
– ರಾಧಾಕೃಷ್ಣ ಕಲ್ಚಾರ್. ದಕ್ಷಿಣ ಹಾಗೂ ಉತ್ತರ ಕನ್ನಡಗಳ ಮೂಲದ ಯಕ್ಷಗಾನ ಹಾಗೂ ತಾಳಮದ್ದಳೆ ಕಲಾ ಪ್ರಕಾರಗಳು ಇಂದು ನಾಡಿನಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಪುರಾಣದ ಕತೆಯೊಂದನ್ನು ಹಾಡು ಹಾಗೂ ಪಾತ್ರಾಭಿನಯ ಹಾಗೂ ವ್ಯಾಖ್ಯಾನಗಳ ಮೂಲಕ ಮರಳಿ ಹೊಸತಾಗಿ ಕಟ್ಟುವ ಕಲೆಯೇ ತಾಳಮದ್ದಳೆ. ಇಲ್ಲಿನ ಅರ್ಥಧಾರಿಗಳು ಪಾತ್ರವೇ ತಾವಾಗಿ, ಆ ಪಾತ್ರದ ಭಾವ ಹಾಗೂ ನಿಲುವುಗಳನ್ನು ಕೇಳುಗರ ಮುಂದೆ ಸಮರ್ಥವಾಗಿ ಮಂಡಿಸಲು ಭಾಷೆ, ರಸ, ಧ್ವನಿ, ಸಾಹಿತ್ಯದ ನೆರವು ಪಡೆಯುತ್ತಾರೆ. ಅದು ಹೇಗೆ? ಸಾಹಿತ್ಯ ಅಥವಾ ಇನ್ನಾವುದೇ ಭಾಷಾಸಂವಹನವುಳ್ಳ […]