
ಇಡೀ ವಿಶ್ವವನ್ನೇ ನಡುಗಿಸಿರುವ ಕೊರೊನಾ ರಾಜ್ಯಕ್ಕೂ ಸಂಕಷ್ಟ ತಂದಿದೆ. ಇದನ್ನೇ ಒಂದಂಶದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿರುವ ಸರಕಾರ ಮಾರಕ ವೈರಾಣು ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ. ಇಂಥ ವಿಷಮ ಸನ್ನಿವೇಶದಲ್ಲಿ ಯೋಧರಂತೆ ಕ್ರಿಯಾಶೀಲರಾಗಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ, ಜನತೆಗೆ ಯಾವ ರೀತಿ ಒತ್ತಾಸೆ ನೀಡಿದ್ದಾರೆ, ‘ಉಸ್ತುವಾರಿ’ ಎಂಬುದರ ಅರ್ಥವನ್ನು ಹೇಗೆ ವಿಸ್ತರಿಸಿದ್ದಾರೆ ಎಂಬುದರ ಕುರಿತು ವಿಕ ರಿಯಾಲಿಟಿ ಚೆಕ್. ಸಚಿವರ ಕ್ರಿಯಾಶೀಲತೆ ಬಡಿದೆಬ್ಬಿಸಿದ ಕೊರೊನಾ ಬೀದರ್ನಲ್ಲಿ ಪ್ರಭು ಕಾರುಣ್ಯ ಬೀದರ್: ಕೊರೊನಾ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು […]