ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ರಾಜ್ಯ ಸರಕಾರ ಉಳಿದೆಡೆ ಲಾಕ್ಡೌನ್ ಅನ್ನು ಬಹುತೇಕ ಸಡಿಲಿಸಿದೆ. ಸೋಂಕು ಹರಡುವಿಕೆಯ ಸರಪಣಿ ಮುರಿಯಲು ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಲು ನಿರ್ಧರಿಸಿದ್ದು, ಮಾಲ್, ಸಿನಿಮಾ, ಹೋಟೆಲ್ಗಳ ತೆರೆಯುವಿಕೆಗೆ ನಿರ್ಬಂಧವಿದೆ. ರಾಜ್ಯದೊಳಗಿನ ರೈಲು ಸಂಚಾರವಿದ್ದರೂ ಮೆಟ್ರೋ ಓಡಾಡುವುದಿಲ್ಲ. ಅಂತಾರಾಜ್ಯ ಪ್ರಯಾಣ ಮುಕ್ತವಲ್ಲ. ಅಂತರ್ಜಿಲ್ಲಾ ಪ್ರಯಾಣ ಮಾಡಬಹುದು. ಹವಾನಿಯಂತ್ರಿತ ಬಸ್ಗಳ ಹೊರತಾಗಿ ರಾಜ್ಯ ಸಾರಿಗೆ ಸಂಸ್ಥೆಗಳ ಎಲ್ಲ ಬಸ್ ಸಂಚಾರ ಶುರುವಾಗಲಿದೆ. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ ಓಡಾಡಲಿವೆ. ಸೆಲೂನ್ ಸಹಿತ ಎಲ್ಲಾ […]