
– ಹಗರಣವಾದರೆ ಠೇವಣಿದಾರರ ಹಿತರಕ್ಷಣೆಗೆ ಅನುಕೂಲ – ಸುಗ್ರೀವಾಜ್ಞೆ ತರಲು ಕೇಂದ್ರ ಸಚಿವ ಸಂಪುಟ ನಿರ್ಧಾರ. ಹೊಸದಿಲ್ಲಿ: ಠೇವಣಿದಾರರ ಹಿತ ರಕ್ಷಣೆಯ ನಿಟ್ಟಿನಲ್ಲಿ ದೇಶದಲ್ಲಿರುವ ನಗರ ಸಹಕಾರ ಬ್ಯಾಂಕ್‌ಗಳು ಹಾಗೂ ಅಂತರಾಜ್ಯ ಸಹಕಾರ ಬ್ಯಾಂಕ್‌ಗಳನ್ನು ಸುಗ್ರೀವಾಜ್ಞೆಯ ಮೂಲಕ ಆರ್‌ಬಿಐನ ಮೇಲುಸ್ತುವಾರಿ ವ್ಯಾಪ್ತಿಗೆ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ. ಕರ್ನಾಟಕದಲ್ಲಿ ಒಟ್ಟು 261 ನಾನ್ ಶೆಡ್ಯೂಲ್ಡ್ ನಗರ ಸಹಕಾರ ಬ್ಯಾಂಕ್‌ಗಳು ಇದ್ದು, ಇವುಗಳೂ ಸೇರಿದಂತೆ ದೇಶದ ಸಹಕಾರ ಬ್ಯಾಂಕ್‌ಗಳ ಸಂಪೂರ್ಣ ಮೇಲುಸ್ತುವಾರಿ ಆರ್‌ಬಿಐ ವ್ಯಾಪ್ತಿಗೆ ಬರಲಿದೆ. […]