– ಕೆ.ದಿವಾಕರ್. ಚುನಾವಣೆಗಳು ಭಾರತದ ಜನತಂತ್ರವನ್ನು ಶಕ್ತಿಶಾಲಿಯಾಗಿ ಇಟ್ಟಿರುವ ಒಂದು ಪ್ರಮುಖ ಪ್ರಕ್ರಿಯೆ. ಒಬ್ಬನಿಗೆ ಒಂದೇ ಓಟು, ಎಲ್ಲರಿಗೂ ಅದರ ಹಕ್ಕು ಎಂಬುದು ಕೂಡಾ ಶಕ್ತಿಶಾಲಿಯಾಗಿರುವ ಆದರ್ಶ. ಎಲ್ಲ ದೋಷಗಳ ನಡುವೆಯೂ ಇದೊಂದು ಜನರ ಕೈಯಲ್ಲಿರುವ ಆಯುಧ. ಜನಸಂಖ್ಯೆಯ ಎಲ್ಲ ಜಾತಿ, ಪಂಥ, ಧರ್ಮ, ವಿದ್ಯಾವಂತರು, ನಿರಕ್ಷರಿಗಳೂ ಒಂದು ಪ್ರಜಾತಂತ್ರದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಿರುವುದು, ಅವಿದ್ಯಾವಂತರು ಹಾಗೂ ಗ್ರಾಮೀಣ ಪ್ರದೇಶದ ಜನ ನಗರದ ಮತದಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಪ್ರಕ್ರಿಯೆಗೆ ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಖ್ಯಾತ […]