
– ಡಾ.ಆರತೀ ವಿ.ಬಿ. ಜಗತ್ತಿನ ಎಲ್ಲ ಮಹಾಗುರುಗಳು ಸ್ವಾನುಭವದ ಹಿನ್ನಲೆಯಲ್ಲಿ, ಸರಳ ಸುಭಗ ಶೈಲಿಯಲ್ಲಿ ಉಪದೇಶಗಳನ್ನಿತ್ತಿದ್ದಾರೆ. ಇತ್ತೀಚೆಗಷ್ಟೆ ಆಚರಿಸಿದ ಗುರುಪೂರ್ಣಿಮೆಯ ಹಿನ್ನಲೆಯಲ್ಲಿ ಕೆಲವು ಮಹಾಗುರುಗಳ ಉಪದೇಶದ ಬಿಂದುಗಳನ್ನು ಇಲ್ಲಿ ಆಸ್ವಾದಿಸೋಣ. ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಒಬ್ಬಳು ಮಹಿಳೆ ಪುಟ್ಟ ಮಗನನ್ನು ಕರೆತಂದು ವಿನಂತಿಸಿದಳು- ‘‘ಮಹಾಶಯರೇ! ನನ್ನ ಮಗುವಿಗೆ ಕಾಯಿಲೆ. ನಾಟಿ ಚಿಕಿತ್ಸೆ ನಡೆಯುತ್ತಿದೆ. ಸಿಹಿ ತಿನ್ನುವಂತಿಲ್ಲ, ಆದರೆ ಮಗುವು ಸಿಹಿ ಬೇಕು ಎಂದು ಹಟ ಮಾಡುತ್ತಿದೆ. ಮಗುವಿಗೆ ಸ್ವಲ್ಪ ತಿಳಿಹೇಳುವಿರಾ?’’ ರಾಮಕೃಷ್ಣರು ನುಡಿದರು, ‘‘ಮೂರು ದಿನ […]