
ರಾಜಧಾನಿ ಬೆಂಗಳೂರಲ್ಲಿ ಕೋವಿಡ್-19 ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗುತ್ತಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್ಡೌನ್ ಅಥವಾ ಸೀಮಿತ ಲಾಕ್ಡೌನ್ ಹೇರಬೇಕೇ, ಬೇಡವೇ ಎಂಬ ಚರ್ಚೆ ಸರಕಾರದ ಮಟ್ಟದಲ್ಲೇ ಶುರುವಾಗಿದೆ. ಇದನ್ನು ಗಮನಿಸಿದರೆ ಈ ವಿಷಯದಲ್ಲಿ ಸರಕಾರಕ್ಕೆ ಸ್ಪಷ್ಟತೆ ಇಲ್ಲವೇ ಎಂಬ ಸಂದೇಹ ಉಂಟಾಗುತ್ತದೆ. ಕಾರಣ ಇಷ್ಟೇ, ಸೋಂಕು ತಡೆಯಲು ಲಾಕ್ಡೌನ್ ಒಂದೇ ಪರಿಹಾರ ಎಂಬುದಾಗಿದ್ದರೆ ಈ ಹಿಂದೆ ಲಾಕ್ಡೌನ್ ತೆರವು ಮಾಡಿದ್ದೇಕೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸೋಂಕು ಹೆಚ್ಚಾಗಲು […]