
– ಶಶಿಧರ ಹೆಗಡೆ. ನ್ಯಾಯ ನಿರ್ಣಯದ ವಿಚಾರ ಬಂದಾಗ ಸರ್ವಶ್ರೇಷ್ಠ ಹೋಲಿಕೆಗಾಗಿ ‘ಹಂಸಕ್ಷೀರ ನ್ಯಾಯ’ವೆಂದು ಹೇಳುವುದುಂಟು. ಹಂಸವೆಂದರೆ ಪಕ್ಷಿ. ಕ್ಷೀರವೆಂದರೆ ಹಾಲು. ಹಾಗಾಗಿ ಈ ಹೋಲಿಕೆಯೇ ವಿಚಿತ್ರವೆನಿಸಬಹುದು. ಹಂಸ ಪಕ್ಷಿ, ಕ್ಷೀರ ಮತ್ತು ನ್ಯಾಯಕ್ಕೆ ಎಲ್ಲಿಂದೆಲ್ಲಿಯ ಸಂಬಂಧವೆಂದು ಕೇಳಬಹುದು. ಪ್ರಾಯಶಃ ಇದೇ ಕಾರಣದಿಂದ ಈ ನುಡಿಕಟ್ಟು ಒಗಟಾಗಿಯೇ ಉಳಿದುಬಿಟ್ಟಿರಬಹುದು. ಹಂಸಪಕ್ಷಿಯ ಎದುರು ಕ್ಷೀರ ತುಂಬಿದ ಪಾತ್ರೆಯನ್ನು ಇಟ್ಟರೆ ಅದು ಕ್ಷೀರಪಾನವೊಂದನ್ನೇ ಮಾಡುತ್ತದೆ! ಅಂದರೆ ಹಾಲಿಗೆ ನೀರು ಬೆರೆಸಿ ಕೊಟ್ಟಿದ್ದಾರೆ ಎಂದುಕೊಳ್ಳಿ. ಹಂಸಪಕ್ಷಿಯು ಹಾಲನ್ನಷ್ಟೇ ಹೀರಿಕೊಳ್ಳುತ್ತದೆ. ಅರ್ಥಾತ್ ಹಾಲಿನೊಂದಿಗೆ […]