ವಾಹನಗಳ ಮಾರಾಟ ಡಬಲ್

ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ಭರವಸೆ | ಜುಲೈನಲ್ಲಿ ಸೇಲ್ಸ್‌ ಸುಧಾರಣೆ.

ಎಕನಾಮಿಕ್‌ ಟೈಮ್ಸ್‌ ಮುಂಬಯಿ.

ಕೆಲವು ಕಂಪನಿಗಳ ಪ್ಯಾಸೆಂಜರ್‌ ವಾಹನಗಳ ಮಾರಾಟ ಜೂನ್‌ಗೆ ಹೋಲಿಸಿದರೆ, ಜುಲೈನಲ್ಲಿ ದ್ವಿಗುಣಗೊಂಡಿದೆ. ಕೋವಿಡ್‌ ಪೂರ್ವ ದಿನಗಳ ಮಟ್ಟಕ್ಕೆ ಮಾರಾಟ ತಲುಪಿದೆ.
ಸಣ್ಣ ಕಾರುಗಳು, ಸೆಡಾನ್‌ ಮತ್ತು ಎಸ್‌ಯುವಿಗಳ ಮಾರಾಟ ಸುಧಾರಿಸುತ್ತಿದ್ದು, ಆರ್ಥಿಕತೆ ಚೇತರಿಕೆಗೆ ಈ ಅಂಶವು ಸೂಚಕದಂತಿದೆ. ಇತ್ತ, ಟ್ರ್ಯಾಕ್ಟರ್‌ಗಳ ಮಾರಾಟ ಜುಲೈನಲ್ಲಿ ಏರಿಕೆಯಾಗಿದೆ. ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್‌ಗಳ ಮಾರಾಟವು ಜುಲೈನಲ್ಲಿ ಶೇ.28ರಷ್ಟು ಏರಿಕೆಯಾಗಿದೆ.

ಉದ್ಯಮದ ಅಂದಾಜುಗಳ ಪ್ರಕಾರ, 1,97,523 ಪ್ಯಾಸೆಂಜರ್‌ ವಾಹನಗಳು ಕಳೆದ ತಿಂಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ. 2,00,790 ವಾಹನಗಳು ಇದೇ ಅವಧಿಯಲ್ಲಿ ಮಾರಾಟವಾಗಿದ್ದವು. ಆದರೆ, ಪ್ರಸಕ್ತ ವರ್ಷದ ಜೂನ್‌ನಲ್ಲಿ 1,05,617 ವಾಹನಗಳು ಮಾರಾಟವಾಗಿದ್ದು, ಇದಕ್ಕೆ ಹೋಲಿಸಿದರೆ ಜುಲೈನಲ್ಲಿ ಸಂಖ್ಯೆ ದ್ವಿಗುಣಗೊಂಡಿದೆ.

ಮುಂದಿನ ದಿನಗಳಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚುವ ವಿಶ್ವಾಸವನ್ನು ವಾಹನ ಕಂಪನಿಗಳು ಹೊಂದಿವೆ. ಮಾರುತಿ ಸುಜುಕಿಯ ಪ್ಯಾಸೆಂಜರ್‌ ವಾಹನಗಳ ಮಾರಾಟವು ಕಳೆದ ತಿಂಗಳಿಗೆ ಹೋಲಿಸಿದರೆ 91%, ಕಳೆದ ವರ್ಷಕ್ಕೆ ಹೋಲಿಸಿದರೆ 1.3% ಹೆಚ್ಚಳವಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆಯಿಂದ ದೂರ ಉಳಿದ ಗ್ರಾಹಕರು, ಸಣ್ಣ ಕಾರುಗಳತ್ತ ಗಮನಹರಿಸಿದ್ದಾರೆ. ಹಳೆಯ ಕಾರು ವಿನಿಮಯದ ಬದಲು, ಹೆಚ್ಚುವರಿಯಾಗಿ ಹೊಸ ಕಾರು ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ, ಹೊಸ ಗ್ರಾಹಕರ ಸಂಖ್ಯೆಯೂ ವೃದ್ಧಿಯಾಗಿದೆ.
-ಶಶಾಂಕ್‌ ಶ್ರೀವಾಸ್ತವ, ಮಾರುತಿ ಸುಜುಕಿ ಇಂಡಿಯಾದ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top