
– ಡಾ. ಆರತೀ ವಿ.ಬಿ. ಸನಾತನ ಧರ್ಮವು ಪ್ರಕೃತಿಯಲ್ಲಿ ದೇವರನ್ನೂ ಅವನ ಪೋಷಕಶಕ್ತಿಯನ್ನೂ ಗುರುತಿಸಿ ಆರಾಧಿಸುವ ಸುಂದರ ಸಂಸ್ಕೃತಿಯಾಗಿದೆ. ಪ್ರತಿದಿನವೂ ಸೂರ್ಯನ ಉದಯಾಸ್ತಮಾನಗಳನ್ನೂ ಸೋಜಿಗದ ಕಣ್ಣಿಂದ ನೋಡಿ ನಲಿಯುತ್ತ, ಅದು ನಮಗೀಯುವ ಆಯುರಾಗ್ಯಗಳಿಗಾಗಿ ಕೃತಜ್ಞತೆಯಿಂದ ಅಘ್ರ್ಯ ನೀಡುತ್ತಲೇ ದಿನವನ್ನು ಪ್ರಾರಂಭಿಸುತ್ತೇವೆ. ಪ್ರತಿಯೊಂದು ನೈಸರ್ಗಿಕ ಬದಲಾವಣೆಗಳನ್ನೂ ತತ್ಸಂಬಂಧಿತ ಫಲ ಪುಷ್ಪ ಶಾಖಾದಿಗಳ ವಿಕಾಸವನ್ನೂ ಚಳಿ- ಗಾಳಿ- ಬಿಸಿಲು- ಮಳೆಗಳನ್ನೂ ‘ಬದುಕಿನ ಸ್ವಾರಸ್ಯಕರ ಅನುಭವಗಳು’ ಎಂದು ಅಂಗೀಕರಿಸುತ್ತ, ಅದೆಲ್ಲವನ್ನೂ ದೇವರ ಪ್ರಸಾದವಾಗಿ ಸ್ವೀಕರಿಸುವ ಭಾವ ನಮ್ಮದು. ಪ್ರಕೃತಿಯಲ್ಲೇ ದೇವರನ್ನು ಆರಾಧಿಸುವವರಾದ […]