನಲ್ಲೇ ಉಚಿತ ಅರ್ಜಿ ವಿತರಣೆ ಮಾಡಲು ಡಿಸಿಎಂ ಸೂಚನೆ – ಸೆಪ್ಟೆಂಬರ್ 1ರಿಂದಲೇ ಆನ್‌ಲೈನ್‌ ಪಾಠ | ಅಕ್ಟೋಬರ್‌ನಿಂದ ರೆಗ್ಯುಲರ್ ಕ್ಲಾಸ್? ವಿಕ ಸುದ್ದಿಲೋಕ ಬೆಂಗಳೂರು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಪದವಿ ಹಾಗೂ ಇತರೆ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದೆ. ಪದವಿ ಕಾಲೇಜುಗಳಲ್ಲಿ ಸೆಪ್ಟೆಂಬರ್ 1ರಿಂದಲೇ ಆನ್‌ಲೈನ್‌ ತರಗತಿ ಆರಂಭವಾಗಲಿದೆ. ಕೊರೊನಾ ನಿಯಂತ್ರಣಕ್ಕೆ ಬಂದರೆ ಅಕ್ಟೋಬರ್‌ನಲ್ಲಿ ರೆಗ್ಯುಲರ್ ತರಗತಿಗಳು ನಡೆಯಲಿವೆ. ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶುಕ್ರವಾರ […]

Read More

ಉಡುಪಿ ಫಸ್ಟ್, ವಿಜಯಪುರ ಲಾಸ್ಟ್

– ದಕ್ಷಿಣ ಕನ್ನಡ 2, ಕೊಡಗು ಜಿಲ್ಲೆಗೆ 3ನೇ ಸ್ಥಾನ – 88 ಕಾಲೇಜುಗಳು ಝೀರೋ, 92 ಕಾಲೇಜು ಶತಕ ಸಾಧನೆ – ಕೊರೊನಾ ಭಯದ ಮಧ್ಯೆಯೇ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ವಿಕ ಸುದ್ದಿಲೋಕ ಬೆಂಗಳೂರು ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿಯೂ ಉಡುಪಿ ಶೇ.90.71 ರಿಸಲ್ಟ್ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ(ಶೇ.54.22) ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(ಶೇ.90.71) ಇದ್ದರೆ ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ(ಶೇ.81.53) ಇದೆ. […]

Read More

ಬಡತನದಲ್ಲೂ ಅರಳಿದ “ಕಲೆ’

ದ್ವಿತೀಯ ಪಿಯು 61.80% ರಿಸಲ್ಟ್ | ಕಲಾ ವಿಭಾಗದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ ಸಾರ್ವಕಾಲಿಕ ಗರಿಷ್ಠ ಫಲಿತಾಂಶ | ಕೊರೊನಾ ಅವಧಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ನಪಾಸು. ವಿಕ ಸುದ್ದಿಲೋಕ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಾಸರಿ ಶೇ.61.80ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಫಲಿತಾಂಶ ಪ್ರಕಟವಾಗಿದೆ. ಈ ನಡುವೆ ಕಷ್ಟನಷ್ಟ, ಸೌಕರ್ಯ ಕೊರತೆಗಳನ್ನೂ ಮೀರಿ ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮುಖ್ಯವಾಗಿ ಕಲಾ ವಿಭಾಗದಲ್ಲಿ ಟಾಪ್ ಸ್ಥಾನ ಪಡೆದಿರುವ ಬಹುತೇಕ […]

Read More

ರಾಜಧಾನಿಗೆ ಅಷ್ಟ ದಿಗ್ಬಂಧನ

– ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ 8 ವಲಯ ಸ್ಥಾಪನೆ ಉಸ್ತುವಾರಿಗೆ 8 ಸಚಿವರು, 8 ಐಎಎಸ್ ಅಧಿಕಾರಿಗಳ ನೇಮಕ. ವಿಕ ಸುದ್ದಿಲೋಕ ಬೆಂಗಳೂರು. ರಾಜಧಾನಿ ಬೆಂಗಳೂರು ಸೇರಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ಸುದೀರ್ಘ ಚರ್ಚೆ ನಡೆದ ಬಳಿಕ, ಬೆಂಗಳೂರು ಕೊರೊನಾ ಸೋಂಕು ನಿರ್ವಹಣೆಗೆ 8 ವಲಯಗಳ ಉಸ್ತುವಾರಿಯನ್ನು ಸಚಿವರ ಹೆಗಲಿಗೆ ಹಾಕಲಾಗಿದೆ. ಇವರ ಜತೆಗೆ 8 ವಲಯಗಳಿಗೂ 8 ಐಎಎಸ್ […]

Read More

ಆನ್‌ಲೈನ್‌ ಕ್ಲಾಸ್‌ಗೆ ಸವಾಲುಗಳು : ಉಳ್ಳವರ – ಇಲ್ಲದವರ ಅಂತರ ಹೆಚ್ಚಾಗದಿರಲಿ

ಖಾಸಗಿ ಶಾಲೆಗಳು ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸುವುದಕ್ಕೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ‘ಇದು ಸಂವಿಧಾನದ 21 ಹಾಗೂ 21ಎ ವಿಧಿಯಯನ್ವಯ ಪ್ರಜೆಗಳಿಗೆ ದತ್ತವಾಗಿರುವ ಬದುಕಿನ ಹಾಗೂ ಶಿಕ್ಷಣದ ಹಕ್ಕನ್ನು ನಿರಾಕರಿಸಿದಂತಾಗಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರಿಂದ, ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ರಹದಾರಿ ದೊರೆತಂತಾಗಿದೆ. ಆದರೆ ಈ ಆದೇಶ, ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ಅಥವಾ ಆನ್‌ಲೈನ್‌ ಕ್ಲಾಸುಗಳನ್ನು ಕಡ್ಡಾಯ ಮಾಡಲು […]

Read More

ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ – ಸುರಕ್ಷಿತ ಕ್ರಮಗಳೊಂದಿಗೆ ಮಾದರಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಕೊರೊನಾ ವೈರಸ್‌ನ ಆತಂಕಕಾರಿ ಹಬ್ಬುವಿಕೆಯ ನಡುವೆಯೂ ಜೂನ್‌ 25ರಿಂದ ಆರಂಭಗೊಂಡಿದ್ದ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ. ಸುಮಾರು 8.50 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.98.10ರಷ್ಟಿತ್ತು. ಪ್ರತಿ ಪರೀಕ್ಷೆಗೂ ಶೇ.98 ವಿದ್ಯಾರ್ಥಿಗಳು ವೈರಾಣುವಿನ ಭಯ ಮೀರಿ ಹಾಜರಾಗಿದ್ದರು. 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದು ಪರೀಕ್ಷಾ ಕೇಂದ್ರಗಳಿಂದ ಬಂದದ್ದಲ್ಲ ಎಂದು ಸರಕಾರ ಹೇಳಿದೆ. ಇವರೂ ಸೇರಿದಂತೆ, ಕ್ವಾರಂಟೈನ್‌ನಲ್ಲಿರುವ […]

Read More

ಮೊದಲ ದಿನ ನಿರಾಳ – ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ | 98.3% ವಿದ್ಯಾರ್ಥಿಗಳು ಹಾಜರು

ವಿಕ ಸುದ್ದಿಲೋಕ ಬೆಂಗಳೂರು.  ಕೊರೊನಾ ಆತಂಕದ ನಡುವೆ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಪರೀಕ್ಷೆಗಳು ಗುರುವಾರ ಯಶಸ್ವಿಯಾಗಿ ನಡೆದಿದ್ದು, ಶೇ.98.3ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸರು, ಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರು ಎಲ್ಲರೂ ಸೇರಿ ದೇಶಾದ್ಯಂತ ಕುತೂಹಲ ಕೆರಳಿಸಿದ್ದ, ವ್ಯಾಪಕ ಚರ್ಚೆಗೆ ಗುರಿಯಾಗಿದ್ದ ಪರೀಕ್ಷೆಯನ್ನು ಯಾವುದೇ ದೊಡ್ಡ ಸಮಸ್ಯೆಗಳಿಲ್ಲದೆ ನಡೆಸುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಒಟ್ಟು 2879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು. […]

Read More

ಎಸ್ಸೆಸ್ಸೆಲ್ಸಿಗೂ ಮಾದರಿ – ಯಶಸ್ವಿಯಾದ ಪಿಯುಸಿ ಪರೀಕ್ಷೆ

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಯಾವುದೇ ಆತಂಕವಿಲ್ಲದೆ, ಸುಸಜ್ಜಿತವಾಗಿ ಹಾಗೂ ಅಹಿತಕರ ಘಟನೆಗಳಿಲ್ಲದೆ ನೆರವೇರಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ, ಆರೋಗ್ಯ ನಿಗಾಕ್ಕೆ ವ್ಯವಸ್ಥೆ, ಪರೀಕ್ಷಾ ಕೇಂದ್ರದ ಗೇಟ್‌ಗಳ ಬಳಿಯೇ ವಿದ್ಯಾರ್ಥಿಗಳಿಗೆ ದೇಹದ ಉಷ್ಣಾಂಶ ಪರೀಕ್ಷೆ, ಸ್ಯಾನಿಟೈಸರ್‌ನಿಂದ ಸ್ವಚ್ಛತೆ, ಪ್ರತಿ ವಿದ್ಯಾರ್ಥಿಗೂ ಮಾಸ್ಕ್‌ ಕಡ್ಡಾಯ, ಎಲ್ಲಾ ಕೊಠಡಿಗಳು ಮತ್ತು ಪೀಠೋಪಕರಣಗಳ ಸಂಪೂರ್ಣ ಸ್ಯಾನಿಟೈಸೇಷನ್‌, ಕಂಟೈನ್ಮೆಂಟ್‌ ವಲಯದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದವರಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top