ಸಂಪೂರ್ಣವಾಗಿ ಕಳಚಿತು ಕಾಂಗ್ರೆಸ್ ಮುಖವಾಡ

ಬೇರೆ ಬೇರೆ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಆಗುತ್ತಿದ್ದರೆ ಭಾರತವು ತನ್ನ ಸುಧಾರಣೆಗಳ ಮುಖಾಂತರ ಯಶಸ್ವಿಯಾಗಿ ಮುನ್ನಡೆದಿದೆ. ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಸುಧಾರಣೆ ಮೂಲಕ ಭಾರತವು ಹಣಕಾಸು ಕ್ಷೇತ್ರದಲ್ಲಿ ಸದೃಢವಾಗಿದೆ. ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ************************** ದಕ್ಷಿಣ ಭಾರತ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮುಂದಿಡಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ಕರ್ನಾಟಕದ ಸಂಸದರೊಬ್ಬರು ದನಿ ಎತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಹಾಗಾಗಿ ದೇಶದ ಅಧಿಕಾರ ನಡೆಸುವುದು […]

Read More

ಡಾ. ಮೋಹನ್ ಭಾಗವತ್‌ರ ಮಾತನ್ನು ಅನುಸರಿಸಿದರೆ ʼರಾಮರಾಜ್ಯʼ

2022ರಲ್ಲಿ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷ ಸಮಾರೋಪ ಕಾರ್ಯಕ್ರಮದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಹೇಳಿದ ಮಾತು ಸಾಕಷ್ಟು ಚರ್ಚೆಯಾಗಿತ್ತು. ಅವರು ಹೇಳಿದ್ದಿಷ್ಟು: “. . .ಈಗ ಕಾಶಿಯ ಜ್ಞಾನವಾಪಿ ವಿಚಾರ ಚಲಾವಣೆಗೆ ಬಂದಿದೆ. ಇದು ಇತಿಹಾಸ, ಅದನ್ನು ಬದಲಾಯಿಸಲು ಆಗುವುದಿಲ್ಲ. ಈ ಇತಿಹಾಸ ನಾವು ನಿರ್ಮಿಸಿದ್ದೂ ಅಲ್ಲ. ಈಗ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರೂ ಮಾಡಿಲ್ಲ, ಇಂದು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುವವರೂ ಮಾಡಿಲ್ಲ. ಆ ಸಮಯದಲ್ಲಿ […]

Read More

ಇಸ್ಲಾಮಿಕ್ ವಸಾಹತು ಕುರಿತು ಕಾಂಗ್ರೆಸ್ಸಿಗೇಕೆ ಜಾಣಕುರುಡು?

ನಮ್ಮಲ್ಲಿ ಬುದ್ಧಿಜೀವಿಗಳು ‘ವಸಾಹತುಶಾಹಿ ಮಾನಸಿಕತೆ’ ಕುರಿತು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಈ ಎಲ್ಲ ಸಮಯದಲ್ಲಿ ವಸಾಹತು ಎಂದು ಬಳಸುತ್ತಿರುವುದು ಸುಮಾರು 200 ವರ್ಷ ಭಾರತವನ್ನು ಗುಲಾಮಗಿರಿಗೆ ತಳ್ಳಿದ್ದ ಬ್ರಿಟಿಷ್ ಅವಧಿಯದ್ದು ಮಾತ್ರ. ಯಾರು ಕೂಡ, ಬ್ರಿಟಿಷರಿಗಿಂತ ಹಿಂದೆ ಭಾರತದ ಮೇಲೆ ದಾಳಿ ನಡೆಸಿದ, ನಂತರ ಆಳ್ವಿಕೆ ನಡೆಸಿದ ಮುಸ್ಲಿಂ, ಪೋರ್ಚುಗೀಸರ ಕುರಿತು ‘ವಸಾಹತು’ ಎಂಬುದನ್ನು ಬಳಸುವುದಿಲ್ಲ ಏಕೆ ಎನ್ನುವುದೇ ಆಶ್ಚರ್ಯ. *********************** ಪ್ರಧಾನಿ ನರೇಂದ್ರ ಮೋದಿ 2022ರ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ಅಮೃತಕಾಲದ ಪಂಚಪ್ರಾಣಗಳ ಕರ್ತವ್ಯಗಳಲ್ಲಿ ಪ್ರಮುಖವಾದ ಘೊಷಣೆ […]

Read More

ಎನ್ಇಪಿ ವಿರೋಧಿಸುವ ರಾಜ್ಯ ಸರಕಾರ ಯಾರಿಗೆ ಅನ್ಯಾಯ ಮಾಡುತ್ತಿದೆ ಗೊತ್ತೇ?

ಕಳೆದ ತಿಂಗಳು ಇದೇ ಅಂಕಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (national education policy- ಎನ್‌ಇಪಿ) ಹಾಗೂ ಇದೀಗ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ರೂಪಿಸಲು ಮುಂದಾಗಿರುವ ರಾಜ್ಯ ಶಿಕ್ಷಣ ನೀತಿಯ(ಎಸ್‌ಇಪಿ) ಸಾಧಕ ಬಾಧಕಗಳ ಕುರಿತು ಚರ್ಚಿಸಿದ್ದೆವು. ರಾಜ್ಯದಲ್ಲಿ ಎನ್‌ಇಪಿಯನ್ನೇ ಮುಂದುವರಿಸಬೇಕು, ಎಸ್‌ಇಪಿ (State education policy) ಬೇಡ ಎಂಬ ಕೂಗು ಜೋರಾಗಿದೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿ ಸಮೂಹ, ವಿದ್ವಾಂಸರು, ರಾಜಕಾರಣಿಗಳು ಸರಣಿ ಸಭೆಗಳನ್ನು, ವಿಚಾರಸಂಕಿರಣಗಳನ್ನು ನಡೆಸಿ ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಪೀಪಲ್ಸ್‌ ಫೋರಮ್‌ […]

Read More

ಅಂಬೇಡ್ಕರ್ ಹೇಳಿದ ಉಳಿದರ್ಧ ವಿವೇಕ ಅರಿಯೋಣ!

ಮುಸ್ಲಿಂ ಸಮುದಾಯದ ನೇತೃತ್ವ ವಹಿಸಿರುವವರು ಆ ಸಮುದಾಯವನ್ನು ಎತ್ತ ಕಡೆಗೆ ಒಯ್ಯುತ್ತಾರೆ ಎನ್ನುವುದನ್ನು ಸಮರ್ಥವಾಗಿ ಅರಿತಿದ್ದ ಅಂಬೇಡ್ಕರರು ‘ಜನಸಮುದಾಯಗಳ ವಿನಿಮಯ’ವೆಂಬ ಪರಿಹಾರವನ್ನು ಸೂಚಿಸಿದರು. ಹಿಂದುಗಳಿಗೆ ಹಿಂದುಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎಂದು ಆದ ಮೇಲೆ, ಪೂರ್ಣ ಮುಸ್ಲಿಮರು ಆ ಕಡೆಗೆ, ಪೂರ್ಣ ಹಿಂದುಗಳು ಈ ಕಡೆಗೆ ಇರಲಿ ಎಂದಿದ್ದರು. ****************************** ಡಾ ಬಿ. ಆರ್‌. ಅಂಬೇಡ್ಕರ್‌ ಅವರನ್ನು ಸಾಮಾನ್ಯವಾಗಿ, ʼಸಂವಿಧಾನ ಶಿಲ್ಪಿʼ, ʼದಲಿತ ಸೂರ್ಯʼ, ʼಸಾಮಾಜಿಕ ಕ್ರಾಂತಿ ಸೂರ್ಯʼ. . . ಇತ್ಯಾದಿಗಳಿಂದ ಸಂಬೋಧಿಸಲಾಗುತ್ತದೆ. ಇದೆಲ್ಲವೂ ಸರಿಯೆ. ಬಾಬಾಸಾಹೇಬ್‌ […]

Read More

ಗಾಂಧಿಗೂ ಮುನ್ನ ನಡೆದಿತ್ತು ಉಪ್ಪಿನ ಹೋರಾಟ

ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹಕ್ಕಿಂತಲೂ ಮುಂಚೆಯೇ ಕರ್ನಾಟಕದಲ್ಲಿ ನಡೆದ ಅಮರಸುಳ್ಯ ಹೋರಾಟ ಬ್ರಿಟಿಷರ ವಿರುದ್ಧ ರಣಕಹಳೆಯನ್ನು ಮೊಳಗಿಸಿತು. ಜನಸಾಮಾನ್ಯರೇ ಒಂದಾಗಿ ನಡೆಸಿದ ಈ ಹೋರಾಟವು ಸ್ವಾತಂತ್ರ್ಯ ಸಂಘರ್ಷದ ಇತಿಹಾಸದಲ್ಲಿ ಪ್ರಮುಖವಾದುದು, ಅವಿಸ್ಮರಣೀಯವಾದುದು. **************************************************** ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಹಾಗೆ ನೋಡಿದರೆ ವಿಶ್ವದ ಪ್ರಾಚೀನ ನಾಗರಿಕತೆಯಾದ ನಮಗೆ ಮುಕ್ಕಾಲು ಶತಮಾನ ಯಾವ ಲೆಕ್ಕವೂ ಅಲ್ಲ. ಆದರೆ ಆಧುನಿಕ ಕಾಲದಲ್ಲಿ ಹಾಗೂ ಕಾಲದ ಚಲನೆಯಲ್ಲಿ ಉಂಟಾಗಿರುವ ವೇಗವು ಪ್ರತಿ ವರ್ಷವನ್ನೂ, ಪ್ರತಿ ದಿನವನ್ನೂ ಮುಖ್ಯವಾಗಿಸಿದೆ. ‘ಮುಂದಿನ […]

Read More

ವೈಯಕ್ತಿಕ ಪೂರ್ವಗ್ರಹಗಳನ್ನು ಮೀರಿ ನಿಂತಿದ್ದ ಸರ್ದಾರ್ ಪಟೇಲ್

ದೇಶದ ಒಳಿತು ಸರ್ದಾರ್ ವಲ್ಲಭಭಾಯಿ ಪಟೇಲರ ಎಲ್ಲ ನಿರ್ಧಾರಗಳ ಆಧಾರವಾಗಿತ್ತು. ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳದ, ಅಧಿಕಾರಕ್ಕೆ ಅಂಟಿಕೊಳ್ಳದ ಮೌಲ್ಯಕ್ಕೆ ಪಟೇಲರು ಬದ್ಧರಾಗಿದ್ದರು. ‘ದೇಶ ಮೊದಲು’ ಎಂಬುದಷ್ಟೇ ಪಟೇಲರ ನಿಲುವಾಗಿತ್ತು. ಹಲವು ಸವಾಲುಗಳನ್ನು ಪರಾಭವಗೊಳಿಸಿ, ದೇಶದ ಏಕತೆಯನ್ನು ಸಾಕಾರಗೊಳಿಸಿದರು. ಹಾಗಾಗಿಯೇ ಅವರು ಎಲ್ಲರಿಗೂ ಹತ್ತಿರ **************************************** ಅಂದು 1948ರ ಜನವರಿ 30. ಮಹಾತ್ಮ ಗಾಂಧೀಜಿಯವರ ಹತ್ಯೆ ನಡೆದುಹೋಯಿತು. ದೇಶವು ಒಂದು ಸಾವಿರ ವರ್ಷಗಳ ಗುಲಾಮಗಿರಿಯಿಂದ ಹೊರಬರುತ್ತಿದ್ದಂತೆಯೇ ನಡೆದ ದೊಡ್ಡ ದುರ್ಘಟನೆ ಅದು. ಸ್ವಾತಂತ್ರ್ಯ ಲಭಿಸಿದ ತಕ್ಷಣವೇ ಅಥವಾ ಜತೆಜತೆಗೇ […]

Read More

ಎಂದಿಗೂ ತಲೆಬಾಗದ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಬಾಬು

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳು ಕಳೆದರೂ ಬ್ರಿಟಿಷ್ ಪಳೆಯುಳಿಕೆ ವ್ಯವಸ್ಥೆಯನ್ನೇ ಉಸಿರಾಡುತ್ತಿರುವ ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಅಂಥವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರಡ ಇಂದಿಗೂ ಅಪಥ್ಯ. ಆದರೆ ನಿಜವಾದ ದೇಶಭಕ್ತರು ನೇತಾಜಿಯವರನ್ನು ಎಂದಿಗೂ ಮರೆಯಲಾರರು. ************************************************ ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯಮಂದಿರ ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಜ.22ರಂದು ಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಇಡೀ ದೇಶ ಸಜ್ಜಾಗುತ್ತಿದೆ. ರಾಮ ಮಂದಿರ ಉದ್ಘಾಟನೆಯಾದ ನಂತರದಲ್ಲಿ ಪ್ರತಿದಿನ ಸುಮಾರು 50 ಸಾವಿರದಷ್ಟು ಭಕ್ತರು ಭೇಟಿ ನೀಡಿ […]

Read More

ಸಾವಿರದ ಸಾವರ್ಕರ್ ಸಮರ್ಥನೆಗೆ ಸಾವಿರ ಸಂದರ್ಭಗಳಿವೆ

ಕರ್ನಾಟಕ ಸರ್ಕಾರ ಶಾಲಾಪಠ್ಯದಿಂದ ಸಾವರ್ಕರ್ ಪಾಠವನ್ನು ಕೈಬಿಟ್ಟ ಸಂದರ್ಭಕ್ಕೆ ಸರಿಯಾಗಿ ಅಡ್ಡಂಡ ಕಾರ್ಯಪ್ಪ ಅವರು ನಾವು ಕೇವಲ ಕೇಳಿದ್ದ, ಓದಿದ್ದ ಸಾವರ್ಕರ್ ಅವರನ್ನು ಕಣ್ಣಮುಂದೆ ತಂದಿದ್ದಾರೆ. ಪಾಲಕರು ಮಕ್ಕಳೊಂದಿಗೆ ಹೋಗಿ ಆ ನಾಟಕ ನೋಡುವಂತಾದರೆ ಹೆಚ್ಚು ಉಪಯೋಗ. ಈ ಅಂಕಣ ಸರಣಿಯ ಮೊದಲ ಅಂಕಣ ವೀರ ಸಾವರ್ಕರ್​ಗೆ ಸಮರ್ಪಿತ. ಅವಕಾಶಕ್ಕಾಗಿ ಡಾ.ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರಿಗೆ ಆಭಾರಿ *********************************** ‘ನಿನ್ನನ್ನು ನೋಡಿದರೆ ಸಾಕ್ಷಾತ್ ಭಾರತಾಂಬೆಯನ್ನೇ ನೋಡಿದಂತಾಗುತ್ತಿದೆ. ನೀನೇ ಕಣ್ಣೀರು ಹಾಕದೆ ಧೈರ್ಯದಿಂದಿರುವಾಗ ನಾನೇಕೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top